ವಾಯ್ಸ್‌-ಎಸ್‌ಎಂಎಸ್‌ ಪ್ಯಾಕ್‌; ಟ್ರಾಯ್‌ ಸೂಚನೆಗೆ ಕ್ಯಾರೇ ಎನ್ನದ ಜಿಯೋ, ವಿಐ, ಏರ್‌ಟೆಲ್‌!

Published : Jan 25, 2025, 06:15 PM IST
ವಾಯ್ಸ್‌-ಎಸ್‌ಎಂಎಸ್‌ ಪ್ಯಾಕ್‌; ಟ್ರಾಯ್‌ ಸೂಚನೆಗೆ ಕ್ಯಾರೇ ಎನ್ನದ ಜಿಯೋ, ವಿಐ, ಏರ್‌ಟೆಲ್‌!

ಸಾರಾಂಶ

ಟ್ರಾಯ್‌ ಆದೇಶದ ಹೊರತಾಗಿಯೂ, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಜಿಯೋ ಮತ್ತು ವಿಐ ದುಬಾರಿ ವಾಯ್ಸ್‌ ಮತ್ತು ಎಸ್‌ಎಂಎಸ್‌ ಪ್ಯಾಕ್‌ಗಳನ್ನು ಪರಿಚಯಿಸಿವೆ. ಈ ಪ್ಯಾಕ್‌ಗಳು ಹಿರಿಯ ನಾಗರಿಕರು ಮತ್ತು ಗ್ರಾಮೀಣ ಭಾಗದ ಜನರಿಗೆ ಕೈಗೆಟುಕುವಂತಿರಬೇಕೆಂಬ ಟ್ರಾಯ್‌ ನಿರ್ದೇಶನಗಳನ್ನು ಉಲ್ಲಂಘಿಸಿವೆ.

ಬೆಂಗಳೂರು (ಜ.25): ಟ್ರಾಯ್‌ ಚಾಪೆ ಕೆಳಗೆ ತೂರಿದರೆ, ನಾವು ರಂಗೋಲಿ ಕೆಳಗೆ ತೂರುತ್ತೇವೆ ಅನ್ನೋ ಧಾರ್ಷ್ಟ್ಯವನ್ನು ಭಾರತದ ಅಗ್ರ ಮೂರು ಟೆಲಿಕಾಂ ಆಪರೇಟರ್‌ಗಳು ತೋರಿವೆ. ಕಳೆದ ಕೆಲವು ದಿನಗಳ ಹಿಂದೆ ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಜಿಯೋ ಹಾಗೂ ವಿಐ ತಮ್ಮ ಹೊಸ ವಾಯ್ಸ್‌ ಹಾಗೂ ಎಸ್‌ಎಂಎಸ್‌ ಮಾತ್ರವೇ ಇರುವ ಪ್ಯಾಕ್‌ಗಳನ್ನು ಪ್ರಕಟ ಮಾಡಿದ್ದವು. ಮೂರೂ ಕಂಪನಿಗಳು ಏಕಕಾಲದಲ್ಲಿ ಒಂದೇ ರೀತಿಯ ಪ್ಯಾಕ್‌ಗಳನ್ನು ಘೋಷಿಸಿದ್ದು ಕಾಕತಾಳೀಯವಾಗಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲಿ ದೇಶದ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಸ್ಪೆಷಲ್‌ ಟ್ಯಾರಿಫ್‌ ವೋಚರ್‌ಗಳನ್ನು ಗ್ರಾಹಕರಿಗೆ ನೀಡಬೇಕು ಎಂದು ಆದೇಶ ನೀಡಿತ್ತು. ಅದರ ಹಿನ್ನಲೆಯಲ್ಲಿ ಈ ಮೂರೂ ಟೆಲಿಕಾಂ ಕಂಪನಿಗಳು ಈ ವಾಯ್ಸ್‌-ಎಸ್‌ಎಂಎಸ್‌ ಮಾತ್ರವೇ ಇರುವ ಪ್ಯಾಕ್‌ ಪ್ರಕಟ ಮಾಡಿದ್ದವು.

ಆದರೆ, ಆದೇಶ ಪ್ರಕಟ ಮಾಡುವ ವೇಳೆ ತನ್ನ ಆದೇಶದಲ್ಲಿ ಅತ್ಯಂತ ಸ್ಪಷ್ಟವಾಗಿ ನಮೂದು ಮಾಡಿದ್ದ ವಿಚಾರವನ್ನೇ ಈ ಕಂಪನಿಗಳು ಉಲ್ಟಾ ಹೊಡೆದಿವೆ. ಹಿರಿಯ ವ್ಯಕ್ತಿಗಳು ಹಾಗೂ ಗ್ರಾಮೀಣ ಭಾಗದಲ್ಲಿ ಬದುಕುತ್ತಿರುವ ವ್ಯಕ್ತಿಗಳಿಗೆ ನೆರವಾಗಲು ಅವರಿಗೆ ಅನುಕೂಲವಾಗುವ ಬೆಲೆಯಲ್ಲಿ ಈ ಪ್ಯಾಕ್‌ ನೀಡಬೇಕು ಎಂದು ತಿಳಿಸಲಾಗಿತ್ತು. ಆದರೆ, ಈ ಮೂರು ಆಪರೇಟರ್‌ಗಳು ಪರಿಚಯಿಸಿರುವ ಪ್ಯಾಕ್‌ಗಳು ಜನಸಾಮಾನ್ಯರಿಗೆ ಲಭ್ಯವಾಗುವ ಬೆಲೆಯಲ್ಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಕೆಲವೊಂದು ಈಗಾಗಲೇ ಇರುವ ರಿಚಾರ್ಜ್‌ ಪ್ಲ್ಯಾನ್‌ಗಳಿಗೆ ಅದಕ್ಕಿಂತಲೂ ದುಬಾರಿಯಾದ ಪ್ಯಾಕ್‌ಗಳನ್ನು ಜನರಿಗೆ ಪರಿಚಯಿಸಿವೆ.

ಜಿಯೋ 458 ರೂಪಾಯಿ ಹಾಗೂ 1958 ರೂಪಾಯಿಯ ಪ್ಲ್ಯಾನ್‌ನೀಡಿದ್ದರೆ, ಏರ್‌ಟೆಲ್‌ 499 ರೂಪಾಯಿ ಹಾಗೂ 1959 ರೂಪಾಯಿ ಪ್ಲ್ಯಾನ್‌ ಪರಿಚಯ ಮಾಡಿದೆ. ಇನ್ನೊಂದೆಡೆ ವಿಐ 1460 ರೂಪಾಯಿಯ ಪ್ಲ್ಯಾನ್‌ ಪರಿಚಯಿಸಿದೆ. ಈ ಎಲ್ಲಾ ಪ್ಲ್ಯಾನ್‌ಗಳ ಬಗ್ಗೆ ಈಗ ಟ್ರಾಯ್‌ ಪರಿಶೀಲನೆ ನಡೆಸಲಿದೆ ಎಂದು ಮಾಹಿತಿ ನೀಡಿದೆ. 'ಟ್ರಾಯ್‌ ಸೂಚನೆ ಅನ್ವಯ ಇತ್ತೀಚೆಗೆ ಕೆಲವು ಆಪರೇಟರ್‌ಗಳು ವಾಯ್ಸ್ ಹಾಗೂ ಎಸ್‌ಎಂಎಸ್‌ ಮಾತ್ರವೇ ಇರುವ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಪರಿಚಯ ಮಾಡಿದ 7 ದಿನಗಳ ಒಳಗಾಗಿ ಟ್ರಾಯ್‌ಗೆ ಮಾಹಿತಿ ನೀಡಬೇಕು ಎನ್ನಲಾಗಿತ್ತು. ಇತ್ತೀಚೆಗೆ ಇವರು ಪ್ರಕಟ ಮಾಡಿರುವ ವೋಚರ್‌ಗಳು ತನ್ನ ಸೂಚನೆಯ ಅಡಿಯಲ್ಲಿ ಇದೆಯೇ ಇಲ್ಲವೇ ಎನ್ನುವ ಬಗ್ಗೆ ಪರಿಶೀಲನೆ ಮಾಡಲಿದ್ದೇವೆ' ಎಂದು ತಿಳಿಸಿದೆ.

ಹೊಸದಾಗಿ ಪ್ರಕಟ ಮಾಡಿರುವ ವಾಯ್ಸ್‌-ಎಸ್‌ಎಂಎಸ್‌ ಮಾತ್ರವೇ ಇರುವ ಪ್ಯಾಕ್‌ಗಳು ಟೀಕೆಗಳು ವ್ಯಕ್ತವಾಗಿರುವುದಕ್ಕೆ ಮೂಲ ಕಾರಣವೇನೆಂದರೆ, ಕೆಲವು ಆಪರೇಟರ್‌ಗಳು ಇದನ್ನು ವಾಲ್ಯು ಬ್ಯಾನರ್‌ನ ಅಡಿಯಲ್ಲಿ ಪಟ್ಟಿ ಮಾಡಿರುವುದು.

ಹೊಸದಾಗಿ ಪರಿಚಯ ಮಾಡಿರುವ ಪ್ಲ್ಯಾನ್‌, 84 ದಿನಗಳ ಮಾನ್ಯತೆಯೊಂದಿಗೆ ₹499 ರೂಪಾಯಿ ಅಡಿಯಲ್ಲಿ ಸಿಗಲಿದೆ. 900 SMS ಜೊತೆಗೆ ಧ್ವನಿ ಕರೆಗಳು, ₹1,959 ರೀಚಾರ್ಜ್ ಆಯ್ಕೆ ಮತ್ತು 365 ದಿನಗಳ ಅವಧಿಗೆ 3,600 SMS ಸೇರಿವೆ ಎಂದು ಏರ್‌ಟೆಲ್ ತಿಳಿಸಿದೆ. 499 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ನೊಂದಿಗೆ ನೀವೇನಾದರೂ 4ಜಿ/5ಜಿ ಡೇಟಾ ಬೇಕಾದಲ್ಲಿ 548 ರೂಪಾಯಿ ರಿಚಾರ್ಜ್‌ ಮಾಡಬೇಕಾಗುತ್ತದೆ. ಇದು 7 ಜಿಬಿ ಡೇಟಾವನ್ನು ಹೊಂದಿರುತ್ತದೆ. ಅದೇ ರೀತಿ 365 ದಿನಗಳ ಪ್ಲ್ಯಾಕ್‌ನಲ್ಲಿ ಡೇಟಾ ಬೇಕಾದಲ್ಲಿ 2249 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

ಏರ್‌ಟೆಲ್‌ನ ಹಾದಿಯನ್ನೇ ಜಿಯೋ ಮುಂದುವರಿಸಿದೆ. 458 ರೂಪಾಯಿಗೆ 84 ದಿನದ ವಾಯ್ಸ್‌-ಎಸ್‌ಎಂಎಸ್‌ ಪ್ಯಾಕ್‌ ಪ್ರಕಟ ಮಾಡಿದೆ. ಇದರಲ್ಲಿ 1 ಸಾವಿರ ಎಸ್‌ಎಂಎಸ್‌ ಇರುತ್ತವೆ. ಆದರೆ, ರಿಲಯನ್ಸ್‌ ಜಿಯೋ ಬಳಕೆದಾರರು ಅರ್ಥಮಾಡಿಕೊಂಡಿದ್ದೇನೆಂದರೆ, ಈ ಹಿಂದೆ ಇದೇ ಪ್ಲ್ಯಾನ್‌ನಲ್ಲಿ 6 ಜಿಬಿ 4ಜಿ/5ಜಿ ಡೇಟಾ ಕೂಡ ಲಭ್ಯವಿತ್ತು. ಈಗ ಜಿಯೋ ಇದರಲ್ಲಿನ 6 ಜಿಬಿ ಡೇಟಾವನ್ನು ತೆಗೆದು ಹಾಕಿದ್ದು, ತನ್ನ 579 ರಿಚಾರ್ಜ್‌ ಪ್ಲ್ಯಾನ್‌ಗೆ ಅದನ್ನು ಸೇರಿಸಿದೆ. ಇನ್ನು 1958 ರೂಪಾಯಿಯ ಪ್ಲ್ಯಾನ್‌ನಲ್ಲಿ ಈ ಹಿಂದೆ ಇದ್ದ 24 ಜಿಬಿ ಡೇಟಾವನ್ನು ತೆಗೆದು ಹಾಕಿದೆ. ಈ ಮೊದಲು 1899 ರೂಪಾಯಿಗೆ ಒಂದು ವರ್ಷ ಕಾಲದ ವ್ಯಾಲಿಡಿಟಿಯ ಪ್ಯಾಕ್‌ ಲಭ್ಯವಿತ್ತು. ಅದರಲ್ಲಿ 24 ಜಿಬಿ ಡೇಟಾ ಕೂಡ ಬಳಕೆ ಮಾಡಲು ಸಾಧ್ಯವಿತ್ತು. ವಿಐ ಏಕೈಕ ವಾಯ್ಸ್‌-ಎಸ್‌ಎಂಎಸ್‌ ಪ್ಯಾಕ್‌ಅನ್ನು ಅನಾವರಣ ಮಾಡಿದ್ದು, ಅದರ ಬೆಲೆ 1460 ರೂಪಾಯಿ ಆಗಿದ್ದು, 270 ದಿನದ ವ್ಯಾಲಿಡಿಟಿ ಹೊಂದಿದೆ. ಇದು ಜನಸಾಮಾನ್ಯರಿಗೆ ಹೊರೆ ಆಗುವಂಥ ಪ್ಲ್ಯಾನ್‌ ಆಗಿದೆ.

 

ಕಡಿಮೆ ಬೆಲೆಯ ವಾಯ್ಸ್‌-ಎಸ್‌ಎಂಎಸ್‌ ಪ್ಲ್ಯಾನ್‌ ಲಾಂಚ್‌ ಮಾಡಿದ ವೊಡಾಫೋನ್‌ ಐಡಿಯಾ

ಡಿಸೆಂಬರ್‌ನಲ್ಲಿ ಟ್ರಾಯ್‌ ಹೊರಡಿಸಿದ್ದ ಅಧಿಸೂಚನೆಯನ್ನು ನೋಡೋದಾದರೆ ಅದರಲ್ಲಿ ಅತ್ಯಂತ ಸ್ಪಷ್ಟವಾಗಿ, '"ಗ್ರಾಹಕರಿಗೆ ಸಾಮಾನ್ಯವಾಗಿ ಅಗತ್ಯವಿರುವ ಸೇವೆಗಳಿಗೆ ಪಾವತಿಸಲು ಮತ್ತು ಕೆಲವು ವರ್ಗದ ಗ್ರಾಹಕರಿಗೆ, ವಿಶೇಷವಾಗಿ ವೃದ್ಧ ವ್ಯಕ್ತಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ ಪ್ರಯೋಜನವನ್ನು ಒದಗಿಸಲು ಧ್ವನಿ ಮತ್ತು SMS ಗಾಗಿ ಪ್ರತ್ಯೇಕ ಸ್ಪೆಷಲ್‌ ಟ್ಯಾರಿಫ್‌ ವೋಚರ್ (STV) ಅನ್ನು ಪರಿಚಯಿಸಬೇಕು. ಈ ರೀಚಾರ್ಜ್ ಪ್ಯಾಕ್‌ಗಳು ನಾವು ಪ್ರತಿ ದಿನದ ವೆಚ್ಚದ ಮೆಟ್ರಿಕ್ ಅನ್ನು ತೆಗೆದುಕೊಂಡರೆ ಕೈಗೆಟುಕುವವು (ಜಿಯೋ ₹458 ಯೋಜನೆ ದಿನಕ್ಕೆ ₹5.4 ಗೆ ಕೆಲಸ ಮಾಡುತ್ತದೆ) ಆಗಿರಬೇಕು' ಎಂದಿತ್ತು.
ದೀರ್ಘಾವಧಿಯ ಮಾನ್ಯತೆಯ ರೀಚಾರ್ಜ್‌ನ ಅನುಕೂಲಕ್ಕಿಂತ ಕೈಗೆಟುಕುವಿಕೆಯನ್ನು ಬಯಸುವವರಿಗೆ, ಧ್ವನಿ ಮತ್ತು SMS ಗಾಗಿ 28 ದಿನಗಳ ಅಥವಾ 30 ದಿನಗಳ ರೀಚಾರ್ಜ್ ಪ್ಯಾಕ್‌ಗಳು ಈ ಸಮಯದ ಅಗತ್ಯ ಎಂದಿತ್ತು.

ದುಬಾರಿ ದುನಿಯಾಗೆ ಟ್ರಾಯ್‌ ಬ್ರೇಕ್‌; ವಾಯ್ಸ್‌-ಎಸ್‌ಎಂಎಸ್‌ಗೆ ಮಾತ್ರವೇ ಇರುವ ಪ್ರೀಪೇಯ್ಡ್‌ ಪ್ಲ್ಯಾನ್‌ ಪರಿಚಯಿಸಿದ ಏರ್‌ಟೆಲ್‌!

ಟೆಲಿಕಾಂ ಸೇವಾ ಪೂರೈಕೆದಾರರು ಈ ಪ್ಯಾಕ್‌ಗಳೊಂದಿಗೆ ಈ ಬಳಕೆದಾರರ ನೆಲೆಯನ್ನು ದೀರ್ಘಕಾಲದವರೆಗೆ ಲಾಕ್ ಮಾಡಲು ಬಯಸಬಹುದು, ಆದರೆ ಒಟ್ಟಾರೆ ರಚನೆಯು ಪ್ರಿಪೇಯ್ಡ್ ಬಳಕೆದಾರರ ದೊಡ್ಡ ಡೆಮಾಗ್ರಾಫಿಕ್‌ (ಸಾಮಾನ್ಯ ಧ್ವನಿ + SMS + ಡೇಟಾದೊಂದಿಗೆ ಡೇಟಾ ಬಳಕೆಗಾಗಿ ರೀಚಾರ್ಜ್ ಮಾಡುವವರು) ಈಗ ತಮ್ಮ ಮುಂದಿನ ರೀಚಾರ್ಜ್‌ಗಾಗಿ ಮೊದಲಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ