Cricket: ಹಾರ್ದಿಕ್‌ಗೆ ಬಿಗ್‌ ಆಫರ್; ಪಾಂಡ್ಯ ಬೇಕಾದ್ರೆ ಆ ಇಬ್ಬರನ್ನು ಕೊಡಿ; KKR ಮುಂದೆ ಅತಿದೊಡ್ಡ ಕಂಡೀಷನ್ ಇಟ್ಟಿತಾ ಮುಂಬೈ?

Published : Aug 07, 2026, 09:14 PM IST
Hardik Pandya

ಸಾರಾಂಶ

ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ್, ಚೆನ್ನೈ ಬಳಿಕ ಇದೀಗ ಕೆಕೆಆರ್ ಕೂಡ ಆಸಕ್ತಿ ತೋರಿದೆ. ಆದರೆ, ಪಾಂಡ್ಯರನ್ನು ಬಿಟ್ಟುಕೊಡಲು ಮುಂಬೈ ಇಂಡಿಯನ್ಸ್ ತಂಡವು ಕೆಕೆಆರ್ ಮುಂದೆ ಆ ಇಬ್ಬರು ಆಟಗಾರರನ್ನು ನೀಡಬೇಕೆಂಬ ದೊಡ್ಡ ಷರತ್ತು ಇಟ್ಟಿದೆ ಎನ್ನಲಾಗಿದೆ.

ಆರಂಭದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ಹೊಂದಿತ್ತು, ಅಲ್ಲದೇ ರಾಜಸ್ಥಾನ್ ತಂಡವು ಹಾರ್ದಿಕ್ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಮುಂಬೈಗೆ ನೀಡಲಿದೆ ಎಂಬ ಮಾತು ಕೇಳಿಬಂದಿದ್ದವು. ಆದರೆ ನಂತರ ಚೆನ್ನೈ ಸೂಪರ್ ಕಿಂಗ್ಸ್ ಹೆಸರು ಮುನ್ನೆಲೆಗೆ ಬಂದಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾರ್ದಿಕ್ ಅವರಿಗೆ ಬದಲಾಗಿ ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಮತ್ತು ಮುಂಬೈಗೆ 10 ಕೋಟಿ ರೂ.ಗಳನ್ನು ನೀಡಲು ಒಪ್ಪಿತು, ಆದರೆ ಮುಂಬೈ ಮಾತ್ರ CSK ಯಿಂದ ದುಬೆ, ಆಯುಷ್ ಮ್ಹಾತ್ರೆ ಮತ್ತು 10 ಕೋಟಿ ರೂ. ಕೇಳಿತ್ತು, ಅದನ್ನು CSK ನಯವಾಗಿ ತಿರಸ್ಕರಿಸಿತ್ತು ಎಂದು ಈಗಾಗಲೇ ಕೆಲ ವರದಿಗಳು ಹೇಳಿವೆ.

ರೇಸ್‌ನಲ್ಲಿತ್ತಾ ಡೆಲ್ಲಿ ಕ್ಯಾಪಿಟಲ್ಸ್‌?

ನಂತರ, ಡೆಲ್ಲಿ ಕೂಡ ಹಾರ್ದಿಕ್‌ ಖರೀದಿಸುವ ಚರ್ಚೆಗೆ ಧುಮುಕಿತು. ಹಾರ್ದಿಕ್ ಬದಲಿಗೆ ಡೆಲ್ಲಿ ಇಬ್ಬರು ಆಟಗಾರರಾದ ಅಕ್ಷರ್ ಪಟೇಲ್ ಮತ್ತು ಪೃಥ್ವಿ ಶಾ ಅವರನ್ನು ಮುಂಬೈಗೆ ನೀಡುವುದಾಗಿ ಹೇಳಲಾಗಿತ್ತು, ಆದರೆ ಈ ಚರ್ಚೆಗಳನ್ನು ಯಾರೂ ಅಧಿಕೃತವಾಗಿ ದೃಢಪಡಿಸಿಲ್ಲ. ರಾಜಸ್ಥಾನ ಮತ್ತು ಸಿಎಸ್‌ಕೆ ನಂತರ, ಈಗ ಹಾರ್ದಿಕ್ ತಂಡದಲ್ಲಿ ಕೆಕೆಆರ್ ಹೆಸರು ಕೇಳಿಬಂದಿದೆ. ಅಜಿಂಕ್ಯ ರಹಾನೆ ನಿವೃತ್ತಿ ಹೊಂದುತ್ತಿದ್ದಂತೆ, ಕೆಕೆಆರ್ ಹೊಸ ನಾಯಕನನ್ನು ಹುಡುಕಬೇಕಾಗುತ್ತದೆ. ಅಲ್ಲದೆ, ರಸೆಲ್ ನಿವೃತ್ತಿಯ ನಂತರ, ಕೆಕೆಆರ್‌ಗೆ ಆಲ್‌ರೌಂಡರ್ ಕೂಡ ಬೇಕಾಗಿದ್ದಾರೆ, ಪಾಂಡ್ಯ ಈ ಎರಡೂ ನಿರೀಕ್ಷೆಗಳನ್ನು ಪೂರೈಸಬಹುದು.

ಹಾರ್ದಿಕ್‌ಗೆ ಫುಲ್‌ ಡಿಮ್ಯಾಂಡ್!

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಬಂದ ನಂತರ, ಮುಂಬೈ ಮೂರು ಸೀಸನ್‌ಗಳಲ್ಲಿ ಒಂದರಲ್ಲಿ ಮಾತ್ರ ಪ್ಲೇಆಫ್ ತಲುಪಿತು. ಒಂದು ಸೀಸನ್‌ನಲ್ಲಿ ಅವರು ಹತ್ತನೇ ಸ್ಥಾನ ಪಡೆದರು, ಅಂದರೆ ಕೊನೆ ಸ್ಥಾನ. ಅಲ್ಲದೇ ಇನ್ನೊಂದು ಸೀಸನ್‌ನಲ್ಲಿ ಒಂಬತ್ತನೇ ಸ್ಥಾನ ಪಡೆದರು. ಆದ್ದರಿಂದ ಮುಂಬೈ ಹಾರ್ದಿಕ್‌ ಪಾಂಡ್ಯ ಅವರನ್ನು ಕೈ ಬಿಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆಕೆಆರ್‌ನ ಇಬ್ಬರು ಆಟಗಾರರನ್ನು ನೀಡಿದರೆ, ಹಾರ್ದಿಕ್‌ನನ್ನು ನೀಡಲಾಗುತ್ತದೆ. ಎನ್ನುವ ಮಾತು ಕೇಳಿಬಂದಿದೆ. ಅಲ್ಲದೇ ಆ ಇಬ್ಬರು ಯಾರು ಎಂದರೆ, ರಿಂಕು ಮತ್ತು ಹರ್ಷಿತ್ ರಾಣಾ ಹೆಸರು ಈಗ ಕೆಲ ವರದಿಗಳ ಪ್ರಕಾರ ಅತೀ ಹೆಚ್ಚು ಚರ್ಚೆಯಲ್ಲಿವೆ.

ಅಶ್ವಿನ್‌ ಬಿಗ್‌ ಸ್ಟೇಟಮೆಂಟ್!

ಮುಂಬೈ ಮತ್ತು ಕೆಕೆಆರ್ ನಡುವಿನ ವ್ಯಾಪಾರದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ದೊಡ್ಡ ಹೇಳಿಕೆ ನೀಡಿದ್ದಾರೆ. ಕೆಕೆಆರ್ ಕ್ಯಾಮರೂನ್ ಗ್ರೀನ್ ನೀಡಲಿದೆ ಎಂಬ ಮಾತು ಕೇಳಿಬರುತ್ತಿದೆ, ಆದರೆ ಗ್ರೀನ್ ಮುಂದಿನ ವರ್ಷದ ಆಶಸ್‌ಗಾಗಿ ಐಪಿಎಲ್‌ನಿಂದ ಹಿಂದೆ ಸರಿದರೆ ಏನಾಗುತ್ತದೆ? ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ. ಮುಂಬೈ ಇಂಡಿಯನ್ಸ್ ನನ್ನ ಹಿಡಿತದಲ್ಲಿದ್ದರೆ, ಹಾರ್ದಿಕ್ ಬದಲಿಗೆ ಹರ್ಷಿತ್ ರಾಣಾ, ರಿಂಕು ಸಿಂಗ್ ಲಭ್ಯವಿದ್ದರೆ ಮಾತ್ರ ನಾನು ಕೆಕೆಆರ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದೆ. ಹಾರ್ದಿಕ್ ಬದಲಿಗೆ ಹರ್ಷಿತ್ ಮತ್ತು ರಿಂಕು ಲಭ್ಯವಿದ್ದರೆ ಮಾತ್ರ ಮುಂಬೈ ತಂಡ ಬಲಿಷ್ಠವಾಗಿರುತ್ತದೆ ಎಂದು ಅಶ್ವಿನ್ ಹೇಳಿದ್ದಾರೆ. ಸಿಎಸ್‌ಕೆ ಹಾರ್ದಿಕ್ ಬದಲಿಗೆ ದುಬೆ ಮತ್ತು ವೇಗದ ಬೌಲರ್ ಅನ್ನು ನೀಡಿದರೆ, ಸಿಎಸ್‌ಕೆ ಬಲಿಷ್ಠ ತಂಡವಾಗುತ್ತದೆ, ಆದರೆ ಚುರುಕಾದ ತಂಡವಾಗುವುದಿಲ್ಲ. ಆದರೆ ಕೆಕೆಆರ್ ಹಾರ್ದಿಕ್ ಅವರನ್ನು ಪಡೆದರೆ, ಅವರ ಬ್ಯಾಟಿಂಗ್ ಸ್ಫೋಟಕವಾಗಿರುತ್ತದೆ ಎಂದು ಅಶ್ವಿನ್ ಕೂಡ ಭಾವಿಸುತ್ತಾರೆ.

PREV
Read more Articles on
click me!

Recommended Stories

RBI: ಸಾಲಗಾರರಿಗೆ ದೊಡ್ಡ ರಿಲೀಫ್! ಲೋನ್ ಡಿಫಾಲ್ಟ್ ಆದ್ರೂ ಡಿವೈಸ್ ಲಾಕ್ ಮಾಡೋ ಹಾಗಿಲ್ಲ! ರಿಸರ್ವ್ ಬ್ಯಾಂಕ್‌ನಿಂದ ಹೊಸ ರೂಲ್ಸ್‌!
Fast Tag: ವಾಹನ ಸವಾರರಿಗೆ ಗುಡ್ ನ್ಯೂಸ್; ಫಾಸ್ಟ್‌ಟ್ಯಾಗ್ ಹೆಚ್ಚುವರಿ ಹಣ ಕಡಿತವಾದರೆ 100% ರಿಫಂಡ್ ಪಕ್ಕಾ!