Jio AI Glasses: ಕನ್ನಡಕ ಧರಿಸಿ, QR ಕೋಡ್ ನೋಡಿ, ಪೇಮೆಂಟ್ ಮಾಡಿ! ಜಿಯೋ AI ಗ್ಲಾಸ್‌ನ ವಿಶೇಷತೆಗಳೇನು?

Published : Oct 13, 2026, 04:10 PM IST
jio ai glasses upi payments features

ಸಾರಾಂಶ

ಸಾಮಾನ್ಯವಾಗಿ ಅಂಗಡಿಗಳಲ್ಲಿ ಹಣ ಪಾವತಿಸಲು ಮೊಬೈಲ್ ತೆಗೆದು UPI ಆ್ಯಪ್ ತೆರೆಯಬೇಕು. ನಂತರ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಯನ್ನು ದೃಢೀಕರಿಸಬೇಕು. ಆದರೆ ಜಿಯೋ ಪರಿಚಯಿಸಿರುವ AI ಕ್ಯಾಮೆರಾ ಗ್ಲಾಸ್‌ನಲ್ಲಿ ಈ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಪ್ರಯತ್ನ ಮಾಡಲಾಗಿದೆ.

ಸಾಮಾನ್ಯವಾಗಿ ಅಂಗಡಿಗಳಲ್ಲಿ ಹಣ ಪಾವತಿಸಲು ಮೊಬೈಲ್ ತೆಗೆದು UPI ಆ್ಯಪ್ ತೆರೆಯಬೇಕು. ನಂತರ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಯನ್ನು ದೃಢೀಕರಿಸಬೇಕು. ಆದರೆ ಜಿಯೋ ಪರಿಚಯಿಸಿರುವ AI ಕ್ಯಾಮೆರಾ ಗ್ಲಾಸ್‌ನಲ್ಲಿ ಈ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಪ್ರಯತ್ನ ಮಾಡಲಾಗಿದೆ. ಬಳಕೆದಾರರು ಕನ್ನಡಕದ ಕ್ಯಾಮೆರಾ ಮೂಲಕ ಅಂಗಡಿಯ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಬಳಿಕ ಮಾತಿನ ಮೂಲಕ ಮೂಲಕ ಪಾವತಿ ಪ್ರಕ್ರಿಯೆಯನ್ನು ಆರಂಭಿಸಬಹುದು. ಹಣ ಪಾವತಿಸಿದ ದೃಢೀಕರಣದ ನಂತರ ವಹಿವಾಟು ಪೂರ್ಣಗೊಳ್ಳುತ್ತದೆ. ಇದರಿಂದ ಪ್ರತಿಯೊಂದು ಸಣ್ಣ ವಹಿವಾಟಿಗೂ ಮೊಬೈಲ್ ಹೊರತೆಗೆಯುವ ಅಗತ್ಯ ಕಡಿಮೆಯಾಗಬಹುದು.

ಒಂದು ವಹಿವಾಟಿಗೆ ₹5,000 ಪಾವತಿ ಸಾಧ್ಯವೇ?

ಈ ವೈಶಿಷ್ಟ್ಯದಲ್ಲಿ UPI Circle ವ್ಯವಸ್ಥೆಯ ಬಳಕೆಯನ್ನು ತೋರಿಸಲಾಗಿದೆ. ಅದರ ಪ್ರಕಾರ, ಸಂಬಂಧಿತ ನಿಯಮಗಳ ಅಡಿಯಲ್ಲಿ ಒಂದು ವಹಿವಾಟಿಗೆ ಗರಿಷ್ಠ ₹5,000 ಮತ್ತು ತಿಂಗಳಿಗೆ ಒಟ್ಟು ₹15,000 ಪಾವತಿ ಮಿತಿಯಿರಬಹುದು. ಈ ಮಿತಿಗಳು ಜಿಯೋ ಪ್ರತ್ಯೇಕವಾಗಿ ನಿಗದಿಪಡಿಸಿರುವುದಲ್ಲ; UPI Circle ನಿಯಮಗಳಿಗೆ ಸಂಬಂಧಿಸಿವೆ.

ಹಲವು ಭಾರತೀಯ ಭಾಷೆಗಳಿಗೆ ಬೆಂಬಲ

ಜಿಯೋ AI ಸ್ಮಾರ್ಟ್ ಗ್ಲಾಸ್‌ನ ಮತ್ತೊಂದು ಪ್ರಮುಖ ವೈಶಿಷ್ಟ್ಯ ಲೈವ್ ಟ್ರಾನ್ಸ್‌ಲೇಷನ್. ಬೇರೆ ಬೇರೆ ಭಾರತೀಯ ಭಾಷೆಗಳನ್ನು ಮಾತನಾಡುವವರು ಪರಸ್ಪರ ಸಂವಹನ ನಡೆಸಲು ಈ ತಂತ್ರಜ್ಞಾನ ನೆರವಾಗುವ ಉದ್ದೇಶ ಹೊಂದಿದೆ. ಭಾಷೆಯ ಅಡೆತಡೆ ಎದುರಾಗುವ ಪ್ರಯಾಣ, ಕೆಲಸ ಅಥವಾ ದೈನಂದಿನ ಸಂವಹನದ ಸಂದರ್ಭಗಳಲ್ಲಿ ಈ ಸೌಲಭ್ಯ ಉಪಯುಕ್ತವಾಗಬಹುದು. ಭಾರತೀಯ ಭಾಷೆಗಳಿಗೆ ಬೆಂಬಲ ನೀಡುವ AI ವಾಯ್ಸ್ ಅಸಿಸ್ಟೆಂಟ್ ಕೂಡ ಈ ಸಾಧನಗಳ ಪ್ರಮುಖ ಆಕರ್ಷಣೆಯಾಗಿದೆ.

AI ನೋಟ್‌ಟೇಕಿಂಗ್, ಕ್ರಿಕೆಟ್ ಕಾಮೆಂಟ್ರಿಯೂ ಇದೆ!

ಜಿಯೋ ಪ್ರದರ್ಶಿಸಿರುವ AI ಆಧಾರಿತ ಸಾಧನಗಳಲ್ಲಿ ಸಭೆ ಅಥವಾ ಮಾತುಕತೆಯ ಪ್ರಮುಖ ಅಂಶಗಳನ್ನು ದಾಖಲಿಸಲು ನೆರವಾಗುವ AI ನೋಟ್‌ಟೇಕಿಂಗ್ ಸೌಲಭ್ಯವೂ ಇದೆ. ಇದರ ಜೊತೆಗೆ, ಪ್ರಯಾಣಿಸುವಾಗ ಅಥವಾ ಬೇರೆ ಕೆಲಸಗಳಲ್ಲಿ ತೊಡಗಿರುವಾಗಲೂ ಕ್ರಿಕೆಟ್ ಪಂದ್ಯದ ಲೈವ್ ಕಾಮೆಂಟ್ರಿ ಕೇಳಲು ನೆರವಾಗುವ ವೈಶಿಷ್ಟ್ಯವನ್ನು ಪ್ರದರ್ಶಿಸಲಾಗಿದೆ. ಈ ಮೂಲಕ ಸ್ಮಾರ್ಟ್ ಗ್ಲಾಸ್‌ಗಳು ಕೇವಲ ಫ್ಯಾಷನ್ ಪರಿಕರವಾಗಿರದೆ, ಪಾವತಿ, ಮಾಹಿತಿ ಮತ್ತು ಸಂವಹನಕ್ಕೆ ನೆರವಾಗುವ ತಂತ್ರಜ್ಞಾನ ಸಾಧನಗಳಾಗುವ ಸಾಧ್ಯತೆಯನ್ನು ಜಿಯೋ ತೋರಿಸಿದೆ.

ಬೆಲೆ ಎಷ್ಟು? ಮಾರುಕಟ್ಟೆಗೆ ಯಾವಾಗ ಬರಲಿದೆ?

ಜಿಯೋ ಈ ಸಾಧನಗಳನ್ನು India Mobile Congress 2026ರಲ್ಲಿ ಪ್ರದರ್ಶಿಸಿದೆ. ಆದರೆ ಲಭ್ಯವಿರುವ ಮಾಹಿತಿಯ ಪ್ರಕಾರ, ಅವುಗಳ ಅಂತಿಮ ಬೆಲೆ ಮತ್ತು ಮಾರುಕಟ್ಟೆ ಬಿಡುಗಡೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಹೀಗಾಗಿ ಗ್ರಾಹಕರು ಖರೀದಿಗೆ ಮುಂದಾಗುವ ಮೊದಲು ಕಂಪನಿಯ ಅಧಿಕೃತ ಪ್ರಕಟಣೆಗಾಗಿ ಕಾಯಬೇಕಿದೆ. ಒಟ್ಟಿನಲ್ಲಿ, ಕನ್ನಡಕದ ಮೂಲಕವೇ QR ಕೋಡ್ ಸ್ಕ್ಯಾನ್ ಮಾಡಿ ಧ್ವನಿ ಆಜ್ಞೆಯಿಂದ UPI ಪಾವತಿ ಮಾಡುವ ಕಲ್ಪನೆ ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಆದರೆ ಈ ತಂತ್ರಜ್ಞಾನ ಎಷ್ಟು ಸುಲಭ, ಸುರಕ್ಷಿತ ಮತ್ತು ಪ್ರಾಯೋಗಿಕವಾಗಿರಲಿದೆ ಎಂಬುದು ಅದರ ಅಂತಿಮ ಬಿಡುಗಡೆ ಹಾಗೂ ಬಳಕೆಯ ಅನುಭವದ ಬಳಿಕ ಸ್ಪಷ್ಟವಾಗಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

70 ಸಾವಿರದ ಯಂತ್ರದಿಂದ ತಿಂಗಳಿಗೆ 60 ಸಾವಿರ ಲಾಭ: ಅಪ್ಪನ ಕ್ಯಾಟರಿಂಗ್‌ ಬ್ಯುಸಿನೆಸ್ ಬಿಟ್ಟು ಶ್ರೀಮಂತನಾಗುವ ಸಿಂಪಲ್‌ ಹಾದಿ ತುಳಿದ ಮಗ
ಫ್ಲಿಪ್‌ಕಾರ್ಟ್‌ನಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಮೂರು ಅತ್ಯುತ್ತಮ ಫೋನ್!