ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ಎನ್ನಿಸಿಕೊಂಡಿರೋ ಯೋಗರಾಜ್ ಭಟ್ ನಿರ್ದೆಶನದ ಪಂಚತಂತ್ರ ಸಿನಿಮಾ ಇಂದು ರಾಜ್ಯಾಧ್ಯಂತ ರಿಲೀಸ್ ಆಗಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ ನೋಡಿ.
ಬೆಂಗಳೂರು (ಮಾ. 29): ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ಎನ್ನಿಸಿಕೊಂಡಿರೋ ಯೋಗರಾಜ್ ಭಟ್ ನಿರ್ದೆಶನದ ಪಂಚತಂತ್ರ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ.
ಟಿಪಿಕಲ್ ಭಟ್ಟರ ಸ್ಟೈಲ್ ಆಫ್ ಸಿನಿಮಾ ಅಲ್ಲದೇ ಇದ್ದರೂ ಪಂಚತಂತ್ರದಲ್ಲಿ ಭಟ್ಟರು ಕಾಣ್ತಾರೆ. ಹೊಸಬರನ್ನೇ ನಾಯಕ ನಾಯಕಿಯನ್ನಾಗಿಸಿಕೊಂಡಿರೋ ನಿರ್ದೆಶಕರು ಈಗಿನ ಜನರೇಷನ್ ಹಾಗೂ ವಯಸ್ಕರ ಮನಸ್ಥಿಯನ್ನ ಒಟ್ಟಿಗೆ ಸೇರಿಸಿ ಪ್ರೇಕ್ಷಕರ ಮುಂದೆ ಒಂದೊಳ್ಳೆ ಸಿನಿಮಾವನ್ನಾಗಿ ತಂದಿದ್ದಾರೆ.
ಸಿಂಪಲ್ ಸ್ಟೋರಿ ಕಲರ್ ಫುಲ್ ಪ್ರಸೆಂಟೆಷನ್
ಭಟ್ಟರ ಪಂಚತಂತ್ರ ಸಿನಿಮಾಗೆ ಫೇಮಸ್ ಡೈಲಾಗ್ ರೈಟರ್ ಮಾಸ್ತಿ ಕಥೆ ಬರೆದಿದ್ದಾರೆ. ಕಥೆಗೆ ಉತ್ತಮ ಸ್ಕ್ರೀನ್ ಪ್ಲೇ ಹಾಗೂ ಸಂಬಾಷಣೆ ಬರೆದು ಕಂಪ್ಲೀಟ್ ಕಮರ್ಷಿಯಲ್ ಸಿನಿಮಾವನ್ನಾಗಿ ಮಾಡಿರೋ ಕ್ರೆಡಿಟ್ ಭಟ್ಟರಿಗೆ ಸಿಗುತ್ತೆ. ಹರಿಕೃಷ್ಣ ಮ್ಯೂಸಿಕ್ ಸುಜ್ಞಾನ್ ಕ್ಯಾಮೆರಾ ವರ್ಕ್ ಸಿನಿಮಾದ ಹೈಲೆಟ್ ಅಂದ್ರೆ ತಪ್ಪಿಲ್ಲ. ಯೋಗರಾಜ್ ಭಟ್ ಸಿನಿಮಾ ಅಂದ್ರೆ ಸಂಭಾಷಣೆಯೇ ಶಕ್ತಿ ಅಂದ್ರೆ ತಪ್ಪಿಲ್ಲ. ಪೋಲಿ ಡೈಲಾಗ್ ಗಳು. ಕಿಕ್ ಕೊಡೋ ಕಾಮಿಡಿ ಈ ಎಲ್ಲವುದರ ಮಧ್ಯೆ ವಾವ್ಹ್ ಎನ್ನಿಸೋ ರೊಮ್ಯಾಂಟಿಕ್ ಲವ್ ಸ್ಟೋರಿ. ಭಟ್ಟರ ಸ್ಟೈಲ್ ನಲ್ಲೇ ಹೇಳೋದಾದ್ರೆ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇದಕ್ಕೂ ಅದಕ್ಕೂ ಸಂಬಂಧವಿಲ್ಲ ಆದ್ರೂ ಅದೇನೋ ಇಷ್ಟ ಆಗುತ್ತೆ. ಅದೇ ರೀತಿ ಭಟ್ಟರ ಸ್ಟೈಲ್ ಸಖತ್ ಹಿಡಿಸುತ್ತೆ.
ಹೊಸ ಕಲಾವಿದರ ಪವರ್ ಫುಲ್ ಪರ್ಫಾಮೆನ್ಸ್
ಪಂಚತಂತ್ರ ಸಿನಿಮಾದಲ್ಲಿ ಕಥೆ ಹಾಗೂ ಸ್ಕ್ರೀನ್ ಪ್ಲೇಯಷ್ಟೇ ಪವರ್ ಫುಲ್ ಆಗಿರೋದು ಕಲಾವಿದರ ಅಭಿನಯ. ಜಿದ್ದಿಗೆ ಬಿದ್ದಂತೆ ಆಕ್ಟಿಂಗ್ ಮಾಡಿದ್ದು ವಿಹಾನ್ ಹಾಗೂ ಸೋನಾಲ್ ಅಭಿನಯಕ್ಕೆ ಪಡ್ಡೆ ಹುಡ್ಗರು ಕ್ಲೀನ್ ಬೋಲ್ಡ್ ಆಗ್ತಾರೆ. ವಿಹಾನ್ ಶಾರುಖ್ ನಂತೆ ಧ್ವನಿ ಅನುಕರಣೆ ಮಾಡೋದು ಸಖತ್ ಮೆಚ್ಚುಗೆ ಆಗುತ್ತೆ. ಸೋನಾಲ್ ಜೊತೆಗಿನ ರೊಮ್ಯಾಟಿಕ್ ದೃಶ್ಯಗಳು ಭಟ್ಟರ ಸಿನಿಮಾ ಸ್ಟೈಲ್ ನೆನಪು ಮಾಡುತ್ತೆ. ಸಿನಿಮಾದ ಸಾಕಷ್ಟು ಕಡೆಗಳಲ್ಲಿ ಸೋನಾಲ್ ಮುದ್ದಾಗಿ ಕಾಣಿಸಿಕೊಳ್ತಾರೆ. ಇನ್ನು ಸಿನಿಮಾ ಪೂರ್ತಿ ಕಾಣಿಸಿಕೊಳ್ಳೊ ರಂಘಯಾಣ ರಘು ಅಭಿನಯದ ಬಗ್ಗೆ ಎರಡು ಮಾತಿಲ್ಲ.
- ಪವಿತ್ರಾ, ಎಂಟರ್‌ಟೇನ್‌ಮೆಂಟ್ ಬ್ಯುರೋ, ಸುವರ್ಣನ್ಯೂಸ್