ವಿವೋ ಭಾರತದಲ್ಲಿ Vivo T1 5G ಎರಡು ಬಣ್ಣಗಳಲ್ಲಿ ಮತ್ತು ಮೂರು ಶೇಖರಣಾ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. Vivo T ಸರಣಿಯ ಸ್ಮಾರ್ಟ್‌ಫೋನ್ ಇದಾಗಿದ್ದು ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್, 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಟ್ರಿಪಲ್-ಲೆನ್ಸ್ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
Tech Desk: ವಿವೋ ಭಾರತೀಯ ಮಾರುಕಟ್ಟೆಯಲ್ಲಿ ಹೊಸ 'T' ಸರಣಿಯನ್ನು ಫೋನ್ ಪರಿಚಯಿಸಿದೆ. Vivo T1 5G ಈಗ ಭಾರತದಲ್ಲಿ ಅಧಿಕೃತವಾಗಿದ್ದು Vivo T ಸರಣಿಯು ಕೈಗೆಟುಕುವ ಬೆಲೆಯಲ್ಲಿ ಬಳಕೆದಾರರಿಗೆ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಅನುಭವವ ನೀಡಲು ಸಿದ್ಧವಾಗಿದೆ. Vivo T1 5G ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್, 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಟ್ರಿಪಲ್-ಲೆನ್ಸ್ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಸ್ಮಾರ್ಟ್‌ಫೋನ್ ಲೈನ್-ಅಪ್ ಈಗಾಗಲೇ ಚೀನಾದಲ್ಲಿ ಅನಾವರಣಗೊಂಡಿದೆ. ಸರಣಿಯ ಮೊದಲ ಎರಡು ಸಾಧನಗಳು Vivo T1 ಮತ್ತು Vivo T1X ಬಿಡುಗಡೆಯಾಗಿವೆ. ಹಾಗಾಗಿ ಈ ಸ್ಮಾರ್ಟ್ಫೋನ್‌ನ ಮಾಹಿತಿಗಳಿ ಈ ಹಿಂದೆಯೇ ಬಹಿರಂಗಗೊಂಡಿದ್ದವು. ಆದರೆ ಭಾರತದಲ್ಲಿ ಬಿಡುಗಡೆಯಾದ ಮಾದರಿಯು ಇದರ ಚೀನಾ ಮಾದರಿಗಿಂತ ಕೆಲವು ವ್ಯತ್ಯಾಸಗಳನ್ನು ಹೊಂದಿದೆ, ಇದರಲ್ಲಿ ಹೊಸ ಚಿಪ್‌ಸೆಟ್ ಮತ್ತು ಪುನರ್ನಿರ್ಮಿಸಿದ ಕ್ಯಾಮೆರಾ ಮಾಡ್ಯೂಲ್ ಸೇರಿವೆ. Vivo T1 5G ಭಾರತದಲ್ಲಿ ಸ್ಮಾರ್ಟ್‌ಫೋನ್‌ನ ಎಲ್ಲಾ ವಿವರಗಳನ್ನು ಇಲ್ಲಿದೆ.
ಇದನ್ನೂ ಓದಿ: Vivo Y21e: 5000mAh ಬ್ಯಾಟರಿಯೊಂದಿಗೆ ವಿವೋದ ಬಜೆಟ್ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ: ಬೆಲೆ ಎಷ್ಟು?
Vivo T1 5G ಭಾರತದಲ್ಲಿ ಬೆಲೆ ಮತ್ತು ಲಭ್ಯತೆ: Vivo T1 5G ಭಾರತದಲ್ಲಿ 4GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬರುವ ಬೇಸ್ ರೂಪಾಂತರ ಬೆಲೆ ರೂ, 14,990ಕ್ಕೆ ನಿಗದಿಪಡಿಸಲಾಗಿದೆ. ಸ್ಟೆಪ್-ಅಪ್ ಆಯ್ಕೆಯು 6GB RAM ಮತ್ತು 128GB ಸಂಗ್ರಹಣೆಯನ್ನು ಹೊಂದಿದೆ ಮತ್ತು ಇದರ ಬೆಲೆ ರೂ. 15,990ಕ್ಕೆ ನಿಗದಿಪಡಿಸಲಾಗಿದೆ. ಟಾಪ್-ಆಫ್-ಲೈನ್ ಆಯ್ಕೆಯು 8GB RAM ಮತ್ತು 128GB ಸಂಗ್ರಹದೊಂದಿಗೆ ಬರುತ್ತದೆ ಹಾಗೂ ಇದು ಬೆಲೆ ರೂ.18,990 ಬೆಲೆಯಲ್ಲಿ ಲಭ್ಯವಿದೆ.
ಈ ಬೆಲೆಗಳು ರೂ 1,000ದ ಪರಿಚಯಾತ್ಮಕ ಕೊಡುಗೆಯನ್ನು ಒಳಗೊಂಡಿವೆ. ಆದ್ದರಿಂದ ಸೀಮಿತ ಅವಧಿಯ ನಂತರ ಎಲ್ಲಾ ಮಾದರಿಗಳ ಬೆಲೆ ಏರಿಕೆಯಾಗಲಿದೆ. ಸ್ಮಾರ್ಟ್ಫೋನ್ ಸ್ಟಾರ್ಲೈಟ್ ಬ್ಲಾಕ್ ಮತ್ತು ರೇನ್ಬೋ ಫ್ಯಾಂಟಸಿ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. Vivo T1 5G ಫೆಬ್ರವರಿ 14 ರಿಂದ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ವಿವೋ ಆನ್‌ಲೈನ್ ಸ್ಟೋರ್‌ಗಳು ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ.
ಇದನ್ನೂ ಓದಿ: IPL 2022 : ಹೊರಬಿದ್ದ ವಿವೋ, 2022 ಐಪಿಎಲ್ ಗೆ TATA ಪ್ರಾಯೋಜಕತ್ವ!
Vivo T1 5G specifications: Vivo T1 5G 6.58-ಇಂಚಿನ IPS FHD+ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 2.5D ಬಾಗಿದ ಅಂಚಿನೊಂದಿಗೆ (curved edge) ಬರುತ್ತದೆ. ಸಾಧನವು 4,00,000+ AnTuTu ಸ್ಕೋರ್‌ನೊಂದಿಗೆ 2.2GHz Qualcomm Snapdragon 695 ಪ್ರೊಸೆಸರ್‌ನಿಂದ ಚಾಲಿತವಾಗಿದೆ. Vivo T1 5G ಶಾಖ ನಿರ್ವಹಣೆಗಾಗಿ 5-ಲೇಯರ್ ಟರ್ಬೊ ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ.
ಫೋನ್ Funtouch OS 12.0 ಔಟ್-ಆಫ್-ದಿ-ಬಾಕ್ಸ್ ರನ್ ಮಾಡುತ್ತದೆ. ಕ್ಯಾಮೆರಾ ವಿಭಾಗದಲ್ಲಿ Vivo T1 5G ಟ್ರಿಪಲ್-ಲೆನ್ಸ್ ಕ್ಯಾಮೆರಾ ಸೆಟಪ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್ ಮತ್ತು ಎರಡು 2-ಮೆಗಾಪಿಕ್ಸೆಲ್ ಸಂವೇದಕಗಳೊಂದಿಗೆ ಬರುತ್ತದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಕೂಡ ಇದೆ.
ಫೋನ್ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದ್ದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್‌ನಲ್ಲಿನ ಸಂಪರ್ಕ ಆಯ್ಕೆಗಳು USB ಟೈಪ್-ಸಿ, 2.5/ 5GHz ವೈಫೈ, ಬ್ಲೂಟೂತ್ 5.1, ಹಾಗೆಯೇ ಡ್ಯುಯಲ್ ನ್ಯಾನೊ-ಸಿಮ್ (ಅಥವಾ ನ್ಯಾನೊ ಸಿಮ್ + ಮೈಕ್ರೊ ಎಸ್‌ಡಿ) ಗೆ ಬೆಂಬಲವನ್ನು ಒಳಗೊಂಡಿವೆ. ಸಾಧನವು 8.25 ಮಿಮೀ ದಪ್ಪವಿದ್ದು 187 ಗ್ರಾಂ ತೂಗುತ್ತದೆ.