E-20: ನಿಮ್ಮ ಕಾರು-ಬೈಕ್‌ಗೆ ಇ-20 ಪೆಟ್ರೋಲ್ ಸುರಕ್ಷಿತವೇ? 90,000 ಬಂಕ್‌ಗಳ ಪರಿಶೀಲನೆ ಬಳಿಕ ತೈಲ ಸಂಸ್ಥೆಗಳು ಹೇಳಿದ್ದೇನು? ಇಲ್ಲಿದೆ ಅಂತಿಮ ತೀರ್ಪು!

Published : Aug 07, 2026, 10:27 PM IST
E-20

ಸಾರಾಂಶ

ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್‌ಗಳಲ್ಲಿ ನಡೆಸಿದ ವ್ಯಾಪಕ ತಪಾಸಣೆಯ ನಂತರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇ-20 ಪೆಟ್ರೋಲ್‌ ಕುರಿತು ತಾವು ನೀಡಿದ ತಪಾಸಣೆಯ ಫಲಿತಾಂಶ ಪ್ರಕಟಿಸಿವೆ.

ಕಳೆದ ಕೆಲವು ದಿನಗಳಿಂದ ಮೋದಿ ಸರ್ಕಾರದ 12 ವರ್ಷಗಳ ಅವಧಿಯಲ್ಲಿ ಸರ್ಕಾರದ ಇ-20 ಪೆಟ್ರೋಲ್ ಬಗ್ಗೆ ಬೇರೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಎಥೆನಾಲ್ ನೊಂದಿಗೆ ಬೆರೆಸಿದ ಪೆಟ್ರೋಲ್ ಮಾರಾಟ ಆರಂಭವಾದಾಗಿನಿಂದ, ದೇಶಾದ್ಯಂತ ವಿವಿಧ ರೀತಿಯ ಚರ್ಚೆಗಳು ಮತ್ತು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸರ್ಕಾರ, ತಜ್ಞರು ಮತ್ತು ಇತರ ಪ್ರತಿಯೊಂದು ಸಂಸ್ಥೆಯು ಅದರ ಪರವಾಗಿ ತಮ್ಮ ವಾದಗಳನ್ನು ಮಂಡಿಸಿವೆ. ಈಗ, ತೈಲವನ್ನು ವಿತರಿಸುವ ಜವಾಬ್ದಾರಿಯುತ ಪೆಟ್ರೋಲಿಯಂ ಕಂಪನಿಗಳು ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಿವೆ. ಈ ನಿರ್ಧಾರಕ್ಕೆ ಮುನ್ನ, ಕಂಪನಿಗಳು ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಪಂಪ್‌ಗಳಲ್ಲಿ ತೈಲವನ್ನು ಪರೀಕ್ಷಿಸಿವೆ. ಅವು ನಿಡಿದ ಅಪ್ಡೇಟ್‌ ಏನು? ಎನ್ನುವುದರ ಮಾಹಿತಿ ಇಲ್ಲಿದೆ.

ಕಂಪನಿಗಳು ಹೇಳಿದ್ದೇನು?

ರಾಷ್ಟ್ರವ್ಯಾಪಿ ಸಮೀಕ್ಷೆ ಮತ್ತು ತನಿಖೆ ಪೂರ್ಣಗೊಳಿಸಿದ ನಂತರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ದೇಶಾದ್ಯಂತ ವ್ಯಾಪಕವಾದ ಪರೀಕ್ಷೆಯು E-20 ಪೆಟ್ರೋಲ್‌ನಲ್ಲಿ ತೇವಾಂಶ ಅಥವಾ ಕ್ಲೋರೈಡ್ ಮಾಲಿನ್ಯದ ಅಂಶಗಳನ್ನು ದೃಢಪಡಿಸಿಲ್ಲ. ಅಲ್ಲದೇ ಇಂಧನ ಗುಣಮಟ್ಟವು ನಿಗದಿತ ಮಾನದಂಡಗಳಲ್ಲಿದೆ ಎನ್ನುವುದು ಕಂಡುಬಂದಿದೆ ಎಂದು ಹೇಳಿವೆ. 20 ಪ್ರತಿಶತ ಎಥೆನಾಲ್ ಹೊಂದಿರುವ E-20 ಪೆಟ್ರೋಲ್‌ನಲ್ಲಿ ತೇವಾಂಶ ಮತ್ತು ಕ್ಲೋರೈಡ್ ಇರುವುದು ಕಂಡುಬಂದಿದೆ ಎಂಬ ಇತ್ತೀಚಿನ ಮಾಧ್ಯಮ ವರದಿಗಳ ನಂತರ ಈ ತನಿಖೆಯನ್ನು ತೀವ್ರಗೊಳಿಸಲಾಗಿದೆ. ತೈಲದಲ್ಲಿ ಯಾವುದೇ ಮಾಲಿನ್ಯ ಕಂಡುಬಂದಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ, ಪೂರೈಕೆ ಸರಪಳಿಯಾದ್ಯಂತ ನಡೆಸಿದ ತಪಾಸಣೆಗಳು ಇಂಧನ ಗುಣಮಟ್ಟವು ನಿಗದಿತ ಮಾನದಂಡಗಳಲ್ಲಿ ಸ್ಥಿರವಾಗಿ ಉಳಿದಿದೆ ಎಂದು ದೃಢಪಡಿಸಿದೆ. ತೈಲ ಕಂಪನಿಗಳು ತಪಾಸಣೆಗಳು ಯಾವುದೇ ಮಾಲಿನ್ಯದ ಬಗ್ಗೆ ಯಾವುದೇ ನಿರ್ದಿಷ್ಟ ಪುರಾವೆಗಳನ್ನು ಬಹಿರಂಗಪಡಿಸಿಲ್ಲ ಎಂದು ಸ್ಪಷ್ಟಪಡಿಸಿವೆ. ಈ ತನಿಖೆಯ ನಂತರ, ಇ-20 ಪೆಟ್ರೋಲ್ ಯಾವುದೇ ಕಲಬೆರಕೆಯಿಂದ ಮುಕ್ತವಾಗಿದೆ ಎಂದು ನಿರ್ಧರಿಸಲಾಗಿದೆ.

12 ಬಾರಿ ಪರೀಕ್ಷೆ!

ಇ-20 ಪೆಟ್ರೋಲ್‌ನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ತೈಲ ಕಂಪನಿಗಳು ಸಂಸ್ಕರಣಾಗಾರದಿಂದ ಪೆಟ್ರೋಲ್ ಬಂಕ್‌ವರೆಗೆ ನಿರಂತರ ಪರೀಕ್ಷೆ ನಡೆಸುತ್ತಿವೆ. ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿದಿನ 8ರಿಂದ 12 ಬಾರಿ ನೀರಿನ ಕಲಬೆರಕೆ ಮತ್ತು ಸಾಂದ್ರತೆಯನ್ನು ಪರಿಶೀಲಿಸಲಾಗುತ್ತದೆ. ಜೊತೆಗೆ, ಮೊಬೈಲ್ ಪ್ರಯೋಗಾಲಯಗಳ ಮೂಲಕವೂ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ. 100ಕ್ಕೂ ಹೆಚ್ಚು ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ಕ್ಲೋರೈಡ್ ಪ್ರಮಾಣ 1 ppm ಅಥವಾ ಅದಕ್ಕಿಂತ ಕಡಿಮೆ ಕಂಡುಬಂದಿದ್ದು, ಡಿಸ್ಟಿಲರಿ ಮತ್ತು ಚಿಲ್ಲರೆ ಮಟ್ಟದ ಮಾದರಿಗಳಲ್ಲಿಯೂ ಅದು 3 ppmಗಿಂತ ಕಡಿಮೆಯೇ ಇತ್ತು. ಇದರಿಂದ ಇಂಧನದ ಗುಣಮಟ್ಟ ಸುರಕ್ಷಿತವಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.

ಇ-20 ಸುಕ್ಷಿತವೇ?

ಪರೀಕ್ಷೆಯ ವೇಳೆ ಕೇವಲ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾತ್ರ ಕ್ಲೋರೈಡ್ ಪ್ರಮಾಣ ಹೆಚ್ಚಿರುವುದು ಕಂಡುಬಂದಿದ್ದು, ತಕ್ಷಣವೇ ಆ ಇಂಧನದ ಪೂರೈಕೆಯನ್ನು ಸ್ಥಗಿತಗೊಳಿಸಿ ಹೆಚ್ಚಿನ ಪರೀಕ್ಷೆ ನಡೆಸಲಾಯಿತು. ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್‌ಗಳ ಟ್ಯಾಂಕ್‌ಗಳನ್ನು ಪರಿಶೀಲಿಸಿದರೂ ನೀರಿನ ಕಲಬೆರಕೆಯ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಇ-20 ಪೆಟ್ರೋಲ್ ಸುರಕ್ಷಿತವಾಗಿದ್ದು, ಅದರ ಬಗ್ಗೆ ಹರಿದಾಡುತ್ತಿರುವ ಕೆಲವು ಹೇಳಿಕೆಗಳು ಉತ್ಪ್ರೇಕ್ಷೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಸರ್ಕಾರಿ ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ಗ್ರಾಹಕರು ಯಾವುದೇ ಆತಂಕವಿಲ್ಲದೆ ಇ-20 ಪೆಟ್ರೋಲ್ ಬಳಸಬಹುದು ಎಂದು ಅವರು ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

Cricket: ಹಾರ್ದಿಕ್‌ಗೆ ಬಿಗ್‌ ಆಫರ್; ಪಾಂಡ್ಯ ಬೇಕಾದ್ರೆ ಆ ಇಬ್ಬರನ್ನು ಕೊಡಿ; KKR ಮುಂದೆ ಅತಿದೊಡ್ಡ ಕಂಡೀಷನ್ ಇಟ್ಟಿತಾ ಮುಂಬೈ?
RBI: ಸಾಲಗಾರರಿಗೆ ದೊಡ್ಡ ರಿಲೀಫ್! ಲೋನ್ ಡಿಫಾಲ್ಟ್ ಆದ್ರೂ ಡಿವೈಸ್ ಲಾಕ್ ಮಾಡೋ ಹಾಗಿಲ್ಲ! ರಿಸರ್ವ್ ಬ್ಯಾಂಕ್‌ನಿಂದ ಹೊಸ ರೂಲ್ಸ್‌!