ಚಿತ್ರ ವಿಮರ್ಶೆ: ಜನ್‌ಧನ್

Suvarna News   | Asianet News
Published : Jan 18, 2020, 09:27 AM IST
ಚಿತ್ರ ವಿಮರ್ಶೆ: ಜನ್‌ಧನ್

ಸಾರಾಂಶ

ನೋಟ್‌ ಬ್ಯಾನ್‌ ನಂತರ ಜನಸಾಮಾನ್ಯರಿಗೆ ಏನೆಲ್ಲ ಸಮಸ್ಯೆಗಳು ಎದುರಾದವು, ಯಾರೆಲ್ಲ ಅದರ ಲಾಭ ಪಡೆದರು, ಕಪ್ಪು ಹಣ ಹೊಂದಿದವರು ಹೇಗೆ ಜನ್‌ಧನ್‌ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡರು ಎನ್ನುವ ಕತೆæಯನ್ನು ಕಾಮನ್‌ ಮ್ಯಾನ್‌ ಹಾಗೂ ರಾಯಲ್‌ ಮ್ಯಾನ್‌ ನಡುವಿನ ಭಾವನೆಗಳು, ಬದುಕಿನ ವೈರುದ್ಯಗಳ ಮೂಲಕ ಜನ್‌ಧನ್‌ ಚಿತ್ರದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನಾಗಚಂದ್ರ.

ದೇಶಾದ್ರಿ ಹೊಸ್ಮನೆ

ಸಿನಿಮಾದೊಳಗೇ ನಡೆಯುವ ಸಿನಿಮಾ ಕತೆ ಇದು. ಸಿನಿಮಾವನ್ನು ಆಗಾಧವಾಗಿ ಪ್ರೀತಿಸುವ ಒಬ್ಬ ಯುವ ನಿರ್ದೇಶಕನ ಸ್ವಾಭಿಮಾನದ ಬದುಕು ಮತ್ತು ಅವನನ್ನೇ ಬಳಸಿಕೊಂಡು ಕಪ್ಪು ಹಣವನ್ನು ಸಿನಿಮಾ ನಿರ್ಮಾಣದ ಮೇಲೆ ಹಾಕಿ ಅದನ್ನು ವೈಟ್‌ ಮನಿಯಾಗಿ ಪರಿವರ್ತಿಸಲು ಹೊರಟವರ ಕತೆ ಇಲ್ಲಿದೆ. ಒಬ್ಬನದು ಹಸಿವಿಗಾಗಿ ನಡೆಯುವ ಹೋರಾಟ, ಇನ್ನು ಕೆಲವರದು ಅಕ್ರಮವಾಗಿ ಸಂಪಾದಿಸಿದ್ದನ್ನು ಅಕ್ರಮವಾಗಿಯೇ ಉಳಿಸಿಕೊಳ್ಳಬೇಕೆನ್ನುವ ಹಪಾಹಪಿ. ಅದರಲ್ಲಿ ಸ್ವಾಭಿಮಾನಿ ನಿರ್ದೇಶಕ ಹೇಗೆ ಬಲಿಪಶುವಾದ, ಅದಕ್ಕೆ ಯಾರೆಲ್ಲ ಕಾರಣವಾದರೂ ಎನ್ನುವುದನ್ನು ಈ ಸಿನಿಮಾ, ಮನಸ್ಸಿಗೆ ತಟ್ಟುವಂತೆ ಹಾಗೆ ತೆರೆದಿಡುತ್ತದೆ. ನೋಟ್‌ ಬ್ಯಾನ್‌ ಕುರಿತೇ ಈಗಾಗಲೇ ಹಲವು ಸಿನಿಮಾ ಬಂದರೂ, ಈ ಸಿನಿಮಾ ವಿಶೇಷ ಎನಿಸುವುದು ಒಬ್ಬ ಸ್ವಾಭಿಮಾನಿ ನಿರ್ದೇಶಕ ಮತ್ತು ಕಪ್ಪು ಹಣವನ್ನು ಸಿನಿಮಾ ನಿರ್ಮಾಣದ ಮೇಲೆ ಹಾಕಬಹುದೆನ್ನುವ ಉಳ್ಳವರ ಮನಸ್ಥಿತಿಯನ್ನು ತೆರೆದಿಡುವ ಕಾರಣಕ್ಕೆ.

ಚಿತ್ರ ವಿಮರ್ಶೆ: ಶ್ರೀ ಭರತ ಬಾಹುಬಲಿ

ಕತೆಯ ಮೂಲಕ ಗಮನ ಸೆಳೆಯುವ ಈ ಚಿತ್ರವು ಅನೇಕ ಕೊರತೆಗಳಲ್ಲಿ ಸೊರಗಿದೆ. ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾದಲ್ಲಿರಬೇಕಾದ ಪ್ರೀತಿ, ಪ್ರೇಮ, ಸೆಂಟಿಮೆಂಟ್‌, ಸಾಂಗ್ಸ್‌, ಆ್ಯಕ್ಷನ್‌ ಎನ್ನುವ ಮಸಾಲೆ ಅಂಶಗಳಿದ್ದರೂ, ಪ್ರೇಕ್ಷಕರನ್ನು ಯಾವು ಕೂಡ ಗಾಢವಾಗಿ ತಟ್ಟುವುದಿಲ್ಲ. ಹಾರರ್‌ ಅಂಶಗಳಿವೆ ಎನ್ನುವ ಹಾಗೆ ಆರಂಭದಲ್ಲೇ ಕುತೂಹಲ ಹುಟ್ಟಿಸುವ ಸಿನಿಮಾ, ಅದ್ಯಾಕೆ ಎನ್ನುವುದನ್ನು ಎಲ್ಲಿಯೂ ರಿವೀಲ್‌ ಮಾಡದೇ ನಿರಾಸೆಗೊಳಿಸಿ ಮುಗಿದು ಹೋಗುತ್ತದೆ.

ಚಿತ್ರ ವಿಮರ್ಶೆ: ಅವನೇ ಶ್ರೀಮನ್ನಾರಾಯಣ

ಪಾತ್ರವರ್ಗ ಮತ್ತು ಹಿಡಿತವಿಲ್ಲದ ನಿರೂಪಣೆ, ಸಾಧಾರಣ ತಾಂತ್ರಿಕತೆ ಚಿತ್ರಕ್ಕೆ ತೊಡಕಾಗಿವೆ. ಸುನೀಲ್‌ ಜೋಶಿ ಹಾಗೂ ರಚನಾ ಈ ಚಿತ್ರದ ನಾಯಕ-ನಾಯಕಿ.ಅವರಿಬ್ಬರ ಅಭಿನಯಕ್ಕೆ ಇಲ್ಲಿ ಅಷ್ಟಾಗಿ ಜಾಗ ಸಿಕ್ಕಿಲ್ಲ. ನಿರ್ದೇಶಕನಾಗಿ ಬರುವ ಅರುಣ್‌ ಈ ಚಿತ್ರದ ಹೈಲೈಟ್‌. ಅವರೇ ಇಡೀ ಸಿನಿಮಾವನ್ನು ತಮ್ಮ ಮಾತು ಮತ್ತು ನಟನೆಯ ಮೂಲಕ ಸರಗವಾಗಿ ಸಾಗಿಸಿಕೊಂಡು ಬರುತ್ತಾರೆ. ಆ ಕಾರಣಕ್ಕೆ ಸಿನಿಮಾ ನಡುವಲ್ಲಿ ಬೇಸರ ಹುಟ್ಟಿಸಿದರೂ, ಕ್ಲೈಮ್ಯಾಕ್ಸ್‌ ವರೆಗೂ ನೋಡಿಸಿಕೊಂಡು ಬರುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ