ರೇಣುಕಾಸ್ವಾಮಿ ಕೇಸ್‌ನಲ್ಲಿ ಇವತ್ತು ಮೂರು ದೊಡ್ಡ ಬೆಳವಣಿಗೆ, ದರ್ಶನ್‌ಗೆ ಕೊಂಚ ಸಮಾಧಾನ

Published : Oct 14, 2026, 07:15 PM IST
Pavitra Gowda and Darshan

ಸಾರಾಂಶ

ರೇಣುಕಾಸ್ವಾಮಿ ಕೇಸ್‌ನಲ್ಲಿ ಇವತ್ತು ಮೂರು ಪ್ರಮುಖ ದೊಡ್ಡ ಬೆಳವಣಿಗೆ ಆಗಿದೆ. ವಿನಯ್ ತನ್ನನ್ನು ಮಾಫಿ ಸಾಕ್ಷಿ ಮಾಡುವಂತೆ ಪರಿಗಣಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾನೆ..

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ (Chitradurga Renukaswamy case) ಇವತ್ತು ಮೂರು ಮಹತ್ವದ ಬದಲಾವಣೆ ಆಗಿದೆ. ಮೊದಲನೇಯದು ಮಾಫಿ ಸಾಕ್ಷ್ಯದಿಂದ 10ನೇ ಆರೋಪಿ ಹಿಂದೆ ಸರಿಸಿದ್ದಾರೆ. ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿ ಮಾಡುವಂತೆ ಕೋರಿ ವಿನಯ್ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾನೆ. ಇದರಿಂದ ದರ್ಶನ್‌ಗೆ ಕೊಂಚ ಸಮಾಧಾನ ಸಿಕ್ಕಂತಾಗಿದೆ.

ಮತ್ತೊಬ್ಬ ಆರೋಪಿ ಪ್ರದೋಷ್ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿ ಆಗಿದ್ದಾನೆ. ಈಗಾಲೇ ಆತನ ಹೇಳಿಕೆಗಳನ್ನ ಕೋರ್ಟ್ ದಾಖಲಿಸಿಕೊಂಡಿದೆ. ಬೆನ್ನಲ್ಲೇ ವಿನಯ್ ಕೂಡ ಅರ್ಜಿ ಸಲ್ಲಿಸಿದ್ದ. ಇದೀಗ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಾಪಸ್ ಪಡೆದುಕೊಂಡಿದ್ದಾನೆ. ವಿನಯ್ ದರ್ಶನ್ ಅವರ ಅತ್ಯಾಪ್ತರಲ್ಲಿ ಒಬ್ಬನಾಗಿದ್ದ. ಬೆಂಗಳೂರಿನ ಸ್ಟೋನಿ ಬ್ರೂಕ್ ಪಬ್‌ನ ಮಾಲೀಕ ಕೂಡ ಹೌದು. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ತಂದಾಗ ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ನಡೆಸಲು ಸಹಕಾರ ನೀಡಿದ ಆರೋಪ ಈ ವಿನಯ್ ಮೇಲಿದೆ..

ಎರಡನೇ ಬೆಳವಣಿಗೆ

ಮತ್ತೊಂದು ಕಡೆ ಜೈಲಿನಲ್ಲಿ ಸೂಕ್ತ ವ್ಯವಸ್ಥೆ ಕೋರಿ ಪವಿತ್ರ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಕಂಪ್ಲೀಟ್ ಆಗಿದೆ. ನ್ಯಾಯಾಧೀಶರೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುವಂತೆ ಕೋರಿ ಪವಿತ್ರಗೌಡ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್​​​ ಕೋರ್ಟ್‌, ಆದೇಶವನ್ನು ಕಾಯ್ದಿರಿಸಿದೆ. ಅಕ್ಟೋಬರ್ 17ಕ್ಕೆ 59ನೇ ಸಿಸಿಹೆಚ್ ಕೋರ್ಟ್ ತನ್ನ ತೀರ್ಪನ್ನು ಪ್ರಕಟ ಮಾಡಲಿದೆ. ಪ್ರಾಸಿಕ್ಯೂಷನ್ ಪರವಾಗಿ ASPP ಸಚಿನ್ ವಾದ ಮಂಡಿಸಿದ್ದಾರೆ. ಪವಿತ್ರ ಗೌಡ ಪರವಾಗಿ ವಕೀಲ ನಾರಾಯಣಸ್ವಾಮಿ ವಾದ ಮಂಡಿಸಿದ್ದಾರೆ.

ಕೋರ್ಟ್ ಆದೇಶಕ್ಕೆ ಜೈಲು ಅಧಿಕಾರಿಗಳು ಗೌರವ ನೀಡುತ್ತಿಲ್ಲ. ತಾವೇ (ಜಡ್ಜ್) ಜೈಲಿಗೆ ಭೇಟಿ ನೀಡಿ, ಪವಿತ್ರಾಗೌಡ ಹೇಳಿಕೆ ಪಡೆಯಬೇಕು. ಅಥವಾ ಕೋರ್ಟ್ ಕಮಿಷನರ್ ನೇಮಕ ಮಾಡಬೇಕು. ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಪಾಲನೆ ಅಂತ ಹೇಳ್ತಾರೆ. ಆದ್ರೆ ಯಾವುದೂ ಇಲ್ಲಿ ಪಾಲನೆ ಆಗುತ್ತಿಲ್ಲ ಎಂದು ಪವಿತ್ರಗೌಡ ಪರ ವಕೀಲರ ಆರೋಪ ಆಗಿದೆ. ಈ ಸಂಬಂಧ ಅಕ್ಟೋಬರ್ 17 ರಂದು ಕೋರ್ಟ್ ತೀರ್ಪು ಪ್ರಕಟಿಸಲಿದೆ.

ಮೂರನೇಯ ಬೆಳವಣಿಗೆ ಏನೆಂದರೆ.. ಅನುಕುಮಾರ್, ಜಗದೀಶ್ ಜಾಮೀನು ಅರ್ಜಿ ವಿಚಾ. ಇವರಿಬ್ಬರ ಜಾಮೀನು ಅರ್ಜಿಯ ವಿಚಾರಣೆ ಮುಕ್ತಾಯ ಆಗಿದೆ. ವಾದ-ಪ್ರತಿವಾದ ಆಲಿಸಿರುವ ಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಅದು ಕೂಡ ಅಕ್ಟೋಬರ್ 17 ರಂದು ಇಬ್ಬರು ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿ ಅನುಕುಮಾರ್, ಜಗದೀಶ್ ಇದ್ದಾರೆ. ಆರೋಪಿಗಳ ಪರ ವಕೀಲ ರಂಗನಾಥ್​ ರೆಡ್ಡಿ ವಾದ ಮಂಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 17 ರಂದು ರೇಣುಕಾಸ್ವಾಮಿ ಪ್ರಕರಣದಲ್ಲಿ ಮತ್ತೆ ದೊಡ್ಡ ಬೆಳವಣಿಗೆ ಆಗುವ ನಿರೀಕ್ಷೆ ಇದೆ. ಕೋರ್ಟ್ ಪವಿತ್ರ ಗೌಡ ಜಾಗೂ ಅನುಕುಮಾರ್ ಮತ್ತು ಜಗದೀಶ್ ಅರ್ಜಿಗೆ ಏನು ತೀರ್ಪು ನೀಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಒಂದು ಲಕ್ಷದ iPhone ಈಗ ₹49161 ಗೆ ಲಭ್ಯ.. ಖರೀದಿಸುವ ಮುನ್ನ ಈ ನಿಯಮ ತಿಳಿದುಕೊಳ್ಳಿ
Amazon, Flipkart ನಲ್ಲಿ ₹ 30,000 ಗಿಂತ ಕಡಿಮೆ ಬೆಲೆಗೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು