ಕೇಂದ್ರದ ಹೊಸ ಐಟಿ ನಿಯಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ Whatsapp!

By Suvarna News  |  First Published May 26, 2021, 3:58 PM IST

* ಬುಧವಾರದಿಂದ ಜಾರಿಗೆ ಬರುತ್ತಿರುವ ಕೇಂದ್ರ ಸರ್ಕಾರದ ಹೊಸ ಐಟಿ ನೀತಿ

* ಹೊಸ ಐಟಿ ನೀತಿ ವಿರೋಧಿಸಿ ಹೈಕೋರ್ಟ್‌ ಮೆಟ್ಟಿಲೇರಿದ ವಾಟ್ಸಾಪ್ ಸಂಸ್ಥೆ

* ಕೇಂದ್ರದ ಈ ನಿಯಮ ಕಂಪನಿ ತನ್ನ ಬಳಕೆದಾರರಿಗೆ ನೀಡುವ ಖಾಸಗೀತನದ ರಕ್ಷಣೆಯನ್ನು ಉಲ್ಲಂಘಿಸುವಂತೆ ಮಾಡುತ್ತದೆ 


ನವದೆಹಲಿ(ಮೇ.26): ಇಂದು ಬುಧವಾರದಿಂದ ಜಾರಿಗೆ ಬರುತ್ತಿರುವ ಕೇಂದ್ರ ಸರ್ಕಾರದ ಹೊಸ ಐಟಿ ನೀತಿ ವಿರೋಧಿಸಿರುವ ವಾಟ್ಸಾಪ್ ಸಂಸ್ಥೆ, ಈ ಸಂಬಂಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಕೇಂದ್ರದ ಈ ನಿಯಮ ಕಂಪನಿ ತನ್ನ ಬಳಕೆದಾರರಿಗೆ ನೀಡುವ ಖಾಸಗೀತನದ ರಕ್ಷಣೆಯನ್ನು ಉಲ್ಲಂಘಿಸುವಂತೆ ಮಾಡುತ್ತದೆ ಎಂದು ಸಂಸ್ಥೆ ಹೇಳಿದೆ.

ಖಾಸಗಿತನ ನೀತಿ ಕೈಬಿಡಿ: ವಾಟ್ಸಾಪ್‌ಗೆ ಕೇಂದ್ರ ತಾಕೀತು!

Latest Videos

undefined

ಸರ್ಕಾರದ ನೂತನ ನಿಯಮದ ಅನುಸಾರ ತನ್ನ ವೇದಿಕೆಯಲ್ಲಿ ಬಳಕೆದಾರರು ಸಂದೇಶ ಕಳುಹಿಸಿದ ಮೂಲದ ಜಾಡು ಹಿಡಿಯಬೇಕಾಗುತ್ತದೆ. ಇದು ಬಳಕೆದಾರರ ಖಾಸಗಿತನಕ್ಕೆ ಹಾನಿ ಮಾಡಲಿದೆ ಎಂದು ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ತನ್ನ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ತಾನು ತನ್ನ ಬಳಕೆದಾರರ ಚಾಟ್‌ ಟ್ರೇಡ್‌ ಮಾಡಲುತಯಾರಿಲ್ಲ ಎಂದು ಸ್ಪಷ್ಟಪಡಿಸಿದೆ.

ಚಾಟ್‌ಗಳನ್ನು ಟ್ರೇಸ್‌ ಮಾಡುವುದೆಂದರೆ, ವಾಟ್ಸಾಪ್‌ನಲ್ಲಿ ಕಳುಹಿಸುವ ಪ್ರತಿ ಸಂದೇಶದ ಮಾಹಿತಿ ಸಂಗ್ರಹಿಸಿಡುವಂತೆ. ಇದು ಬಳಕೆದಾರರಿಗೆ ಸಂಸ್ಥೆ ನೀಡಿರುವ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ನಿಯಮವನ್ನು ಉಲ್ಲಂಘಿಸಲಿದೆ. ಅಲ್ಲದೇ ಜನರ ಖಾಸಗಿತನದ ಮೂಲಭೂತ ಹಕ್ಕನ್ನು ಕಡೆಗಣಿಸಿದಂತಾಗಲಿದೆ ಎಂದು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿರುವ ವಾಟ್ಸಾಪ್ ನಮ್ಮ ಬಳಕೆದಾರರ ಖಾಸಗೀತನವನ್ನು ಕಸಿದುಕೊಳ್ಳುವುದನ್ನು ವಿರೋಧಿಸಲು ಅಗತ್ಯವಿರುವ ನಾಗರಿಕ ಸಮಾಜ ಹಾಗೂ ಪರಿಣತರನ್ನು ಸಂಪರ್ಕಿಸುತ್ತಿರುತ್ತೇವೆ. ಇನ್ನೊಂದೆಡೆ ನಾವು ಜನರನ್ನು ಸುರಕ್ಷಿತವಾಗಿಡುವ ಜತೆಯಲ್ಲಿ ನಮಗೆ ಲಭ್ಯವಿರುವ ಕಾನೂನಾತ್ಮಕ ಮನವಿಗಳಿಗೆ ಸ್ಪಂದಿಸುವ ಪರಿಹಾರಾತ್ಮಕ ಕಾರ್ಯಗಳನ್ನು ಸಹ ಭಾರತ ಸರ್ಕಾರದೊಂದಿಗೆ ಮುಂದುವರಿಸುತ್ತಿದ್ದೇವೆ' ಎಂದಿದೆ. 

ವ್ಯಾಟ್ಸ್ಆ್ಯಪ್ ಪ್ರೈವಸಿ ಪಾಲಿಸಿ ಒಪ್ಪಿಕೊಳ್ಳದಿದ್ದರೆ ಖಾತೆ ಡಿಲೀಟ್ ಆಗಲ್ಲ; ಮಹತ್ವದ ಬದಲಾವಣೆ!

ಸಾಮಾಜಿಕ ಮಾಧ್ಯಮಗಳು ಅಧಿಕಾರಿಗಳು ಬಯಸಿದ ಸಂದರ್ಭದಲ್ಲಿ ಸಂದೇಶವೊಂದನ್ನು ಕಳುಹಿಸಿದ ಮೊದಲ ವ್ಯಕ್ತಿಯನ್ನು ಪತ್ತೆಹಚ್ಚುವುದು ಅಗತ್ಯ ಎಂದು ಐಟಿ ನಿಯಮದಲ್ಲಿ ಹೇಳಿದೆ. ಇದು ಭಾರತ ಸಂವಿಧಾನದ ಅಡಿಯಲ್ಲಿನ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.

ನೂತನ ನಿಯ​ಮ​ದಲ್ಲಿ ಏನಿ​ದೆ?

- ಸಾಮಾ​ಜಿಕ ಮಾಧ್ಯ​ಮ​ಗ​ಳು ದೂರುಗಳ ಪರಿಹಾರಕ್ಕೆ ಅಧಿಕಾರಿಗಳ​ನ್ನು ನೇಮಿಸಬೇಕು

- ಈ ಅಧಿಕಾರಿ ಜತೆ ವ್ಯವಹರಿಸಲು ಸರ್ಕಾರದಿಂದ ನಿಗಾ ಸಮಿತಿ ರಚಿಸಲಾಗುವುದು

- ನಗ್ನ ಫೋಟೋ, ಆಕ್ಷೇಪಾರ್ಹ ಕಂಟೆಂಟ್‌ ಪ್ರಕಟವಾದರೆ 24 ತಾಸಿನಲ್ಲಿ ತೆಗೆಯಬೇಕು

- ಸರ್ಕಾರ, ಕೋರ್ಟ್‌ ಕೇಳಿದರೆ ವಿವಾದಿತ ಪೋಸ್ಟ್‌ನ ಮೂಲದ ಮಾಹಿತಿ ನೀಡಬೇಕು

click me!