ದೀಪಾವಳಿ ಮುಗಿದ್ರೂ ದೀಪಾವಳಿ! ಜಿಯೋಫೋನ್ ಆಫರ್ ಏನಂತ ತಿಳ್ಕೊಳ್ಳಿ

By Web Desk  |  First Published Nov 5, 2019, 7:53 PM IST

ದೀಪಾವಳಿ ಮುಗಿದಿದೆ. ಆ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ವಿಶೇಷ ಆಫರ್ ಒಂದನ್ನು ಪ್ರಕಟಿಸಿತ್ತು. ಬಳಕೆದಾರರ ಅನುಕೂಲಕ್ಕಾಗಿ ಜಿಯೋ ಇನ್ನೊಂದು ತೀರ್ಮಾನ ಕೈಗೊಂಡಿದೆ. ಇಲ್ಲಿದೆ ವಿವರ.... 


ಬೆಂಗಳೂರು (ನ.05): ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಲಯನ್ಸ್ ಜಿಯೋಫೋನ್ ಕಂಪನಿ ಪ್ರಕಟಿಸಿದ್ದ ಆಫರ್ ನೆನಪಿದೆಯಾ? ಈಗ ಬಂದಿರುವ ಸುದ್ದಿ ಏನಂದ್ರೆ, ಮಾರುಕಟ್ಟೆಯಲ್ಲಿ ಆ ಆಫರ್‌ಗೆ ಬೇಡಿಕೆ ಹೆಚ್ಚಾಗಿದೆಯಂತೆ. ಅದಕ್ಕೆ ಕಂಪನಿ ಆ ಆಫರನ್ನ ಮತ್ತೆ ವಿಸ್ತರಿಸಿದೆ. 

ಹಾಗಾಗಿ ಜಿಯೋ ಕಂಪನಿ ದೀಪಾವಳಿ ಮುಗಿದ್ರೂ ಕೂಡಾ ಆ ಆಫರನ್ನು ಇನ್ನೊಂದು ಒಂದು ತಿಂಗಳು, ಅಂದ್ರೆ ನವೆಂಬರ್ ತಿಂಗಳು ಮುಗಿಯುವವರೆಗೆ  ಮುಂದುವರಿಸಲು ನಿರ್ಧರಿಸಿದೆ.

Tap to resize

Latest Videos

undefined

ಜಿಯೋಫೋನ್ ದೀಪಾವಳಿ ಕೊಡುಗೆಯಲ್ಲಿ ಏನಿದೆ?  

ಮೂಲತಃ 1,500 ರೂ.ಗಳಿಗೆ ಮಾರಾಟವಾಗುವ ಜಿಯೋಫೋನ್, ದೀಪಾವಳಿ ಕೊಡುಗೆ ಪ್ರಯುಕ್ತ ಕೇವಲ ರೂ. 699ಕ್ಕೆ ದೊರೆಯುತ್ತಿದೆ. ಅಷ್ಟೇ ಅಲ್ಲ,  ದೀಪಾವಳಿ ಕೊಡುಗೆಯಾಗಿ ಬಳಕೆದಾರರಿಗೆ ರೂ.700 ಮೌಲ್ಯದ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು  ನೀಡಲಿದೆ.

ಜಿಯೋ ಪೋನ್ ಕೊಳ್ಳುವ ಗ್ರಾಹಕರು ಮೊದಲು ಮಾಡಿಸುವ 7 ರೀಚಾರ್ಜ್‌ಗಳಲ್ಲಿ ಜಿಯೋ ಹೆಚ್ಚುವರಿಯಾಗಿ ಪ್ರತಿ ರೀಚಾರ್ಜ್‌ನಲ್ಲಿ (ರೂ. 99 X 7) ರೂ.99 ಮೌಲ್ಯದ ಡೇಟಾವನ್ನು ಉಚಿತವಾಗಿ ಸೇರಿಸುತ್ತದೆ. ಇದರಿಂದಾಗಿ ರೂ.700  ಮೌಲ್ಯದ ಹೆಚ್ಚುವರಿ ಡೇಟಾವು ಜಿಯೋಫೋನ್ ಬಳಕೆದಾರರಿಗೆ ದೊರೆಯಲಿದೆ. 

click me!