
ನವದೆಹಲಿ (ನ.10) ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ ತನ್ನ ವಿಶೇಷ ಕ್ಯಾಮೆರಾ, ಅತ್ಯಾಧುನಿಕ ಫೀಚರ್ಸ್ ಮೂಲಕ ಗ್ರಾಹಕರ ಸೆಳೆಯುತ್ತಿದೆ. ಇದೀಗ ವಿವೋ ಭಾರತದಲ್ಲಿ ಹಲವು ವಿಶೇಷತೆಗಳ ವಿವೋ X500 ಸೀರಿಸ್ ಫೋನ್ ಬಿಡುಗಡೆ ಮಾಡುತ್ತಿದೆ. 12GB RAM, 200MP ಕ್ಯಾಮೆರಾ, 6,510mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳು ಈ ಫೋನ್‌ನಲ್ಲಿದೆ. ಪ್ರಮುಖವಾಗಿ ಇದರ ಕ್ಯಾಮೆರಾ ನೆಕ್ಸ್ಟ್ ಲೆವೆಲ್ ಫೋಟೋಗ್ರಫಿ ನೀಡಲಿದೆ. ಎಸ್ಎಲ್ಆರ್ ಸೇರಿದಂತೆ ಇತರ ಪ್ರೊಫೆಶನಲ್ ಕ್ಯಾಮೆರಾ ಕ್ವಾಲಿಟಿಯಲ್ಲಿ ಫೋಟೋ, ವಿಡಿಯೋ ಆಯ್ಕೆ ನೀಡಲಿದೆ.
ವಿವೋ X500 ಸೀರಿಸ್ ಫೋನ್ ಆ್ಯಪಲ್‌ನ ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್‌ಗೆ ಪ್ರತಿಸ್ಪರ್ಧಿಯಾಗಿದೆ. ಆದರೆ ಇದರ ಕ್ಯಾಮೆರಾ, ಬ್ಯಾಟರಿ ಸೇರಿದಂತೆ ಇತರ ಫೀಚರ್, ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್‌ಗಿಂತ ಅಡ್ವಾನ್ಸ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. ವಿವೋ X500, ವಿವೋ X500 ಪ್ರೋ ಹಾಗೂ ವಿವೋ X500 ಪ್ರೋ ಮ್ಯಾಕ್ಸ್ ಮೂರು ಫೋನ್‌ಗಳು ಬಿಡುಗಡೆಯಾಗಲಿದೆ. ಮೂರು ಹಲವು ವಿಶೇಷತೆ ಹೊಂದಿದೆ.
ವೀವೋ X500: 6.59-ಇಂಚಿನ 144Hz AMOLED ಡಿಸ್ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 9600M ಪ್ರೊಸೆಸರ್ ಚಾಲಿತವಾಗಿದೆ. ಇದು 7,500mAh ಬೃಹತ್ ಬ್ಯಾಟರಿ, 90W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಹೊಂದಿದೆ. 50MP ಪ್ರೈಮರಿ, 64MP ಟೆಲಿಫೋಟೋ ಮತ್ತು 50MP ಅಲ್ಟ್ರಾವೈಡ್ ಕ್ಯಾಮೆರಾ ನೀಡಲಾಗಿದೆ.
ವೀವೋ X500 ಪ್ರೋ: 6.36-ಇಂಚಿನ LTPO AMOLED ಡಿಸ್ಪ್ಲೇ ಮತ್ತು ಡೈಮೆನ್ಸಿಟಿ 9600 ಪ್ರೋ ಚಿಪ್‌ಸೆಟ್ ಹೊಂದಿದೆ. 50MP ಮೇನ್, 64MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಹಾಗೂ 6,510mAh ಬ್ಯಾಟರಿ ನೀಡಲಾಗಿದೆ.
ವೀವೋ X500 ಪ್ರೋ ಮ್ಯಾಕ್ಸ್: 6.85-ಇಂಚಿನ 2K LTPO AMOLED ಡಿಸ್ಪ್ಲೇಯೊಂದಿಗೆ ಬರಲಿದ್ದು, 200-ಮೆಗಾಪಿಕ್ಸೆಲ್ ಭಾರಿ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಒಳಗೊಂಡಿದೆ! ಇದರೊಂದಿಗೆ 50MP ಪ್ರೈಮರಿ ಮತ್ತು 50MP ಅಲ್ಟ್ರಾವೈಡ್ ಸೆನ್ಸಾರ್ ಹಾಗೂ 8,000mAh ಬೃಹತ್ ಬ್ಯಾಟರಿ ಸೌಲಭ್ಯವಿದೆ.
ವೀವೋ X500 (Vivo X500 Base Variant): 12GB RAM ಮತ್ತು 256GB ಸ್ಟೋರೇಜ್ ಆವೃತ್ತಿಯ ಬೆಲೆ ಅಂದಾಜು ₹1,19,999 ಇರಲಿದೆ.
ವೀವೋ X500 ಪ್ರೋ (Vivo X500 Pro): 12GB RAM ಮತ್ತು 256GB ಸ್ಟೋರೇಜ್ ಮಾಡೆಲ್ ಬೆಲೆ ಸುಮಾರು ₹1,49,999 ಇರಲಿದೆ.
ವೀವೋ X500 ಪ್ರೋ ಮ್ಯಾಕ್ಸ್ (Vivo X500 Pro Max): ಈ ಟಾಪ್ ಎಂಡ್ ಮಾಡೆಲ್‌ನ 256GB ಆವೃತ್ತಿ ₹1,59,999 ಹಾಗೂ 512GB ಸ್ಟೋರೇಜ್ ಆವೃತ್ತಿ ₹1,79,999 ಕ್ಕೆ ಲಭ್ಯವಾಗಲಿದೆ.
ಕ್ಯಾಮೆರಾ ಆಕ್ಸೆಸರಿಗಳನ್ನು ಒಳಗೊಂಡಿರುವ 'ವೀವೋ X500 ಪ್ರೋ ಮ್ಯಾಕ್ಸ್ ಮಾಸ್ಟರ್ ಸೆಟ್' (Master Set) ಬೆಲೆ ಬರೋಬ್ಬರಿ 2,29,999 ರೂಪಾಯಿ ತಲುಪಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.