Smartphone ಒಪ್ಪೋ Reno7 ಸೀರಿಸ್ ಸ್ಮಾರ್ಟ್‌ಫೋನ್ ಬಿಡುಗಡೆ!

By Suvarna News  |  First Published Feb 4, 2022, 10:13 PM IST
  • ಎರಡು ಸ್ಮಾರ್ಟ್‌ಫೋನ್ ಬಿಡುಗಡೆ, ಹೊಸ ಸಂಚಲನ
  • ಆನ್‌ಲೈನ್ ಮತ್ತು ಪ್ರಮುಖ ರಿಟೇಲ್‌ನಲ್ಲಿ ಭರ್ಜರಿ ಆಫರ್
  •  ಒಪ್ಪೊ ರೆನೊ 7ಪ್ರೊ 5ಜಿ, ಒಪ್ಪೊ ರೆನೊ7  5ಜಿ ಬಿಡುಗಡೆ

ನವದೆಹಲಿ(ಫೆ.04):  ದೇಶದಲ್ಲಿ ಸ್ಮಾರ್ಟ್‌ಫೋನ್ ಬೇಡಿಕೆ ಹೆಚ್ಚಿರುವ ಕಾರಣ ಹೊಸ ಹೊಸ ಹಾಗೂ ಅತ್ಯಾಧುನಿಕ ಫೋನ್ ಬಿಡುಗಡೆ ಮಾಡುತ್ತಿದೆ. ಇದೀಗ ಪ್ರಮುಖ ಬ್ರ್ಯಾಂಡ್ ಒಪ್ಪೋ (OPPO), ಇದೀಗ ಒಪ್ಪೋ ರೆನೋ7 ಸೀರಿಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಒಪ್ಪೊ ರೆನೊ 7ಪ್ರೊ 5ಜಿ (OPPO Reno7  Pro 5G  ) ಮತ್ತು ಒಪ್ಪೊ ರೆನೊ7  5ಜಿ (OPPO Reno7  5G) ಸ್ಮಾರ್ಟ್ ಫೋನ್‌ ಬಿಡುಗಡೆ ಮಾಡಿದೆ.  ನೂತನ ಫೋನ್ ಬೆಲೆ 39,999 ರೂಪಾಯಿ.   Reno7  Pro 5G  ಆನ್‌ಲೈನ್ ಮತ್ತು ಪ್ರಮುಖ ರಿಟೇಲ್ ವ್ಯಾಪಾರಿಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.  ಆಲ್-ರೌಂಡರ್ Reno7  5G  ಫ್ಲಿಪ್‌ಕಾರ್ಟ್‌ನಲ್ಲಿ 28,999 ರೂಪಾಯಿಗೆ ಲಭ್ಯವಿದೆ.

ತನ್ನ ಈ ಮೊದಲಿನ ಸ್ಮಾರ್ಟ್ಫೋನ್‌ಗಳಂತೆ Reno 7  ಸರಣಿಯು ಸ್ಮಾರ್ಟ್ಫೋನ್ ಪೋಟ್ರೇಟ್ ಫೋಟೋಗ್ರಫಿ ಮತ್ತು ವಿಡಿಯೊಗ್ರಫಿಯಲ್ಲಿ ಹೊಸ ಮಾನದಂಡ ನಿಗದಿಪಡಿಸಿದೆ.  OPPO Reno7  Pro 32ಎಂಪಿ ಸೆಲ್ಫಿ ಕ್ಯಾಮೆರಾಗೆ IMX 709, RGBW  ಸೋನಿ ಮತ್ತು ಒಪ್ಪೊ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. Reno6 Pro ನಲ್ಲಿ ಕಂಡುಬರುವ ಸಾಂಪ್ರದಾಯಿಕ RGBW  ಸಂವೇದಕಕ್ಕೆ ಹೋಲಿಸಿದರೆ ಇದು ಬೆಳಕಿಗೆ ಶೇ 60 ರಷ್ಟು ಹೆಚ್ಚು ಸಂವೇದನಾಶೀಲವಾಗಿದೆ. ಶೇ 30ರಷ್ಟು ಕಡಿಮೆ ಶಬ್ದ ಮಾಡುತ್ತದೆ. ಇದರ ಹಿಂಬದಿ ಕ್ಯಾಮೆರಾ ಸೆಟಪ್ ಪ್ರಮುಖ ದರ್ಜೆಯ 50ಎಂಪಿ ಸೋನಿ ಐಎಂಎಕ್ಸ್ 766 ಸಂವೇದಕ ಒಳಗೊಂಡಿದೆ. ಹೆಚ್ಚುವರಿಯಾಗಿ, Reno7  ಸರಣಿ ಆರ್ಟಿಫಿಶಿಯಲ್ ಇಂಟೆಲೆಜೆನ್ಸಿ ಹೊಂದಿದೆ.

Tap to resize

Latest Videos

undefined

OnePlus 10 Ultra: ಒನ್‌ಪ್ಲಸ್ 10 ಪ್ರೊ ಬೆನ್ನಲ್ಲೇ ಅಲ್ಟ್ರಾ ಸ್ಮಾರ್ಟ್‌ಫೋನ್ ಲಾಂಚ್?

ಆರ್ಟಿಫಿಶಿಯಲ್ ಇಂಟೆಲೆಜೆನ್ಸಿ ಹೈಲೈಟ್ ವಿಡಿಯೊ
ದೃಶ್ಯದಲ್ಲಿ ಸುತ್ತಲೂ ಆವರಿಸಿರುವ ಬೆಳಕನ್ನು ಪತ್ತೆ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ಹೊಂದಾಣಿಕೆ ಮಾಡುತ್ತದೆ. ಅದರ 3ಡಿ ಎಲ್‌ಯುಟಿ  (3ಡೊ ಲುಕಪ್ ಟೇಬಲ್) ಕಲರ್-ಟ್ಯೂನಿಂಗ್ ಕ್ರಮಾಗತದ ಜೊತೆಗೆ, ಇದು ಚರ್ಮದ ಬಣ್ಣದ ಛಾಯೆ ಹೆಚ್ಚಿಸಲು ನಿಖರವಾದ ಬಣ್ಣ ಒದಗಿಸುತ್ತದೆ. ಪೋಟೊ ವೀಡಿಯೊಗಳಲ್ಲಿ ಸೆರೆಹಿಡಿದ ದೃಶ್ಯದ ವಿವರಗಳು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ.

OPPO Reno7  Pro 5G ತನಗಾಗಿ ಪ್ರತ್ಯೇಕವಾಗಿ ರೂಪಿಸಿರುವ 5G ಚಿಪ್‌ಸೆಟ್ ಮೀಡಿಯಾಟೆಕ್ ಡೈಮೆನ್ಸಿಟಿ 1200 ಮ್ಯಾಕ್ಸ್‌ನೊಂದಿಗೆ ಸ್ಮಾರ್ಟ್ಫೋನ್ ಕಾರ್ಯಕ್ಷಮತೆಯನ್ನು ಹೆಚ್ಚಿನ ಮಟ್ಟದಲ್ಲಿ ಒದಗಿಸುತ್ತದೆ. ಈ ಎಸ್‌ಒಸಿ ಪ್ಯಾಕ್ ಎಆರ್‌ಎಂ ಕಾರ್ಟೆಕ್ಸ್-ಎ78 ಕೋರ್ ಅನ್ನು ಶೇ 22ರಷ್ಟು ವೇಗದ ಸಿಪಿಯು ಕಾರ್ಯಕ್ಷಮತೆಯೊಂದಿಗೆ ಪ್ಯಾಕ್ ಮಾಡುತ್ತದೆ. ಹಿಂದಿನ ಪೀಳಿಗೆಯ ಸ್ಮಾರ್ಟ್ಫೋನ್‌ಗಳಿಗಿಂತ ಶೇ  25ರಷ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಮೀಡಿಯಾಟೆಕ್‌ನ ಓಪನ್ ರಿಸೋರ್ಸ್ ಆರ್ಕಿಟೆಕ್ಚರ್‌ಗೆ ಧನ್ಯವಾದ ಹೇಳಬೇಕಾಗುತ್ತದೆ. ಸ್ಮಾರ್ಟ್ಫೋನ್ ಕೈಯಲ್ಲಿ ಹಿಡಿದುಕೊಂಡಾಗ ಕೈಗಳು ಅಲುಗಾಡಿದಾಗ ಚಿತ್ರಗಳನ್ನು ಮಸುಕುಗೊಳಿಸದಿರುವ ಒಪ್ಪೊ ಸ್ವಾಮ್ಯದ ಕ್ರಮಾಗತವು ಸೆರೆಹಿಡಿಯುವ ಮುಖದ ತೀಕ್ಷಣತೆ ಹೆಚ್ಚಿಸುತ್ತದೆ. 

Smartphone Security: ಸೈಬರ್ ದಾಳಿಗೆ ಈಡಾಗದಂತೆ ಫೋನ್ ರಕ್ಷಿಸಿಕೊಳ್ಳುವುದು ಹೇಗೆ?

Reno7  5G ಮೀಡಿಯಾಟೆಕ್ ಡೈಮೆನ್ಸಿಟಿ 900  5G ಎಸ್‌ಒಸಿನಿಂದ ನಿರ್ವಹಿಸಲಾಗುವುದು. ಆದರೆ ಮೀಡಿಯಾಟೆಕ್ ಡೈಮೆನ್ಸಿಟಿ 1200  MAX ನಂತೆ  ಹೆಚ್ಚಿನ ಶಕ್ತಿ-ದಕ್ಷತೆಗಾಗಿ 6MA ಕಾರ್ಯನಿರ್ವಹಣೆ ಬಳಸಿ ನಿರ್ಮಿಸಲಾಗಿದೆ.  Reno7    ಸರಣಿಯು ಒಪ್ಪೊ ಸ್ವಾಮ್ಯದ ಆರ್‌ಎಎಂ ವಿಸ್ತರಣೆ ತಂತ್ರಜ್ಞಾನದೊಂದಿಗೆ ಬರುತ್ತದೆ. ಅದು ನಿಮಗೆ ಶೂನ್ಯ ಲ್ಯಾಗ್‌ನೊಂದಿಗೆ ಬಹು ಸ್ಮರಣೆ ಸಾಮರ್ಥ್ಯದ ಗರಿಷ್ಠ ಸಾಮರ್ಥ್ಯದ ಅಪ್ಲಿಕೇಷನ್‌ಗಳನ್ನು ಸುಲಭವಾಗಿ ಬಳಸಲು ಅನುಮತಿಸುತ್ತದೆ. ಇದರಿಂದ ನೀವು ವರ್ಧಿತ ಸಂಪರ್ಕವನ್ನು ಸಹ ಪಡೆಯುವಿರಿ.

ಈ ಸರಣಿಯು 65W ಸೂಪರ್‌ವಿಒಒಸಿ ಫ್ಲ್ಯಾಶ್ ಚಾರ್ಜಿಂಗ್ ಹೊಂದಿದೆ. ಇದು ಫೋನ್‌ನ 4500 MAH  ಬ್ಯಾಟರಿಯನ್ನು ಅರ್ಧ ಗಂಟೆಯೊಳಗೆ ಶೇ 100 ರಷ್ಟು ಚಾರ್ಜ್ ಆಗಲಿದೆ.  ಬಳಕೆದಾರರಿಗೆ 4 ಗಂಟೆಗಳ ಚಲನಚಿತ್ರ ವೀಕ್ಷಿಸಲು ಕೇವಲ 5 ನಿಮಿಷಗಳ ಚಾರ್ಜ್ ಸಾಕು. ತನ್ಮಯಗೊಳಿಸುವ ಗೇಮಿಂಗ್ ಅನುಭವಕ್ಕಾಗಿ, ಟಾಪ್-ಆಫ್-ಲೈನ್ ಎಕ್ಸ್-ಆ್ಯಕ್ಸಿಸ್ ಲೀನಿಯರ್ ಮೋಟರ್ ಸೇರಿಸಲಾಗಿದೆ.  ಸುಗಮ ಗೇಮಿಂಗ್ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳಲು ಅದಕ್ಕೆ ಅನುಗುಣವಾಗಿ ಸ್ಥಿರೀಕರಣ ಒದಗಿಸುತ್ತದೆ.

Reno7  Pro 5G  ಜೊತೆಗೆ ಗ್ರಾಹಕರು 256GB ಸಂಗ್ರಹಣೆ ಮತ್ತು12GB ರ‍್ಯಾಮ್ ಪಡೆಯುತ್ತಾರೆ. ಒಪ್ಪೊದ ರ‍್ಯಾಮ್ ವಿಸ್ತರಣೆ ತಂತ್ರಜ್ಞಾನವು ಬಳಕೆದಾರರಿಗೆ ಶೇಖರಣಾ ಸಾಮರ್ಥ್ಯದಿಂದ ಹೆಚ್ಚುವರಿ 3GB/5GB/7 GB ಎರವಲು ಪಡೆಯಲು ಅನುಮತಿಸುತ್ತದೆ, ಇದು ಅತ್ಯಂತ ಬೇಡಿಕೆಯ ಪರಿಸ್ಥಿತಿಗಳಲ್ಲಿ ರ‍್ಯಾಮ್ ಆಗಿ ಕಾರ್ಯನಿರ್ವಹಿಸುತ್ತದೆ. ಹೆವಿ ಡ್ಯೂಟಿ ಫೋಟೊ-ಎಡಿಟಿಂಗ್ ಅಥವಾ 3ಡಿ ಗೇಮಿಂಗ್‌ನಂತಹ ಆಧುನಿಕ ಸ್ಮಾರ್ಟ್ಫೋನ್ ಕಾರ್ಯಗಳನ್ನು ನಿರ್ವಹಿಸಲು Reno7  Pro 12GB ರ‍್ಯಾಮ್ ಅಗತ್ಯಕ್ಕಿಂತ ಹೆಚ್ಚಿಗೆ ಇರಲಿದೆ. 

click me!