
ಬೆಂಗಳೂರು (ಫೆ.3): ವಿವೋ ಕಂಪನಿ ಒಂದರ ಹಿಂದೆ ಒಂದರಂತೆ ಅದ್ಭುತ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ವಿವೋ X200 ಪ್ರೊ ಮಿನಿ ಭಾರತೀಯ ಮಾರುಕಟ್ಟೆಗೆ ತರಲು ಸಜ್ಜಾಗಿದೆ ಎಂದು ಹೊಸ ವರದಿಗಳು ತಿಳಿಸಿವೆ. ಈಗಾಗಲೇ ಬಿಡುಗಡೆಯಾಗಿರುವ X200 ಮತ್ತು X200 ಪ್ರೊ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2025 ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಈ ಸರಣಿಯಲ್ಲಿ ವಿವೋ X200 ಪ್ರೊ ಮಿನಿ ಕೂಡ ಸೇರ್ಪಡೆಯಾಗಲಿದೆ ಎಂದು ಹೊಸ ವರದಿಗಳು ಹೇಳುತ್ತಿವೆ.
ಈ ಸ್ಮಾರ್ಟ್‌ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದೆ. ಆದರೆ ಇದನ್ನು ಇನ್ನೂ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ಈ ಫೋನ್ ಯಾವಾಗ ಭಾರತಕ್ಕೆ ಬರುತ್ತದೆ ಎಂದು ಬಿಐಎಸ್ ಸರ್ಟಿಫಿಕೇಶನ್ ಇನ್ನೂ ದೃಢಪಡಿಸಿಲ್ಲ, ಆದರೆ ಏಪ್ರಿಲ್ ಆಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಫೋನಿನ ವೈಶಿಷ್ಟ್ಯಗಳ ಬಗ್ಗೆ ನೋಡೋಣ.
ವಿವೋ X200 ಪ್ರೊ ಮಿನಿಗೆ ಇನ್ನೂ ಬಿಐಎಸ್ ಸರ್ಟಿಫಿಕೇಶನ್‌ಅಲ್ಲಿ ಇನ್ನೂ ಲಿಸ್ಟಿಂಗ್ ಆಗಿಲ್ಲ ಆದರೆ ಈ ಸ್ಮಾರ್ಟ್‌ಫೋನ್ ಬೇಗನೆ ಭಾರತಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. 2025 ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ನಿರೀಕ್ಷಿತ ಬೆಲೆಯನ್ನು ಶೀಘ್ರದಲ್ಲೇ ಪ್ರಕಟವಾಗಿದೆ. ಒಂದು ಅಂದಾಜಿನ ಪ್ರಕಾರ 60 ಸಾವಿರ ರೂಪಾಯಿ ಇರಬಹುದು ಎನ್ನಲಾಗಿದೆ.. ಈ ಫೋನಿನಲ್ಲಿ ಪ್ರೀಮಿಯಂ ವಿನ್ಯಾಸ ಮತ್ತು ಉನ್ನತ ದರ್ಜೆಯ ವೈಶಿಷ್ಟ್ಯಗಳು ಇರಲಿವೆ.
ಡಿಸ್‌ಪ್ಲೇ: ವಿವೋ X200 ಪ್ರೊ ಮಿನಿ 120Hz ರಿಫ್ರೆಶ್ ರೇಟ್ ಹೊಂದಿರುವ 6.3 ಇಂಚಿನ 1.5K OLED LTPO ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ OLED ಪ್ಯಾನಲ್, 120Hz ರಿಫ್ರೆಶ್ ರೇಟ್, ಸುಗಮ ಸ್ಕ್ರೋಲಿಂಗ್ ಮತ್ತು ಗೇಮಿಂಗ್, ಮತ್ತು ಉತ್ತಮ ಫೋಟೋ ಗುಣಮಟ್ಟಕ್ಕಾಗಿ 1.5K ರೆಸಲ್ಯೂಶನ್ ಅನ್ನು ಒಳಗೊಂಡಿರಲಿದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು ವೇಗದ ಕಾರ್ಯಕ್ಷಮತೆ ಮತ್ತು ಉತ್ತಮ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತದೆ. ಡೈಮೆನ್ಸಿಟಿ 9400 ಚಿಪ್‌ಸೆಟ್ ಉತ್ತಮ ಬ್ಯಾಟರಿ ದಕ್ಷತೆ, ಲ್ಯಾಗ್-ಮುಕ್ತ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಅನ್ನು ನೀಡುತ್ತದೆ.
ಕ್ಯಾಮೆರಾ: ನೀವು ಕ್ಯಾಮೆರಾ ಪ್ರಿಯರಾಗಿದ್ದರೆ, ವಿವೋ X200 ಪ್ರೊ ಮಿನಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಇದು 50MP ಸೋನಿ IMX890 ಪ್ರೈಮರಿ ಕ್ಯಾಮೆರಾ, 50MP ಅಲ್ಟ್ರಾ ವೈಡ್ ಕ್ಯಾಮೆರಾ, 50MP ಪೆರಿಸ್ಕೋಪ್ ಕ್ಯಾಮೆರಾ (100x ಡಿಜಿಟಲ್ ಜೂಮ್‌ನೊಂದಿಗೆ) ಮತ್ತು 32MP ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.
ಬ್ಯಾಟರಿ: ವಿವೋ X200 ಪ್ರೊ ಮಿನಿ 5700mAh ಬ್ಯಾಟರಿಯನ್ನು ಹೊಂದಿರಲಿದೆ. ಇದು 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 5700mAh ಬ್ಯಾಟರಿಯು ಪೂರ್ಣ ದಿನದ ಬ್ಯಾಕಪ್ ಅನ್ನು ಒದಗಿಸುತ್ತದೆ, 90W ವೇಗದ ಚಾರ್ಜಿಂಗ್ ನಿಮ್ಮ ಫೋನ್ ಅನ್ನು ನಿಮಿಷಗಳಲ್ಲಿ ಚಾರ್ಜ್ ಮಾಡಲು ಸಾಧ್ಯವಾಗಲಿದೆ. 50W ವೈರ್‌ಲೆಸ್ ಚಾರ್ಜಿಂಗ್ ಕೇಬಲ್‌ಗಳಿಲ್ಲದೆ ವೇಗದ ಚಾರ್ಜಿಂಗ್ ಅನ್ನು ನೀಡುತ್ತದೆ.
ರಕ್ಷಾಬಂಧನ ಬಂತಲ್ವಾ.. ತಂಗಿಗೆ ಗಿಫ್ಟ್ ಕೊಡೋಕೆ ಇಲ್ಲಿವೆ ನೋಡಿ 7 ಸಾವಿರ ರೂಪಾಯಿ ಒಳಗಿನ ಮೊಬೈಲ್ಸ್!
ಬಿಡುಗಡೆ: ವರದಿಯ ಪ್ರಕಾರ, ವಿವೋ X200 ಪ್ರೊ ಮಿನಿ 2025ರ ಮಧ್ಯಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಹೇಳಿಕೆ ನಿಜವಾಗಿದ್ದರೆ, ಏಪ್ರಿಲ್-ಜೂನ್ ತಿಂಗಳಲ್ಲಿ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗಲಿದೆ. ಹಾಗಿದ್ದಲ್ಲಿ, ಚೀನಾದ ಹೊರಗೆ ಬಿಡುಗಡೆಯಾಗುವ ಸರಣಿಯ ಮೂರನೇ ಹ್ಯಾಂಡ್‌ಸೆಟ್ ಇದಾಗಲಿದೆ. ಕಂಪನಿಯು 2024ರ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ವಿವೋ X200 ಪ್ರೊ ಮಿನಿ ಸರಣಿಯನ್ನು ಬಿಡುಗಡೆ ಮಾಡಿತು.
Made In India ಸ್ಮಾರ್ಟ್ ಪೋನ್ ಖರೀದಿ ಮಾಡಿರುವ ವಿಶ್ವದ ಟಾಪ್-10 ದೇಶಗಳು!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.