ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ, ಕೆಲ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ದುಬಾರಿಯಾಗುತ್ತಿರುವ ಪಟ್ಟಿಲ್ಲಿ ಮೊಬೈಲ್ ಕೂಡ ಸೇರಿಕೊಂಡಿದೆ. ಇನ್ನು ಮೊಬೈಲ್ ಖರೀದಿ ಕೈ ಸುಡಲಿದೆ.
ನವದೆಹಲಿ(ಫೆ.01): ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಮೊಬೈಲ್ ಬಿಡಿ ಭಾಗಗಳು, ಚಾರ್ಜರ್ ಸೇರಿದಂತೆ ಕೆಲ ಎಲೆಕ್ಟ್ರಾನಿಕ್ ವಸ್ತುಗಳ ಆಮದು ಸುಂಕ ಹೆಚ್ಚಿಸಲಾಗಿದೆ.
undefined
ಕೇಂದ್ರ ಬಜೆಟ್ 2021: ಹಳೆ ವಾಹನ ಗುಜುರಿ ನೀತಿ ಕುರಿತು ಮಹತ್ವದ ಘೋಷಣೆ!.
ಮೊಬೈಲ್ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಶೇಕಡಾ 2.5 ರಷ್ಟು ಹೆಚ್ಚಿಸಲಾಗುತ್ತಿದೆ. ಹೀಗಾಗಿ ಕಡಿಮೆ ಬೆಲೆ ಮೊಬೈಲ್‌ಗಳು ಇನ್ನು ದುಬಾರಿಯಾಗಲಿದೆ. ಮೊಬೈಲ್ ಉಪಕರಣ, ಬಿಡಿ ಭಾಗಗಳು, ಚಾರ್ಜರ್ ಸೇರಿದಂತೆ ಬಹುತೇಕ ಉಪಕರಣಗಳು ಭಾರತಕ್ಕೆ ಆಮದಾಗುತ್ತಿದೆ. ಇದೀಗ ಈ ಉಪಕರಣದ ಮೇಲೆ ಶೇಕಡಾ 2.5 ರಷ್ಟು ಹೆಚ್ಚುವರಿ ಕಸ್ಟಮ್ ಡ್ಯೂಟಿ ಹಾಕಲಾಗುತ್ತಿದೆ.
ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆ ಇಲ್ಲ!
ಭಾರತದಲ್ಲಿ ವಿದೇಶಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಕೇವಲ ಕೆಲವೇ ಕೆಲವು ಕಂಪನಿಗಳ ಸ್ವದೇಶಿ ಮೊಬೈಲ್‌ಗಳು ಭಾರತದಲ್ಲಿ ಲಭ್ಯವಿದೆ. ಸ್ಥಳೀಯ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ಚಾರ್ಜರ್‌ಗಳು ಮತ್ತು ಮೊಬೈಲ್ ಫೋನ್‌ಗಳ ಬಿಡಿ ಭಾಗಗಳ ಮೇಲಿನ ವಿನಾಯಿತಿಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ.
ಇದರ ಜೊತೆಗೆ ಏರ್ ಕಂಡೀಷನ್(ಎಸಿ) ಬೆಲೆಯಲ್ಲೂ ಏರಿಕೆಯಾಗುತ್ತಿದೆ. ಇದರ ಆಮದು ಸಂಕವನ್ನು ಶೇಕಡಾ 12.5 ರಿಂದ ಶೇಕಡಾ 15ಕ್ಕೆ ಏರಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಉಪಕರಣಗಳಾದ ಪ್ರಿಟೆಂಟ್ ಬೋರ್ಡ್ ಅಮದು ಸಂಕವನ್ನು ಹೆಚ್ಚಿಸಲಾಗಿದೆ. ಇನ್ನು ಎಲ್ಇಡಿ ದೀಪಗಳ ಮೇಲಿನ ಆಮದು ಸುಂಕವನ್ನು 5 ರಿಂದ ಶೇಕಡಾ 10ಕ್ಕೆ ಏರಿಸಲಾಗಿದೆ. ಸೋಲಾರ್ ದೀಪದ ಬೆಲೆಯ ಆಮದು ಸುಂಕವನ್ನು ಶೇಕಡಾ 5 ರಿಂದ 15ಕ್ಕೆ ಏರಿಸಲಾಗಿದೆ.