Samsung Galaxy Unpacked ಫೆಬ್ರವರಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಖಚಿತ, ಯಾವೆಲ್ಲ ಹೊಸ ಫೋನು ಲಾಂಚ್?

By Suvarna News  |  First Published Jan 21, 2022, 7:01 PM IST

*ಬಹು ನಿರೀಕ್ಷೆಯ ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್ ಫೆಬ್ರವರಿ 8ರಂದು ನಡೆಯುವ ಸಾಧ್ಯತೆ
*ಈ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್ ಸ್ಯಾಮ್ಸಂಗ್ ಹೊಸ ಸ್ಮಾರ್ಟ್‌ಫೋನುಗಳು ಲಾಂಚ್ ಆಗಲಿವೆ
*ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್‌ ಬಗ್ಗೆ ಬಳಕೆದಾರರಲ್ಲಿ ಹೆಚ್ಚಿರುವ ಕುತೂಹಲ


Tech Desk( ದಕ್ಷಿಣ ಕೊರಿಯಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಸ್ಯಾಮ್ಸಂಗ್ ತನ್ನ ಹೊಸ ಹೊಸ ಸ್ಮಾರ್ಟ್‌ಫೋನುಗಳ ಮೂಲಕ ಸಾಕಷ್ಟು ಬಳಕೆದಾರರನ್ನ ಜಗತ್ತಿನಾದ್ಯಂತ ಹೊಂದಿದೆ. ಈ ಕಂಪನಿಯು ಪ್ರತಿ ವರ್ಷ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್ (Galaxy Unpacked Event) ಮೂಲಕ ಹೊಸ ಹೊಸ ಫೋನುಗಳನ್ನು ಲಾಂಚ್ ಮಾಡುತ್ತದೆ. ಹಾಗೆಯೇ ಈ ವರ್ಷ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್ ಯಾವಾಗ ನಡೆಯಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ಯಾಮ್ಸಂಗ್ ಕಂಪನಿಯು ಮುಂದಿನ ತಿಂಗಳು ಅಂದರೆ, ಫೆಬ್ರವರಿಯಲ್ಲಿ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಆಯೋಜಿಸಲಿದೆ. ಈ ಇವೆಂಟ್‌ನಲ್ಲಿ ಅನೇಕ ಹೊಸ ಹೊಸ ಫೋನುಗಳು ಪರಿಚವಾಗಲಿವೆ. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಕಂಪನಿಯು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 (Samsung Galaxy S22), ಗ್ಯಾಲಕ್ಸಿ ಎಸ್22 ಪ್ಲಸ್ (Galaxy S22+), ಗ್ಯಾಲಕ್ಸಿ ಎಸ್ 22 ಅಲ್ಟ್ರಾ (Galaxy S22 Ultra) ಗ್ಯಾಲಕ್ಸಿ ಸರಣಿ ಫೋನುಗಳ ಲಾಂಚ್ ಆಗುವ ಸಾಧ್ಯತೆಗಳಿವೆ. ಈಗಾಗಲೇ ಈ ಫೋನುಗಳ ಲಾಂಚ್ ಬಗ್ಗೆ ಕಂಪನಿಯು ಟೀಸರ್ ರನ್ ಮಾಡುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲೂ ಈ ಫೋನುಗಳ ಬಗ್ಗೆ ಒಂದಿಷ್ಟು ಮಾಹಿತಿಯು ಸೋರಿಕೆಯಾಗುತ್ತಿದೆ. 

Xiaomi 11T Pro 5G ಫೋನ್ ಲಾಂಚ್, ಇದು 17 ನಿಮಿಷದಲ್ಲಿ ಪೂರ್ತಿ ಚಾರ್ಜ್!

Tap to resize

Latest Videos

undefined

ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿರುವ ಈ ಗ್ಯಾಲಕ್ಸಿ ಸೀರೀಸ್ ಫೋನುಗಳಲ್ಲಿ ಹೊಸ ಸ್ನ್ಯಾಪ್‌ಡ್ರಾಗನ್ 8 ಜೆನ್ 1 ಮತ್ತು Exynos 2200 ಬಳಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗತ್ತಿದೆ. ಆದರೆ, ಬಗ್ಗೆ ಸ್ಯಾಮ್ಸಂಗ್ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸ್ಯಾಮ್ಸಂಗ್‌ನ ಪ್ರೆಸಿಡೆಂಟ್ ಮ್ತತು ಎಂಎಕ್ಸ್ ಬ್ಯೂಸಿನೆಸ್ ಹೆಡ್ ಟಿ ಎಂ ರೂಹ್ (T M Roh) ಅವರು ಬ್ಲಾಗ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಗ್ಯಾಲಕ್ಸಿ ಸೀರೀಸ್ ಫೋನುಗಳ ಲಾಂಚ್‌ ಬಗ್ಗೆ ಒಂದಿಷ್ಟು ವಿವರವನ್ನು ನೀಡಿದ್ದಾರೆ. 

ನೆಕ್ಸ್ಟ್ ಜನರೇಷನ್‌ನ ಗ್ಯಾಲಕ್ಸಿ ಎಸ್ (Galaxy S)ಗಳು ಸಿದ್ಧವಾಗಿವೆ. ನಮ್ಮ Samsung Galaxy ಯ ಅತ್ಯುತ್ತಮ ಅನುಭವಗಳನ್ನು ಒಂದು ಅಂತಿಮ ಸಾಧನವಾಗಿ ಒಟ್ಟುಗೂಡಿಸಿ ನೀಡುತ್ತಿದ್ದೇವೆ ಎಂದು ರೋಹ್ ಅವರು  ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ಈ ವರ್ಷದ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಇಲ್ಲಿಯವರೆಗೆ ರಚಿಸಿರುವ ಅತ್ಯಂತ ಗಮನಾರ್ಹ Galaxy S-ಸರಣಿ ಫೋನುಗಳಾಗಿವೆ ಎಂದು ಅವರು ಕರೆದಿದ್ದಾರೆ. ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಸ್ 22 ಅಲ್ಟ್ರಾ ಇನ್‌ಬಿಲ್ಟ್ ಎಸ್ ಪೆನ್ ಅನ್ನು ವೈಶಿಷ್ಟ್ಯಗೊಳಿಸಲು ಮತ್ತು ಕಂಪನಿಯ ನೋಟ್ ಲೈನ್‌ಅಪ್ ಅನ್ನು ಬದಲಿಸಲು ಸಲಹೆ ನೀಡಿದೆ. ಇದೇ ವೇಳೆ, ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್ ನಡೆಯುವುದನ್ನು ಈ ಬ್ಲಾಗ್ ಖಚಿತಪಡಿಸುತ್ತದೆ.

ಫೆಬ್ರವರಿಯಲ್ಲಿ ನಡೆಯಲಿರುವ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್ ಖಚಿತಪಡಿಸುವ ವಿಡಿಯೋ ಟೀಸರ್ ಅನ್ನು ಕೂಡ ಕಂಪನಿಯು ಬಿಡುಗಡೆ ಮಾಡಿದೆ. ಆದರೆ, ಈ ವಿಡಿಯೋದಲ್ಲೇನೂ ಕಂಪನಿಯು ಯಾವೆಲ್ಲ ಹೊಸ ಹೊಸ ಫೋನುಗಳನ್ನು ಲಾಂಚ್ ಮಾಡಲಿದೆ ಎಂಬ ಮಾಹಿತಿಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಆದರೆ, ಫೆಬ್ರವರಿಯಲ್ಲಿ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ನಡೆಯುವುದನ್ನು ಮಾತ್ರ ಖಚಿತಪಡಿಸಿದೆ. ಈ ಮೂಲಕ ಸ್ಯಾಮ್ಸಂಗ್ ಫಾಲೋವರ್ಸ್‌ಗೆ ಹೊಸ ಹೊಸ ಫೋನುಗಳು ಲಾಂಚ್ ಆಗುವ ಪುಳಕವನ್ನು ಸೃಷ್ಟಿಸಿದೆ ಎಂದು ಹೇಳಬಹುದು. 

Moto Tab G70 LTE: ಭಾರತದಲ್ಲಿ ಹೊಸ ಮೊಟೊರೊಲಾ ಟ್ಯಾಬ್ ಬಿಡುಗಡೆ, ಬೆಲೆ ಎಷ್ಟು?

ರೋಹ್ ಅವರ ಬ್ಲಾಗ್ ಪೋಸ್ಟ್ ಪ್ರಕಾರ, ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ ಎನ್ನಲಾಗುತ್ತಿರುವ ಗ್ಯಾಲಕ್ಸಿ ಸರಣಿ ಫೋನುಗಳಲ್ಲಿ ಒಂದಾಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 ಅಲ್ಟ್ರಾ (Galaxy S22 Ultra) ಬ್ರೈಟರ್ ನೈಟ್ ಫೋಟೋಗ್ರಫಿ ಮತ್ತು ವೇಗದ ಕಾರ್ಯಾಚರಣೆಯನ್ನು ಹೊಂದಿರಲಿದೆ. ಹಾಗೆಯೇ, ಮುಂಬರುವ ಗ್ಯಾಲಕ್ಸಿ ಎಸ್ 22 ಸ್ಮಾರ್ಟ್‌ಫೋನ್ ಕೂಡ ಹೆಚ್ಚು ಸುಸ್ಥಿರ ಫೋನು ಎನಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನುಗಳ ಬಗ್ಗೆ ಸಾಕಷ್ಟು ಕತೂಹಲವಂತೂ ಹೆಚ್ಚಾಗಿದೆ. ಫೆಬ್ರವರಿಯಲ್ಲಿ ಈ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.

click me!