ಐಫೋನ್ ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಇದೆ. ಬರೋಬ್ಬರಿ 29 ಸಾವಿರ ರೂಪಾಯಿ ಕಡಿತವಾಗಿ ಕೈಗೆಟುಕುವ ದರದಲ್ಲಿ ಐಫೋನ್ 14 ಲಭ್ಯವಿದೆ.
ಬೆಂಗಳೂರು(ನ.01) ಆ್ಯಪಲ್ ಇತ್ತೀಚೆಗೆ ಐಫೋನ್ 14 ಸೀರಿಸ್ ಬಿಡುಗಡೆ ಮಾಡಿದೆ. ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೋ ಹಾಗೂ ಪ್ರೋ ಮ್ಯಾಕ್ಸ್ ಸೀರಿಸ್ ಫೋನ್ ಬಿಡುಗಡೆ ಮಾಡಿದೆ. ಈ ಪೈಕಿ ಇದೀಗ ಐಫೋನ್ 14 ಮೇಲೆ ಭರ್ಜರಿ ಆಫರ್ ಇದೆ. ಇದೀಗ ಐಫೋನ್ 14 ಮೇಲೆ ಬರೋಬ್ಬರಿ 29,000 ರೂಪಾಯಿ ಕಡಿತಗೊಂಡು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಐಫೋನ್ 14 ಬೆಲೆ 79,900 ರೂಪಾಯಿ ಇದೀಗ ಕೇವಲ 50,499 ರೂಪಾಯಿಗೆ ಲಭ್ಯವಿದೆ. ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರಿಗೆ ಲಭ್ಯ.
ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಘೋಷಿಸಿದೆ. ಫ್ಲಿಪ್‌ಕಾರ್ಟ್ ಮೂಲಕ ಐಫೋನ್ 14 ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಮೂಲಕ ಮೊಬೈಲ್ ಕೈಸೇರಲಿದೆ. ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಆಫರ್ ಸೇರಿದಂತೆ ಹಲವು ಆಫರ್ ಒಟ್ಟೂಗೂಡಿಸಿದರೆ 29 ಸಾವಿರಕ್ಕೂ ಅಧಿಕ ರೂಪಾಯಿ ಡಿಸ್ಕೌಂಟ್ ಆಗಲಿದೆ. ಇದರಿಂದ ಗ್ರಾಹಕರು ಸುಲಭವಾಗಿ ಐಫೋನ್ 14 ಖರೀದಿ ಮಾಡಲು ಸಾಧ್ಯವಿದೆ.
ಕೇವಲ 11,599 ರೂ. ಗೆ ಸಿಗ್ತಿದೆ ದುಬಾರಿ ಆ್ಯಪಲ್ ಐಫೋನ್ 13: ಇಲ್ಲಿದೆ ಸೂಪರ್ ಆಫರ್!
ಆ್ಯಪಲ್ ಐಫೋನ್ 14 ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಿದೆ. ಐಫೋನ್ 13 ಹಾಗೂ 14ನಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಹೀಗಾಗಿ ಐಫೋನ್ 14 ಬೇಡಿಕೆ ಇತರ ಐಫೋನ್‌ಗಳಂತಿಲ್ಲ. ಇದೀಗ ಡಿಸ್ಕೌಂಟ್ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ ಲಭ್ಯವಿದೆ.
ಐಫೋನ್ ಉತ್ಪಾದನೆ ಶೀಘ್ರದಲ್ಲೇ ಟಾಟಾ ಗ್ರೂಪ್ ಮಾಡಲಿದೆ. ಇದರಿಂದ ಮತ್ತಷ್ಟು ಬೆಲೆ ಕಡಿತಗೊಳ್ಳಲಿದೆ ಅನ್ನೋ ಮಾತುಗಳು ಹರಿದಾಡುತ್ತಿದೆ. ಆದರೆ ಈ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪ್ ಕಂಪನಿ ಈಗಾಗಲೇ ಐಫೋನ್‌ಗಳನ್ನು ಭಾರತದಲ್ಲಿ ಜೋಡಿಸುತ್ತಿದೆ. ಆ ಕಂಪನಿಯ ಭಾರತದ ಘಟಕವನ್ನು ಇದೀಗ ಟಾಟಾ ಗ್ರೂಪ್‌ನ ಟಾಟಾ ಎಲೆಕ್ಟ್ರಾನಿಕ್ ಪ್ರೈವೇಟ್ ಲಿ., ಸುಮಾರು 1000 ಕೋಟಿ ರು.ಗೆ ಖರೀದಿ ಮಾಡಿದೆ. ‘ಟಾಟಾಗೆ ತನ್ನ ಕಂಪನಿಯನ್ನು ಮಾರುವ ಪ್ರಸ್ತಾವಕ್ಕೆ ವಿಸ್ಟ್ರಾನ್ ಆಡಳಿತ ಮಂಡಳಿ ಸಭೆ ಅನುಮೋದನೆ ನೀಡಿದೆ.
ಐಫೋನ್ ಸ್ಕ್ರೀನ್ ಬರ್ನ್ ಸಮಸ್ಯೆ ಬಗೆಹರಿಸಿದ ಆ್ಯಪಲ್, iOS 17.1 ರಿಲೀಸ್!
ಈ ನಡುವೆ ವಿಸ್ಟ್ರಾನ್-ಟಾಟಾ ಒಪ್ಪಂದದ ಘೋಷಣೆಗೆ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ‘ಇನ್ನು ಎರಡೂವರೆ ವರ್ಷದೊಳಗೆ ಟಾಟಾ ಕಂಪನಿ ಭಾರತದಲ್ಲೇ ಐಫೋನ್ ಉತ್ಪಾದಿಸಿ ದೇಶದೊಳಗೆ ಮಾರಾಟ ಮಾಡಲಿದೆ ಹಾಗೂ ವಿದೇಶಗಳಿಗೆ ರಫ್ತು ಮಾಡಲಿದೆ’ ಎಂದಿದ್ದಾರೆ. ಅಲ್ಲದೆ, ಇಲ್ಲಿಯವರೆಗೆ ಭಾರತದಲ್ಲಿ ತನ್ನ ಘಟಕಗಳನ್ನು ನಿರ್ಮಿಸಿದ್ದ ವಿಸ್ಟ್ರಾನ್‌ಗೆ ಧನ್ಯವಾದ ಸಮರ್ಪಿಸಿದ್ದಾರೆ.