ಸತತ 5ನೇ ಬಾರಿಗೆ iPhone ಕಳೆದುಕೊಂಡ ಭಾರತೀಯ ಮಹಿಳೆ, ಮತ್ತೆ ಮತ್ತೆ ಫೋನ್ ಹುಡುಕಿಕೊಂಡ ಸಿಕ್ರೇಟ್ ರಿವೀಲ್

Published : Sep 21, 2026, 04:17 PM IST
Indian Woman Loses iPhone In Japan

ಸಾರಾಂಶ

ಜಪಾನ್‌ನಲ್ಲಿ ವಾಸಿಸುತ್ತಿರುವ ಪ್ರಗತಿ ಎಂಬ ಭಾರತೀಯ ಮಹಿಳೆ ಮರೆವಿನಿಂದಾಗಿ ಬರೋಬ್ಬರಿ ಐದು ಬಾರಿ ತಮ್ಮ ಐಫೋನ್ ಕಳೆದುಕೊಂಡಿದ್ದಾರೆ. ಇದೀಗ ಫೋನ್ ವಾಪಸ್ ಹುಡುಕಿಕೊಂಡಿದ್ದಾರೆ. ಅದನ್ನು ಹೇಗೆ ವಾಪಸ್ ಪಡೆದೆ? ಪ್ರತಿಸಾರಿ ಕಳೆದು ಹೋದರೂ ನನಗೆ ಯಾಕೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಮರೆವಿನ ಕಾಯಿಲೆ ಇದ್ದವರು ಅನುಭವಿಸುವ ಚಡಪಡಿಕೆ ಅಷ್ಟಿಷ್ಟಲ್ಲ. ಕೆಲವರಿಗಂತೂ ಈಗ ಇಟ್ಟ ವಸ್ತು ಈಗಲೇ ನೆನಪು ಇರೋದಿಲ್ಲ. ಈಗ ಕೇಳಿದ ಮಾತು ಈಗಲೇ ನೆನಪು ಇರೋಲ್ಲ. ಅದೆಷ್ಟೋ ಬಾರಿ ಲಕ್ಷ್ಯ ಎಲ್ಲೋ, ಕೆಲಸ ಎಲ್ಲೋ. ಅನೇಕ ಬಾರಿ ಹಲವು ವಿಚಾರಗಳಲ್ಲಿ ಮುಳುಗಿ ಹೋಗಿರ್ತಿವಿ. ಜೊತೆಗಿದ್ದವರೂ ನೆನಪಿಗೆ ಬರಲ್ಲ. ಕೈಯಲ್ಲಿದ್ದ ವಸ್ತು ಕೂಡ ಇಲ್ಲಿಗೆ ಹೋಯ್ತು ಅಂತಾ ಗೊತ್ತಾಗಲ್ಲ. ಅಷ್ಟರಮಟ್ಟಿಗೆ ಮಗ್ನರಾಗಿರ್ತೇವೆ. ಅದೇ ರೀತಿ ಜಪಾನ್‌ನಲ್ಲಿ ಭಾರತೀಯ ಮಹಿಳೆಯೊಬ್ಬರು ತಮ್ಮ ಐಫೋನ್ iPhone ಅನ್ನ ಒಂದೆಲ್ಲ, ಎರಡಲ್ಲ ಬರೋಬ್ಬರಿ ಐದು ಬಾರಿ ಕಳೆದುಕೊಂಡಿದ್ದಾಳೆ.

ವಿಶೇಷ ಅಂದರೆ.. ಆಕೆ ಐದು ಬಾರಿ ಕಳೆದುಕೊಂಡರೂ ಮೊಬೈಲ್ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಐದು ಬಾರಿಯೂ ಯಶಸ್ವಿಯಾಗಿ ಮೊಬೈಲ್ ಹುಡುಕುವಲ್ಲಿ ಯಶಸ್ವಿಯಾದ ಬೆನ್ನಲ್ಲೇ, ಅಲ್ಲಿನ ಜನ ತುಂಬಾ ಪ್ರಾಮಾಣಿಕರು ಮತ್ತು ಸುರಕ್ಷಿತ ಎಂದು ಮೊಬೈಲ್ ಕಳೆದಕೊಂಡ ಮಹಿಳೆ ಹೇಳ್ತಿದ್ದಾರೆ.

ಪ್ರಗತಿ ಎಂಬ ಮಹಿಳೆ ಜಪಾನ್‌ನಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮೊಬೈಲ್ ಹುಡುಕುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್ ಬಿಟ್ಟು ಬರೋದು ನನ್ನ ಪದೇ ಪದೇ ಅಭ್ಯಾಸವಾಗಿಬಿಟ್ಟಿದೆ. ಯಾಕೆಂದರೆ ನಾನು ಫೋನ್‌ ಅನ್ನು ಹೆಚ್ಚು ಬಳಸುವುದಿಲ್ಲ. ಹೀಗಾಗಿ ಅದನ್ನು ನಾನು ಆಗಾಗ ಪರಿಶೀಲನೆ ಮಾಡೋದಿಲ್ಲ ಎಂದು ಬರೆದುಕೊಂಡಿದ್ದಾರೆ.

ಫೋನ್ ಪತ್ತೆ ಹಚ್ಚಿದ್ದು ಹೇಗೆ?

ಅಂದ್ಹಾಗೆ ಪ್ರಗತಿ ಅವರಿಗೆ ತಮ್ಮ ಫೋನ್ ಬಿಟ್ಟು ಹೋದ ಕೆಲವು ಗಂಟೆಗಳ ಬಳಿಕ ಫೋನ್ ಮಿಸ್ ಆಗಿರೋ ಬಗ್ಗೆ ಗೊತ್ತಾಗಿದೆ. ಕೂಡಲೇ ಅವರು ಆಪಲ್‌ನ find my app ಮೂಲಕ ಮೊಬೈಲ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ನೋಡಿದ್ರೆ ಆ ಫೋನ್ ತಾವು ಇದ್ದ ಜಾಗದಿಂದ ಬರೋಬ್ಬರಿ 600 ಕಿಲೋ ಮೀಟರ್ ದೂರದಲ್ಲಿ ಮೊಬೈಲ್ ಇರೋದು ಗೊತ್ತಾಗಿದೆ. ಬೆನ್ನಲ್ಲೇ ಅವರು ರಾತ್ರೋರಾತ್ರಿ ಫೋನ್ ವಾಪಸ್ ಹುಡುಕಿ ತರಲು ಮುಂದಾಗಿದ್ದಾರೆ. ಅಂತೆಯೇ ಕೊನೆಗೂ ಅವರು ಫೋನ್ ಅನ್ನು ಪತ್ತೆ ಹಚ್ಚಿ ವಾಪಸ್ ತಂದಿದ್ದಾರೆ. ಅವರ ಪ್ರಕಾರ ಫೈಂಡ್ ಮೈ ಅಪ್ಲಿಕೇಷನ್ ಪ್ರತಿಸಾರಿಯೂ ಫೋನ್ ಕಳೆದಾಗ ಪತ್ತೆ ಹಚ್ಚಲು ಸಹಾಯ ಮಾಡಿದೆ ಎನ್ನುತ್ತಾರೆ ಪ್ರಗತಿ.

ಫೋನ್ ಕಳೆದುಕೊಂಡಿದ್ದು ಹೇಗೆ?

ಕಡಲ ಕಿನಾರೆಗೆ ಹೋಗಿದ್ದ ಪ್ರಗತಿ ಅಲ್ಲಿ ಪತಿಯೊಂದಿಗೆ ಊಟ ಮಾಡಿದ್ದಾರೆ. ನಂತರ ಬೀಚ್‌ನಲ್ಲಿ ಸುತ್ತಾಡಿದ್ದಾರೆ. ಅಲ್ಲೇ ಹರಟೆ ಹೊಡೆದಿದ್ದಾರೆ. ಈ ವೇಳೆ ಫೋನ್ ಬಿಟ್ಟು ವಾಪಸ್ ಬಂದುಬಿಟ್ಟಿದ್ದಾರೆ. ಅವರು ನೀಡಿರುವ ಮಾಹಿತಿಯಂತೆ ಐದು ಬಾರಿ ಐಫೋನ್ ಕಳೆದುಕೊಂಡಿದ್ದಾರೆ. ಒಂದು ಬಾರಿ ಪೊಲೀಸರ ಸಹಾಯದಿಂದ ವಾಪಸ್ ಪಡೆದಿದ್ದಾರೆ. ಇನ್ನೊಮ್ಮೆ ಮಾರುಕಟ್ಟೆಯಲ್ಲಿ ಬಿಟ್ಟು ಬಂದಿದ್ದರು. ಅಲ್ಲಿ ಅಪ್ಲಿಕೇಷನ್ ಸಹಾಯದಿಂದ ಫೋನ್ ಹುಡುಕಿಕೊಂಡಿದ್ದಾರೆ. ಫೋನ್ ಹುಡುಕಲು ನಾನು ಹರಸಾಹಸ ಏನೂ ಮಾಡಲಿಲ್ಲ.

ಜಪಾನ್ ಜನರು ಬೇರೆಯವರ ವಸ್ತುಗಳನ್ನ ಮುಟ್ಟೋದು ತೀರಾ ಕಡಿಮೆ. ಒಂದು ವೇಳೆ ನಾವು ಫೋನ್ ಬಿಟ್ಟು ಹೋದರೆ ಅದು ಅಲ್ಲಿಯೇ ಬಿದ್ದಿರುತ್ತದೆ. ಅದನ್ನು ಆಚೆ ಈಚೆ ಕೂಡ ಸರಿಸೋದಿಲ್ಲ. ಎಲ್ಲಿರುತ್ತೋ ಅಲ್ಲಿಯೇ ಬಿದ್ದಿರುತ್ತದೆ. ಜಪಾನ್‌ನ ಜನರು ತುಂಬಾ ಪ್ರಾಮಾಣಿಕರು ಎನ್ನುತ್ತಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

iPhone 18 Pro ಮೇನಿಯಾ, ಫೋನ್‌ ಖರೀದಿಗೆ ದುಬೈಗೆ ಹೊರಟ ಭಾರತೀಯರಿಗೆ ಸಿಗುತ್ತಾ ಲಾಭ?
Iphone ಗೆ ವಿವೋ ಸೆಡ್ಡು: ನಾಳೆ ನಾಡಿದ್ದು Vivo X500, X500 Pro ಎರಡು ಶಕ್ತಿಶಾಲಿ ಹೊಸ ಫೋನ್ ಬಿಡುಗಡೆ! ಬೆಲೆ ಎಷ್ಟು, ಹೊಸತೇನಿದೆ?