ಒಂದೇ ವಾಟ್ಸ್‌ಆ್ಯಪ್ ಅಕೌಂಟ್ ಏಕಕಾಲಕ್ಕೆ 4 ಡಿವೈಸ್‌ನಲ್ಲಿ ಬಳಸಿ| ಬರಲಿದೆ ಹೊಸ ಫೀಚರ್
ನವದೆಹಲಿ(ಜೂ.15): ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯ ಪರಿಚಯಿಸಲು ಮುಂದಾಗಿದೆ. ಒಂದೇ ವಾಟ್ಸ್‌ಆ್ಯಪ್ ಅಕೌಂಟ್ ಅನ್ನು ಏಕಕಾಲಕ್ಕೆ ನಾಲ್ಕು ಡಿವೈಸ್‌ಗಳಲ್ಲಿ ಬಳಕೆ ಮಾಡಬಹುದಾದ ಆಯ್ಕೆ ನೀಡಲು ಹೊರಟಿದೆ. ಶೀಘ್ರದಲ್ಲೇ ಇದು ಗ್ರಾಹಕರಿಗೆ ಸಿಗುವ ನಿರೀಕ್ಷೆ ಇದೆ.
ಟಿಕ್‌ಟಾಕ್‌ನಿಂದ ಆನ್ಲೈನ್ ಟ್ಯಾಲೆಂಟ್ ಹಂಟ್! ರೆಕಾರ್ಡ್ ಮಾಡಿ ಮ್ಯೂಸಿಕ್ ಸ್ಟಾರ್ ಆಗಿ
undefined
ಸದ್ಯ ವಾಟ್ಸ್‌ಆ್ಯಪ್ ಅಕೌಂಟ್ ಅನ್ನು ಒಂದೇ ಡಿವೈಸ್‌ನಲ್ಲಿ ಮಾತ್ರವೇ ಬಳಸಬಹುದು. ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್ ಇನ್‌ಸ್ಟಾಲ್ ಆಗಿ ಅದನ್ನು ನೀವು ಬಳಸುತ್ತಿದ್ದರೆ, ಅದನ್ನು ಮತ್ತೊಂದು ಮೊಬೈಲ್‌ನಲ್ಲಿ ಬಳಸಲು ಬರುವುದಿಲ್ಲ. ವೆಬ್ ವಾಟ್ಸ್‌ಆ್ಯಪ್ ಎಂಬ ಆಯ್ಕೆ ಇದೆಯಾದರೂ, ಅದು ಥೇಟ್ ಮೊಬೈಲ್‌ನಲ್ಲಿರುವ ವಾಟ್ಸ್‌ಆ್ಯಪ್‌ನಂತೆಯೇ ಇಲ್ಲ. ಇದೀಗ ವಾಟ್ಸ್‌ಆ್ಯಪ್‌ಗೆ ವಿವಿಧ ಆ್ಯಪ್‌ಗಳಿಂದ ಪೈಪೋಟಿ ಎದುರಾಗಿರುವ ಹಿನ್ನೆಲೆಯಲ್ಲಿ ಹೊಸ ಅಂಶವನ್ನು ಪರಿಚಯಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಒಂದು ವಾಟ್ಸ್‌ಆ್ಯಪ್ ಅಕೌಂಟ್ ಇದ್ದರೆ ಅದನ್ನು ಮೊಬೈಲ್, ಕಂಪ್ಯೂಟರ್, ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ಸೇರಿದಂತೆ ಏಕಕಾಲಕ್ಕೆ 4 ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ. ಆದರೆ ಇದಕ್ಕೆ ಒಂದೇ ವೈಫೈ ನೆಟ್‌ವರ್ಕ್ ಇರಬೇಕು. ವೈಫೈ ಇಲ್ಲದ ಗ್ರಾಹಕರಿಗಾಗಿ ಮೊಬೈಲ್ ಇಂಟರ್ನೆಟ್ ಮೂಲಕವೂ ಸಂಪರ್ಕಿಸುವ ಆಯ್ಕೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.