ಇನ್ನೆರಡು ವಾರಗಳಲ್ಲಿ ಅಂದರೆ ಏಪ್ರಿಲ್ ತಿಂಗಳಾಂತ್ಯದೊಳಗೆ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ
ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವಿರಾ? ನೀವು ಹುಡುಕುತ್ತಿರುವ ಬಜೆಟ್ ಮಧ್ಯಮ ಶ್ರೇಣಿಯ ಆಲ್‌ರೌಂಡರ್ ಆಗಿರಲಿ ಅಥವಾ ಹೈ-ಎಂಡ್ ಕ್ಯಾಮೆರಾಗಳು ಮತ್ತು ವೇಗದ ಚಾರ್ಜಿಂಗ್‌ನೊಂದಿಗೆ ಫ್ಲ್ಯಾಗ್‌ಶಿಪ್ ಫೋನಾಗಿರಲಿ, ಇನ್ನೆರಡು ವಾರಗಳಲ್ಲಿ ಅಂದರೆ ತಿಂಗಳಾಂತ್ಯದೊಳಗೆ ಭಾರತದಲ್ಲಿ ಹಲವಾರು ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿವೆ. ಇದು ಒನ್‌ಪ್ಲಸ್, ಶಾಓಮಿ ಮತ್ತು ಐಕ್ಯೂನಂತಹ ಬ್ರ್ಯಾಂಡ್‌ಗಳ ಆಯ್ಕೆಗಳನ್ನು ಒಳಗೊಂಡಿದೆ. ನಿಮಗೆ ಯಾವ ಫೋನ್ ಬೇಕು ಎಂದು ನೀವು ಇನ್ನೂ ಮನಸ್ಸು ಮಾಡಿಲ್ಲದಿದ್ದರೆ, ಈ ತಿಂಗಳು ಬಿಡುಗಡೆಯಾಗಲಿರುವ ವಿವಿಧ ಬ್ರ್ಯಾಂಡ್‌ಗಳ ಈ ಐದು ಸಾಧನಗಳನ್ನು ನೀವು ಪರಿಗಣಿಸಬಹುದು.
OnePlus Nord CE 2 Lite - ಏಪ್ರಿಲ್ 28: OnePlus Nord CE 2 Lite ಬಿಡುಗಡೆ ಬಗ್ಗೆ ಕಳೆದ ಕೆಲವು ದಿನಗಳಿಂದ ವರದಿ ಹಾಗೂ ಸೋರಿಕೆಗಳು ಬಿಡುಗಡೆಯಾಗಿದ್ದವು, ಆದರೂ ಒನ್ ಪ್ಲಸ್ ಈ ಫೋನ್‌ನ ಬಿಡುಗಡೆಯನ್ನು ಇತ್ತೀಚೆಗೆ ದೃಢಪಡಿಸಿದೆ.
undefined
OnePlus Nord CE 2 Lite ಇತ್ತೀಚಿನ ವರ್ಷಗಳಲ್ಲಿ ಒನ್‌ಪ್ಲಸ್‌ನ ಅತ್ಯಂತ ಕೈಗೆಟುಕುವ ಸಾಧನವಾಗಿದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್‌ಫೋನ್ ರೂ 20,000 ಕ್ಕಿಂತ ಕಡಿಮೆ ಬೆಲೆಯಲ್ಲ ಬಿಡುಗಡೆಯಾಗಲಿದೆ ಎಂದು ವರದಿಗಳು ಸೂಚಿಸಿವೆ. ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್, 5000mAh ಬ್ಯಾಟರಿ, 64MP ಕ್ಯಾಮೆರಾ ಮತ್ತು 6.58-ಇಂಚಿನ FHD+ LCD ಸ್ಕ್ರೀನ್ ಸೇರಿವೆ.
ಇದನ್ನೂ ಓದಿ: ಡ್ಯುಯಲ್ ಕ್ಯಾಮೆರಾಗಳೊಂದಿಗೆ ಬಜೆಟ್ ಬೆಲೆಯ Infinix Hot 11 2022 ಭಾರತದಲ್ಲಿ ಲಾಂಚ್!
ಈ ಸ್ಮಾರ್ಟ್‌ಫೋನ್ Redmi Note 11 Pro+, Poco X4 Pro, iQoo Z6 5G, Realme 9 Pro 5Gಗಳಂತಹ ಸ್ಮಾರ್ಟ್‌ಫೋನ್ ವಿರುದ್ಧ ಸ್ಪರ್ಧಿಸಲಿದೆ. ಇವುಗಳು ಒಂದೇ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ನಿಂದ ಚಾಲಿತವಾಗಿವೆ.
We've got something new in the works! Dropping 28th April. pic.twitter.com/V723UBqpZK
— OnePlus India (@OnePlus_IN)
Redmi 10A - ಏಪ್ರಿಲ್ 20: Redmi 9A ಉತ್ತರಾಧಿಕಾರಿಯಾದ ಬಜೆಟ್ ಆಧಾರಿತ ಸ್ಮಾರ್ಟ್‌ಫೋನ್ ಇದಾಗಿದೆ. ರೆಡ್‌ಮಿ ಏಪ್ರಿಲ್ 20 ರಂದು Redmi 10A ಬಿಡುಗಡೆ ಮಾಡಲಿದೆ. 4G ಸ್ಮಾರ್ಟ್‌ಫೋನನ್ನು ಕಳೆದ ತಿಂಗಳು ಚೀನಾದಲ್ಲಿ ಪ್ರಾರಂಭಿಸಲಾಗಿದೆ. ಚೀನಾ ಮಾದರಿಯಂತೆ ಭಾರತೀಯ ರೂಪಾಂತರ ಬಿಡುಗಡೆಯಾದರೆ ಸ್ಮಾರ್ಟ್‌ಫೋನಲ್ಲಿ 6GB RAM, 128GB ಆನ್‌ಬೋರ್ಡ್ ಸಂಗ್ರಹಣೆ ಮತ್ತು 5000mAh ಬ್ಯಾಟರಿ MediaTek Helio G25 ಚಿಪ್ ನಿರೀಕ್ಷಿಸಬಹುದು.
ಫೋನ್ ಈಗ ಕ್ಯಾಮೆರಾ ಸೆಟಪ್‌ನ ಭಾಗವಾಗಿರುವ ಹಿಂಬದಿಯಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಹೊಸ ವಿನ್ಯಾಸವನ್ನು ತರುತ್ತಿದೆ ಎಂದ ಹೇಳಲಾಗಿದೆ. ಇದು ರೂ 10,000 ಶ್ರೇಣಿಯಲ್ಲಿ ಬೆಲೆಯನ್ನು ಹೊಂದಿರಬಹುದು, ಇದು ಹೆಚ್ಚು ಕೈಗೆಟುಕುವ ಆಯ್ಕೆಗಳನ್ನು ಹುಡುಕುತ್ತಿರುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿರಬಹುದು.
iQOO Z6 Pro - ಏಪ್ರಿಲ್ 27: iQoo Z6 Pro 5G ಭಾರತದಲ್ಲಿ ಏಪ್ರಿಲ್ 27 ರಂದು ಬಿಡುಗಡೆಯಾಗಲಿದೆ ಎಂದು ಕಂಪನಿ ದೃಢಪಡಿಸಿದೆ. iQoo Z6 Pro 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್, 66W ಫ್ಲ್ಯಾಶ್‌ಚಾರ್ಜ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಮುಂಬರುವ ಸ್ಮಾರ್ಟ್‌ಫೋನ್ ರೂ 25,000 ವಿಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ವಿಭಾಗದಲ್ಲಿ ಅನೇಕ ಬ್ರ್ಯಾಂಡ್‌ಗಳು ಸಾಕಷ್ಟು ಆಯ್ಕೆಗಳನ್ನು ನೀಡುವುದರಿಂದ ಈ ವಿಭಾಗ ಹೆಚ್ಚು ಸ್ಪರ್ಧಾತ್ಮಕವಾಗಿದೆ.
ಇದನ್ನೂ ಓದಿ: ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ Oppo F21 Pro, Pro 5G ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?
iQoo Z6 Pro 5G ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 778G 5Gಯಿಂದ ಗೇಮರ್‌ಗಳನ್ನು ಗುರಿಯಾಗಿಟ್ಟುಕೊಂಡು ಲಿಕ್ವಿಡ್ ಕೂಲಿಂಗ್‌ನೊಂದಿಗೆ ಬರುತ್ತದೆ. ಫೋನನ್ನು ಅಮೆಜಾನ್ ಇಂಡಿಯಾ ಮತ್ತು iQOOನ ಸ್ವಂತ ವೆಬ್‌ಸೈಟ್ ಮೂಲಕ ಮಾರಾಟ ಮಾಡಲಾಗುತ್ತದೆ.
OnePlus 10R - ಏಪ್ರಿಲ್ 28: OnePlus 10R ಸಹ ಏಪ್ರಿಲ್ 28 ರಂದು ಬ್ರ್ಯಾಂಡ್‌ನ 'ಮೋರ್ ಪವರ್ ಟು ಯು' ಈವೆಂಟ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಫೋನ್, ಹೆಸರೇ ಸೂಚಿಸುವಂತೆ OnePlus 9R ಮತ್ತು 9RTಗೆ ಉತ್ತರಾಧಿಕಾರಿಯಾಗಲಿದೆ. ಒನ್‌ಪ್ಲಸ್ ಹೊಸ ಸ್ಮಾರ್ಟ್‌ಫೋನ್ 150W SUPERVOOC ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ ಎಂದು ದೃಢಪಡಿಸಿದೆ.
ಮೀಡಿಯಾ ಟೆಕ್ ಡೈಮೆನ್ಸಿಟಿ 8000-ಸರಣಿಯ ಚಿಪ್, 50MP ಸೋನಿ IMX766 ಕ್ಯಾಮೆರಾ ಮತ್ತು ಹೊಸ ಬ್ಯಾಕ್ ಪ್ಯಾನೆಲ್ ವಿನ್ಯಾಸವನ್ನು ನಿರೀಕ್ಷಿಸಲಾಗಿದೆ. OnePlus 10R ರೂ 40,000 ವಿಭಾಗದಲ್ಲಿ ಬೆಲೆಯನ್ನು ಹೊಂದಿರಬಹುದು, OnePlus 9R ಇದೇ ಶ್ರೇಣಿಯನ್ನು ಹೊಂದಿದೆ.
Stay on top of your day, Stay in charge.
Experience the speed you need in life with the 150W SUPERVOOC and 80W SUPERVOOC Fast Charging of OnePlus10R. Launch on 28 April, 2022. Stay tuned!
Know more: https://t.co/WaA8u6p3se pic.twitter.com/2lI7gOP1jV
Xiaomi 12 Pro - ಏಪ್ರಿಲ್ 27: Xiaomi 12 Pro ಫ್ಲ್ಯಾಗ್‌ಶಿಪ್ ಫೋನ್ ಬ್ರ್ಯಾಂಡ್‌ನ ಅತ್ಯಂತ ಶಕ್ತಿಶಾಲಿ ಫೋನ್ ಎಂದು ನಿರೀಕ್ಷಿಸಲಾಗಿದೆ. ನಿರೀಕ್ಷಿತ ವಿಶೇಷಣಗಳಲ್ಲಿ 6.73-ಇಂಚಿನ 120Hz QHD+ LTPO 2.0 AMOLED ಡಿಸ್ಪ್ಲೇ Qualcomm Snapdragon 8 Gen 1 ಚಿಪ್‌ಸೆಟ್ ಮತ್ತು ಹಿಂಭಾಗದಲ್ಲಿ 50MP ಟ್ರಿಪಲ್ ಕ್ಯಾಮೆರಾ ಇದೆ.
ಇತರ ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ 4,600mAh ಬ್ಯಾಟರಿ, 120W ವೇಗದ ಚಾರ್ಜಿಂಗ್ ಬೆಂಬಲ (ವೈರ್ಡ್) ಮತ್ತು 50W ವೇಗದ ಚಾರ್ಜಿಂಗ್ (ವೈರ್‌ಲೆಸ್) ಸೇರಿವೆ. ಫೋನ್ ಸ್ಟಿರಿಯೊ ಸ್ಪೀಕರ್‌ಗಳು, ಎನ್‌ಎಫ್‌ಸಿ (NFC) ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಫೋನ್ ಏಪ್ರಿಲ್ 27 ರಂದು ಬಿಡುಗಡೆಯಾಗಲಿದೆ.