ಐಫೋನ್ 18 ಬಿಡುಗಡೆ ಬೆನ್ನಲ್ಲೇ ಕಿಡ್ನಿ ಮೀಮ್ಸ್, ಫೋನ್ ಅಲ್ಲ ಎನ್‌ಫೀಲ್ಡ್ ಬೈಕ್‌ಗೆ ಪೈಪೋಟಿ ಎಂದ ಜನ

Published : Sep 10, 2026, 12:24 PM IST
iPhone 18 Launch Triggers Kidney Meme

ಸಾರಾಂಶ

ಬಹುನಿರೀಕ್ಷಿತ ಐಫೋನ್ 18 ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಮೀಮ್ಸ್ ಹರಿದಾಡುತ್ತಿದೆ. ಕಿಡ್ನಿ ಮಾರಿದರೂ ಐಫೋನ್ ಬರಲ್ಲ ಎನ್ನುತ್ತಿದ್ದಾರೆ. ಐಫೋನ್ ಖರೀದಿಗೆ ಗಂಡನ ಮಾರಿಬಿಡಲಾ ಎಂದು ಪ್ರಶ್ನಿಸುತ್ತಿದ್ದಾರೆ. ಐಫೋನ್ 18 ಕುರಿತು ಹರಿದಾಡುತ್ತಿರುವ ಮೀಮ್ಸ್ ಇಲ್ಲಿದೆ.

ನವದೆಹಲಿ (ಸೆ.10) ಐಫೋನ್ 18 ಡ್ಯು, ಐಫೋನ್ 18 ಪ್ರೋ ಹಾಗೂ ಐಫೋನ್ 18 ಪ್ರೋ ಮ್ಯಾಕ್ಸ್ ಭಾರತದಲ್ಲಿ ಬಿಡುಗಡೆಯಾಗಿದೆ. ಐಫೋನ್ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೀಮ್ಸ್ ಹರಿದಾಡುತ್ತಿದೆ. ಕಾರಣ ಇದರ ಬೆಲೆ. ಐಫೋನ್ 18 ಡ್ಯು ಸಿರೀಸ್‌ನ 2ಟಿಬಿ ಸ್ಟೋರೇಜ್ ಫೋನ್ ಬೆಲೆ ಬರೋಬ್ಬರಿ 4.49 ಲಕ್ಷ ರೂಪಾಯಿ. ಐಫೋನ್ 18 ಸಿರೀಸ್ ಬೆಲೆ ನೋಡಿ ಜನ ಕಿಡ್ನಿ ಮಾರಿದರೂ ಐಫೋನ್ ಬರಲ್ಲ ಎಂದು ಮೀಮ್ಸ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಹಲವರು ಐಫೋನ್ 18 ಸಿರೀಸ್ ಖರೀದಿಸಲು ಗಂಡನನ್ನೇ ಮಾರಬೇಕು ಎಂದು ಮೀಮ್ ಮಾಡಿದ್ದಾರೆ.

ಐಫೋನ್ ಸ್ಪರ್ಧೆ ಮಾಡುತ್ತಿರುವುದು ಸ್ಯಾಮ್ಸಂಗ್ ಜೊತೆಗಲ್ಲ

ಐಫೋನ್ 18 ಫೋನ್ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಕಾಂಪಿಟೀಶನ್ ಕುರಿತು ಚರ್ಚೆಯಾಗುತ್ತಿದೆ. ಐಫೋನ್ ಸ್ಪರ್ಧೆ, ಪೈಪೋಟಿ ಸ್ಯಾಮ್ಸಂಗ್ ಫೋನ್ ಜೊತೆಗಲ್ಲ. ಐಫೋನ್ 18 ನೇರವಾಗಿ ರಾಯಲ್ ಎನ್‌ಫೀಲ್ಡ್ ಬೈಕ್ ಜೊತೆ ಸ್ಪರ್ಧಿಸುತ್ತಿದೆ ಎಂದು ಹಲವರು ಮೀಮ್ಸ್ ಮಾಡಿದ್ದಾರೆ. ಮಾರುತಿ ಅಲ್ಟೋ ಕಾರು ಖರೀದಿಸಬಹುದು ಎಂದು ಹಲವರು ಟ್ರೋಲ್ ಮಾಡಿದ್ದಾರೆ. ಐಪೋನ್ 18 ಬದಲು ಸೆಕೆಂಡ್ ಹ್ಯಾಂಡ್ ಕಾರು ಯಾವುದೇ ಅಡೆ ತಡೆ ಇಲ್ಲದೆ ನಿಮ್ಮ ಮನೆ ಸೇರಲಿದೆ ಎಂದು ಮೀಮ್ಸ್ ಮಾಡುತ್ತಿದ್ದಾರೆ.

ಕಿಡ್ನಿ ಮಾರಿ ಐಫೋನ್ ಖರೀದಿ ಮಾಡಲು ಸಾಧ್ಯವಾಗುವ ಒಂದು ಕಾಲವಿತ್ತು. ಇದೀಗ ಕಿಡ್ನಿ ಮಾತ್ರವಲ್ಲ, ದೇಹದ ಎಲ್ಲಾ ಅಂಗಾಂಗ ಮಾರಿದರೂ ಐಫೋನ್ ಖರೀದಿ ಕಷ್ಟವಾಗಲಿದೆ ಎಂದು ಹಲವರು ಜೋಕ್ ಮಾಡಿದ್ದಾರೆ. ಇದೇ ವೇಳೆ ಹಲವರು 3 ರಿಂದ 4 ಲಕ್ಷ ರೂಪಾಯಿ ಐಫೋನ್ ಖರೀದಿಸುವ ಬದಲು ಏನೆಲ್ಲಾ ಮಾಡಬಹುದು ಎಂದು ಪಟ್ಟಿ ನೀಡಿದ್ದಾರೆ. ಇದೇ ದುಡ್ಡಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಬಹುದು. ಉತ್ತಮ ಬೈಕ್ ಖರೀದಿಸಬಹುದು, 20 ಗ್ರಾಂ ಚಿನ್ನ ಖರೀದಿಸಬಹುದು, ಒಂದು ವರ್ಷದ ಮನೆ ಬಾಡಿಗೆ ನೀಡಬಹುದು, ನಿಮ್ಮ ಸಹೋದರಿ, ಸಹೋದರಿಯ ಮದುವೆ ಊಟದ ಸಂಪೂರ್ಣ ಖರ್ಚು ನೀವೇ ನೋಡಿಕೊಳ್ಳಬಹುದು, ಮನೆಗೆ ಫ್ರಿಡ್ಜ್, ಟಿವಿ, ಎಸಿ, ವಾಶಿಂಗ್ ಮಶಿನ್, ಸೋಫಾ ಖರೀದಿಸಬಹುದು, ಪೋಷಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬಹುದು, ಫಿಕ್ಸೆಡ್ ಡೆಪಾಸಿಟ್ ಇಟ್ಟು ಬಡ್ಡಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಐಫೋನ್ 18 ಡ್ಯು ಫೋನ್ ಬೆಲೆ

  • 256ಜಿಬಿ ಸ್ಟೋರೇಜ್ ; 2,99,900 ರೂಪಾಯಿ
  • 512 ಜಿಬಿ ಸ್ಟೋರೇಜ್ ; 3,24,900 ರೂಪಾಯಿ
  • 1ಟಿಬಿ ಸ್ಟೋರೇಜ್ ;3,74,900 ರೂಪಾಯಿ
  • 2ಟಿಬಿ ಸ್ಟೋರೇಜ್ ; 4,49,900 ರೂಪಾಯಿ

ಐಫೋನ್ 18 ಪ್ರೋ ಪ್ರೋ ಬೆಲೆ

  • 256ಜಿಬಿ ಸ್ಟೋರೇಜ್ ; 1,64,900 ರೂಪಾಯಿ
  • 512 ಜಿಬಿ ಸ್ಟೋರೇಜ್ ; 1,89,900 ರೂಪಾಯಿ
  • 1ಟಿಬಿ ಸ್ಟೋರೇಜ್ ; 2,39,900 ರೂಪಾಯಿ
  • 2ಟಿಬಿ ಸ್ಟೋರೇಜ್ ; 3,14,900 ರೂಪಾಯಿ

ಐಫೋನ್ 18 ಪ್ರೋ ಮ್ಯಾಕ್ಸ್ ಬೆಲೆ

  • 256ಜಿಬಿ ಸ್ಟೋರೇಜ್ ; 1,79,900 ರೂಪಾಯಿ
  • 512 ಜಿಬಿ ಸ್ಟೋರೇಜ್ ;2,04,900 ರೂಪಾಯಿ
  • 1ಟಿಬಿ ಸ್ಟೋರೇಜ್ ; 2,54,900 ರೂಪಾಯಿ
  • 2ಟಿಬಿ ಸ್ಟೋರೇಜ್ ; 3,29,900 ರೂಪಾಯಿ

ಭಾರತ ಐಫೋನ್ 18 ಸೀರಿಸ್ ಸೆಪ್ಟೆಂಬರ್ 12 ರಿಂದ ಪ್ರೀ ಆರ್ಡರ್ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 18 ರಿಂದ ಎಲ್ಲಾ ಮಾರುಕಟ್ಟೆ, ಇ ಕಾಮರ್ಸ್‌ಗಳಲ್ಲಿ ಲಭ್ಯವಾಗಲಿದೆ. ಐಫೋನ್ 18 ಸಿರೀಸ್ ಭಾರತ ಸೇರಿದಂತ 65 ದೇಶಗಳಲ್ಲಿ ಬಿಡುಗಡೆಯಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Oppo A7 Pro ಲಾಂಚ್‌; 8,000mAh ಬ್ಯಾಟರಿ, 120Hz ಡಿಸ್ಪ್ಲೇ, IP69K ರೇಟಿಂಗ್‌! ಬೆಲೆ ಎಷ್ಟು?
iPhone 18 pro ಸೀರೀಸ್: ಭಾರತಕ್ಕಿಂತ ಅಮೇರಿಕಾ, ದುಬೈ, ಜಪಾನ್, ಚೀನಾದಲ್ಲಿ ಭಾರೀ ಚೀಪ್! ಇಲ್ಲಿದೆ ವಿವರ..