
ದಸರಾ, ದೀಪಾವಳಿ.. ಸೇರಿದಂತೆ ಹಬ್ಬದ ಸೀಸನ್‌ಗಳು ಇನ್ನೇನು ಶುರವಾಗಲಿವೆ. ಈ ಹಬ್ಬ ಹುಣ್ಣಿಮೆ ಸೀಸನ್ ಬಂತು ಅಂದ್ರೆ ಸಾಕು ಇ-ಕಾಮರ್ಸ್ ಬ್ಯುಸಿನೆಸ್ ಪ್ಲಾಟ್‌ಫಾರ್ಮ್‌ಗಳಿಗೆ ದೊಡ್ಡ ಹಬ್ಬದ ಸಂಭ್ರಮ. ಅಮೇಜಾನ್, ಫ್ಲಿಪ್‌ಕಾರ್ಟ್‌ನಂಥ ದೈತ್ಯ ಸಂಸ್ಥೆಗಳು ಮಾರ್ಕೆಟಿಂಗ್ ಲಾಭದ ಲೆಕ್ಕಾಚಾರ ಹಾಕುತ್ತ ಇರುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಮೇಜಾನ್ ಫೆಸ್ಟಿವಲ್ ಸೇಲ್ ಮಾಡೋದಾಗಿ ಘೋಷಿಸಿದೆ. ಈ ಮಧ್ಯೆ ಒನ್ ಪ್ಲಸ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ..
OnePlus N6 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ. ಕೆಲವು ತಿಂಗಳುಗಳ ಹಿಂದಷ್ಟೇ OnePlus N6 5G ಫೋನ್ ಲಾಂಚ್ ಆಗಿತ್ತು. 4GB RAM + 128GB ಸ್ಟೋರೇಜ್ ಸಿರೀಸ್‌ನ ಮೊದಲ ಬೆಲೆ 22,999 ರೂಪಾಯಿ ಆಗಿತ್ತು. 6GB RAM ಆವೃತ್ತಿಯು 24,999 ರೂಪಾಯಿ ಬೆಲೆ ಇತ್ತು. ಇತ್ತೀಚೆಗೆ ಬೆಲೆ ಏರಿಕೆ ಮಾಡಲಾಗಿತ್ತು. ಬೆಲೆ ಏರಿಕೆ ನಂತರ ಅಮೆಜಾನ್‌ನಲ್ಲಿ ಇದರ ಬೆಲೆ 30,999 ರೂ.ಗೆ ತಲುಪಿತ್ತು. ಇದೀಗ ಈ ಫೋನ್ ಬೆಲೆಯಲ್ಲಿ 6,000 ರೂಪಾಯಿ ಇಳಿಕೆ ಮಾಡಲಾಗಿದೆ. ಇದೀಗ ಆ ಫೋನ್ ಅನ್ನು ನೀವು 24,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
ಇನ್ನು, ಆಯ್ದ ಕೆಲವು ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದ್ರೆ ಹೆಚ್ಚುವರಿಯಾಗಿ 1,500 ರೂಪಾಯಿಗಳ ಡಿಸ್ಕೌಂಟ್ ಸಿಗಲಿದೆ. ಒಂದು ವೇಳೆ ಫೋನ್ ಖರೀದಿ ವೇಳೆ ನೀವು ಬ್ಯಾಂಕ್ ಕಾರ್ಡ್ ಬಳಸಿದ್ರೆ ಕೇವಲ 23,499 ರೂಪಾಯಿಗೆ ಇಳಿಯಲಿದೆ. ಇನ್ನು, ತಮ್ಮ ಹಳೆಯ ಮೊಬೈಲ್ ಕೊಟ್ಟು ಹೊಸ ಫೋನ್ ಖರೀದಿಸೋರಿಗೂ ಇಲ್ಲಿ ಅವಕಾಶ ಇದೆ. ಆ ಮೂಲಕ ನೀವು ಇನ್ನಷ್ಟು ಕಡಿಮೆ ಬೆಲೆಗೆ ಫೋನ್ ಖರೀದಿ ಮಾಡಬಹುದಾಗಿದೆ.
25 ಸಾವಿರ ಬೆಲೆಯೊಳಗೆ ಮೊಬೈಲ್ ಖರೀದಿ ಮಾಡುವ ಪ್ಲಾನ್‌ನಲ್ಲಿ ನೀವೇನಾದರೂ ಇದ್ದರೆ ಒಳ್ಳೆಯ ಆಫರ್ ಇದಾಗಿದೆ. ದೀಪಾವಳಿಗೆ ಮೊಬೈಲ್ ಅಥವಾ ದಸರಾಗೆ ಮೊಬೈಲ್ ಖರೀದಿ ಮಾಡಬೇಕು ಅಂದ್ಕೊಂಡವರಿಗೆ ಒಳ್ಳೆಯ ಅವಕಾಶ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.