Vivo V23 5G ಮತ್ತು Vivo V23 Pro 5G ಸ್ಮಾರ್ಟ್‌ಫೋನ್‌ಗಳು ಫ್ಲೋರೈಟ್ ಎಜಿ ಗ್ಲಾಸ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಸೂರ್ಯನ ಬೆಳಕಿನಲ್ಲಿ ಯುವಿ ಕಿರಣಗಳು ಬಿದ್ದಾಗ ಇದು ಬಣ್ಣಗಳನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತಿದೆ.
Tech Desk: Vivo V23 5G ಮತ್ತು Vivo V23 Pro 5G ಭಾರತದಲ್ಲಿ ಮಂಗಳವಾರ ಬಿಡುಗಡೆಯಾಗಿವೆ. ಎರಡು ಸ್ಮಾರ್ಟ್‌ಫೋನ್‌ಗಳು ಫ್ಲೋರೈಟ್ ಎಜಿ ಗ್ಲಾಸ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಸೂರ್ಯನ ಬೆಳಕಿನಲ್ಲಿ ಯುವಿ ಕಿರಣಗಳು ಬಿದ್ದಾಗ ಇದು ಬಣ್ಣಗಳನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತಿದೆ. Vivo V23 5G ಮತ್ತು Vivo V23 Pro 5G ಅನ್ನುMediaTek Dimensity 920 ಮತ್ತು Dimensity 1200 SOCs ಜತೆಗೆ 12GB RAM ನೊಂದಿಗೆ ಬಿಡುಗಡೆಯಾಗಿದೆ. ಎರಡೂ ವಿವೋ ಸ್ಮಾರ್ಟ್‌ಫೋನ್‌ಗಳು 5G ಸಂಪರ್ಕ, Full-HD+ AMOLED ಡಿಸ್ಪ್ಲೇಗಳು ಮತ್ತು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ನೊಂದಿಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾಗಳನ್ನು ಸಹ ಒಳಗೊಂಡಿವೆ.
ಭಾರತದಲ್ಲಿ Vivo V23 5G, Vivo V23 Pro 5G ಬೆಲೆ, ಲಭ್ಯತೆ
undefined
Vanilla Vivo V23 5G, 8GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ ರೂ. 29,990 ಬೆಲೆ ನಿಗದಿಯಾಗಿದೆ ಹಾಗೂ ಇದರ 12GB RAM + 256GB ಸ್ಟೋರೇಜ್ ಮಾದರಿ ರೂ. 34,990 ನಲ್ಲಿ ಲಭ್ಯವಿದೆ. Vivo V23 Pro 5G 8GB RAM + 128GB ಸ್ಟೋರೇಜ್ ಮಾದರಿ 38,990 ರೂ.ಗೆ ಲಭ್ಯವಿದೆ. ಮತ್ತು. 12GB + 256GB ಸ್ಟೋರೇಜ್ ರೂ. 43,990 ಬೆಲೆಯಲ್ಲಿ ಲಭ್ಯವಿದೆ. ಎರಡು ವಿವೋ ಸ್ಮಾರ್ಟ್‌ಫೋನ್‌ಗಳು ಸ್ಟಾರ್‌ಡಸ್ಟ್ ಬ್ಲಾಕ್ ಮತ್ತು ಸನ್‌ಶೈನ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: Vivo Y32 Launch: ಡ್ಯುಯಲ್ ಕ್ಯಾಮೆರಾ, ಸ್ನಾಪ್‌ಡ್ರಾಗನ್ 680 SoCಯೊಂದಿಗೆ ವಿವೋ ಹೊಸ ಫೋನ್!
ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ರಿಟೇಲ್ ಅಂಗಡಿಗಳ ಮೂಲಕ ಖರೀದಿಸಲು ಸ್ಮಾರ್ಟ್‌ಫೋನ್ ಲಭ್ಯವಿರುತ್ತವೆ. Vivo V23 5G ಮತ್ತು Vivo V23 Pro 5G ಗಳು ಜನವರಿ 5 ರಿಂದ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿವೆ. Vivo V23 5G ಜನವರಿ 19 ರಿಂದ ಖರೀದಿಸಲು ಲಭ್ಯವಿರುತ್ತದೆ, ಆದರೆ Vivo V23 Pro 5G ಜನವರಿ 13 ರಿಂದ ಖರೀದಿಸಲು ಲಭ್ಯವಿರುತ್ತದೆ.
When your moments have been in the making for a billion years, they deserve to be captured delightfully, in all its glory.
Your moments deserve the new .
Prebook Now: https://t.co/l2Ag3SucGW pic.twitter.com/7KXP9LnMsp
Vivo V23 5G specifications
ಡ್ಯುಯಲ್-ಸಿಮ್ (ನ್ಯಾನೋ) Vivo V23 5G ಆಂಡ್ರಾಯ್ಡ್ 12 ಮೇಲೆ ರನ್ ಅಗಲಿದೆ. ಇದು 6.44-ಇಂಚಿನ Full-HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು MediaTek ಡೈಮೆನ್ಸಿಟಿ 920 SoC ಯಿಂದ 12GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಕ್ಯಾಮೆರಾ ವಿಭಾಗದಲ್ಲಿ f/1.89 ಅಪರ್ಚರ್ ಲೆನ್ಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ, f/2.2 ಅಪರ್ಚರ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಮತ್ತು f/2.4 ಅಪರ್ಚರ್ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಪಡೆಯುತ್ತದೆ. ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು f/2.0 ಅಪರ್ಚರ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು f/2.28 ಅಪರ್ಚರ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆನ್ಸರ್ ನೀಡಲಾಗಿದೆ.
Vivo V23 Pro 5G specifications
ಮತ್ತೊಂದೆಡೆ, Vivo V23 Pro 6.56-ಇಂಚಿನ Full-HD+AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಅನ್ನು 12GB ಯ RAM ಮತ್ತು 256GB ಯ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. 108-ಮೆಗಾಪಿಕ್ಸೆಲ್ ಸೆನ್ಸರ್ f/1.88 ಅಪರ್ಚರ್ ಲೆನ್ಸ್ ಹೊಂದಿರುವ ಪ್ರಾಥಮಿಕ ಹಿಂಬದಿಯ ಕ್ಯಾಮೆರಾವನ್ನು ಹೊರತುಪಡಿಸಿ ಉಳಿದ ಕ್ಯಾಮೆರಾ ಫೀಚರ್ಸ್ ವೆನಿಲ್ಲಾ V23 5Gಯಂತೆಯೇ ಇವೆ.
ಇದನ್ನೂ ಓದಿ: Vivo S12, Vivo S12 Pro ಲಾಂಚ್: ಏನೆಲ್ಲ ವಿಶೇಷತೆಗಳಿವೆ, ಬೆಲೆ ಎಷ್ಟು?
Vivo V23 5G ಮತ್ತು Vivo V23 Pro 5G ಕನೆಕ್ಟಿವಿಟಿ ವಿಭಾಗದಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, USB ಟೈಪ್-C, USB OTG ಮತ್ತು ಬ್ಲೂಟೂತ್ v5.2 ಅನ್ನು ಒಳಗೊಂಡಿವೆ. ಆನ್‌ಬೋರ್ಡ್ ಸೆನ್ಸರ್‌ಗಳಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಪ್ರೊಕ್ಸಿಮೀಟರ್ ಸೆನ್ಸರ್, ಇ-ಕಂಪಾಸ್, ಗೈರೊಸ್ಕೋಪ್, GPS, ಬೀಡೌ, ಗ್ಲೋನಾಸ್, ಗೆಲಿಲಿಯೋ, QZSS, ಮತ್ತು NavIC ಸೇರಿವೆ. Vivo V23 5G 4,200mAh ಬ್ಯಾಟರಿಯನ್ನು ಹೊಂದ್ದಿದ್ದು Vivo V23 Pro 5G 4,300mAh ಬ್ಯಾಟರಿಯನ್ನು ಹೊಂದಿದೆ. ಎರಡೂ 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.