Moto Razr 3 Launch: ಮೊಟೊರೊಲಾದ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆ!

By Suvarna News  |  First Published Dec 27, 2021, 8:40 AM IST

ಪ್ರಸ್ತುತ Moto Razr 5G ಮತ್ತು Moto Razr 2019 ಮಾರುಕಟ್ಟೆಯಲ್ಲಿ ಲಭ್ಯವಿದೆ. Moto Razr 5G- 8GB+256GB ಮಾದರಿ ಭಾರತದಲ್ಲಿ  89,999 ರೂಗಳಲ್ಲಿ ಲಭ್ಯವಿದೆ.


Tech Desk: ಮೊಬೈಲ್‌ ಮಾರುಕಟ್ಟೆಯಲ್ಲಿ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು (Foldable Smartphone) ಟ್ರೆಂಡ್‌ ಹೆಚ್ಚಾಗುತ್ತಿದೆ. ಅನೇಕ  ಬ್ರ್ಯಾಂಡ್‌ಗಳು ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿವೆ.  ಮೊಟೊರೊಲಾ (Motorola) ಈಗ ಹೊಸ ಫೋಲ್ಡಬಲ್ ರೇಜರ್ ಫೋನ್‌ ಮೇಲೆ ಕೆಲಸ ಮಾಡುತ್ತಿದೆ. ಮೊಟೊರೊಲಾ ಮಾರುಕಟ್ಟೆಗೆ ಫೋಲ್ಡಬಲ್  ಫೋನ್‌ಗಳನ್ನು ಪರಿಚಯಿಸಿದ ಮೊದಲ ಕಂಪನಿಗಳಲ್ಲಿ ಒಂದಾಗಿದೆ. Lenovo-ಮಾಲೀಕತ್ವದ ಕಂಪನಿಯು 2019 ರಲ್ಲಿ ಒರಿಜಿನಲ್ Razr ಅನ್ನು ಬಿಡುಗಡೆ ಮಾಡಿತ್ತು, ನಂತರ 2020 ರಲ್ಲಿ ಸಾಧನದ 5G ಆವೃತ್ತಿಯನ್ನು ಕೂಡ ಬಿಡುಗಡೆ ಮಾಡಿತ್ತು. ಲೆನೊವೊ ಮಾಲೀಕತ್ವದ ಬ್ರ್ಯಾಂಡ್ ಮೊಟೊರೊಲಾ, ಸ್ಯಾಮ್‌ಸಂಗ್ ಮತ್ತು ಒಪ್ಪೋ ಜತೆಗೆ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ  ಸ್ಪರ್ಧಿಸಲಿದೆ. 

ಲೆನೊವೊ ಮೊಬೈಲ್ ಬ್ಯುಸಿನೆಸ್ ಗ್ರೂಪ್‌ನ ಜನರಲ್ ಮ್ಯಾನೇಜರ್ ಚೆನ್ ಜಿನ್ ಅವರು ಚೀನೀ ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಮೊಟೊರೊಲಾ ರೇಜರ್ 5G ಯ ಅಪ್ಡೇಟೆಡ್‌ ಮಾದರಿ ಬಿಡುಗಡೆಗೆ  ತಯಾರ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹೊಸ ರೇಜರ್ ಹೆಚ್ಚು ಶಕ್ತಿಯುತವಾಗಿದ್ದು ಮತ್ತು ಅಡ್ವಾನ್ಸಡ್ ಮೊಬೈಲ್‌ ಆಗಿರಲಿದೆ ಎಂದು ಅವರು ಬಹಿರಂಗಪಡಿಸಿದರು. ಹಿಂದಿನ Razr ಗಿಂತ ಹೆಚ್ಚಿನ ನವೀಕರಣಗಳೊಂದಿಗೆ ಫೋನ್‌ಗಳನ್ನು ಪ್ರಾರಂಭಿಸಲಾಗುವುದು. ಇದು ಶಕ್ತಿಯುತ ಡಿಸೈನ್ ಹೊಂದಿರುತ್ತದೆ ಮತ್ತು ಸುಧಾರಿತ UI ಯೊಂದಿಗೆ ಬರುತ್ತದೆ. ವಿನ್ಯಾಸವು ಫ್ಯೂಚರಿಸ್ಟಿಕ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.‌

Tap to resize

Latest Videos

undefined

Moto Razr 5G Specifications 

Moto Razr 5G : ಸ್ಮಾರ್ಟ್‌ಫೋನ್ 21:9ರ ಅನುಪಾತದೊಂದಿಗೆ 6.2-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಫೋನ್‌ನ ಹಿಂಭಾಗದಲ್ಲಿ ಈ ಸಾಧನವು 4:3 ರ  ಅನುಪಾತದೊಂದಿಗೆ 2.7-ಇಂಚಿನ ಸೆಕೆಂಡರಿ ಡಿಸ್ಪ್ಲೇಯನ್ನು ಹೊಂದಿದೆ. . Razer 5G ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 765G ಪ್ರೊಸೆಸರ್ ಅನ್ನು ಹೊಂದಿದ್ದು ಅದು 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ಬರುತ್ತದೆ. ಇದರ ಸಂಗ್ರಹಣೆಯನ್ನು ಮೈಕ್ರೋ SD ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.

ಸೆಲ್ಫಿಗಾಗಿ  20 ಮೆಗಾಪಿಕ್ಸೆಲ್ ಕ್ಯಾಮೆರಾ!

Motorola Razr 5G ಹಿಂಭಾಗದಲ್ಲಿ 48-ಮೆಗಾಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ F2.2 Apertureದೊಂದಿಗೆ 20-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಆದಾಗ್ಯೂ, 48-ಮೆಗಾಪಿಕ್ಸೆಲ್ ಶೂಟರ್ ಅನ್ನು ಹಿಂಬದಿಯ ಕ್ಯಾಮೆರಾವಾಗಿ  ಕೂಡ ಬಳಸಬಹುದು ಮತ್ತು ಫೋನ್ ತೆರೆದಾಗ ಅದನ್ನು ಮುಂಭಾಗದ ಕ್ಯಾಮೆರಾವಾಗಿ ಬಳಸಬಹುದು.

15W ಟರ್ಬೋಪವರ್ ಚಾರ್ಜರ್‌ಗೆ ಬೆಂಬಲದೊಂದಿಗೆ 2800mAh ಬ್ಯಾಟರಿಯೊಂದಿಗೆ Razr 5G ಬರಲಿದೆ . ಸ್ಮಾರ್ಟ್‌ಫೋನ್  Android 10 ನಲ್ಲಿ ಕಾರ್ಯನಿರ್ವಹಿಸುತ್ತದೆ ಆದರೆ ಅದನ್ನು Android 11 ಗೆ ಅಪ್‌ಗ್ರೇಡ್ ಮಾಡಬಹುದು. Moto Razr 5G ಅನ್ನು ಫೋಲ್ಡ ಮಾಡಿದಾಗ  72.6 x 91.7 x 16 ಅಳತೆ ಮಾಡುತ್ತದೆ ಆದರೆ ನೀವು ಸ್ಮಾರ್ಟ್‌ಫೋನ್ ಅನ್ನು ತೆರೆದಾಗ, ಅದು 72.6 x 169.2 x 7.9 ಅನ್ನು ಅಳೆಯುತ್ತದೆ. ಸ್ಮಾರ್ಟ್ಫೋನ್ 192 ಗ್ರಾಂ ತೂಗುತ್ತದೆ.

Moto Razr 5G ಮತ್ತು Moto Razr 2019

ಪ್ರಸ್ತುತ, ನಾವು ಮಾರುಕಟ್ಟೆಯಲ್ಲಿ Moto Razr 5G ಮತ್ತು Moto Razr 2019 ಅನ್ನು ಹೊಂದಿದ್ದೇವೆ. Moto Razr 5G ಭಾರತದಲ್ಲಿ 8GB+256GB ಮಾದರಿಗಾಗಿ 89,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಅನ್ನು ಮೊದಲು ಆನ್‌ಲೈನ್‌ನಲ್ಲಿ ರೂ 1,0,9,000 ಗೆ ಮಾರಾಟ ಮಾಡಲಾಗುತ್ತಿತ್ತು, ಆದರೆ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ 89,999 ರ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಹಳೆಯ Moto Razr ಭಾರತದಲ್ಲಿ 54,999 ರೂ.ಗೆ ಲಭ್ಯವಿದೆ. ಈ ಹಿಂದೆ 6GB+128GB ವೇರಿಯಂಟ್‌ಗಾಗಿ 74,999 ರೂ.ಗೆ ಸ್ಮಾರ್ಟ್‌ಫೋನ್ ಮಾರಾಟ ಮಾಡಲಾಗಿತ್ತು.

ಇದನ್ನೂ ಓದಿ:

1) iPhone Without Sim Slot: ಆ್ಯಪಲ್‌ ಹೊಸ ಐಫೋನ್‌ ಮಾದರಿಯಲ್ಲಿ ಸಿಮ್‌ ಕಾರ್ಡ್‌ ಸ್ಲಾಟೇ ಇರೋಲ್ವಂತೆ!

2) Dual Mode Vehicle: ರಸ್ತೆ ಮತ್ತು ರೈಲು ಹಳಿಗಳೆರಡರ ಮೇಲೂ ಓಡಲಿದೆ ಜಪಾನ್‌ನ ಮಿನಿ ಬಸ್!‌

3) Jio Happy New Year Offer: ₹2,545 ಪ್ರಿಪೇಯ್ಡ್ ರೀಚಾರ್ಜ್ ಮೇಲೆ 1 ತಿಂಗಳ ಎಕ್ಸ್ಟ್ರಾ ವ್ಯಾಲಿಡಿಟಿ!

click me!