
ಹೊಸ ಸಿಮ್ ಖರೀದಿಸಲು ಹೋದರೆ..ಟೆಲಿಕಾಂ ಕಂಪನಿಗಳು ಕಂಪ್ಯೂಟರ್‌ನಿಂದ ಆಟೋಮ್ಯಾಟಿಕ್ ಆಗಿ ಜನರೇಟ್ ಆಗಿರುವ ಒಂದು ಮೊಬೈಲ್ ಸಂಖ್ಯೆಯನ್ನು ನೀಡುತ್ತವೆ. ಇಂಥ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟಕರ. ಹುಟ್ಟಿದ ದಿನಾಂಕ, ವಾಹನ ನೋಂದಣಿ ಸಂಖ್ಯೆ, ಅದೃಷ್ಟದ ಸಂಖ್ಯೆ (Lucky Number) ಅಥವಾ ನೆನಪಿಟ್ಟುಕೊಳ್ಳಲು ಅತ್ಯಂತ ಸುಲಭವಾದ ಫ್ಯಾನ್ಸಿ ನಂಬರ್ ಹೊಂದಬೇಕೆಂಬ ಆಸೆ ನಿಮಗಿದೆಯೇ? ಹಾಗಿದ್ದರೆ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಇಂತಹದ್ದೊಂದು ಸುವರ್ಣಾವಕಾಶ ನೀಡುತ್ತಿದೆ.
ನಾವು ಹೊಸ ಸಿಮ್ ಖರೀದಿಸಲು ಹೋದಾಗಿ Random ಆಗಿ ಯಾವುದೋ ನಂಬರ್ ಆಯ್ಕೆ ಮಾಡಿಕೊಳ್ಳುವ ಬದಲಾಗಿ, ಇಷ್ಟವಾದ ನಂಬರ್‍ಗಳನ್ನ ಹೊಂದಿರುವ ಸಂಖ್ಯೆಯನ್ನು ಪಡೆಯುವುದೇ ವಿಐಪಿ ಅಥವಾ ಫ್ಯಾನ್ಸಿ ನಂಬರ್ ಆಗಿದೆ.
ಉದಾಹರಣೆಗೆ: 777, 888, 666, 9999 ನಂತಹ ಪುನರಾವರ್ತಿತ ಅಂಕಿಗಳುಳ್ಳ ನಂಬರ್‌ಗಳು. ಇನ್ನೂ ಸರಳವಾಗಿ ಹೇಳೋದಾರೆ ನೀವು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಿರುವ ನಂಬರ್‍ಗಳು. ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ತಮ್ಮ ಸಂಪರ್ಕ ಸಂಖ್ಯೆ ಎಲ್ಲರಿಗಿಂತ ಭಿನ್ನವಾಗಿರಬೇಕು ಎಂದು ಬಯಸುವವರಿಗೆ ವಿಐಪಿ ನಂಬರ್‌ಗಳು ಹೆಚ್ಚು ಆಕರ್ಷಕವಾಗಿರುತ್ತವೆ.
ಜಿಯೋ ಸಂಸ್ಥೆಯು ವಿಐಪಿ ಸಂಖ್ಯೆಗಳಿಗೆ ನಿಗದಿಪಡಿಸುವ ದರವು.. ಆಯ್ಕೆ ಸಂಖ್ಯೆಯ ಪ್ಯಾಟರ್ನ್ ಮತ್ತು ಮಾರುಕಟ್ಟೆಯಲ್ಲಿ ಅದಕ್ಕಿರುವ ಬೇಡಿಕೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದು ಸಂಸ್ಥೆ ಹೇಳಿದೆ. ಅದರ ಕನಿಷ್ಠದರ 50 ರೂಪಾಯಿಯಿಂದ ಪ್ರಾರಂಭವಾಗತ್ತದೆ.
ಸಾಮಾನ್ಯ ಪ್ಯಾಟರ್ನ್‌ಗಳು: ಉದಾಹರಣೆಗೆ 686, 777, 888 ಇಂಥ ಸಂಖ್ಯೆಗಳು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ.
ಪ್ರೀಮಿಯಂ ಮತ್ತು ರೇರ್ ನಂಬರ್‌ಗಳು: ಅತ್ಯಂತ ಅಪರೂಪದ ಮತ್ತು ಭಾರಿ ಬೇಡಿಕೆಯಿರುವ ಸಂಖ್ಯೆಗಳಾದ 0000, 1000 ಅಥವಾ ಸೂಪರ್ ಫ್ಯಾನ್ಸಿ ಸರಣಿಯ ನಂಬರ್‌ಗಳ ಬೆಲೆ ಬರೋಬ್ಬರಿ ₹15,000 ದವರೆಗೂ ಇರಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.