ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌ 24 ಸೀರಿಸ್‌ ಫೋನ್‌ ತಗೊಳ್ಭೇಕಾ? 10 ನಿಮಿಷದೊಳಗೆ ನಿಮ್ಮ ಮನೆಗೇ ಬರುತ್ತೆ ನೋಡಿ..!

By BK AshwinFirst Published Jan 25, 2024, 2:57 PM IST
Highlights

ಸ್ಯಾಮ್‌ಸಂಗ್ ಈಗ ಭಾರತದಲ್ಲಿ ತನ್ನ ಗ್ಯಾಲಕ್ಸಿ S24 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮನೆಗೇ ಡೆಲಿವರಿ ಮಾಡಲು ಝೊಮ್ಯಾಟೋ ಮಾಲೀಕತ್ವದ ತ್ವರಿತ-ವಾಣಿಜ್ಯ ಪ್ಲಾಟ್‌ಫಾರ್ಮ್ ಬ್ಲಿಂಕಿಟ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಪ್ರಮುಖ ಗ್ಯಾಲಕ್ಸಿ ಎಸ್ - ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ದೇಶದಲ್ಲಿ Samsung Galaxy S24, Galaxy S24+ ಮತ್ತು Galaxy S24 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. 

ಇನ್ನು, ಸ್ಯಾಮ್‌ಸಂಗ್ ಈಗ ಭಾರತದಲ್ಲಿ ತನ್ನ ಗ್ಯಾಲಕ್ಸಿ S24 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮನೆಗೇ ಡೆಲಿವರಿ ಮಾಡಲು ಝೊಮ್ಯಾಟೋ ಮಾಲೀಕತ್ವದ ತ್ವರಿತ-ವಾಣಿಜ್ಯ ಪ್ಲಾಟ್‌ಫಾರ್ಮ್ ಬ್ಲಿಂಕಿಟ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಹಾಗೂ, ಕಂಪನಿಯು 10 ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದಾಗಿ ಭರವಸೆ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ಆರ್ಡರ್: ನಕಲಿ ಬ್ಯಾಟರಿಯೊಂದಿಗೆ ದೋಷಯುಕ್ತ ಫೋನ್ ಡೆಲಿವರಿ!

ದೆಹಲಿ-ಎನ್‌ಸಿಆರ್, ಬೆಂಗಳೂರು ಮತ್ತು ಮುಂಬೈನಲ್ಲಿರುವ ಗ್ರಾಹಕರು ಬ್ಲಿಂಕಿಟ್‌ನಲ್ಲಿ Galaxy S24 Ultra, Galaxy S24+ ಮತ್ತು Galaxy S24 ಸ್ಮಾರ್ಟ್‌ಫೋನ್‌ಗಳನ್ನು ಆರ್ಡರ್ ಮಾಡಬಹುದು. ಮತ್ತು 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಫೋನ್ ಡೆಲಿವರಿ ಮಾಡಬಹುದು. ಈ ಮಧ್ಯೆ ಬ್ಲಿಂಕಿಟ್‌ನಲ್ಲಿ Galaxy S24 ಸೀರಿಸ್ ಖರೀದಿಸುವ ಗ್ರಾಹಕರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 5,000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದೂ ತಿಳಿದುಬಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌ 24 ಸರಣಿಯ ಬೆಲೆ
* ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 8GB + 256GB: ರೂ 79,999
* ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 8GB + 512GB: ರೂ 89,999
* ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24+ 12GB + 256GB: ರೂ 99,999
*ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24+ 12GB + 512GB: ರೂ 1,09,999
* ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ 12GB + 256GB: ರೂ 1,29,999
* ಸ್ಯಾಮ್ಸಂಗ್ ಗ್ಯಾಲಕ್ಸಿ  S24 ಅಲ್ಟ್ರಾ 12GB + 512GB: ರೂ 1,39,999
* ಸ್ಯಾಮ್ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ 12GB + 1TB: ರೂ 1,59,999

ಸ್ಯಾಮ್‌ಸಂಗ್ 13 ವರ್ಷಗಳ ಪ್ರಾಬಲ್ಯ ಅಂತ್ಯ: ಜಗತ್ತಿನ ನಂ. 1 ಸ್ಮಾರ್ಟ್‌ಫೋನ್‌ ತಯಾರಕ ಎನಿಸಿಕೊಂಡ ಆ್ಯಪಲ್

ಸ್ಯಾಮ್ಸಂಗ್ ಗ್ಯಾಲಕ್ಸಿ  S24 ಸರಣಿಯ ವೈಶಿಷ್ಟ್ಯಗಳು
ಸ್ಯಾಮ್ಸಂಗ್ ಗ್ಯಾಲಕ್ಸಿ S24 ಸರಣಿಯು ಲೈವ್ ಟ್ರಾನ್ಸ್‌ಲೇಟ್, ಇಂಟರ್‌ಪ್ರೆಟರ್, ಚಾಟ್ ಅಸಿಸ್ಟ್, ನೋಟ್ ಅಸಿಸ್ಟ್ ಮತ್ತು ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸ್ಯಾಮ್ಸಂಗ್ ಕೀಬೋರ್ಡ್‌ನಲ್ಲಿ ಬಿಲ್ಟ್‌ ಮಾಡಲಾದ AI ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ನೈಜ ಸಮಯದಲ್ಲಿ ಸಂದೇಶಗಳನ್ನು ಅನುವಾದಿಸುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ S24 ಗೆಸ್ಚರ್ ಚಾಲಿತ 'ಸರ್ಕಲ್ ಟು ಸರ್ಚ್ ವೈಶಿಷ್ಟ್ಯ'ದೊಂದಿಗೆ ಬರುತ್ತದೆ. ಸಹಾಯಕವಾದ, ಉತ್ತಮ ಗುಣಮಟ್ಟದ ಹುಡುಕಾಟ ಫಲಿತಾಂಶಗಳನ್ನು ನೋಡಲು ಬಳಕೆದಾರರು ಗ್ಯಾಲಕ್ಸಿ S24 ನ ಪರದೆಯ ಮೇಲೆ ಸರ್ಕಲ್‌ ಮಾಡಿ, ಹೈಲೈಟ್ ಮಾಡಬಹುದು, ಬರೆಯಬಹುದು ಅಥವಾ ಟ್ಯಾಪ್ ಮಾಡಬಹುದು. ಸ್ಯಾಮ್‌ಸಂಗ್ 7 ಜನರೇಷನ್‌ನ ಓಎಸ್ ನವೀಕರಣಗಳನ್ನು ಮತ್ತು 7 ವರ್ಷಗಳ ಭದ್ರತಾ ನವೀಕರಣಗಳನ್ನು ಸ್ಮಾರ್ಟ್‌ಫೋನ್‌ಗಳಿಗೆ ನೀಡುವುದಾಗಿಯೂ ಭರವಸೆ ನೀಡಿದೆ.

ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಟೆಕ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸಿರೀಸ್ ಫೋನ್ ಲಾಂಚ್!

click me!