Redmi K50 Gaming Edition: ಗೇಮಿಂಗ್ ಸ್ಮಾರ್ಟ್‌ಫೋನ್ ಮಾಹಿತಿ ಸೋರಿಕೆ, ಏನೆಲ್ಲ ವಿಶೇಷತೆ?

By Suvarna News  |  First Published Jan 15, 2022, 4:37 PM IST

*ಶಿಯೋಮಿಯ ಸಬ್‍ಬ್ರ್ಯಾಂಡ್ ಆಗಿರುವ ರೆಡ್‌ಮಿಯಿಂದ ಕೆ50 ಗೇಮಿಂಗ್ ಎಡಿಷನ್ ಸ್ಮಾರ್ಟ್‌ಫೋನ್ ತಯಾರು
*ಗೇಮಿಂಗ್ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಮಾರ್ಟ್‌ಫೋನ್ ರೂಪಿಸಲಾಗಿದೆ.
*ರೆಡ್‌ಮಿ ಕೆ50 ಗೇಮಿಂಗ್ ಎಡಿಷನ್ ಫೋನ್ ಜತೆಗೆ ಇನ್ನೂ ಮೂರ್ನಾಲ್ಕು ಫೋನ್ ಸಿದ್ಧ


Tech Desk: ಚೀನಾ ಮೂಲದ ಶಿಯೋಮಿ ಮೊಬೈಲ್ ತಯಾರಿಕಾ ಕಂಪನಿಯ ಮತ್ತೊಂದು ಬ್ರ್ಯಾಂಡ್ ರೆಡ್‌ಮಿ ಕೂಡ ಭಾರತೀಯ ಮಾರುಕಟ್ಟೆ ಸೇರಿದಂತೆ ಜಗತ್ತಿನಾದ್ಯಂತ ತನ್ನದೇ ಪ್ರಭಾವಳಿಯನ್ನು ಹೊಂದಿದೆ. ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ರೆಡ್‌ಮಿ ಬಳಕೆದಾರರನ್ನು ಸೆಳೆಯಲು ಯಶಸ್ವಿಯಾಗುತ್ತಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ರೆಡ್‌ಮಿ ಕೆ50 ಗೇಮಿಂಗ್ ಎಡಿಷನ್ (Redmi K50 Gaming Edition) ಸ್ಮಾರ್ಟ್‌ಫೋನ್ ಶೀಘ್ರವೇ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಈ ಫೋನಿನ ಕೆಲವು ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿ ಬಳಕೆದಾರರಲ್ಲಿ, ರೆಡ್‌ಮಿ ಫೋನ್ ಇಷ್ಟಪಡುವವರಲ್ಲಿ ಹೆಚ್ಚಿನ ಆಸಕ್ತಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಕೆಲವು ಟಿಪ್ಸಟರ್‌ಗಳು ರೆಡ್‌ಮಿ ಕೆ50 ಗೇಮಿಂಗ್ ಎಡಿಷನ್ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಇಂಟರ್ನೆಟ್‌ನಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಈ ಫೋನು 6.67 ಇಂಚ್ ಪ್ರದರ್ಶಕ, ಡುಯಲ್ ವಿಸಿ ಕೂಲಿಂಗ್ ಸಿಸ್ಟಮ್, ಗೇಮಿಂಗ್ ಶೌಲ್ಡರ್ ಟ್ರಿಗರ್ಸ್ ಸೇರಿದಂತೆ ಇನ್ನಿತರ ವಿಶೇಷ ಫೀಚರ್‌ಗಳು ಮತ್ತ ಸೌಲಭ್ಯಗಳನ್ನು ಹೊಂದಿರುವ ಸಾಧ್ಯತೆ ಇದೆ. ಈ ಗೇಮಿಂಗ್ ಎಡಿಷನ್ ಮೂರು ಮಾದರಿ ಸ್ಮಾರ್ಟ್‌ಫೋನುಗಳಲ್ಲಿ ಬರಲಿದೆ ಎನ್ನಲಾಗುತ್ತಿದೆ. ಅವು ವೆನಿಲ್ಲಾ ರೆಡ್‌ಮಿ ಕೆ50 (Redmi K50), ರೆಡ್‌ಮಿ ಕೆ50 ಪ್ರೋ(Redmi K50 Pro) ಮತ್ತು ರೆಡ್‌ಮಿ ಕೆ50 ಗೇಮಿಂಗ್ ಎಡಿಷನ್ (Redmi K50 Gaming Edition) ಸ್ಮಾರ್ಟ್‌ಫೋನ್‌ಗಳಾಗಿವೆ.

Latest Videos

undefined

ಇದನ್ನೂ ಓದಿ:  Apple Fitness ಹೊಸ ವರ್ಷದ ಫಿಟ್ನೆಸ್ ರೆಸಲ್ಯೂಶನ್ ಕಾರ್ಯಗತಗೊಳಿಸಲು ಬಂದಿದೆ ಆ್ಯಪಲ್ ಫಿಟ್ನೆಸ್ ಪ್ಲಸ್ 

ಟಿಪ್ಸ್‌ಟರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಡಿಂರುವ ಮಾಹಿತಿಯ ಪ್ರಕಾರ, ರೆಡ್‌ಮಿ ಕೆ50 ಗೇಮಿಂಗ್ ಎಡಿಷನ್ ಸ್ಮಾರ್ಟ್‌ಫೋನ್ ಸಾಕಷ್ಟು  ಹೊಸ ಫೀಚರ್‌ಗಳನ್ನು ಹೊಂದಿದೆ. ಈ ಮೊದಲೇ ಹೇಳಿರುವಂತೆ ಈ ಗೇಮಿಂಗ್ ಎಡಿಷನ್ ಫೋನ್ 6.67 ಇಂಚ್  ಹ್ಯುಕ್ಸಿಂಗ್ ಫ್ಲಿಕ್ಸಿಬಲ್ ಪ್ರದರ್ಶಕವನ್ನು ಹೊಂದಿರಲಿದೆ. 4,700 mAh ಸಾಮರ್ಥ್ಯದ  ಬ್ಯಾಟರಿ ಇರಲಿದ್ದು, ಅದು 120 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ ಎಂದು ಹೇಳಲಾಗುತ್ತಿದೆ. 

ಇನ್ನು ಫೋನಿನಲ್ಲಿ ಕ್ಯಾಮೆರಾಗಳಿರಲಿದ್ದು, ಆ ಬಗ್ಗೆಯೂ ಒಂದಿಷ್ಟು ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ. ಈ ಫೋನ್‌ನಲ್ಲಿ ಒಟ್ಟು ಮೂರು ಕ್ಯಾಮೆರಾಗಳ ಸೆಟ್‌ಅಪ್ ಇರಲಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್  ಅಥಾವ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸಾಧ್ಯತೆ ಇದೆ. ಇನ್ನುಳಿದ ಎರಡು ಕ್ಯಾಮೆರಾಗಳು 13 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿರಬಹುದು ಎನ್ನಲಾಗುತ್ತಿದೆ. ಇದೇ ವೇಳೆ, ಫೋನ್ ಮುಂಭಾಗದಲ್ಲಿ ಕಂಪನಿಯು ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡುವ ಸಾಧ್ಯತೆ ಎಂದು ಸೋರಿಕೆಯಾದ ಮಾಹಿತಿಯಿಂದ ತಿಳಿದು  ಬಂದಿದೆ.   

ಇದನ್ನೂ ಓದಿ:  Personal Computer Sales: ಲೆನೋವೋ ಮುಂದೆ, ಎಚ್‌ಪಿ, ಡೆಲ್, ಆಪಲ್ ಹಿಂದೆ ಹಿಂದೆ!

ಈ ರೆಡ್‌ಮಿ ಕೆ50 ಗೇಮಿಂಗ್ ಎಡಿಷನ್ ಫೋನ್ dual VC cooling system, ಗೇಮಿಂಗ್ ಶೌಲ್ಡರ್ ಟ್ರಿಗರ್ಸ್, ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ಸ್ ಇರುವ ಸಾಧ್ಯತೆಯಿದೆ. ಇಷ್ಟು ಮಾತ್ರವೇ ಅಲ್ಲದೇ ಡಿಜಿಟಲ್ ಚಾಟ್ ಸ್ಟೇಷನ್ (Digital Chat Station) ಸೇರಿದಂತೆ ಇನ್ನು ಅನೇಕ  ಹೊಸ ಹೊಸ ಫೀಚರ್‌ಗಳು ಇರಲಿವೆ. ವಿಶೇಷವಾಗಿ ಗೇಮಿಂಗ್‌ಗೆ ಅನುಕೂಲವಾಗುವಂತ ಸೌಲಭ್ಯಗಳು ಈ ಹೊಸ ಫೋನ್‌ನಲ್ಲಿ ಇರಲಿವೆ ಎನ್ನಲಾಗುತ್ತಿದೆ.

ರೆಡ್‌ಮಿ ಕೆ50 ಗೇಮಿಂಗ್ ಎಡಿಷನ್ ಫೋನ್ ಜತೆಗೆ ಇನ್ನೂ ಹೊಸ ಫೋನುಗಳನ್ನು ಬಿಡುಗಡೆ ಮಾಡುವ ಬಗ್ಗೆ ಕಂಪನಿ ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ರೆಡ್‌ಮಿ ಎಲ್ 16 (Redmi L 16), ರೆಡ್‌ಮಿ ಎಲ್ 16 ಯು (Redmi L 16 U) ಸ್ಮಾರ್ಟ್‌ಫೋನುಗಳ ಟೆಸ್ಟಿಂಗ್‌ನಲ್ಲಿವೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಎಂಟ್ರಿ ಲೇವಲ್ ಸ್ಮಾರ್ಟ್‌ಫೋನ್   ಎನಿಸಿಕೊಳ್ಳಲಿರುವ ರೆಡ್‌ಮಿ ಎಲ್ 19 (Redmi L 19) ಸ್ಮಾರ್ಟ್‌ಫೋನ್ ರೆಡಿಯಾಗುತ್ತಿದೆ ಎಂಬ ಸಂಗತಿ ಬಹಿರಂಗವಾಗಿದೆ.

click me!