ಭಾರತದಲ್ಲಿ Samsung Galaxy S22 ಬೆಲೆ ರೂ72,999ನಿಂದ ಪ್ರಾರಂಭವಾಗುತ್ತದೆ ಹಾಗೂ Galaxy S22+ ಮತ್ತು Galaxy S22 ಅಲ್ಟ್ರಾ ಕ್ರಮವಾಗಿ ರೂ. 84,999 ಮತ್ತು ರೂ. 1,09,999 ಬೆಲೆಯಲ್ಲಿ ಲಭ್ಯವಿವೆ.
Tech Desk: Samsung Galaxy S22, Galaxy S22+, ಮತ್ತು Galaxy S22 Ultra ಸ್ಮಾರ್ಟ್‌ಫೋನ್‌ಗಳನ್ನು ಫೆಬ್ರವರಿ 17, ಗುರುವಾರದಂದು ಕಂಪನಿಯ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಹೋಸ್ಟ್ ಮಾಡಿದ ಲೈವ್‌ಸ್ಟ್ರೀಮ್ ಮೂಲಕ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಕಳೆದ ವಾರ Galaxy Unpacked 2022 ವರ್ಚುವಲ್ ಈವೆಂಟ್‌ನಲ್ಲಿ ಅನಾವರಣಗೊಂಡ Galaxy S22 ಸರಣಿಯು ಕಳೆದ ವರ್ಷದ Galaxy S21 ಮಾದರಿಗಳಿಗಿಂತ ನವೀಕರಣಗೊಂಡ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. Galaxy S22 Ultra, ಶ್ರೇಣಿಯಲ್ಲಿನ ಅತ್ಯಂತ ಪ್ರೀಮಿಯಂ ಮಾದರಿಯಾಗಿದ್ದು, Galaxy S ಸರಣಿಯಲ್ಲಿ Galaxy Note ತರಹದ ಅನುಭವವನ್ನು ನೀಡಲು ಸಂಯೋಜಿತ S Pen ಬೆಂಬಲವನ್ನು ನೀಡಲಾಗಿದೆ. Galaxy S22 ಶ್ರೇಣಿಯ ಭಾರತದ ಆವೃತ್ತಿಗಳು Qualcomm ನ Snapdragon 8 Gen 1 SoC ನೊಂದಿಗೆ ಬಿಡುಗಡೆಯಾಗಿವೆ.
ಭಾರತದಲ್ಲಿ Samsung Galaxy S22, Galaxy S22+ ಬೆಲೆ: ಭಾರತದಲ್ಲಿ Samsung Galaxy S22 ಬೆಲೆಯನ್ನು ಬೇಸ್ 8GB RAM + 256GB ಸ್ಟೋರೇಜ್ ರೂಪಾಂತರಕ್ಕಾಗಿ ರೂ.72,999ಗೆ ನಿಗದಿಪಡಿಸಲಾಗಿದೆ. ಫೋನ್ 8GB + 256GB ಮಾದರಿಯಲ್ಲಿಯೂ ಸಹ ಬರುತ್ತದೆ ಅದು ರೂ.76,999 ಬೆಲೆಯಲ್ಲಿ ಲಭ್ಯವಿದೆ.
undefined
Samsung Galaxy S22+ ಬೆಲೆ 8GB + 128GB ಮಾದರಿಗೆ 84,999 ಮತ್ತು 8GB + 256GB ಆಯ್ಕೆಗೆ ರೂ.88,999ನಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿ Samsung Galaxy S22 ಸರಣಿಯ ಲಭ್ಯತೆಯ ಕುರಿತು ವಿವರಗಳನ್ನು ಇನ್ನೂ ಘೋಷಿಸಲಾಗಿಲ್ಲ.
ಇದನ್ನೂ ಓದಿ: Samsung Unpacked 2022: iPad Proಗೆ ಟಕ್ಕರ್ ನೀಡಲಿದೆ ಹೊಸ Galaxy Tab S8 Ultra!
ಆದರೆ ಫೋನ್‌ಗಳು ಪ್ರಸ್ತುತ ಭಾರತದಲ್ಲಿ ಪೂರ್ವ ಕಾಯ್ದಿರಿಸುವಿಕೆಗೆ (Pre Order) ಲಭ್ಯವಿದೆ. Samsung Galaxy S22 ಮತ್ತು Galaxy S22+ ಭಾರತದಲ್ಲಿ ಗ್ರೀನ್, ಫ್ಯಾಂಟಮ್ ಬ್ಲಾಕ್ ಮತ್ತು ಫ್ಯಾಂಟಮ್ ವೈಟ್ ಬಣ್ಣಗಳಲ್ಲಿ ಲಭ್ಯವಿರಲಿದೆ.
Samsung Galaxy S22 specifications: Samsung Galaxy S22 Android 12 ನಲ್ಲಿ One UI 4.1 ಜೊತೆಗೆ ರನ್ ಆಗುತ್ತದೆ. ಫೋನ್ 6.1-ಇಂಚಿನ Full-HD+ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC, ಜೊತೆಗೆ 8GB RAM ಜೋಡಿಸಲಾಗಿದೆ.
Galaxy S22 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ, ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು f/1.8 ವೈಡ್-ಆಂಗಲ್ ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿದೆ. ಕ್ಯಾಮರಾ ಸೆಟಪ್ 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 10-ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರನ್ನು ಸಹ ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, Galaxy S22 ಮುಂಭಾಗದಲ್ಲಿ f/2.2 ಲೆನ್ಸ್ ಜತೆಗೆ 10-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕವನ್ನು ಹೊಂದಿದೆ.
ಇದನ್ನೂ ಓದಿ: Samsung Galaxy A53: ಬಿಡುಗಡೆ ಮುನ್ನವೇ ಸ್ಮಾರ್ಟ್‌ಫೋನ್ ಇಮೇಜ್, ವಿಶೇಷತೆಗಳ ಮಾಹಿತಿ ಸೋರಿಕೆ!
Samsung Galaxy S22 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. Samsung Galaxy S22 ಅನ್ನು 3,700mAh ಬ್ಯಾಟರಿಯೊಂದಿಗೆ ಪ್ಯಾಕ್ ಮಾಡಿದೆ ಅದು 25W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ ಇತರ ಸಾಧನಗಳನ್ನು ಚಾರ್ಜ್ ಮಾಡಲು ವೈರ್‌ಲೆಸ್ ಪವರ್‌ಶೇರ್‌ನೊಂದಿಗೆ ಫೋನ್ ಬರುತ್ತದೆ.
Samsung Galaxy S22+ Specifiactions: Samsung Galaxy S22+ ಹಾಗೂ ಸಾಮಾನ್ಯ Galaxy S22 ಹಲವು ಸಾಮ್ಯತೆಗಳನ್ನು ಹೊಂದಿವೆ. Samsung Galaxy S22+ ಕೂಡ ಆಂಡ್ರಾಯ್ಡ್ 12, ಸ್ನಾಪ್‌ಡ್ರಾಗನ್ 8 ಜನ್ 1 SoC ಆಧಾರಿತ ಅದೇ One UI 4.1 ಸ್ಕಿನ್ ಮತ್ತು ಅದೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿವೆ.
ಆದಾಗ್ಯೂ, Galaxy S22+ Galaxy S22 6.6-ಇಂಚಿನ Full-HD+ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ ಆದರೆ ರಿಫ್ರೆಸ ದರದಲ್ಲಿ ಕೊಂಚ ಬದಲಾಔಣೆ ಇದೆ. ಫೋನ್ Wi-Fi 6E ಜೊತೆಗೆ ಅಲ್ಟ್ರಾ-ವೈಡ್‌ಬ್ಯಾಂಡ್ (UWB) ಬೆಂಬಲದೊಂದಿಗೆ ಬರುತ್ತದೆ ಮತ್ತು 45W ವೈರ್ಡ್ ಚಾರ್ಜಿಂಗನ್ನು ಬೆಂಬಲಿಸುವ ದೊಡ್ಡ, 4,500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ - ಜೊತೆಗೆ 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಪವರ್‌ಶೇರ್ ಬೆಂಬಲ ಕೂಡ ಹೊಂದಿದೆ.