ಟ್ರಿಪಲ್ 200MP ಕ್ಯಾಮೆರಾ, ದೀಪಾವಳಿ ಕ್ಯಾಶ್‌ಬ್ಯಾಕ್ ಆಫರ್ ಜೊತೆ ಒಪ್ಪೋ ಫೈಂಡ್ X10 ಫೋನ್ ಲಾಂಚ್

Published : Nov 06, 2026, 05:26 PM IST
Oppo Find X10 Debuts with 200MP Triple Cameras

ಸಾರಾಂಶ

ಸ್ಮಾರ್ಟ್‌ಫೋನ್ ಲೋಕದಲ್ಲಿ ಒಪ್ಪೋ ಕ್ರಾಂತಿ ಮಾಡಿದೆ ಹ್ಯಾಸಲ್‌ಬ್ಲಾಡ್ ಟ್ರಿಪಲ್ 200ಎಂಪಿ ಕ್ಯಾಮೆರಾ, 8000mAh ಬ್ಯಾಟರಿ,2nm ಪ್ರೊಸೆಸರ್ ಸೇರಿದಂತೆ ಹಲವು ವಿಶೇಷತೆಗಳ ಫೋನ್ ಒಪ್ಪೊ ಫೈಂಡ್ X10 ಸೀರಿಸ್ ಲಾಂಚ್ ಆಗಿದೆ. ವಿಶೇಷ ಅಂದರೆ ಕ್ಯಾಶ್‌ಬ್ಯಾಕ್ ಸೇರಿದಂತೆ ಭರ್ಜರಿ ಆಫರ್ ಘೋಷಿಸಲಾಗಿದೆ.

ಬೆಂಗಳೂರು (ನ.06) ಭಾರತದಲ್ಲಿ ಓಪ್ಪೋ ಹೊಸ ಫೋನ್ ಲಾಂಚ್ ಮಾಡಿದೆ. ಒಪ್ಪೋ ಫೈಂಡ್ X10 ಪ್ರೋ ಮ್ಯಾಕ್ಸ್ ಸಿರೀಸ್ ಫೋನ್ ಲಾಂಚ್ ಮಾಡಿದೆ. ಒಪ್ಪೋ ಫೈಂಡ್ X10 ಹಾಗೂ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಸೀರಿಸ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಎರಡು ಫೋನ್ ಜೊತೆ ಒಪ್ಪೋ ಎನ್ಕೋ X4 ಇಯರ್‌ಬಡ್ಸ್ , ಒಪ್ಪೋ ಪ್ಯಾಡ್ ಮಿನಿ ಟ್ಯಾಬ್ಲೆಟ್ ಮತ್ತು ಒಪ್ಪೋ 10,000mAh ಪವರ್ ಬ್ಯಾಂಕ್ ಬಿಡುಗಡೆ ಮಾಡಲಾಗಿದೆ.

ಟ್ರಿಪಲ್ 200MP ಮ್ಯಾಜಿಕ್:

ವಿಶ್ವಪ್ರಸಿದ್ಧ ಹ್ಯಾಸಲ್‌ಬ್ಲಾಡ್ (Hasselblad) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕ್ಯಾಮೆರಾ ಸಿಸ್ಟಮ್ ಈ ಸಿರೀಸ್‌ನ ಪ್ರಮುಖ ಕೇಂದ್ರಬಿಂದು. ಒಪ್ಪೋ ಫೈಂಡ್ X10 ಸ್ಮಾರ್ಟ್‌ಫೋನ್ 'ಡ್ಯುಯಲ್ 200MP ಕ್ಯಾಮೆರಾ ಸಿಸ್ಟಮ್' ಹೊಂದಿದ್ದರೆ, ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಕ್ರಾಂತಿಕಾರಿ 'ಟ್ರಿಪಲ್ 200MP ಕ್ಯಾಮೆರಾ ಸಿಸ್ಟಮ್'ಹೊಂದಿದೆ. ಹಿಂಬದಿಯ ಮೂರೂ ಕ್ಯಾಮೆರಾಗಳಲ್ಲಿ 200MP ರೆಸಲ್ಯೂಶನ್ ನೀಡುತ್ತದೆ. ನೈಸರ್ಗಿಕ ಬಣ್ಣ ಮತ್ತು ಸೂಕ್ಷ್ಮತೆ ಕಾಯ್ದುಕೊಳ್ಳಲು ಲುಮೋ ಟ್ರೂ ಇಮೇಜ್ ಇಂಜಿನ್, ಸೆಕೆಂಡ್-ಜನರೇಶನ್ ಟ್ರೂ ಕಲರ್ ಕ್ಯಾಮೆರಾ ಹಾಗೂ ಲುಮೋ ಕಲರ್ ಪ್ಯಾಲೆಟ್ ವೈಶಿಷ್ಟ್ಯಗಳನ್ನು ಬಳಸಲಾಗಿದೆ. ವಿಡಿಯೋಗ್ರಫಿಗಾಗಿ 4K 120fps ಹಾಗೂ 8K 30fps ರೆಕಾರ್ಡಿಂಗ್ ಬೆಂಬಲ, ಡಾಲ್ಬಿ ವಿಷನ್, ACES-ಪ್ರಮಾಣೀಕೃತ O-Log2 ಮತ್ತು ಓಪನ್ ಗೇಟ್ ಕ್ಯಾಪ್ಚರ್ ನಂತಹ ಸಿನಿಮಾ ಸ್ಟಾಂಡರ್ಡ್ ಸಿಸ್ಟಮ್ ಬಳಸಲಾಗಿದೆ.

ಭಾರತದ ಚೊಚ್ಚಲ 2nm ಪ್ರೊಸೆಸರ್ ಹಾಗೂ ದೈತ್ಯ 8000mAh ಬ್ಯಾಟರಿ:

ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಸಾಧನವು ಭಾರತದಲ್ಲೇ ಮೊದಲ ಬಾರಿಗೆ 2nm ಮೀಡಿಯಾಟೆಕ್ ಡೈಮೆನ್ಸಿಟಿ 9600 ಪ್ರೊ (MediaTek Dimensity 9600 Pro) ಪ್ರೊಸೆಸರ್ ಹೊಂದಿದೆ. ಫೈಂಡ್ X10 ಮಾದರಿಯು 3nm ಮೀಡಿಯಾಟೆಕ್ ಡೈಮೆನ್ಸಿಟಿ 9600M ಪ್ರೊಸೆಸರ್ ಹೊಂದಿದೆ. ಎರಡೂ ಫೋನ್‌ಗಳಲ್ಲಿ ಗರಿಷ್ಠ 8000mAh ದೈತ್ಯ ಸಿಲಿಕಾನ್-ಕಾರ್ಬನ್ ಬ್ಯಾಟರಿ ನೀಡಲಾಗಿದ್ದು, 80W SUPERVOOC ವೈರ್ಡ್ ಚಾರ್ಜಿಂಗ್ ಮತ್ತು 50W AIRVOOC ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿದೆ. ಹೊಸ ColorOS 17 ಆಪರೇಟಿಂಗ್ ಸಿಸ್ಟಮ್ 'ಏಜೆಂಟ್ ಮೋಡ್' ಹೊಂದಿರುವ 'ಎಐ ಮೈಂಡ್ ಪೈಲಟ್ ಯೂಸರ್ಸ್ ಸುಲಭವಾಗಿ ಹಾಗೂ ಮಲ್ಟಿಟಾಸ್ಕ್ ಆಗಿ ಫೋನ್ ಬಳಸಬಹುದು.

ಬೆಲೆ ಹಾಗೂ ಆಫರ್:

  • ಒಪ್ಪೋ ಫೈಂಡ್ X10 (12GB + 256GB): ₹1,39,999
  • ಒಪ್ಪೋ ಫೈಂಡ್ X10 (12GB + 512GB): ₹1,69,999
  • ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ (12GB + 512GB): ₹1,99,999
  • ಒಪ್ಪೋ ಹ್ಯಾಸಲ್‌ಬ್ಲಾಡ್ ಟೆಲಿಕನ್ವರ್ಟರ್ ಕಿಟ್: ₹24,999
  • ಒಪ್ಪೋ ಪ್ಯಾಡ್ ಮಿನಿ (8GB + 256GB): ₹94,999
  • ಒಪ್ಪೋ ಎನ್ಕೋ X4: ₹19,999
  • ಒಪ್ಪೋ ಪವರ್ ಬ್ಯಾಂಕ್ (10,000mAh): ₹2,199

38 ಸಾವಿರ ರೂವರೆಗೆ ಕ್ಯಾಶ್‌ಬ್ಯಾಕ್ ಆಫರ್

ಗ್ರಾಹಕರು ಪ್ರತಿ ತಿಂಗಳು ಕೇವಲ ₹4,667 ರಿಂದ ಆರಂಭವಾಗುವ ಇಎಂಐ ಸೌಲಭ್ಯದಲ್ಲಿ ಈ ಫೋನ್ ಖರೀದಿಸಬಹುದು. ಗರಿಷ್ಠ ₹38,000 ವರೆಗೆ ಕ್ಯಾಶ್‌ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಸೌಲಭ್ಯ, ₹8,998 ಮೌಲ್ಯದ ಉಚಿತ ಪ್ರೀಮಿಯಂ ಗಿಫ್ಟ್ ಬಾಕ್ಸ್ (ಎನ್ಕೋ ಏರ್ 5 ಪ್ರೊ ಸೇರಿ) ಹಾಗೂ 30 ತಿಂಗಳವರೆಗೆ ಶೂನ್ಯ ಡೌನ್ ಪೇಮೆಂಟ್ ಆಫರ್ ನೀಡಲಾಗಿದೆ.

ಅದ್ಭುತ ವಿನ್ಯಾಸ ಮತ್ತು ಕಣ್ಣಿಗೆ ಆರಾಮ ನೀಡುವ ಡಿಸ್‌ಪ್ಲೇ:

ಬಾರ್ಡರ್‌ಲೆಸ್ ಡಿಸೈನ್ ಹಾಗೂ ಒನ್-ಪೀಸ್ ಸ್ಕಲ್ಪ್‌ಟೆಡ್ ಗ್ಲಾಸ್ ಫಿನಿಶಿಂಗ್ ಹೊಂದಿರುವ ಫೈಂಡ್ X10 6.59-ಇಂಚಿನ ಪರದೆ ಹಾಗೂ ಫೈಂಡ್ X10 ಪ್ರೊ ಮ್ಯಾಕ್ಸ್ 6.78-ಇಂಚಿನ ಡಿಸ್‌ಪ್ಲೇ ಹೊಂದಿದೆ. 144Hz ಅಡಾಪ್ಟಿವ್ ರಿಫ್ರೆಶ್ ರೇಟ್, 3,600 ನಿಟ್ಸ್ ಪೀಕ್ ಬ್ರೈಟ್‌ನೆಸ್, BT.2020 ಕಲರ್ ಗ್ಯಾಮಟ್ ಬೆಂಬಲ ಮತ್ತು IP66, IP68 ಹಾಗೂ IP69 ನೀರು-ಧೂಳು ನಿರೋಧಕ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

ಪ್ಯಾಡ್ ಮಿನಿ, ಎನ್ಕೋ X4 ಮತ್ತು ಪವರ್ ಬ್ಯಾಂಕ್:

ಸಂಸ್ಥೆಯು 8.8-ಇಂಚಿನ OLED ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 8 ಜೆನ್ 5 ಪ್ರೊಸೆಸರ್ ಹಾಗೂ 8,000mAh ಬ್ಯಾಟರಿ ಹೊಂದಿರುವ ಅಲ್ಟ್ರಾ-ಪೋರ್ಟಬಲ್ 'ಒಪ್ಪೋ ಪ್ಯಾಡ್ ಮಿನಿ' ಟ್ಯಾಬ್ಲೆಟ್ ಅನ್ನು ಪರಿಚಯಿಸಿದೆ. ಡೈನಾಡಿಯೋ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ 'ಒಪ್ಪೋ ಎನ್ಕೋ X4' ಇಯರ್‌ಬಡ್ಸ್ 53 ಗಂಟೆಗಳ ಬ್ಯಾಟರಿ ಬಾಳಿಕೆ, 24 ಭಾಷೆಗಳ ಎಐ ರಿಯಲ್-ಟೈಮ್ ಅನುವಾದ ಹಾಗೂ ಅಡಾಪ್ಟಿವ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯ ಹೊಂದಿದೆ. ಇನ್-ಬಿಲ್ಟ್ ಕೇಬಲ್ ಹೊಂದಿರುವ 22.5W 10,000mAh ಶಕ್ತಿಯುತ ಪವರ್ ಬ್ಯಾಂಕ್ ಸಹ ಲಭ್ಯವಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಜಿಯೋ ಗ್ರಾಹಕರಿಗೆ ದೀಪಾವಳಿ ಗಿಫ್ಟ್‌: 5 ತಿಂಗಳು ಉಚಿತ ರೀಚಾರ್ಜ್‌, ಲೈವ್ ಟಿವಿ - OTT ಸಬ್‌ಸ್ಕ್ರಿಪ್ಷನ್‌ ಫ್ರೀ!
ನವೆಂಬರ್ 1 ರಿಂದ ಹೊಸ ನಿಯಮ, CNAP ಅಂದರೆ ಏನು? ಮೊಬೈಲ್ ಬಳಕೆದಾರರಿಗೆ ಗುಡ್‌ನ್ಯೂಸ್