ಮುಂಬೈನಲ್ಲಿ ಆಪಲ್ ಕಚೇರಿ ಉದ್ಘಾಟಿಸಿದ ಟಿಮ್ ಕುಕ್‌ : ಉದ್ಘಾಟನೆಗೂ ಮೊದಲೇ ಕ್ಯೂ ನಿಂತ ಜನ

By Anusha KbFirst Published Apr 18, 2023, 12:51 PM IST
Highlights

ವಿಶ್ವದ ಅತಿದೊಡ್ಡ ಮೊಬೈಲ್‌ ಫೋನ್‌ ಮಾರುಕಟ್ಟೆಗಳಲ್ಲಿ ಒಂದಾದ ಭಾರತದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ, ಆಪಲ್‌ ಕಂಪನಿ ಭಾರತದಲ್ಲಿ ತನ್ನದೇ ಆದ ಸ್ವಂತ ಸ್ಟೋರ್‌ನ್ನು ಆಪಲ್ ಸಂಸ್ಥೆ ಅನಾವರಣ ಮಾಡಿದ್ದು, ಇಂದು ಆಪಲ್ ಸಿಇಒ ಟಿಮ್ ಕುಕ್ ಈ ಸ್ಟೋರ್‌ನ್ನು ಉದ್ಘಾಟಿಸಿದ್ದಾರೆ.

ಮುಂಬೈ: ವಿಶ್ವದ ಅತಿದೊಡ್ಡ ಮೊಬೈಲ್‌ ಫೋನ್‌ ಮಾರುಕಟ್ಟೆಗಳಲ್ಲಿ ಒಂದಾದ ಭಾರತದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ, ಆಪಲ್‌ ಕಂಪನಿ ಭಾರತದಲ್ಲಿ ತನ್ನದೇ ಆದ ಸ್ವಂತ ಸ್ಟೋರ್‌ನ್ನು ಆಪಲ್ ಸಂಸ್ಥೆ ಅನಾವರಣ ಮಾಡಿದ್ದು, ಇಂದು ಆಪಲ್ ಸಿಇಒ ಟಿಮ್ ಕುಕ್ ಈ ಸ್ಟೋರ್‌ನ್ನು ಉದ್ಘಾಟಿಸಿದ್ದಾರೆ. ಮುಂಬೈನ ಬಿಕೆಸಿಯಲ್ಲಿ (ಬಾಂದ್ರ ಕುರ್ಲಾ ಕಾಂಪ್ಲೆಕ್ಸ್‌) ನಲ್ಲಿ ಆಪಲ್ ಹೊಸ ಸ್ಟೋರ್‌ ಆರಂಭವಾಗಿದೆ. ಉದ್ಘಾಟನೆಗೆ ಮೊದಲೇ ಆಪಲ್ ಸ್ಟೋರ್‌ನ ಮುಂದೆ ಜನ ಕ್ಯೂ ನಿಂತಿದ್ದು, ಕಂಡು ಬಂತು. ಇಂದು ಮುಂಬೈನ ಆಪಲ್ ಸ್ಟೋರ್ ಉದ್ಘಾಟನೆಯಾಗಿದ್ದು, ಏಪ್ರಿಲ್ 20 ರಂದು ದೆಹಲಿಯ ಸಾಕೇತ್‌ನಲ್ಲಿ ಭಾರತದ 2ನೇ ಆಪಲ್ ಶಾಪ್ ಉದ್ಘಾಟನೆಯಾಗಲಿದೆ. ಮುಂಬೈನಲ್ಲಿ  ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ  ವರ್ಲ್ಡ್‌ ಡ್ರೈವ್ ಮಾಲ್‌ನಲ್ಲಿ ಈಗ ಆಪಲ್ ಶೋ ರೂಮ್ ಉದ್ಘಾಟನೆಯಾಗಿದೆ.

ಸ್ಟೋರ್ ಉದ್ಘಾಟನೆಗೆ ಟಿಮ್ ಕುಕ್‌ ಆಗಮಿಸುತ್ತಿದ್ದಂತೆ ಆಪಲ್ ಸಂಸ್ಥೆಯ ಉದ್ಯೋಗಿಗಳು ಡಾನ್ಸ್ ಮಾಡುತ್ತ ಚಪ್ಪಾಳೆ ತಟ್ಟುತ್ತಾ ಕುಕ್ ಅವರನ್ನು ಸ್ವಾಗತಿಸಿದರು. ಸಾಮಾಜಿಕ ಜಾಲತಾಣದಲ್ಲಿ (Social Media) ಈ ವಿಡಿಯೋ ವೈರಲ್ ಆಗುತ್ತಿದೆ.  2020 ರಲ್ಲಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದ ಕ್ಯಾಲಿಫೋರ್ನಿಯಾ ಮೂಲದ ಕಂಪನಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, ವಿಶ್ವ ಟೆಕ್ ಜಗತ್ತು ಹಾಗೂ ಭಾರತದ ಮಟ್ಟಿಗೆ ಇದೊಂದು ಐತಿಹಾಸಿಕ ಕ್ಷಣ ಎಂದೇ ಹೇಳಬಹುದಾಗಿದೆ. ತಾನು ಚಾಲ್ತಿಗೆ ಬಂದು 25 ವರ್ಷದ ನಂತರ ತನ್ನ ಮೊದಲ ಸ್ಟೋರ್‌ಅನ್ನು ದೇಶದ ವಾಣಿಜ್ಯ ರಾಜಧಾನಿಯಲ್ಲಿ ಆಪಲ್ ಆರಂಭ ಮಾಡಿದೆ.

'ಹಲೋ ಮುಂಬೈ' ಎಂದ ಭಾರತದ ಮೊದಲ ಆಪಲ್ ಸ್ಟೋರ್!

ಈ ಆಪಲ್ ಸ್ಟೋರ್ ಉದ್ಘಾಟನಾ ಕಾರ್ಯಕ್ರಮದಲ್ಲಿ 5 ಸಾವಿರ ಆಪಲ್ ಫೋನ್‌ (Apple smart Phone) ಉತ್ಸಾಹಿಗಳು ಭಾಗವಹಿಸಿದ್ದರು. ಆಪಲ್‌ನ ಈ ಮುಂಬೈ ಕಚೇರಿಯೂ ವಿಶಿಷ್ಟವಾದ ಮುಂಬೈ ನಗರದ ಹಳದಿ ಹಾಗೂ ಕಪ್ಪು ಬಣ್ಣದ ಸಂಯೋಜನೆಯ ಕ್ಯಾಬ್‌ ವಿನ್ಯಾಸದಿಂದ ಪ್ರೇರಣೆ ಪಡೆದಿದೆ. ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋ ಮೂಲದ ಈ ಕಂಪನಿಯು ಮುಂಬೈನಲ್ಲಿ ತೆರದ ಈ ಸ್ಟೋರ್‌ ಸುಸ್ಥಿರವಾದ ಕಚೇರಿ ಎಂದು ಹೇಳಿಕೊಂಡಿದೆ. ಸೋಲಾರ್ ಅರೇ ಮತ್ತು 100 ಪ್ರತಿಶತ ನವೀಕರಿಸಬಹುದಾದ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

| Apple CEO Tim Cook opens the gates to India's first Apple store at Mumbai's Bandra Kurla Complex pic.twitter.com/MCMzspFrvp

— ANI (@ANI)

 

ಜನರ ಜೀವನವನ್ನು ಶ್ರೀಮಂತಗೊಳಿಸುವುದು ಹಾಗೂ ಪ್ರಪಂಚದಾದ್ಯಂತದ ಜನರನ್ನು ಸಧೃಡಗೊಳಿಸುವುದು ಆಪಲ್‌ ಸಂಸ್ಥೆಯ ಧ್ಯೇಯವಾಗಿದೆ ಎಂದು ಕಚೇರಿ ಉದ್ಘಾಟನೆ ವೇಳೆ ಟಿಮ್ ಕುಕ್ (Tim Cook) ಹೇಳಿದರು. ಭಾರತವು ಅಂತಹ ಸುಂದರವಾದ ಸಂಸ್ಕೃತಿ ಮತ್ತು ನಂಬಲಾಗದ ಶಕ್ತಿಯನ್ನು ಹೊಂದಿದೆ. ಇಲ್ಲಿ ನಾವು ನಮ್ಮದೇ ದೀರ್ಘಕಾಲದ ಇತಿಹಾಸವನ್ನು ನಿರ್ಮಿಸಲು ಉತ್ಸುಕರಾಗಿದ್ದೇವೆ.  ನಮ್ಮ ಗ್ರಾಹಕರನ್ನು ಬೆಂಬಲಿಸುವುದರ ಜೊತೆ, ಸ್ಥಳೀಯ ಸಮುದಾಯಗಳಲ್ಲಿ ಹೂಡಿಕೆ ಮಾಡುವ ಉದ್ದೇಶವಿದೆ ಎಂದು ಕುಕ್ ಹೇಳಿದ್ದಾರೆ. 

ಆಪಲ್ ಪ್ರಕಾರ, ಭಾರತವು ಅಪ್ಲಿಕೇಶನ್ ಡೆವಲಪರ್‌ಗಳ ದೊಡ್ಡ ಸಮುದಾಯವನ್ನು ಹೊಂದಿದೆ ಹಾಗೂ ಈ ಕ್ಷೇತ್ರದಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗವಕಾಶವಿದೆ. ಕಂಪನಿಯು 2017 ರಿಂದ ಬೆಂಗಳೂರಿನಲ್ಲಿ iOS ಅಪ್ಲಿಕೇಶನ್ ವಿನ್ಯಾಸ (iOS App Design) ಮತ್ತು ಅಭಿವೃದ್ಧಿ ವೇಗವರ್ಧಕವನ್ನು ಹೊಂದಿದೆ.  ಆಪಲ್ ವಿಶ್ವದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲ್ಕಿ ಸಿಂಹ ಪಾಲನ್ನೇ ಹೊಂದ್ದಿದ್ದರೂ, ಅದರ ಜನ ಸಾಮಾನ್ಯರ ಕೈಗೆಟುಕದ ಬೆಲೆಗಳಿಂದಾಗಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೇವಲ 3% ಪಾಲನ್ನು ಹೊಂದಿದೆ. ಆದ್ದರಿಂದ ಭಾರತದಲ್ಲಿ ತನ್ನದೇ ಆಪಲ್ ಸ್ಟೋರ್ ಅನ್ನು ತೆರೆದು ಗ್ರಾಹಕರನ್ನು ತನ್ನತ್ತ ಸೆಳೆಯಲು ಆಪಲ್ ಸಜ್ಜಾಗಿದೆ.

ಚಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಭಿವೃದ್ಧಿ ಸ್ಥಗಿತಕ್ಕೆ ಜಾಗತಿಕ ಗಣ್ಯರ ಕೂಗು

Maharashtra | Apple's first India store set to open in Mumbai's Bandra Kurla Complex (BKC) today. People stand in queues outside the store before its opening. pic.twitter.com/vISeWrwSTD

— ANI (@ANI)

 

click me!