
ಕೆಂಡಪ್ರದಿ
ಇಂತಹ ಹೊತ್ತಿನಲ್ಲಿ ನೋಡಿ ನಮ್ಮ ಮನಸ್ಸಿನ ರೂಪ ಹೇಗಾಗಿದೆ ಎಂದು ಕನ್ನಡಿ ಹಿಡಿದು ತೋರಿಸುವ ಚಿತ್ರ ಮನರೂಪ. ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು ಐದು ಮಂದಿ ಕಾಡಿಗೆ ಟ್ರೆಕ್ಕಿಂಗ್ ಗಾಗಿ ಹೋಗುತ್ತಾರೆ. ಇವರಿಗೆ ಇರುವುದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವ ತವಕ. ಪಶ್ಚಿಮ ಘಟ್ಟದ ದಡ್ಡ ಕಾಡಿನ ಗರ್ಭದೊಳಗೆ ಇವರು ಕಾಲಿಟ್ಟನಂತರ ಅಲ್ಲಿ ಏನೇನು ಆಗುತ್ತದೆ ಎನ್ನುವುದು ಚಿತ್ರ ತಿರುಳು.
ಚಿತ್ರ ವಿಮರ್ಶೆ: ನಮ್ ಗಣಿ ಬಿಕಾಂ ಪಾಸ್
ರಾತ್ರಿ ಕುಡಿದು ಮಲಗಿ ಬೆಳಗಾಗುವ ವೇಳೆಗೆ ಐದು ಜನರ ತಂಡದಲ್ಲಿ ಇಬ್ಬರು ನಾಪತ್ತೆ. ಕಾಣೆಯಾದವರ ಬೆನ್ನು ಹತ್ತಿದ ಉಳಿದ ಮೂವರನ್ನು ಕೌರ್ಯವನ್ನೇ ಹಂಚುವ ಮಂದಿ ಬೆನ್ನು ಹತ್ತಿ ಇಡೀ ದಿನ ಕಾಡುತ್ತಾರೆ. ಹೀಗೆ ತಮ್ಮ ಉಳಿವಿಗಾಗಿ ಹೋರಾಟ ನಡೆಸುತ್ತಾ, ಕಾಣೆಯಾದ ಸ್ನೇಹಿತರನ್ನು ಸೇರುವ, ಅವರನ್ನು ಕಾಪಾಡುವ ನಿಟ್ಟಿನಲ್ಲಿಯೇ ಚಿತ್ರ ಸಾಗುತ್ತದೆ. ಕಡೆಗೆ ರಾತ್ರಿ ವೇಳೆಗೆ ಐದು ಮಂದಿಯೂ ಒಟ್ಟಿಗೆ ಸೇರಿ ತಮಗೆ ಬೆಳಗ್ಗಿನಿಂದ ಏನಾಗಿತ್ತು, ಯಾರು ಏನು ಮಾಡಿದರು ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾರೆ. ಅಲ್ಲಿಗೆ ಚಿತ್ರ ಸುಖಾಂತ್ಯ.
ಚಿತ್ರ ವಿಮರ್ಶೆ: ಮನೆ ಮಾರಾಟಕ್ಕಿದೆ
ನಾವು ಇದನ್ನು ಇಷ್ಟಕ್ಕೆ ಸೀಮಿತ ಮಾಡುವುದಕ್ಕೆ ಸಾಧ್ಯವಿಲ್ಲ. ಕಾಡಿಗೆ ಹೋದವರ ಬೆನ್ನಿಗೆ ಬಿದ್ದ ಆ ಮೂವರು ಸೈಕೋಗಳು, ಈ ಐವರು ಯುವ ಮನಸ್ಸುಗಳು, ಅಷ್ಟುದೊಡ್ಡ ದಡ್ಡವಾದ ಕಾಡು ನಮ್ಮ ಬದುಕಿನ ಸಂಕೀರ್ಣತೆಯ ರೂಪಕಗಳು. ಅವುಗಳ ಮೂಲಕವೇ ಕಿರಣ್ ಹೆಗಡೆ ಇಂದಿನ ಬದುಕಿನ ವಾಸ್ತವನ್ನು ಸಾರಲು ಹೊರಟಿದ್ದಾರೆ.
ಮಹಾಬಲ ಸೀತಾಳಭಾವಿ ಅವರ ಶಕ್ತಿಶಾಲಿ ಸಂಭಾಷಣೆ ಚಿತ್ರಕ್ಕೆ ಬಲ ತುಂಬಿದೆ. ಮನೋವ್ಯಾಪಾರಕ್ಕೆ ಸಂಬಂಧಿಸಿದ ಚಿತ್ರಕ್ಕೆ ಸಂಭಾಷಣೆ ಬರೆಯುವಾಗ ಇರಬೇಕಾದ ಅಧ್ಯಯನದ ವಿಸ್ತಾರ, ಮನಸ್ಸಿನ ತೊಳಲಾಟಗಳ ಅರಿವು ಅವರಿಗೆ ಇರುವುದು ಸಂಭಾಷಣೆಯಲ್ಲಿ ವ್ಯಕ್ತವಾಗುತ್ತದೆ. ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ, ಅಮೋಘ ಸಿದ್ದಾಥ್‌ರ್, ಗಜ ನೀನಾಸಂ, ಶಿವ ಕಾಗೇವಾಡ, ಪ್ರಜ್ವಲ್ ಗೌಡ ಅವರು ಉತ್ತಮ ನಟನೆಯ ಮೂಲಕ ಆಪ್ತವಾಗುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.