Redmi Note 11, Redmi Note 11S ಕ್ವಾಡ್ ರಿಯರ್ ಕ್ಯಾಮೆರಾದೊಂದಿಗೆ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?

By Suvarna News  |  First Published Feb 9, 2022, 1:51 PM IST

Redmi Note 11 ಮತ್ತು Redmi Note 11S ಭಾರತದಲ್ಲಿ ಬುಧವಾರ ಬಿಡುಗಡೆ ಮಾಡಲಾಗಿದೆ. ಎರಡೂ ರೆಡ್‌ಮಿ ಫೋನ್‌ಗಳು ಕೆಲವು ಸಾಮ್ಯತೆಗಳಿದ್ದು ಇವುಗಳಲ್ಲಿ 90Hz AMOLED ಡಿಸ್ಪ್ಲೇಗಳು ಮತ್ತು ಕ್ವಾಡ್ ರಿಯರ್ ಕ್ಯಾಮೆರಾಗಳು ಸೇರಿವೆ


Tech Desk: Redmi Note 11 ಮತ್ತು Redmi Note 11S ಅನ್ನು ಭಾರತದಲ್ಲಿ ಬುಧವಾರ (ಫೆಬ್ರವರಿ 9) Redmi Note ಸರಣಿಯ ಇತ್ತೀಚಿನ ಮಾದರಿಗಳಾಗಿ ಬಿಡುಗಡೆ ಮಾಡಲಾಗಿದೆ. ಎರಡೂ ರೆಡ್‌ಮಿ ಫೋನ್‌ಗಳು ಕೆಲವು ಸಾಮ್ಯತೆಗಳಿದ್ದು ಇವುಗಳಲ್ಲಿ 90Hz AMOLED ಡಿಸ್ಪ್ಲೇಗಳು ಮತ್ತು ಕ್ವಾಡ್ ರಿಯರ್ ಕ್ಯಾಮೆರಾಗಳು ಸೇರಿವೆ. Redmi Note 11 ಮತ್ತು Redmi Note 11S ಎರಡೂ ಸಹ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತವೆ ಮತ್ತು ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತವೆ ಎಂದು ಹೇಳಲಾಗಿದೆ. 

ಫೋನ್‌ಗಳು  ಸ್ಪ್ಲಾಶ್-ರೆಸಿಸ್ಟಂಟ್‌ಗಾಗಿ  IP53 ರೇಟಿಂಗ್ ಸಹ ಹೊಂದಿವೆ. ಈ ಎರಡೂ ಸಾಧನಗಳಲ್ಲಿ ಒಂದು ಪ್ರಮುಖ ವ್ಯತ್ಯಾಸವೆಂದರೆ Redmi Note 11 Qualcomm Snapdragon SoC ಅನ್ನು ಹೊಂದಿದೆ, ಆದರೆ Redmi Note 11S ಮೀಡಿಯಾ ಟೆಕ್ ಹೆಲಿಯೊ ಚಿಪ್‌ನಿಂದ ಚಾಲಿತವಾಗಿದೆ. ಎರಡೂ ಫೋನ್‌ಗಳು 5G ಬೆಂಬಲವನ್ನು ಹೊಂದಿಲ್ಲ.  ರೂ.20,000  ವಿಭಾಗದಲ್ಲಿ ಇದು ಸಾಮಾನ್ಯವಾಗಿದ್ದು  4G ಸಂಪರ್ಕದೊಂದಿಹೆ ಮಾತ್ರ ಹಲವು ಫೋನ್‌ ಬಿಡುಗಡೆಯಾಗಿವೆ. 

Tap to resize

Latest Videos

undefined

Redmi Note 11 Realme 9i, Infinix Note 11S ಮತ್ತು Motorola Moto G51 ಗಳ ವಿರುದ್ಧ ಸ್ಪರ್ಧಿಸಲಿದೆ. Redmi Note 11S Realme Narzo 30 Pro, Infinix Note 10 Pro ಮತ್ತು Samsung Galaxy M32 ನಂತಹವುಗಳೊಂದಿಗೆ ಸ್ಪರ್ಧಿಸಲಿದೆ.

ಇದನ್ನೂ ಓದಿ: Redmi K50 Gaming Edition: ಗೇಮಿಂಗ್ ಸ್ಮಾರ್ಟ್‌ಫೋನ್ ಮಾಹಿತಿ ಸೋರಿಕೆ, ಏನೆಲ್ಲ ವಿಶೇಷತೆ?

Redmi Note 11, Redmi Note 11S ಭಾರತದಲ್ಲಿ ಬೆಲೆ, ಲಭ್ಯತೆ: Redmi Note 11 ಬೆಲೆಯನ್ನುಬೇಸ್ 4GB RAM + 64GB ಸ್ಟೋರೇಜ್ ರೂಪಾಂತರಕ್ಕಾಗಿ  ರೂ. 13,499 ಗೆ ನಿಗದಿಪಡಿಅಲಗಾಇದೆ. ಫೋನ್ 6GB + 64GB ಆಯ್ಕೆಯನ್ನು ಸಹ ಹೊಂದಿದೆ, ಇದರ ಬೆಲೆ ರೂ. 14,499 ಮತ್ತು 6GB + 128GB ಮಾದರಿಯು ರೂ. 15,999 ಬೆಲೆಗೆ ಲಭ್ಯವಿದೆ.  ಇದು ಹರೈಸನ್ ಬ್ಲೂ, ಸ್ಪೇಸ್ ಬ್ಲ್ಯಾಕ್ ಮತ್ತು ಸ್ಟಾರ್‌ಬರ್ಸ್ಟ್ ವೈಟ್ ಬಣ್ಣಗಳಲ್ಲಿ ಬರುತ್ತದೆ. Redmi Note 11 ರ 64GB ಶೇಖರಣಾ ರೂಪಾಂತರಗಳು ಪರಿಚಯಾತ್ಮಕ ಬೆಲೆಯೊಂದಿಗೆ ಲಭ್ಯವಿದೆ.

ಮತ್ತೊಂದೆಡೆ Redmi Note 11S  6GB + 64GB ಮಾದರಿಗೆ ರೂ. 16,499ನಲ್ಲಿ ಲಭ್ಯವಿದೆ. ಇದು 6GB + 128GB ಮಾದರಿ ರೂ. 17,499 ಬೆಲೆ ಹೊಂದಿದ್ದು  ಟಾಪ್-ಆಫ್-ಲೈನ್ 8GB + 128GB ಆಯ್ಕೆಯು ರೂ. 18,499ನಲ್ಲಿ ಲಭ್ಯವಿದೆ.  Redmi Note 11S ಹಾರಿಜಾನ್ ಬ್ಲೂ, ಪೋಲಾರ್ ವೈಟ್ ಮತ್ತು ಸ್ಪೇಸ್ ಬ್ಲ್ಯಾಕ್ ಶೇಡ್‌ಗಳನ್ನು ಒಳಗೊಂಡಿದೆ.

Redmi Note 11 ಫೆಬ್ರವರಿ 11 ರಿಂದ ಮಾರಾಟವಾಗಲಿದೆ, ಆದರೆ Redmi Note 11S ಫೆಬ್ರವರಿ 21 ರಿಂದ ಖರೀದಿಗೆ ಲಭ್ಯವಿರುತ್ತದೆ. ಎರಡೂ ಫೋನ್‌ಗಳನ್ನು Amazon, Mi.com, Mi ಹೋಮ್ ಸ್ಟೋರ್‌ಗಳು, Mi ಸ್ಟುಡಿಯೋಸ್ ಮತ್ತು  ದೇಶದಾದ್ಯಂತ ಪ್ರಮುಖ ರಿಟೇಲ್‌ ಅಂಗಡಿಗಳಲ್ಲಿ ಲಭ್ಯವಿರಲಿದೆ. 

ಇದನ್ನೂ ಓದಿ: Xiaomi 11i HyperCharge 5G: ಕೇವಲ 15 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಕಂಪ್ಲೀಟ್‌ ಚಾರ್ಜ್‌: ಬೆಲೆ ಎಷ್ಟು?

Redmi Note 11 specifications: ಡ್ಯುಯಲ್-ಸಿಮ್ (ನ್ಯಾನೋ) Redmi Note 11 ಹೊಸದಾಗಿ ಬಿಡುಗಡೆಯಾದ MIUI 13 ನೊಂದಿಗೆ Android 11 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.43-ಇಂಚಿನ Full-HD+ (1,080x2,400 ಪಿಕ್ಸೆಲ್‌ಗಳು) AMOLED ಡಾಟ್ ಡಿಸ್‌ಪ್ಲೇ ಹೊಂದಿದೆ.  ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ನಿಂದ ಚಾಲಿತವಾಗಿದೆ, ಜೊತೆಗೆ 6GB ವರೆಗಿನ LPDDR4X RAMನಿಂದ ಜೋಡಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ f/1.8 ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಕ್ಯಾಮರಾ ಸೆಟಪ್ ಅಲ್ಟ್ರಾ-ವೈಡ್ ಲೆನ್ಸ್, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಜೊತೆಗೆ 8-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರನ್ನು ಒಳಗೊಂಡಿದೆ.

ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, Redmi Note 11 ಮುಂಭಾಗದಲ್ಲಿ 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕವನ್ನು f/2.4 ಲೆನ್ಸ್‌ ಹೊಂದಿದೆ. Redmi Note 11 ಮೈಕ್ರೊ SD ಕಾರ್ಡ್ ಮೂಲಕ (1TB ವರೆಗೆ) ಮೀಸಲಾದ ಸ್ಲಾಟ್ ಮೂಲಕ ವಿಸ್ತರಿಸಬಹುದಾದ 128GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. Redmi Note 11 5,000mAh ಬ್ಯಾಟರಿಯನ್ನು ಹೊಂದಿದ್ದು  33W ಪ್ರೊ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 

Redmi Note 11S specifications: ಡ್ಯುಯಲ್-ಸಿಮ್ (ನ್ಯಾನೋ) Redmi Note 11S Android 11-ಆಧಾರಿತ MIUI 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 90Hz ರಿಫ್ರೆಶ್ ದರದೊಂದಿಗೆ 6.43-ಇಂಚಿನ Full-HD+ (1,080x2,400 ಪಿಕ್ಸೆಲ್‌ಗಳು) AMOLED ಡಾಟ್ ಡಿಸ್‌ಪ್ಲೇ ಹೊಂದಿದೆ. ಇದು 8GB ವರೆಗಿನ LPDDR4X RAM ಜೊತೆಗೆ ಆಕ್ಟಾ-ಕೋರ್ MediaTek Helio G96 SoC ನಿಂದ ಚಾಲಿತವಾಗಿದೆ. Redmi Note 11S ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದು  f/1.9 ವೈಡ್-ಆಂಗಲ್ ಲೆನ್ಸ್ ಜತೆಗೆ 108-ಮೆಗಾಪಿಕ್ಸೆಲ್ ಪ್ರಾಥಮಿಕ Samsung HM2 ಸಂವೇದಕ ಹೊಂದಿದೆ.

Redmi Note 11S ನಲ್ಲಿನ ಕ್ಯಾಮೆರಾ ಸೆಟಪ್ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. Redmi Note 11S ಮುಂಭಾಗದಲ್ಲಿ f/2.4 ಲೆನ್ಸ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕದೊಂದಿಗೆ ಬರುತ್ತದೆ. Redmi Note 11S 128GB ವರೆಗೆ UFS 2.2 ಸಂಗ್ರಹಣೆಯನ್ನು ಹೊಂದಿದೆ, ಇದನ್ನು ಮೈಕ್ರೊ SD ಕಾರ್ಡ್ ಮೂಲಕ (1TB ವರೆಗೆ) ಮೀಸಲಾದ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ.  Redmi Note 11S 33W ಪ್ರೊ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

click me!