Bollywood: ಸ್ಟಾರ್‌ಡಮ್‌ನ್ನು ಯುವ ಸ್ಟಾರ್‌ಗಳಿಗೆ ಬಿಟ್ಟುಕೊಡಲ್ಲವೆಂದ ಸಲ್ಮಾನ್‌ ಖಾನ್‌

By Suvarna News  |  First Published Nov 23, 2021, 3:08 PM IST

ಸಿನಿಮಾ ರಂಗದಲ್ಲಿ ಸ್ಟಾರ್‌ಗಿರಿ ಎಂಬುದು ತುಂಬಾ ಮಹತ್ವದ್ದು, ಆದರೆ ಇತ್ತೀಚೆಗೆ ಕೋವಿಡ್‌ನಿಂದಾಗಿ ಸಿನಿಮೋದ್ಯಮ ಸಂಕಷ್ಟದಲ್ಲಿದೆ. ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗದೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾಗಳು ಬಿಡುಡೆಯಾಗುತ್ತಿವೆ. ಸೋಶಿಯಲ್‌ ಮೀಡಿಯಾ ಅಥವಾ ಆನ್‌ಲೈನ್‌ ಮೂಲಕವಷ್ಟೇ ನಟನಟಿಯರಿಗೆ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಅನಿವಾರ್ಯತೆ ಸೃಷ್ಟಿಯಾಗಿದೆ ಈ ಹಿನ್ನೆಲೆಯಲ್ಲಿ ಸ್ಟಾರ್‌ಗಿರಿ ಎಂಬುದು ಎಷ್ಟು ದಿನದ ಕಿರೀಟ ಎಂಬ ಯೋಚನೆ ಚರ್ಚೆಗಳು ಶುರುವಾಗಿವೆ. ಈ ಬಗ್ಗೆ ಸ್ಟಾರ್‌ ನಟ ಸಲ್ಮಾನ್‌ ಪ್ರತಿಕ್ರಿಯಿಸಿದ್ದು ಹೀಗೆ..


ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವ ನಟರು ತಾವು ಆಯ್ಕೆ ಮಾಡುವ ಸಿನಿಮಾಗಳ ಮೇಲೆ ಅವರ ಸ್ಟಾರ್‌ಗಿರಿ ನಿಂತಿದೆ ಎಂದರು. ಕಳೆದ ಎರಡು ವರ್ಷಗಳಲ್ಲಿ ಒಟಿಟಿಯು ನಟ ನಟಿಯರ ಮೌಲ್ಯವನ್ನು ಲೆಕ್ಕಿಸದೇ ಅವರಿಗೆ ಹೊಸ ವೇದಿಕೆಯನ್ನು ಒದಗಿಸಿದೆ. ಈ (trend)ಟ್ರೆಂಡ್‌ನಿಂದಾಗಿ ಹೊಸ ಚರ್ಚೆಯೊಂದು ಹುಟ್ಟಿಕೊಂಡಿದೆ.  ಒಟಿಟಿಯ ಆಗಮನವೂ ಮುಖ್ಯವಾಗಿ ಹಿಂದಿ ಸಿನಿಮಾ ಉದ್ಯಮದಲ್ಲಿ ಸ್ಟಾರ್‌ಗಿರಿಯು ಅಂತ್ಯಗೊಳ್ಳುವುದರ ಚಿಹ್ನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸ್ಟಾರ್‌ಡಮ್‌ ಅಥವಾ ಸ್ಟಾರ್‌ಗಿರಿ ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಸ್ಟಾರ್‌ಗಿರಿ ಎಂಬುದು ಈಗ ನಟರು ಆಯ್ಕೆ ಮಾಡುವ ಸಿನಿಮಾದಲ್ಲಿದೆ. ನಾವು ಹೋಗುತ್ತೇವೆ. ಇನ್ಯಾರೋ ಬರುತ್ತಾರೆ. ಆದರೆ ಸ್ಟಾರ್‌ಗಳ ಯುಗ ಕೊನೆಯಾಗುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು. ಇದು ಯಾವಾಗಲೂ ಇರುವುದು. ಕೇವಲ  ನಟ ನಟಿಯ ಅಭಿನಯ ಪ್ರತಿಭೆಯಿಂದ ಇಂದು ಸ್ಟಾರ್‌ಗಿರಿಯನ್ನು ಪಡೆಯಲಾಗುವುದಿಲ್ಲ. ಹಲವು ವಿಚಾರಗಳನ್ನು ಸ್ಟಾರ್‌ಗಿರಿ ಅವಲಂಬಿತವಾಗಿದೆ. ಸಿನಿಮಾಗಳ ಆಯ್ಕೆ, ಕತೆ, ನಿಜ ಜೀವನದಲ್ಲಿ ನೀವು ಹೇಗಿದ್ದೀರಾ ಎಂಬುದು ಇತ್ಯಾದಿ ಎಲ್ಲವನ್ನೂ ಒಳಗೊಂಡು ಸ್ಟಾರ್‌ಗಿರಿ ಬರುವುದು ಎಂದು ಸಲ್ಮಾನ್‌ ಖಾನ್‌(salman khan) ಅಭಿಪ್ರಾಯ ಪಟ್ಟರು. ಈ ಯುವ ತಲೆಮಾರು ಸೂಪರ್‌ ಆದ ಸ್ಟಾರ್‌ಡಮ್‌ನ್ನು ಹೊಂದಿದ್ದಾರೆ ಎಂದು ಭಾಯಿಜಾನ್‌ ಹೇಳಿದರು.

"ಇದು ಸ್ಟಾರ್‌ಗಳ ಕೊನೆಯ ಯುಗ" ಈ ವಿಚಾರವನ್ನು ಕಳೆದ ೪ ತಲೆಮಾರಿನಿಂದ ನಾನು ಕೇಳುತ್ತಿದ್ದೇನೆ. (stardom)ಸ್ಟಾರ್‌ಡಮ್‌ನ್ನು ಯುವ ತಲೆಮಾರಿಗೆ ಸುಲಭವಾಗಿ ಪಡೆಯಲು ಬಿಡುವುದಿಲ್ಲ. ನಾವಿದನ್ನು ಅವರಿಗೆ ಹಸ್ತಾಂತರಿಸುವುದಿಲ್ಲ. ಪ್ರಯತ್ನ ಪಡಿ ೫೦ ರ ಆಸುಪಾಸಿನಲ್ಲಿರುವ ನಾನು ಪ್ರಯತ್ನಿಸುತ್ತಿದ್ದೇನೆ. ನೀವು ಕೂಡ ಪ್ರಯತ್ನಿಸಿ ಎಂದು ಹೇಳಿದ್ದಾರೆ. 

ಮಾಜಿ ಪ್ರೆಯಸಿ ಕತ್ರೀನಾ ಮದುವೆಗೆ ಸಲ್ಲು ಹೋಗೋಲ್ವಂತೆ

Tap to resize

Latest Videos

ಸಲ್ಮಾನ್‌ ಖಾನ್‌ ತಮ್ಮ ಮುಂಬರುವ ಸಿನಿಮಾ ಅಂತಿಮ್‌ ದ ಫೈನಲ್‌ ಟ್ರೂಥ್‌( Antim The Final Truth) ನ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಈ ಸಿನಿಮಾವನ್ನು ಮಹೇಶ್‌ ಮಂಜ್ರೇಕರ್‌ (mahesh manjrekar)ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾವೂ ತನ್ನ ಭಾವ ಆಯುಷ್‌ ಶರ್ಮಾ( Ayush sharma)ಸಹಯೋಗದೊಂದಿಗೆ ಸಲ್ಮಾನ್‌ ಖಾನ್‌ ಮಾಡುತ್ತಿರುವ ಮೊದಲ ಸಿನಿಮಾ ಕೂಡ ಆಗಿದೆ. ಇದು ನವೆಂಬರ್‌ 26ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಮರಾಠಿಯಲ್ಲಿ 2018ರಲ್ಲಿ ಬಿಡುಗಡೆಯಾಗಿ ಹಿಟ್‌ ಆದಂತಹ ಮುಲ್ಶಿಪಟರ್ನ್‌(Mulshi Pattern)  ಸಿನಿಮಾದ ರಿಮೇಕ್‌ ಇದು.

ಇದಕ್ಕೂ ಮೊದಲು ಸಲ್ಮಾನ್‌, ರಾಧೆ(radhe) ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಪ್ರಭುದೇವ್‌ ನಿರ್ದೇಶಿಸಿದ್ದರು. ಇದು ಡಿಜಿಟಲ್‌ ಪ್ಲಾಟ್‌ಫಾರ್ಮ್‌(digital platform) ಹಾಗೂ ಥಿಯೇಟರ್‌ ಎರಡೂ ಕಡೆಯಲ್ಲೂ ಬಿಡುಗಡೆಯಾಗಿತ್ತು. 

50 ದಾಟಿದರೂ ಇನ್ನೂ ಬ್ರಹ್ಮಚಾರಿಯಾಗಿಯೇ ಉಳಿದಿರುವ ಈ ದಬಾಂಗ್‌ ಹೀರೋ ಅತ್ಯಂತ ಶ್ರೀಮಂತ ನಟ. ಇವರ ಮದುವೆ ಹಾಗೂ ಆಫೇರ್‌ಗಳ ಬಗ್ಗೆ ಬಾಲಿವುಡ್‌ನಲ್ಲಿ ಹರಿದಾಡಿದಷ್ಟು ಗಾಸಿಪ್‌ ಬೇರೆ ಯಾರ ಬದುಕಿನಲ್ಲೂ ಆಗಿರದು. ಆದರೆ ಈ ನಟ ಒಂದು ವೇಳೆ ವಿವಾಹವಾಗದಿದ್ದರೆ ತಮ್ಮ ಆಸ್ತಿಯನ್ನು ಯಾವುದಾದರೂ ಟ್ರಸ್ಟ್‌ಗಳಿಗೆ ಬರೆಯುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಬಾಲಿವುಡ್‌ನ ಬ್ಯಾಡ್‌ ಬಾಯ್‌ ಎನಿಸಿರುವ ಸಲ್ಲು, ಆಸ್ತಿ ಮೌಲ್ಯ ಕೆಲ ಮೂಲಗಳ ಪ್ರಕಾರ 2300 ಕೋಟಿ ಎನ್ನಲಾಗುತ್ತಿದೆ. ಸಿನಿಮಾವೊಂದಕ್ಕೆ ಕೋಟಿಯಲ್ಲಿ ಸಂಭಾವನೆ ಪಡೆಯುವ ಸಲ್ಮಾನ್‌ ಖಾನ್‌ ಇತ್ತೀಚೆಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ, ಬಾಂದ್ರಾದಲ್ಲಿರುವ ಆ ಬಾಡಿಗೆ ಮನೆಗೆ ತಿಂಗಳಿಗೆ 8 ಲಕ್ಷದ 25 ಸಾವಿರ ರೂ ಬಾಡಿಗೆ ನೀಡುತ್ತಿದಾರೆ ಎಂದು ಕೂಡ ವರದಿಯಾಗಿತ್ತು.

 

click me!