Xiaomi 11T Pro 5G ಫೋನ್ ಲಾಂಚ್, ಇದು 17 ನಿಮಿಷದಲ್ಲಿ ಪೂರ್ತಿ ಚಾರ್ಜ್!

By Suvarna NewsFirst Published Jan 19, 2022, 9:39 PM IST
Highlights

* ಹೊಸ ವರ್ಷದಲ್ಲಿ ಶಿಯೋಮಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ಪ್ರೀಮಿಯಂ ಫೋನ್ ಇದು
* ಈ ಫೋನು 17 ನಿಮಿಷದಲ್ಲಿ ಶೂನ್ಯದಿಂದ ಶೇ.100ರಷ್ಟು ಫಾಸ್ಟ್ ಚಾರ್ಜ್ ಆಗುತ್ತದೆ.
* ಫೋನ್‌ನಲ್ಲಿ ಮೂರು ಕ್ಯಾಮೆರಾಗಳನ್ನು ನೀಡಿದ್ದು, ಮೊದಲನೇ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ

ಚೀನಾ (China) ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ  (Xiaomi) ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದು ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಶಿಯೋಮಿ 11ಟಿ ಪ್ರೋ 5ಜಿ (Xiaomi 11T Pro 5G) ಸ್ಮಾರ್ಟ್‌ಫೋನ್ ಭಾರತದಲ್ಲಿ ಬುಧವಾರ ಲಾಂಚ್ ಆದ ಹೊಸ ಸ್ಮಾರ್ಟ್‌ಫೋನ್ .  ಈ ಫೋನು ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 888 ಎಸ್ಒಸಿ (Qualcomm Snapdragon 888) ಪ್ರೊಸೆಸರ್ ಒಳಗೊಂಡಿದೆ. ಜತೆಗೆ ಇದು 120 ವ್ಯಾಟ್ ಫಾಸ್ಟ್‌ ಚಾರ್ಜಿಂಗ್‌ಹೆ ಸಪೋರ್ಟ್ ಮಾಡುತ್ತದೆ.  2022ರಲ್ಲಿ ಶಿಯೋಮಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ಪ್ರೀಮಿಯಂ ಸ್ಮಾರ್ಟ್‌ಫೋನ್ ಇದಾಗಿದೆ. ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್21 ಎಫ್ಇ (Samsung Galaxy S 21 FE) ಹಾಗೂ ಒನ್‌ಪ್ಲಸ್ 9 ಆರ್‌ಟಿ (OnePlus 9RT) ಫೋನುಗಳಿಗೆ ಶಿಯೋಮಿ 11ಟಿ ಪ್ರೋ ಫೋನು ತೀವ್ರ ಸ್ಪರ್ಧೆಯನ್ನು ಒಡ್ಡಲಿದೆ. ವಿಶೇಷ ಎಂದರೆ, ಈ ಫೋನ್ ಅನ್ನು ಕಂಪನಿಯು ಕಳೆದ ವರ್ಷ ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್ ಕೇವಲ 17 ನಿಮಿಷದಲ್ಲಿ  ಶೇ.100ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಶಿಯೋಮಿ 11ಟಿ ಪ್ರೋ 5ಜಿ ಸ್ಮಾರ್ಟ್‌ಫೋನ್ ಬೆಲೆ 39,999 ರೂ.ನಿಂದ ಆರಂಭವಾಗುತ್ತದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 39,999 ರೂ. ಇದ್ದರೆ, 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ  43,999 ರೂ. ಇದೆ. ಇದೇ ವೇಳೆ, ಶಿಯೋಮಿ ಎಕ್ಸ್‌ಚೇಂಜ್ ಆಫರ್ ಆಗಿ 5000 ರೂ.ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. 

Moto Tab G70 LTE: ಭಾರತದಲ್ಲಿ ಹೊಸ ಮೊಟೊರೊಲಾ ಟ್ಯಾಬ್ ಬಿಡುಗಡೆ, ಬೆಲೆ ಎಷ್ಟು?

ಶಿಯೋಮಿ 11ಟಿ ಪ್ರೋ 5ಜಿ (Xiaomi 11T Pro 5G) ಡುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು, ಇದರಲ್ಲಿ 6.67 ಇಂಚ್ ಫುಲ್ ಎಚ್‌ಡಿ ಪ್ಲಸ್ 10 ಬಿಟ್ ಟ್ರೂ ಕಲರ್ ಫ್ಲ್ಯಾಟ್ ಅಮೋಎಲ್‌ಇಡಿ (AMOLED) ಪ್ರದರ್ಶಕವನ್ನು ಅಳವಡಿಸಲಾಗಿದೆ. ಈ ಪ್ರದರ್ಶಕವು ಡಾಲ್ಬಿ ವಿಷನ್ (Dolby Vision)ಗೆ ಸಪೋರ್ಟ್ ಮಾಡುತ್ತದೆ. 480 Hzವರೆಗೂ ಟಚ್ ಸ್ಯಾಂಪಲಿಂಗ್ ರೇಟ್ ಇದೆ.  ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಟರ್ ಗ್ಲಾಸ್ ಆಗಿ ಬಳಸಲಾಗಿದೆ. 

ಈ ಮೊದಲೇ ಹೇಳಿದಂತೆ ಶಿಯೋಮಿ 11ಟಿ ಪ್ರೋ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಎಲ್‌ಪಿಡಿಡಆರ್5ನ 12 ಜಿಬಿ ರ್ಯಾಮ್‌ವರೆಗೂ ಸಂಯೋಜಿಗೊಳ್ಳಬಹುದಾದ ಅಕ್ಟಾ ಕೋರ್ ಕ್ವಾಲಂಕಾಮ್ ಸ್ನ್ಯಾಪ್‌ ಡ್ರಾಗನ್ 888 ಪ್ರೊಸೆಸರ್ ಬಳಸಲಾಗಿದೆ. ಈ ಫೋನಿನ ವಿಶೇಷ ಏನೆಂದರೆ, ಹೆಚ್ಚುವರಿಯಾಗಿ ಇದು 3 ಜಿಬಿ ವರ್ಚುವರ್ ರ್ಯಾಮ್‌ಗೂ ಸಪೋರ್ಟ್ ಮಾಡುತ್ತದೆ. ಈ ಎಲ್ಲ ಅತ್ಯಾಧುನಿಕ ಫೀಚರ್‌ಗಳಿಂದಾಗಿಯೇ ಶಿಯೋಮಿ 11ಟಿ ಪ್ರೋ 5ಜಿ ಸ್ಮಾರ್ಟ್‌ಫೋನ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ.

ಇನ್ನು ಕ್ಯಾಮೆರಾ ಬಗ್ಗೆ ಹೇಳುವುದಾದರೆ ಶಿಯೋಮಿ 11ಟಿ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳ ಸೆಟ್ ಅಪ್ ನೀಡಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಅಲ್ಟ್ರಾವೈಡ್ ಫೋಕಸ್‌ದಗಾಗಿ 8 ಮೆಗಾ ಪಿಕ್ಸೆಲ್ ಹಾಗೂ ಟೆಲೆಮ್ಯಾಕ್ರೋ ಶೂಟರ್ ಆಗಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಂಪನಿ ಒದಗಿಸಿದೆ. ಕ್ಯಾಮೆರಾ ದೃಷ್ಟಿಯಿಂದ ನೋಡಿದರೆ, ಈ ಫೋನ್ ಜಬರ್ದಸ್ತ್ ಆಗಿದೆ ಎಂದು ಹೇಳಬಹುದು. ಕಂಪನಿಯು ಫೋನ್ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಿದೆ. ಈ ಕ್ಯಾಮೆರಾ 60fps ಫ್ರೇಮ್ ರೇಟ್‌ನಲ್ಲಿ 180p ವಿಡಿಯೋ ರೆಕಾರ್ಡಿಂಗ್‌ಗೆ ಸಪೋರ್ಟ್ ಮಾಡುತ್ತದೆ. ನೈಟ್ ಮೋಡ್ ಮತ್ತು ಲೋ ಲೈಟ್‌ ಫೋಟೋಗ್ರಫಿಗೂ ಈ ಸೆಲ್ಫಿ ಕ್ಯಾಮೆರಾ ಸಪೋರ್ಟ್ ಮಾಡುತ್ತದೆ.

Vivo for Education Scholarship: 100 ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

ಶಿಯೋಮಿ 11ಟಿ ಪ್ರೋ 5ಜಿ (Xiaomi 11T Pro 5G) ಸ್ಮಾರ್ಟ್‌ಫೋನ್ 5000 mAh ಡುಯಲ್ ಸೆಲ್ ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿ ಹೈಪರ್ ಚಾರ್ಜ್‌ಗೆ ಸಪೋರ್ಟ್ ಮಾಡುತ್ತದೆ. ಅಂದರೆ, ಕೇವಲ 17 ನಿಮಿಷದಲ್ಲಿ ಬ್ಯಾಟರಿ ಜೀರೋದಿಂದ ಶೇ.100ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

click me!