Samsungನಿಂದ 3 ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ; ಏನು ವಿಶೇಷ? ಬೆಲೆ ಎಷ್ಟು?

By Web Desk  |  First Published Feb 28, 2019, 8:13 PM IST
  • ಭಾರತೀಯ ಮಾರುಕಟ್ಟೆಗೆ ಹೊಸ ಶ್ರೇಣಿಯ 3 ನೂತನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ Samsung
  • ಇಲ್ಲಿದೆ Samsung Galaxy A50, Galaxy A30, ಮತ್ತು Galaxy A10 ವಿಶೇಷತೆಗಳು ಮತ್ತು ಬೆಲೆ ವಿವರ
     

Samsungನ ಬಹುನಿರೀಕ್ಷಿತ  Galaxy A50, Galaxy A30, ಮತ್ತು Galaxy A10 ಮೊಬೈಲ್ ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಪದಾರ್ಪಣೆ ಮಾಡಿವೆ.

ಸ್ಯಾಮ್ಸಂಗ್ ಕಂಪನಿಯು Galaxy A ಎಂಬ ಹೊಸ ಶ್ರೇಣಿಯನ್ನು ಪರಿಚಯಿಸಿದ್ದು, ಸೂಪರ್ AMOLED ಪರದೆಯನ್ನು ಇದು ಹೊಂದಿದೆ. ಬಹು-ಕ್ಯಾಮೆರಾಗಳು ಮತ್ತು 4000mAh ಬ್ಯಾಟರಿ ಈ ಫೋನ್‌ಗಳ ವಿಶೇಷ.

Tap to resize

Latest Videos

ಬೆಲೆಗಳು: 

Samsung Galaxy A50:
ಭಾರತದಲ್ಲಿ, 4GB RAM/ 64GB ಸ್ಟೋರೆಜ್ ಇರುವ Samsung Galaxy A50 ಬೆಲೆ ₹19990 ಆಗಿದ್ದರೆ, 6GB RAM/ 64GB ಸ್ಟೋರೆಜ್ ಇರುವ ಆವೃತ್ತಿಯ ಬೆಲೆ ₹22990 ಆಗಿದೆ. ನೀಲಿ, ಬಿಳಿ, ಮತ್ತು ಕಪ್ಪು ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.

Samsung Galaxy A30:

ಸ್ಯಾಮ್ಸಂಗ್ ಬಿಡುಗಡೆ ಮಾಡಿರುವ ಇನ್ನೊಂದು ಫೋನ್  Galaxy A30. ಮಾರುಕಟ್ಟೆಯಲ್ಲಿ ಇದರ ಬೆಲೆ ₹16990 ಆಗಿದೆ. 

Samsung Galaxy A10:

ಮಾರುಕಟ್ಟೆಗೆ ಬಿಡುಗಡೆಯಾಗಿರುವ ಇನ್ನೊಂದು ಫೋನ್ Galaxy A10 ಬೆಲೆ ಬರೋಬ್ಬರಿ ₹8490 ಮಾತ್ರ! ಈ ಎರಡೂ ಫೋನ್ ಗಳು ಕೆಂಪು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ಮಾರಾಟ ಯಾವಾಗ?

Galaxy A50 ಮತ್ತು Galaxy A30 ಫೋನ್ ಗಳ ಮಾರಾಟ ಮಾ.02 ರಿಂದ ಆರಂಭವಾದರೆ, Galaxy A10 ಪೋನ್ ಮಾ.20 ರಿಂದ ಖರೀದಿಗೆ ಲಭ್ಯವಾಗಲಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಮತ್ತು ಜಿಯೋನಿಂದ ಗ್ರಾಹಕರಿಗೆ ಬಂಪರ್ ಕೊಡುಗೆ!

ಸ್ಪೆಸಿಫಿಕೇಶನ್ಸ್:

Samsung Galaxy A50, Galaxy A30, ಮತ್ತು Galaxy A10 - ಈ ಎಲ್ಲಾ ಫೋನ್ ಗಳು Android Pie  ಆಪರೇಟಿಂಗ್ ಸಿಸ್ಟಮ್ ಹೊಂದಿವೆ.

Samsung Galaxy A50:
Display: 6.40 ಇಂಚು
Resolution: 1080X2340 ಪಿಕ್ಸೆಲ್ಸ್
RAM: 4GB
ಮುಂಬದಿ ಕ್ಯಾಮೆರಾ: 25 MP
ಹಿಂಬದಿ ಕ್ಯಾಮೆರಾ: 25 MP +5 MP + 8 MP
OS: Android Pie
ಬ್ಯಾಟರಿ ಸಾಮರ್ಥ್ಯ: 4000 mAh
Storage: 64 GB

Samsung Galaxy A30:
Display: 6.40 ಇಂಚು
Resolution: 1080X2340 ಪಿಕ್ಸೆಲ್ಸ್
RAM: 4GB
ಮುಂಬದಿ ಕ್ಯಾಮೆರಾ: 16 MP
ಹಿಂಬದಿ ಕ್ಯಾಮೆರಾ: 16 MP+5 MP
OS: Android Pie
ಬ್ಯಾಟರಿ ಸಾಮರ್ಥ್ಯ: 4000  mAh
Storage: 64 GB
 

Samsung Galaxy A10:
Display: 6.20 ಇಂಚು
ಪ್ರೊಸೆಸರ್: Octa-core
ಮುಂಬದಿ ಕ್ಯಾಮೆರಾ: 5MP
ಹಿಂಬದಿ ಕ್ಯಾಮೆರಾ: 13 MP
OS: Android Pie
ಬ್ಯಾಟರಿ ಸಾಮರ್ಥ್ಯ: 3400 mAh

click me!