ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ Oppo F21 Pro, Pro 5G ಭಾರತದಲ್ಲಿ ಲಾಂಚ್‌: ಬೆಲೆ ಎಷ್ಟು?

By Suvarna NewsFirst Published Apr 12, 2022, 6:13 PM IST
Highlights

Oppo F21 Pro ಏಪ್ರಿಲ್ 15 ರಿಂದ ಮಾರಾಟವಾಗಲಿದೆ ಹಾಗೂ Oppo F21 Pro 5G ಮಾರಾಟ ಏಪ್ರಿಲ್ 21 ರಿಂದ ಪ್ರಾರಂಭವಾಗಲಿದೆ

Oppo F21 Pro ಮತ್ತು Oppo F21 Pro 5G ಭಾರತದಲ್ಲಿ ಮಂಗಳವಾರ ಏಪ್ರಿಲ್ 12ರಂದು ಬಿಡುಗಡೆ ಮಾಡಲಾಗಿದೆ. ಎರಡೂ ಫೋನ್‌ಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಬರುತ್ತವೆ ಮತ್ತು 8GB RAM ಹೊಂದಿದ್ದು ಹಿಂಭಾಗದಲ್ಲಿ ಆರ್ಬಿಟ್ ಲೈಟನ್ನು ಸಹ ಒಳಗೊಂಡಿದೆ, ಇದು ನೋಟಿಫಿಕೇಶನ್‌ ಇಂಡಿಕೇಟರಾಗಿ ಕಾರ್ಯನಿರ್ವಹಿಸುತ್ತದೆ. Oppo F21 Pro 90Hz ಡಿಸ್ಪ್ಲೇ ಮತ್ತು Qualcomm Snapdragon 680 SoC ಹೊಂದಿದ್ದರೆ Oppo F21 Pro 5G 60Hz ಸ್ಕ್ರೀನ್ ಮತ್ತು ಸ್ನಾಪ್ಡ್ರಾಗನ್ 695 ಚಿಪ್ಪನ್ನು ಹೊಂದಿದೆ. Oppo F21 Pro ಮತ್ತು Oppo F21 Pro 5G ಜೊತೆಗೆ, ಚೀನಾದ ಕಂಪನಿಯು Oppo Enco Air 2 Pro ಅದರ ಇತ್ತೀಚಿನ ಟ್ರು ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್‌ಗಳಾಗಿ ಪರಿಚಯಿಸಿದೆ.

ಭಾರತದಲ್ಲಿ Oppo F21 Pro, F21 Pro 5G ಬೆಲೆ ಲಭ್ಯತೆ: ಭಾರತದಲ್ಲಿ Oppo F21 Pro ಬೆಲೆಯನ್ನು  8GB + 128GB ಸ್ಟೋರೇಜ್ ರೂಪಾಂತರ ರೂ.22,999 ಬೆಲೆಯಲ್ಲಿ ಲಭ್ಯವಿದೆ. ಫೋನ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ಸನ್‌ಸೆಟ್ ಆರೆಂಜ್ ಬಣ್ಣಗಳಲ್ಲಿ ಬರುತ್ತದೆ. ಸನ್‌ಸೆಟ್ ಆರೆಂಜ್  ಆಯ್ಕೆ ಎರಡನೆಯದು ಫೈಬರ್‌ಗ್ಲಾಸ್-ಲೆದರ್ ವಿನ್ಯಾಸವನ್ನು ಹಿಂಭಾಗದಲ್ಲಿ ಹೊಂದಿದೆ, ಅದು ಮೇಲ್ಭಾಗದಲ್ಲಿ ಗ್ರೇನ್‌ ಟೆಕ್ಶರ್ ಹೊಂದಿದೆ. 

Latest Videos

ಇನ್ನು ಭಾರತದಲ್ಲಿ Oppo F21 Pro 5G ಬೆಲೆ  8GB + 128GB ಕಾನ್ಫಿಗರೇಶನ್‌ ರೂ. 26,999 ಬೆಲೆಯಲ್ಲಿ ಲಭ್ಯವಿದೆ . 5G ಮಾದರಿಯು ಕಾಸ್ಮಿಕ್ ಬ್ಲ್ಯಾಕ್ ಮತ್ತು ರೇನ್ಬೋ ಸ್ಪೆಕ್ಟ್ರಮ್ ಬಣ್ಣಗಳಲ್ಲಿ ಬರುತ್ತದೆ.

ಇದನ್ನೂ ಓದಿ: Oppo Find N ರೀತಿಯಲ್ಲೇ ಇದೆಯಾ OnePlus ಫೋಲ್ಡಬಲ್ ಫೋನ್?

Oppo F21 Pro ಏಪ್ರಿಲ್ 15 ರಿಂದ ಮಾರಾಟವಾಗಲಿದೆ ಹಾಗೂ Oppo F21 Pro 5G ಮಾರಾಟ ಏಪ್ರಿಲ್ 21 ರಿಂದ ಪ್ರಾರಂಭವಾಗಲಿದೆ. Oppo F21 Pro ಮತ್ತು F21 Pro 5G ಯಲ್ಲಿನ ಲಾಂಚ್ ಕೊಡುಗೆಗಳು 10 ಪ್ರತಿಶತ ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ನೋ-ಕಾಸ್ಟ್ EMI ಆಯ್ಕೆಗಳನ್ನು ಒಳಗೊಂಡಿವೆ

Oppo F21 Pro ಫೀಚರ್ಸ್: Oppo F21 Pro Android 12 ನಲ್ಲಿ ColorOS 12.1 ಜೊತೆಗೆ ರನ್ ಆಗುತ್ತದೆ. ಇದು 6.4-ಇಂಚಿನ ಪೂರ್ಣ-HD+ (1,080x2,400 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಫೋನ್ 8GB RAM ಜೊತೆಗೆ ಆಕ್ಟಾ-ಕೋರ್ Qualcomm Snapdragon 680 SoC ಅನ್ನು ಹೊಂದಿದೆ. 

ಸ್ಮಾರ್ಟ್‌ಫೋನಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಇದೆ, ಅದು 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ, ಇದು 2-ಮೆಗಾಪಿಕ್ಸೆಲ್ ಮೈಕ್ರೋ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಆರ್ಬಿಟ್ ಲೈಟ್ ಮೈಕ್ರೋ ಶೂಟರನ್ನು ಸುತ್ತುವರೆದಿದೆ ಮತ್ತು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಫೋಟೋ ಸೆರೆಹಿಡಿಯಲು ಅಧಿಸೂಚನೆ ಸೂಚಕ ಮತ್ತು ಫಿಲ್ ಲೈಟ್ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಹಿಂದಿನ ಕ್ಯಾಮೆರಾ ಸೆಟಪ್ ಎಲ್ಇಡಿ ಫ್ಲ್ಯಾಷ್ಲೈಟ್  ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, Oppo F21 Pro ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ Sony IMX709 ಕ್ಯಾಮೆರಾದೊಂದಿಗೆ ಬರುತ್ತದೆ.

Oppo F21 Pro 128GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ.  Oppo F21 Pro ಅನ್ನು 4,500mAh ಬ್ಯಾಟರಿಯೊಂದಿಗೆ ಸಜ್ಜುಗೊಳಿಸಿದೆ ಅದು 33W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 

Oppo F21 Pro 5G ಫೀಚರ್ಸ್:‌ Oppo F21 Pro 5G ಆಂಡ್ರಾಯ್ಡ್‌ನಲ್ಲಿ ColorOS 12 ಜೊತೆಗೆ ರನ್ ಆಗುತ್ತದೆ ಮತ್ತು 60Hz ರಿಫ್ರೆಶ್ ದರವನ್ನು ಹೊಂದಿರುವ 6.4-ಇಂಚಿನ Full-HD+ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಫೋನ್ 8GB RAM ಜೊತೆಗೆ ಆಕ್ಟಾ-ಕೋರ್ Qualcomm Snapdragon 695 SoC ನಿಂದ ಚಾಲಿತವಾಗಿದೆ. 

ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದು 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದ್ದು, ಜೊತೆಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರನ್ನು ಒಳಗೊಂಡಿದೆ. 5G ಫೋನ್ ಹಿಂಭಾಗದಲ್ಲಿ ಡ್ಯುಯಲ್ ಆರ್ಬಿಟ್ ಲೈಟ್‌ಗಳನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಚಾಟ್‌ಗಳಿಗಾಗಿ, Oppo F21 Pro 5G ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡುತ್ತದೆ.

ಇದನ್ನೂ ಓದಿ64MP ಕ್ಯಾಮೆರಾದೊಂದಿಗೆ Oppo Reno 7 ಸರಣಿಯ ಮೊದಲ 4G ಸ್ಮಾರ್ಟ್‌ಫೋನ್ ಲಾಂಚ್

Oppo F21 Pro 5G 128GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ. ಓಪ್ಪೋ 33W SuperVOOC ಚಾರ್ಜಿಂಗ್ ಜೊತೆಗೆ ಸಾಮಾನ್ಯ F21 Pro ನಲ್ಲಿ ಲಭ್ಯವಿರುವ ಅದೇ 4,500mAh ಸಾಮರ್ಥ್ಯವನ್ನು ಹೊಂದಿರುವ ಬ್ಯಾಟರಿಯೊಂದಿಗೆ F21 Pro 5G ಸಜ್ಜುಗೊಳಿಸಿದೆ. 

click me!