ಕೇಂದ್ರಕ್ಕೆ ಮನಸೋತ ಸ್ಯಾಮ್ಸಂಗ್; ವಿಯೆಟ್ನಾಂನಿಂದ ಇಂಡಿಯಾ ಕಡೆಗೆ 3 ಲಕ್ಷ ಕೋಟಿ ರೂ. ಹೆಜ್ಜೆ

By Suvarna News  |  First Published Aug 17, 2020, 8:25 PM IST

ಭಾರತದಲ್ಲಿ ಸ್ಮಾರ್ಟ್ ಪೋನ್ ದಿಗ್ಗಜ ಸ್ಯಾಮ್ ಸಂಗ್  ಹೊಸ ಹೆಜ್ಜೆ/ ಕೇಂದ್ರ ಸರ್ಕಾರದ ಯೋಜನೆಗೆ ಆಸಕ್ತಿ/ ಮುಂದಿನ ಐದು ವರ್ಷಗಳ ಯೋಜನೆ/ 22  ಕಂಪನಿಗಳಿಂದ ಪ್ರಸ್ತಾವನೆ


ನವದೆಹಲಿ (ಆ. 17) ಕ್ಯಾತೆ ತೆಗೆದಿದ್ದ ಚೀನಾಕ್ಕೆ ಕೇಂದ್ರ ಸರ್ಕಾರ ಒಂದಾದ ಮೇಲೆ  ಒಂದು ರೀತಿ ಬುದ್ಧಿ ಕಲಿಸಿದೆ.  ಸ್ಮಾರ್ಟ್ ಪೋನ್ ದಿಗ್ಗಜ ಸ್ಯಾಮ್ ಸಂಗ್ ಭಾರತದಲ್ಲಿ ಹೊಸ ಹೆಜ್ಜೆ ಇಡಲಿದೆ. 

ಭಾರತದಲ್ಲಿ 40  ಬಿಲಿಯನ್ ಡಾಲರ್( ಮೂರು ಲಕ್ಷ ಕೋಟಿ ರೂ.) ಮೊತ್ತದ ಡಿವೈಸ್ ಉತ್ಪಾದನೆಗೆ ಸ್ಯಾಮ್ ಸಂಗ್ ಮುಂದಾಗಿದೆ.   ಕೇಂದ್ರ ಸರ್ಕಾರ ಪಿಎಲ್‌ಐ (Production Linked Incentive Scheme) ಯೋಜನೆ ಅಡಿಯಲ್ಲಿ ಈ ಉತ್ಪಾದನೆ ಆರಂಭವಾಗಲಿದೆ.

Tap to resize

Latest Videos

undefined

ವಿಯೆಟ್ನಾಂನಿಂದ ಭಾರತದ ಕಡೆಗೆ ತನ್ನ ಉತ್ಪಾದನೆ ಬದಲಾಯಿಸುವ ಆಲೋಚನೆ ಸ್ಯಾಮ್ ಸಂಗ್ ಮಾಡಿದೆ. ಮುಂದಿನ ಐದು ವರ್ಷಗಳಿಗೆ ಸಂಬಂಧಿಸಿ ಉತ್ಪಾದನೆ ಮಾಡಲು ಸ್ಯಾಮ್ ಸಂಗ್ ಉತ್ಸುಕನಾಗಿದ್ದು ಕೇಂದ್ರ ಸರ್ಕಾರಕ್ಕೆ ಯೋಜನಯೆ ನೀಲನಕ್ಷೆ ನೀಡಿದೆ.  ಚೀನಾ ನಂತರ ವಿಯೆಟ್ನಾಂ ಜಗತ್ತಿನಲ್ಲಿಯೇ ಅತಿದೊಡ್ಡ ಸ್ಮಾರ್ಟ್ ಪೋನ್ ತಯಾರಕನಾಗಿ ಗುರುತಿಸಿಕೊಂಡಿದೆ.

ಬಂದರುಗಳಲ್ಲೆ ಕೊಳೆಯುತ್ತಿದೆ ಆಮದಾದ 21000 ಟಿವಿ ಸೆಟ್

ದೊಡ್ಡ ದೊಡ್ಡ ಕಂಪನಿಗಳು ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ 'ಉತ್ಪಾದನೆಗೆ ಪ್ರೋತ್ಸಾಹ'(Production Linked Incentive Scheme) ಯೋಜನೆಯಲ್ಲಿ ಆಸಕ್ತಿ ತೋರಿಸಿವೆ.  ಈ ಯೋಜನೆ 2020 ರ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ.  ಸ್ಮಾರ್ಟ್ ಪೋನ್ ತಯಾರಿಕೆಗೆ ಬೇಕಾಗುವ ಎಲ್ಲ ಸವಲತ್ತುಗಳನ್ನು ಕಂಪನಿಗಳಿಗೆ ಕೇಂದ್ರ ಕೊಡಮಾಡುತ್ತದೆ. ಉತ್ಪಾದನೆ ಆಧಾರದಲ್ಲಿ ಇನ್ಸೆಟಿವ್ ನೀಡಲಾಗುತ್ತದೆ.

ಸ್ಯಾಮ್ ಸಂಗ್‌, ಪೋಕ್ಸೋನ್ ಹೊನ್ ಹೈ, ರೈಸಿಂಗ್ ಸ್ಟಾರ್, ವಿಸ್ಟ್ರೋನ್, ಪೆಗಾರ್ಟೋನ್ ಸೇರಿದಂತೆ  22  ಕಂಪನಿಗಳು ಈ ಬಗೆಯ ಯೋಜನೆಯಲ್ಲಿ ಆಸಕ್ತಿ ತಾಳಿವೆ.  ಲಾವಾ, ಡಿಕ್ಸೋನ್ ಟೆಕ್ನಾಲಜೀಸ್, ಮೈಕ್ರೋಮ್ಯಾಕ್ಸ್, ಪಡ್ ಜೆಟ್ ಎಲೆಕ್ಟ್ರಾನಿಕ್ಸ್, ಸೋಜೋ, ಆಪ್ಟಿಮಸ್  ಸರಿದಂತೆ ಭಾರತೀಯ ಕಂಪನಿಗಳು ಒಂದೊಂದೆ ಹೆಜ್ಜೆ ಇಟ್ಟಿವೆ.

ವಿವಿಧ ಕಂಪನಿಗಳಿಂದ 11.5  ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆ ಪ್ರಸ್ತಾವನೆ ನಮಗೆ ಸಿಕ್ಕಿದೆ. ಮುಂದಿನ ಐದು ವರ್ಷದಲ್ಲಿ ಕಂಪನಿಗಳು ಭಾರತೀಯರೊಂದಿಗೆ ಸೇರಿ ಮೊಬೈಲ್ ಉತ್ಪಾದನೆ ಮಾಡಲಿವೆ  ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

click me!