Oppo Find N ರೀತಿಯಲ್ಲೇ ಇದೆಯಾ OnePlus ಫೋಲ್ಡಬಲ್ ಫೋನ್?

By Suvarna News  |  First Published Apr 12, 2022, 4:23 PM IST

*ಈಗಾಗಲೇ ಒಪ್ಪೋ ಫೈಂಡ್ ಎನ್ ಎಂಬ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅಭಿವೃದ್ಧಿ ಮಾಡುತ್ತಿದೆ.
*ಅದೇ ರೀತಿಯ ಸ್ಮಾರ್ಟ್‌ಫೋನ್ ಅನ್ನು ಒನ್‌ಪ್ಲಸ್ ಮಾಡುತ್ತಿದೆ ಮತ್ತು ಬಹಳಷ್ಟು ಸಾಮತ್ಯೆಗಳಿವೆ
*ಒಪ್ಪೋ ಮತ್ತು ಒನ್‌ಪ್ಲಸ್‌ಗಳೆರಡೂ ಸಹೋದರ ಸಂಸ್ಥೆಯ  ಬ್ರ್ಯಾಂಡುಗಳು


OnePlus Foldable Phone:  ಚೀನಾದ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಪ್ರಮುಖವಾಗಿರುವ ಒಪ್ಪೋ (Oppo) ಮತ್ತು ಒನ್‌ಪ್ಲಸ್‌ (OnePlus) ಗಳೆರಡೂ ಫೋಲ್ಡಬಲ್ ಫೋನ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಒನ್‌ಪ್ಲಸ್ ತನ್ನ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಬಹಳ ಬ್ಯೂಜಿಯಾಗಿದೆ ಎನ್ನಲಾಗಿದೆ. . ಇತ್ತೀಚಿನ ಮೂಲಗಳ ಪ್ರಕಾರ, ಒನ್‌ಪ್ಲಸ್ ಅಭಿವೃದ್ಧಿಪಡಿಸುತ್ತಿರುವ ಫೋಲ್ಡಬಲ್  ಸ್ಮಾರ್ಟ್‌ಫೋನ್ Oppo ಕಂಪನಿಯ ಫೋಲ್ಡಬಲ್ ಫೋನ್ ಆಗಿರುವ Find N ಅನ್ನು ಹೋಲುತ್ತದೆ. OnePlus ನ ಸಹೋದರ ಸಂಸ್ಥೆಯಾಗಿರುವ Oppo ನ ಮೊದಲ ಫೋಲ್ಡಬಲ್ ಇದು. ಇದು ಕಳೆದ ವರ್ಷ Oppo Inno Day ಸಮಾರಂಭದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿತ್ತು.

OnePlus ಅಭಿವೃದ್ಧಿಪಡಿಸುತ್ತಿರುವ ಫೋಲ್ಡಬಲ್ ಫೋನ್ ಬಗ್ಗೆ ಈ ಹಿಂದೆಯೂ ಆನ್‌ಲೈನ್ ಸಾಕಷ್ಟು ಮಾಹಿತಿಗಳು ಸೋರಿಕೆಯಾಗಿವೆ, ಕೆಲವು ವದಂತಿಗಳು ಕೂಡ ಹರಡಿದ್ದವು. ಒನ್‌ಪ್ಲಸ್ ಕಳೆದ ತಿಂಗಳು ಗೂಗಲ್ ಜೊತೆಗೆ ಮಡಿಸಬಹುದಾದ ಫೋನ್ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿತ್ತು. ಹಾಗಾಗಿ, ಒನ್‌ಪ್ಲಸ್ ಕಂಪನಿಯ ಫೋಲ್ಡಬಲ್ ಫೋನ್‌ಗಳ ಬಗ್ಗೆ ಸಾಕಷ್ಟು ಮಾಹಿತಿ ಹರಿದುಬರಲು ಕಾರಣವಾಯಿತು. ಹಾಗಾಗಿ, ಕೆಲವು ಮೂಲಗಳ ಒನ್‌ಪ್ಲಸ್ ಹೊರ ತರುತ್ತಿರುವ ಫೋಲ್ಡಬಲ್ ಫೋನ್, ಒಪ್ಪೋನ ಫೈಂಡ್ ಎನ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗೆ ಬಹಳಷ್ಟು ಹೋಲಿಕೆಯಾಗುತ್ತಿದೆ ಎನ್ನಲಾಗಿದೆ.

Tap to resize

Latest Videos

undefined

 ಇದನ್ನೂ ಓದಿ: ಶವೊಮಿ, ಓಪ್ಪೋ, ರಿಯಲ್‌ಮಿ ಸೇರಿ ಏಪ್ರಿಲ್‌ನಲ್ಲಿ ಯಾವೆಲ್ಲ ಫೋನ್ ಲಾಂಚ್?    

Oppo ಮತ್ತು OnePlus ಒಂದೇ ರೀತಿಯ ಗುಣಲಕ್ಷಣಗಳೊಂದಿಗೆ ಅನೇಕ ಫೋನ್‌ಗಳನ್ನು ಪರಿಚಯಿಸಿವೆ ಮತ್ತು ಈ ವಿಷಯದಲ್ಲಿ Oppo Find N ಫೋಲ್ಡಬಲ್ ಸ್ಮಾರ್ಟ್‌ಫೋನ್ ಮುಂದಿನ ಸಾಲಿನಲ್ಲಿದೆ. ಆದರೆ, ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ಯಾವಾಗ ಮಾರುಕಟ್ಟೆಗೆ ಬರಲಿದೆ ಎಂಬ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿಗಳಿಲ್ಲ. OnePlus ಈ ವರ್ಷ ಐದು ಹೆಚ್ಚುವರಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ, ಈ ಪೈಕಿ ಯಾವುದೇ ಫೋನ್ ಫೋಲ್ಡಬಲ್ ಫೋನ್ ಆಗಿರುವುದಿಲ್ಲ ಎನ್ನಲಾಗುತ್ತಿದೆ. ಹಾಗೆಯೇ ಕೆಲವು ಮೂಲಗಳ ಪ್ರಕಾರ, ಮೊದಲ OnePlus ಫೋಲ್ಡಬಲ್ ಫೋನ್ ಮರುಬ್ರಾಂಡ್ ಮಾಡಿದ Oppo Find N ಆಗಿರಬಹುದು.

OnePlus OnePlus 10 Pro ಅನ್ನು ಭಾರತ ಮತ್ತು ಇತರ ವಿಶ್ವಾದ್ಯಂತ ದೇಶಗಳಲ್ಲಿ ಪರಿಚಯಿಸಲಾಗಿದೆ. OnePlus 10 Pro 2022 ರ ಕಂಪನಿಯ ಪ್ರಮುಖ ಉತ್ಪನ್ನವಾಗಿದ್ದು, Snapdragon 8 Gen 1 ಎಂಜಿನ್, 120Hz LTPO 2.0 ಡಿಸ್ಪ್ಲೇ, ಹ್ಯಾಸ್ಲೆಬ್ಲಾಡ್-ಬ್ರಾಂಡ್ ಟ್ರಿಪಲ್ ಬ್ಯಾಕ್ ಕ್ಯಾಮೆರಾಗಳು ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

 ಇದನ್ನೂ ಓದಿ: ಭಾರತದಲ್ಲೇ Apple iPhone 13 ಉತ್ಪಾದನೆ, ಬೆಲೆ ಕಡಿಮೆಯಾಗುವ ಸಾಧ್ಯತೆ

ಕಳೆದ ತಿಂಗಳು, OnePlus ಫೋಲ್ಡಬಲ್ ಸಾಧನಗಳಿಗಾಗಿ ಸಾಫ್ಟ್‌ವೇರ್‌ನಲ್ಲಿ Google ನೊಂದಿಗೆ ಸಹಕರಿಸುತ್ತಿದೆ ಎಂದು ತಿಳಿದುಬಂದಿದೆ. MWC 2022 ಈವೆಂಟ್ ಸಮಯದಲ್ಲಿ, ಕಂಪನಿಯು ಗೂಗಲ್ ಜೊತೆಗೆ ಮಡಚಬಹುದಾದ ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿರಬಹುದು  ಎನ್ನಲಾಗಿದೆ. "OnePlus ಫೋಲ್ಡಬಲ್ ಫೋನ್‌ಗಳು ಮತ್ತು OxygenOS 13 ನೊಂದಿಗೆ ಬಿಡುಗಡೆ ಮಾಡಬಹುದಾದ ಹೊಸ ವೈಶಿಷ್ಟ್ಯಗಳು ಸೇರಿದಂತೆ ಪ್ರಮುಖ ಉತ್ಪನ್ನಗಳಲ್ಲಿ Google ನೊಂದಿಗೆ ಸಹಯೋಗವನ್ನು ಹೊಂದಿದೆ" ಎಂದು OnePlus ನ ಗ್ಯಾರಿ ಚೆನ್ (Gary Chen) ಅವರು ತಿಳಿಸಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಫೋಲ್ಡಬಲ್ ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ತೊಡಗಿವೆ. ಈಗಾಗಲೇ, ಸ್ಯಾಮ್ಸಂಗ್ ಕಂಪನಿಯು ಫೋಲ್ಡಬಲ್ ಫೋನ್ ಬಿಡುಗಡೆ ಮಾಡಿ, ಯಶಸ್ಸು ಕಂಡಿದೆ. ಈ ಸಾಲಿನಲ್ಲಿ ಗೂಗಲ್, ಒಪ್ಪೋ, ಒನ್ ಪ್ಲಸ್ ಸೇರಿದಂತ ಇನ್ನೂ ಅನೇಕ ಕಂಪನಿಗಳಿವೆ. ಬಹುಶಃ ಮುಂದಿನ ಐದಾರು ವರ್ಷಗಳಲ್ಲಿ ಈ ಫೋಲ್ಡಬಲ್ ಫೋನುಗಳ ಬಜೆಟ್ ಫೋನ್ ರೀತಿಯಲ್ಲಿ ಎಲ್ಲಡೆಯೂ ಲಭ್ಯವಾಗಬಹುದು ಎಂದು ಹೇಳಬಹುದು. 

click me!