ಸ್ಯಾಮ್‌ಸಂಗ್ ಹೊಚ್ಚ ಹೊಸ ಫೋಲ್ಡೇಬಲ್ ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಮಡಚಿ-ತೆರೆಯುವ ತಂತ್ರಜ್ಞಾನ ಹೊಂದಿದೆ. GALAXY Z FLIP5 ಮತ್ತು GALAXY Z FOLD5 ಎರಡು ಫೋನ್ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಬೆಂಗಳೂರು(ಜು.27): ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಇಂದು ಐದನೇ ತಲೆಮಾರಿನ GALAXY ಫೋಲ್ಡೇಬಲ್ GALAXY Z FLIP5 ಮತ್ತು GALAXY Z FOLD5 ಬಿಡುಗಡೆ ಮಾಡಿದೆ. ಈ ಉದ್ಯಮದ ಮುಂಚೂಣಿಯ ವಿನ್ಯಾಸಗಳು ಪ್ರತಿ ಬಳಕೆದಾರರಿಗೂ ತೆಳು ಮತ್ತು ಕಿರಿದಾದ ವಿನ್ಯಾಸಗಳು, ಅಸಂಖ್ಯ ಕಸ್ಟಮೈಸೇಷನ್ ಆಯ್ಕೆಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯೊಂದಿಗೆ ವಿಶಿಷ್ಟ ಅನುಭವಗಳನ್ನು ನೀಡುತ್ತದೆ. ಹೊಸ ಫ್ಲೆಕ್ಸ್ ಹಿಂಜ್ ಮಡಚಬಲ್ಲ ಅನುಭವವನ್ನು ಸಾಧ್ಯವಾಗುವಂತೆ ಮಾಡುತ್ತದೆ. ಅತ್ಯುತ್ತಮ ಕ್ಯಾಮರಾ ಸಾಮರ್ಥ್ಯಗಳಾದ ಫ್ಲೆಕ್ಸಿ ಕ್ಯಾಮ್ ಸೇರಿದಂತೆ ಹಲವು ಫೀಚರ್ಸ್ ಈ ಫೋನ್‌ನಲ್ಲಿದೆ. ಸದೃಢ ಕಾರ್ಯಕ್ಷಮತೆ ಮತ್ತು ಗರಿಷ್ಠಗೊಳಿಸಿದ ಬ್ಯಾಟರಿಯು ಅತ್ಯಾಧುನಿಕ ಸ್ನಾಪ್ ಡ್ರಾಗನ್ 8 ಜೆನ್ 2 ಮೊಬೈಲ್ ಪ್ಲಾಟ್ ಫೋನ್ ಹೊಂದಿದೆ.
ಸ್ಯಾಮ್ ಸಂಗ್ ಮೊಬೈಲ್ ಉದ್ಯಮವನ್ನು ತಮ್ಮ ಫೋಲ್ಡಬಲ್ಸ್ ಮೂಲಕ ಹೊಸ ಕ್ರಾಂತಿ ಮಾಡಿದೆ. ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡುತ್ತಿದೆ ಎಂದು ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಟಿ.ಎಂ.ರೊಹ್ ಹೇಳಿದ್ದಾರೆ. ಪ್ರತಿನಿತ್ಯ ಹೆಚ್ಚು ಜನರು ನಮ್ಮ ಫೋಲ್ಡೇಬಲ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬೇರೆ ಯಾವುದೇ ಡಿವೈಸ್ ನಲ್ಲಿ ಪಡೆಯಲಾಗದ ಅನುಭವ ಒದಗಿಸುತ್ತವೆ. GALAXY Z FLIP5 ಮತ್ತು GALAXY Z FOLD5 ಹೊಚ್ಚಹೊಸ ಡಿವೈಸ್ ಗಳಾಗಿದ್ದು ಅವು ಆವಿಷ್ಕಾರಕ ತಂತ್ರಜ್ಞಾನದ ಮೂಲಕ ನಮ್ಮ ಗ್ರಾಹಕರ ಅಗತ್ಯವನ್ನು ಪೂರೈಸಲು ನಮ್ಮ ಬದ್ಧತೆಯನ್ನು ಸಾಬೀತುಪಡಿಸಿವೆ ಎಂದರು.
ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ನಲ್ಲಿ ಈಗ ಆಧಾರ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಸುಲಭ!
GALAXY Z FLIP5 ಮತ್ತು GALAXY Z FOLD5 ಐಪಿಎಕ್ಸ್8 ಬೆಂಬಲದಿಂದ ಹೆಚ್ಚು ಬಾಳಿಕೆ ಬರುವಂಥದ್ದಾಗಿದ್ದು ನೀರಿನಿಂದ ರಕ್ಷಣೆ, ಆರ್ಮರ್ ಅಲ್ಯುಮಿನಿಯಂ ಫ್ರೇಮ್ಸ್ ಮತ್ತು ಹಾನಿಯಿಂದ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ.
GALAXY Z FLIP5 ಹೊಸ ಫ್ಲೆಕ್ಸ್ ವಿಂಡೋದೊಂದಿಗೆ ಬಂದಿದ್ದು ಅದು 3.78 ಪಟ್ಟು ಹಿಂದಿನ ಆವೃತ್ತಿಗಿಂತ ದೊಡ್ಡದಾಗಿದೆ. ಇದು ಸ್ಯಾಮ್ ಸಂಗ್ GALAXY ಸ್ಮಾರ್ಟ್ ಫೋನ್ ನಲ್ಲಿ ಅತ್ಯಂತ ವೈವಿಧ್ಯಮಯ ಕ್ಯಾಮರಾ ಅನುಭವ ನೀಡುತ್ತದೆ. ಬಳಕೆದಾರರು ರಿಯರ್ ಕ್ಯಾಮರಾದಲ್ಲಿ ಉನ್ನತ ಗುಣಮಟ್ಟದ ಸೆಲ್ಫೀಗಳನ್ನು ಸೆರೆ ಹಿಡಿಯಬಹುದು ಮತ್ತು ಫ್ಲೆಕ್ಸಿಕ್ಯಾಮ್ ನಿಂದ ಅತ್ಯಾಕರ್ಷಕ ಹ್ಯಾಂಡ್ಸ್-ಫ್ರೀ ಫೋಟೋಗಳನ್ನು ಸೆರೆ ಹಿಡಿಯಬಹುದು. ಸುಧಾರಿತ ನೈಟೊಗ್ರಫಿ ಸಾಮರ್ಥ್ಯಗಳು ಫೋಟೋಗಳು ಮತ್ತು ವಿಡಿಯೋಗಳನ್ನು ಸುತ್ತಲಿನ ಬೆಳಕಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಉತ್ತಮಗೊಳಿಸುತ್ತದೆ. ದೂರದಿಂದಲೂ ಫೋಟೋಗಳು ಡಿಜಿಟಲ್ 10ಎಕ್ಸ್ ಝೂಮ್ ನಿಂದ ಅತ್ಯಂತ ಸ್ಪಷ್ಟವಾಗಿರುತ್ತವೆ.
GALAXY ಝಡ್ ಫೋಲ್ಡ್ 5 ತಲ್ಲೀನಗೊಳಿಸುವ, ದೊಡ್ಡ ಸ್ಕ್ರೀನ್ ಮತ್ತು ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಅತ್ಯಂತ ತೆಳು ಮತ್ತು ಹಗುರ ಮಡಚುವಿಕೆಯಲ್ಲಿ ನೀಡುತ್ತದೆ. GALAXY Z FOLD5 ಎಲ್ಲಿಗಾದರೂ ಕೊಂಡೊಯ್ಯುವುದು ಸುಲಭವಾಗಿದ್ದು GALAXY ಝಡ್ ಸೀರೀಸ್ ನಲ್ಲಿ ಅತ್ಯಂತ ಶಕ್ತಿಯುತ ಕಾರ್ಯಕ್ಷಮತೆ ನೀಡುತ್ತದೆ. GALAXY ಝ್ ಫೋಲ್ಡ್ ಪ್ರತಿನಿತ್ಯದ ಉತ್ಪಾದಕತೆಯನ್ನು ಸದೃಢ, ದೊಡ್ಡ ಸ್ಕ್ರೀನ್ ಅನುಭವದ ಮೂಲಕ ಪರಿವರ್ತಿಸುವಲ್ಲಿ ಮುಂಚೂಣಿಯಲ್ಲಿದ್ದು ಮಲ್ಟಿ ವಿಂಡೋ ಮತ್ತು ಆಪ್ ಮುಂದುವರಿಕೆಯಿಂದ ವಿಕಾಸಗೊಂಡಿದ್ದು ಟಾಸ್ಕ್ ಬಾರ್, ಡ್ರ್ಯಾಗ್ ಅಂಡ್ ಡ್ರಾಪ್ ಮತ್ತು ಮೂರನೇ ಪಕ್ಷದ ಆಪ್ ಗಳ ಆಪ್ಟಿಮೈಸೇಷನ್ ನಂತಹ ವಿಶೇಷತೆಗಳನ್ನು ಹೊಂದಿದೆ. ಎಸ್ ಪೆನ್ ಅನ್ನು GALAXY ಝಡ್ ಫೋಲ್ಡ್5ನಲ್ಲಿ ಉನ್ನತ ಬರೆಯುವ ಅನುಭವ ನೀಡುವಂತೆ ಉತ್ತಮಪಡಿಸಲಾಗಿದೆ. ಈ ವಿಶೇಷತೆಗಳು ಮತ್ತು ಸಾಧನಗಳು ಒಟ್ಟಿಗೆ ಬರುವ ಮೂಲಕ ದೊಡ್ಡ ಸ್ಕ್ರೀನ್ ನಲ್ಲಿ ಶಕ್ತಿಯುತ ಉತ್ಪಾದಕತೆ ನೀಡುತ್ತವೆ ಮತ್ತು ಬಳಕೆದಾರರಿಗೆ ಎಲ್ಲಿಂದಲೇ ಆದರೂ ಅವರ ಪ್ರಮುಖ ಕೆಲಸಗಳನ್ನು ಪೂರೈಸಲು ಸನ್ನದ್ಧವಾಗಿಸುತ್ತವೆ.
ನೋ ಶೇಕ್ ಕ್ಯಾಮೆರಾ, ಸುದೀರ್ಘ ಬಾಳಿಕೆ ಬ್ಯಾಟರಿ; ಸ್ಯಾಮ್‌ಸಂಗ್ Galaxy F54 5G ಫೋನ್ ಬಿಡುಗಡೆ!
ಬಳಕೆದಾರರಿಗೆ ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ದೊಡ್ಡ GALAXY ಸ್ಮಾರ್ಟ್ ಫೋನ್ ಸ್ಕ್ರೀನ್ ನಲ್ಲಿ ನೀಡುವ ನಿಟ್ಟಿನಲ್ಲಿ ಸ್ನಾಪ್ ಡ್ರಾಗನ್ 8 ಜೆನ್ 2 ಮೊಬೈಲ್ ಪ್ಲಾಟ್ ಫಾರಂ ಫಾರ್ GALAXY ಗ್ರಾಫಿಕ್ಸ್ ಅನ್ನು ಉನ್ನತೀಕರಿಸುತ್ತದೆ ಮತ್ತು ಎಐ ಬಳಸುವ ಮೂಲಕ ಡೈನಮಿಕ್ ಗೇಮಿಂಗ್ ಮತ್ತು ಮಲ್ಟಿ-ಗೇಮ್ ಕಾರ್ಯ ನೀಡುತ್ತದೆ. GALAXY Z FOLD5 ಅನುಕೂಲಕರವಾಗಿ ಮ್ಯಾರಥಾನ್ ಗೇಮಿಂಗ್ ಸೆಷನ್ ಗಳನ್ನು ನಿರ್ವಹಿಸಲು ಅವಕಾಶ ನೀಡುತ್ತದೆ,
ಅದರ ಸುಧಾರಿತ ಕೂಲಿಂಗ್ ಸಿಸ್ಟಂ ಬಿಸಿಯನ್ನು ಹೆಚ್ಚು ಜಾಣ್ಮೆಯಿಂದ ಹೊರ ಹಾಕುವ ಮೂಲಕ ಮಂದಗತಿಯನ್ನು ಕಡಿಮೆ ಮಾಡುತ್ತದೆ ಮತ್ತು ಕಾರ್ಯಕ್ಷಮತೆ ಕುಸಿಯದಂತೆ ನೋಡಿಕೊಳ್ಳುತ್ತದೆ.