
ಟೆಕ್ ದೈತ್ಯ 'ಆಪಲ್' (Apple) ಸಂಸ್ಥೆಯು ತನ್ನ ವಾರ್ಷಿಕ ಸೆಪ್ಟೆಂಬರ್ ಮೆಗಾ ಇವೆಂಟ್‌ನಲ್ಲಿ ನಿರೀಕ್ಷಿತ 'ಐಫೋನ್ 18 ಪ್ರೊ ಮ್ಯಾಕ್ಸ್' (iPhone 18 Pro Max) ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಈ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಜೊತೆಗೆ ಹೊಸ 'ಐಫೋನ್ ಅಲ್ಟ್ರಾ' (iPhone Ultra) ಮಾದರಿಯೂ ಬಿಡುಗಡೆಯಾಗುವ ಸಾಧ್ಯತೆಯಿದೆ. ಆಪಲ್ ಅಧಿಕೃತ ದಿನಾಂಕವನ್ನು ಇನ್ನು ಪ್ರಕಟಿಸದಿದ್ದರೂ, ಸೆಪ್ಟೆಂಬರ್ 9 ರಂದು ಈ ಕಾರ್ಯಕ್ರಮ ನಡೆಯಲಿದ್ದು, ಅದೇ ವಾರದ ಅಂತ್ಯದಲ್ಲಿ ಪ್ರೀ-ಆರ್ಡರ್ ಹಾಗೂ ತಿಂಗಳ ಅಂತ್ಯಕ್ಕೆ ಮಾರಾಟ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ.
ಐಫೋನ್ 18 ಪ್ರೊ ಮ್ಯಾಕ್ಸ್ ಬೃಹತ್ ವಿನ್ಯಾಸ ಬದಲಾವಣೆಯನ್ನೇನೂ ಪಡೆಯುವುದಿಲ್ಲ. ಆದರೆ ಪ್ರಸ್ತುತ ಮಾದರಿಯನ್ನೇ ಇನ್ನಷ್ಟು ಆಕರ್ಷಕವಾಗಿ ಪರಿಷ್ಕರಿಸುವ ಸಾಧ್ಯತೆಯಿದೆ.
6.9-ಇಂಚಿನ LTPO OLED ಡಿಸ್‌ಪ್ಲೇ, 120Hz ಪ್ರೊಮೋಷನ್ (ProMotion) ಅಡಾಪ್ಟಿವ್ ರಿಫ್ರೆಶ್ ದರದೊಂದಿಗೆ ಬರಲಿದೆ. ಹೊರಾಂಗಣದಲ್ಲಿ ಸ್ಪಷ್ಟವಾಗಿ ಕಾಣಲು ಗರಿಷ್ಠ ಬ್ರೈಟ್‌ನೆಸ್ ಹೆಚ್ಚಿಸಲಾಗುತ್ತಿದೆ. ಡೈನಾಮಿಕ್ ಐಲ್ಯಾಂಡ್ (Dynamic Island) ಗಾತ್ರದಲ್ಲಿ ಕೊಂಚ ಮಾರ್ಪಾಡಾಗಬಹುದು. ಈ ಫೋನ್ ಅತ್ಯಾಧುನಿಕ 2nm ಉತ್ಪಾದನಾ ತಂತ್ರಜ್ಞಾನದ A20 Pro ಚಿಪ್‌ಸೆಟ್ ಹೊಂದಿರಲಿದೆ. 12GB RAM ನೊಂದಿಗೆ ಬರಲಿದ್ದು, ಆನ್-ಡಿವೈಸ್ ಆಪಲ್ ಇಂಟೆಲಿಜೆನ್ಸ್ (AI) ಮತ್ತು ಮಲ್ಟಿಟಾಸ್ಕಿಂಗ್‌ಗೆ ಹೊಸ ವೇಗ ನೀಡಲಿದೆ. ಬ್ಯಾಟರಿ ದಕ್ಷತೆ ಹಾಗೂ ಗ್ರಾಫಿಕ್ಸ್ ಕಾರ್ಯಕ್ಷಮತೆ ಗಮನಾರ್ಹವಾಗಿ ಹೆಚ್ಚಾಗಲಿದೆ.
ಈ ಬಾರಿ ಆಪಲ್ ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೊದಲ ಬಾರಿಗೆ ಲೆನ್ಸ್‌ಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ 'ವೇರಿಯಬಲ್ ಅಪರ್ಚರ್' ತಂತ್ರಜ್ಞಾನ ಹೊಂದಿರಲಿದೆ. ಇದರಿಂದ ನೈಟ್ ಮೋಡ್ ಛಾಯಾಗ್ರಹಣ ಮತ್ತು ಬೊಕೆ (Bokeh) ಎಫೆಕ್ಟ್‌ಗಳು ವೃತ್ತಿಪರ ಕ್ಯಾಮೆರಾದಂತೆ ಮೂಡಿಬರಲಿವೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಮುಂದುವರಿಯಲಿದೆ.
ಬ್ಯಾಟರಿಯ ಗಾತ್ರವನ್ನು ನೇರವಾಗಿ ಹೆಚ್ಚಿಸುವ ಬದಲು, A20 ಪ್ರೊ ಚಿಪ್ ಹಾಗೂ iOS ಸಾಫ್ಟ್‌ವೇರ್ ಆಪ್ಟಿಮೈಸೇಶನ್ ಮೂಲಕ ಬ್ಯಾಟರಿ ಬಾಳಿಕೆಯನ್ನು (Battery Life) ದೀರ್ಘಗೊಳಿಸಲು ಆಪಲ್ ತಂತ್ರ ರೂಪಿಸಿದೆ.
ಜಾಗತಿಕವಾಗಿ ಈ ಮಾದರಿಯ ಬೆಲೆ ಸುಮಾರು $200 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪರಿಣಾಮವಾಗಿ, ಭಾರತದಲ್ಲಿ ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ ಹಿಂದಿನ ಪೀಳಿಗೆಗಿಂತ ₹20,000 ವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ಅಂದರೆ ಅದಾಜು ₹1,54,900 ರಿಂದ ₹1,79,900 ಬೆಲೆ ಇರಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.