ಪೋಸ್ಟ್ ಆಫೀಸ್‌ನ ಈ ಪ್ಲಾನ್‌ನಲ್ಲಿದೆ ಬಂಪರ್ ಲಾಭ! ತಿಂಗಳಿಗೆ ಸಣ್ಣ ಉಳಿತಾಯ ಮಾಡಿ, ₹10 ಲಕ್ಷದೊಂದಿಗೆ 7 ತೊಲ ಚಿನ್ನ ನಿಮ್ಮದಾಗಿಸಿ!

Published : Aug 11, 2026, 11:04 PM IST
Post Office

ಸಾರಾಂಶ

ಅಂಚೆ ಕಚೇರಿಯ ಮರುಕಳಿಸುವ ಠೇವಣಿ (RD) ಯೋಜನೆಯು ಸಣ್ಣ ಮಾಸಿಕ ಹೂಡಿಕೆಯ ಮೂಲಕ ದೊಡ್ಡ ಮೊತ್ತವನ್ನು ಗಳಿಸಲು ಉತ್ತಮ ಅವಕಾಶ ನೀಡುತ್ತದೆ. ದಿನಕ್ಕೆ ₹100 ಉಳಿಸುವ ಮೂಲಕ 5 ವರ್ಷಗಳಲ್ಲಿ ₹2 ಲಕ್ಷಕ್ಕೂ ಹೆಚ್ಚು ಗಳಿಸಬಹುದು, ಮತ್ತು ದಿನಕ್ಕೆ ₹500 ಉಳಿಸಿದರೆ ₹10 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಬಹುದು.

ಸಾಮಾನ್ಯವಾಗಿ ಅನೇಕರು ಅಂಚೆ ಕಚೇರಿಗಳನ್ನು ಕೇವಲ ಪತ್ರ ಅಥವಾ ಪಾರ್ಸೆಲ್‌ಗಳನ್ನು ಕಳುಹಿಸುವ ಸ್ಥಳವೆಂದು ಭಾವಿಸುತ್ತಾರೆ. ಆದರೆ, ಭಾರತ ಸರ್ಕಾರವು 100% ಭದ್ರತೆಯೊಂದಿಗೆ ಸಾರ್ವಜನಿಕರಿಗೆ ಉತ್ತಮ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳನ್ನು ಒದಗಿಸುತ್ತಿದೆ. ಅಂಚೆ ಕಚೇರಿಯಲ್ಲಿ ಮಾಡುವ ಪ್ರತಿಯೊಂದು ಹೂಡಿಕೆಗೂ ಸರ್ಕಾರದ ಪೂರ್ಣ ಖಾತರಿ ಇರುವುದರಿಂದ ಇದು ಹೂಡಿಕೆದಾರರಿಗೆ ಅತ್ಯಂತ ಸುರಕ್ಷಿತ ಯೋಜನೆಯಾಗಿದೆ.

ಬೃಹತ್ ನಿಧಿ ಸಂಗ್ರಹಿಸಲು ಈ ಯೋಜನೆ ನೆರವು!

ಇಂತಹ ಅದ್ಭುತ ಯೋಜನೆಗಳಲ್ಲಿ ಅಂಚೆ ಕಚೇರಿ ಮರುಕಳಿಸುವ ಠೇವಣಿ ಪ್ರಮುಖವಾದದ್ದು. ಒಂದೇ ಬಾರಿಗೆ ದೊಡ್ಡ ಮೊತ್ತ ಹೂಡಿಕೆ ಮಾಡಲು ಸಾಧ್ಯವಾಗದ ಸಾಮಾನ್ಯ ಜನರು, ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಉಳಿಸಿ ಐದು ವರ್ಷಗಳಲ್ಲಿ ಲಕ್ಷಾಂತರ ರೂಪಾಯಿಗಳ ಬೃಹತ್ ನಿಧಿಯನ್ನು ಬೆಳೆಸಲು ಈ ಯೋಜನೆ ನೆರವಾಗುತ್ತದೆ.

ದಿನಕ್ಕೆ ₹100 ಉಳಿಸಿದರೆ ಸಿಗುವ ಲಾಭ ಎಷ್ಟು?

ನೀವು ಪ್ರತಿದಿನ ₹100 ಉಳಿಸಿದರೆ, ಅದು ತಿಂಗಳಿಗೆ ₹3,000 ಆಗುತ್ತದೆ. ಈ ಲೆಕ್ಕಾಚಾರದಲ್ಲಿ ಐದು ವರ್ಷಗಳ ಕಾಲ ಸತತವಾಗಿ ಹೂಡಿಕೆ ಮಾಡಿದರೆ ನಿಮ್ಮ ಒಟ್ಟು ಅಸಲು ಠೇವಣಿ ₹1.80 ಲಕ್ಷ ತಲುಪುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರವು ಈ ಆರ್‌ಡಿ ಯೋಜನೆಗೆ ವಾರ್ಷಿಕ ಶೇಕಡಾ 6.7 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ತಿಂಗಳಿಗೆ ₹3,000 ಹೂಡಿಕೆಗೆ ಐದು ವರ್ಷಗಳ ನಂತರ ನಿಮಗೆ ಸುಮಾರು ₹34,097 ಬಡ್ಡಿ ಸಿಗುತ್ತದೆ. ಅಂದರೆ, ಐದು ವರ್ಷಗಳ ಮುಕ್ತಾಯದ ಅವಧಿಗೆ ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹2,14,097 ನಿಮ್ಮ ಕೈಸೇರುತ್ತದೆ.

₹10 ಲಕ್ಷ ನಗದು ಮತ್ತು 7 ತೊಲ ಚಿನ್ನ ಕೊಳ್ಳುವ ಪ್ಲಾನ್!

ಒಂದು ವೇಳೆ ನೀವು ದಿನಕ್ಕೆ ₹500 ಅಂದರೆ ತಿಂಗಳಿಗೆ ₹15,000 ಉಳಿಸುವ ಸಾಮರ್ಥ್ಯ ಹೊಂದಿದ್ದರೆ, ಐದು ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ ₹9 ಲಕ್ಷ ತಲುಪುತ್ತದೆ. ಶೇಕಡಾ 6.7 ರ ಬಡ್ಡಿದರದ ಲೆಕ್ಕಾಚಾರದಲ್ಲಿ ನಿಮಗೆ ಸುಮಾರು ₹1,70,492 ಬಡ್ಡಿ ಮಾತ್ರವೇ ಸಿಗುತ್ತದೆ. ಅಂದರೆ, ಐದು ವರ್ಷಗಳ ಕೊನೆಯಲ್ಲಿ ಅಸಲು ಮತ್ತು ಬಡ್ಡಿ ಸೇರಿ ಬರೋಬ್ಬರಿ ₹10,70,492 (ಹತ್ತು ಲಕ್ಷದ ಎಪ್ಪತ್ತು ಸಾವಿರದ ನಾಲ್ಕು ನೂರ ತೊಂಬತ್ತೆರಡು ರೂಪಾಯಿ) ಮೊತ್ತ ದೊರೆಯುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲಾಗೆ (10 ಗ್ರಾಂ) ಸರಿಸುಮಾರು ₹1.4 ಲಕ್ಷದಷ್ಟಿದ್ದು, ಈ ಯೋಜನೆಯಿಂದ ಸಿಗುವ ಹಣದಿಂದ ನೀವು ಒಂದೇ ಬಾರಿಗೆ ಸುಮಾರಾಗಿ 7 ತೊಲ ಚಿನ್ನವನ್ನು ಸುಲಭವಾಗಿ ಖರೀದಿಸಬಹುದು.

ಖಾತೆ ತೆರೆಯಲು ಯಾರೆಲ್ಲಾ ಅರ್ಹರು?

ವಯೋಮಿತಿ; 18 ವರ್ಷ ಮೇಲ್ಪಟ್ಟ ಹಾಗೂ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಖಾತೆಯನ್ನು ತೆರೆಯಬಹುದು.

ಅಪ್ರಾಪ್ತ ವಯಸ್ಕರು; 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಅವರ ಪೋಷಕರು ಅಥವಾ ಕಾನೂನುಬದ್ಧ ಗಾರ್ಡಿಯನ್‌ಗಳು ಖಾತೆ ತೆರೆಯಲು ಅವಕಾಶವಿದೆ.

ಅವಧಿ; ಈ ಯೋಜನೆಯ ಪ್ರಾಥಮಿಕ ಅವಧಿ 5 ವರ್ಷಗಳು. ಬೇಕಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿ ಅದನ್ನು ಇನ್ನಷ್ಟು 5 ವರ್ಷಗಳ ಕಾಲ ವಿಸ್ತರಿಸಿಕೊಳ್ಳಬಹುದು.

ಕನಿಷ್ಠ ಹೂಡಿಕೆ; ಈ ಯೋಜನೆಯನ್ನು ತಿಂಗಳಿಗೆ ಕನಿಷ್ಠ ₹100 ಯಿಂದ ಆರಂಭಿಸಬಹುದು.

ಖಾತೆ ತೆರೆಯುವುದು ಹೇಗೆ?

ಉಳಿತಾಯ ಮಾಡಲು ಬಯಸುವವರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಖಾತೆ ತೆರೆಯಲು ಕೆಳಗಿನ ದಾಖಲೆಗಳು ಕಡ್ಡಾಯವಾಗಿವೆ:

1. ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್

2. ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್

3. ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (Photos)

ಸಾಮಾನ್ಯ ಹೂಡಿಕೆದಾರರಿಗೆ ಹಂತ-ಹಂತವಾಗಿ ದೊಡ್ಡ ಮೊತ್ತವನ್ನು ರೂಪಿಸಲು ಮತ್ತು ಭವಿಷ್ಯದ ಆರ್ಥಿಕ ಅಗತ್ಯಗಳಿಗೆ ಅಂಚೆ ಕಚೇರಿಯ ಈ ಆರ್‌ಡಿ ಯೋಜನೆ ಅತ್ಯಂತ ಬೆಸ್ಟ್ ಆಯ್ಕೆಯಾಗಿದೆ.

PREV
Read more Articles on
click me!

Recommended Stories

ನೀವು ಮಾಡೋ ತಪ್ಪು ಇದೇ! ಮಳೆಯಲ್ಲಿ ಒದ್ದೆಯಾದ ನೋಟುಗಳನ್ನ ಮತ್ತೆ ಗರಿಗರಿ ಮಾಡೋದು ಹೇಗೆ?
EPFO: ಖಾತೆದಾರರೇ ಎಚ್ಚರ! ಒಂದು ಸಣ್ಣ ತಪ್ಪಿನಿಂದ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗಬಹುದು!