ಮೊದಲ ಮೊಬೈಲ್‌ ಕರೆಗೆ 50 ವರ್ಷ ಪೂರ್ಣ: ಪ್ರತಿಸ್ಪರ್ಧಿ ಕಂಪನಿ ಸಿಬ್ಬಂದಿಗೆ ಫಸ್ಟ್‌ ಕಾಲ್‌ ಮಾಡಿದ್ದ ಕೂಪರ್‌

By Kannadaprabha NewsFirst Published Apr 4, 2023, 11:21 AM IST
Highlights

ಇಂದು ಜಗತ್ತನ್ನೇ ಆವರಿಸಿರುವ ಮೊಬೈಲ್‌ನ ಮೊದಲ ಕರೆಗೆ ಏ.3ರ ಸೋಮವಾರ 50 ವರ್ಷ ತುಂಬಿದೆ. ಮೊಬೈಲ್‌ ಅವಿಷ್ಕರಿಸಿದ ಮಾರ್ಟಿನ್‌ ಕೂಪರ್‌ 1973ರ ಏ.3 ರಂದು ವಿಶ್ವದ ಮೊದಲ ಮೊಬೈಲ್‌ ಕರೆ ಮಾಡುವ ಮೂಲಕ ತಮ್ಮ ಸಂಶೋಧನೆಯನ್ನು ಯಶಸ್ವಿಗೊಳಿಸಿದ್ದರು.

ನವದೆಹಲಿ: ಇಂದು ಜಗತ್ತನ್ನೇ ಆವರಿಸಿರುವ ಮೊಬೈಲ್‌ನ ಮೊದಲ ಕರೆಗೆ ಏ.3ರ ಸೋಮವಾರ 50 ವರ್ಷ ತುಂಬಿದೆ. ಮೊಬೈಲ್‌ ಅವಿಷ್ಕರಿಸಿದ ಮಾರ್ಟಿನ್‌ ಕೂಪರ್‌ 1973ರ ಏ.3 ರಂದು ವಿಶ್ವದ ಮೊದಲ ಮೊಬೈಲ್‌ ಕರೆ ಮಾಡುವ ಮೂಲಕ ತಮ್ಮ ಸಂಶೋಧನೆಯನ್ನು ಯಶಸ್ವಿಗೊಳಿಸಿದ್ದರು. ಮೋಟೋರೋಲಾ ಕಂಪನಿಯಲ್ಲಿ (Motorola company) ಉದ್ಯೋಗಿಯಾಗಿದ್ದ ಕೂಪರ್‌, ನ್ಯೂಯಾರ್ಕ್‌ನ ರಸ್ತೆಯೊಂದಲ್ಲಿ ಸಂಚರಿಸುತ್ತಾ ತಮ್ಮ ಪ್ರತಿಸ್ಪರ್ಧಿ ಕಂಪನಿಯ ಉದ್ಯೋಗಿಗೆ ಕರೆ ಮಾಡಿ, ತಮ್ಮ ಕಂಪನಿ ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯಬಹುದಾದ ಮೊಬೈಲ್‌ ಅವಿಷ್ಕರಿಸಿರುವ ಶಾಕಿಂಗ್‌ ನ್ಯೂಸ್‌ ನೀಡಿದ್ದರು.

2011ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ವಿಶ್ವದ ಮೊದಲ ಐತಿಹಾಸಿಕ ಕರೆಯ ಬಗ್ಗೆ ಮಾತನಾಡಿದ್ದ ಮಾರ್ಟಿನ್‌ ಕೂಪರ್‌, ಆ ಸಮಯದಲ್ಲಿ ನಾನು, ಡೈನಾಮಿಕ್‌ ಅಡಾಪ್ಟಿವ್‌ ಟೋಟಲ್‌ ಏರಿಯಾ ಕವರೇಜ್‌ ( Dynamic Adaptive Total Area Coverage) ಯೋಜನೆಯಡಿ ಪೋರ್ಟಬಲ್‌ ಸೆಲ್‌ಫೋನ್‌ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದೆ. ಬೆಲ್‌ ಲ್ಯಾಬರೋಟರೀಸ್‌ ನಮ್ಮ ಪ್ರತಿಸ್ಪರ್ಧಿ ಸಂಸ್ಥೆಯಾಗಿತ್ತು. ಜೋಯಲ್‌ ಏಂಗಲ್‌ ಎಂಬ ಪ್ರತಿಸ್ಪರ್ಧಿ ಸಂಸ್ಥೆಯ ವ್ಯಕ್ತಿಯೊಂದಿಗೆ ನಾನು ನನ್ನ ಮೊದಲ ಮೊಬೈಲ್‌ ಕರೆ ಮಾಡಿದೆ. ಈ ವೇಳೆ, ‘ಜೋಯಲ್‌, ಇದು ಮಾರ್ಟಿ. ನಾನು ನಿಮಗೆ ಸೆಲ್‌ಫೋನ್‌ನಿಂದ ಕರೆ ಮಾಡುತ್ತಿದ್ದೇನೆ. ನಿಜವಾದ ಹ್ಯಾಂಡ್‌ಹೆಲ್ಡ್‌ ಪೋರ್ಟೇಬಲ್‌ ಸೆಲ್‌ಫೋನ್‌’ ಎಂದೆ. ಆಗ ಆ ಕಡೆಯಲ್ಲಿ ಮೌನವಿತ್ತು. ಆಗ ಆ ವ್ಯಕ್ತಿ ಹಲ್ಲುಕಡಿಯುತ್ತಿದ್ದನು ಎಂಬುದು ನನಗೆ ಅನುಮಾನ ಎಂದು ಕೂಪರ್‌ ಹಾಸ್ಯವಾಗಿ ಹೇಳಿದ್ದರು.

Moto G53 5G: ಅಗ್ಗದ ಮೊಟೊ ಜಿ53 5ಜಿ ಫೋನ್ ಲಾಂಚ್, ಬೆಲೆ ಎಷ್ಟು?

ಹೀಗಿತ್ತು ಮೊದಲ ಮೊಬೈಲ್‌

ಸುಮಾರು 1 ಕೇಜಿಗಿಂತ ಅಧಿಕ ತೂಕವಿದ್ದ ಈ ಮೊಬೈಲ್‌, ಒಟ್ಟು 25 ನಿಮಿಷಗಳ ಕಾಲ ಮಾತನಾಡಬಲ್ಲಷ್ಟು ಬ್ಯಾಟರಿ ಶಕ್ತಿ ಹೊಂದಿತ್ತು. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು 10 ಗಂಟೆ ಸಮಯ ಬೇಕಾಗಿತ್ತು. ಈ ಮೊಬೈಲ್‌ಗಳು ಮಾರುಕಟ್ಟೆಗೆ ಬರಲು ಸುಮಾರು 10 ವರ್ಷಗಳ ಕಾಲ ಬೇಕಾಯಿತು. ಡೈನಾ ಟಿಎಸಿ 8000 ಎಕ್ಸ್‌ ಅನ್ನು 1983ರಲ್ಲಿ 2,78,000 ರು. ಗಳಿಗೆ ಮಾರಾಟ ಮಾಡಲಾಗುತ್ತಿತ್ತು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸಿರೀಸ್ 24 ಗಂಟೆಯಲ್ಲಿ 1.4 ಲಕ್ಷ ಬುಕಿಂಗ್ ದಾಖಲೆ!

click me!