OnePlus 10R 5G ಭಾರತದಲ್ಲಿ ಏಪ್ರಿಲ್ 28 ರಂದು ಬಿಡುಗಡೆಯಾಗುತ್ತಿದೆ ಮತ್ತು ಇದು ಮುಂದಿನ ಪೀಳಿಗೆಯ MediaTek ಡೈಮೆನ್ಸಿಟಿ 8100-MAX ಚಿಪ್‌ಸೆಟ್‌ನೊಂದಿಗೆ ಬರುತ್ತಿದೆ. OnePlus ಹೇಳುವಂತೆ 10R ಉತ್ತಮ ಬೆಲೆ ಕಾರ್ಯಕ್ಷಮತೆಯ ಕಾಂಬೊವನ್ನು ನೀಡುತ್ತದೆ.
OnePlus 10R 5G Launch: ಒನ್‌ಪ್ಲಸ್ ತನ್ನ ಮುಂದಿನ ಫೋನ್ OnePlus 10R ಭಾರತದಲ್ಲಿ ಏಪ್ರಿಲ್ 28 ರಂದು ಒಂದೆರಡು ಇತರ ಉತ್ಪನ್ನಗಳೊಂದಿಗೆ ಬಿಡುಗಡೆ ಮಾಡಲಿದೆ. ಒನ್‌ಪ್ಲಸ್ ಇಂಡಿಯಾ ಸಿಇಒ ನವನಿತ್ ನಕ್ರಾ ಅವರ ಪ್ರಕಾರ ಈ ಬಾರಿಯ ವೈಶಿಷ್ಟ್ಯವೆಂದರೆ, OnePlus 10R 5G ಉತ್ತಮ ಮೌಲ್ಯ, ಕಾರ್ಯಕ್ಷಮತೆ ಮತ್ತು ಹಲವು ವೈಶಿಷ್ಟ್ಯಗಳನ್ನು ಒಟ್ಟಿಗೆ ಬಿಡುಗಡೆಯಾಗುತ್ತಿದೆ
ಒನ್‌ಪ್ಲಸ್ ಅಭಿಮಾನಿಗಳು OnePlus 10Rನ ಬೆಲೆಯೊಂದಿಗೆ ಆಶ್ಚರ್ಯಪಡುತ್ತಾರೆ ಎಂದು ನವನಿತ್ ನಕ್ರಾ ಹೇಳಿದ್ದಾರೆ. ಈ ಮೂಲಕ OnePlus 9RTನ ಬೆಲೆಗಿಂತ ಹೊಸ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯದ್ದಾಗಿರಬಹುದು ಎಂದು ಸುಳಿವು ನೀಡಿದ್ದಾರೆ. OnePlus 10R ಫೋನ್‌ನ ತುಲನಾತ್ಮಕ ಕಡಿಮೆ ಬೆಲೆಯು ಮೀಡಿಯಾ ಟೆಕ್‌ನೊಂದಿಗೆ ಕಂಪನಿಯ ಸಹಯೋಗದ ಫಲಿತಾಂಶವಾಗಿದೆ.
undefined
ಒನ್‌ಪ್ಲಸ್ ಹೇಳುವಂತೆ OnePlus 10R MediaTek Dimensity 8100-MAX ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು ಹೆಚ್ಚಿನ ನಿರಂತರ ಕಾರ್ಯಕ್ಷಮತೆಗಾಗಿ ಟ್ಯೂನ್ ಮಾಡಲಾದ ಹೊಸ ಚಿಪ್‌ಸೆಟ್ ಆಗಿದೆ ಮತ್ತು ಇದು ಫ್ಲ್ಯಾಗ್‌ಶಿಪ್-ದರ್ಜೆಯ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಕಡಿಮೆ ಬೆಲೆಗೆ ತರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: OnePlus Nord CE 2 Lite ₹20,000 ಒಳಗಿನ ಮೊದಲ ನಾರ್ಡ್ ಫೋನ್? ಬಿಡುಗಡೆ ಯಾವಾಗ?
ಅತ್ಯುತ್ತಮ ಕಾರ್ಯಕ್ಷಮತೆ: "MediaTek ಜೊತೆಗಿನ ನಮ್ಮ ಸಹಭಾಗಿತ್ವದಲ್ಲಿ, ವಾಣಿಜ್ಯ ಅಂಶವು ಖಂಡಿತವಾಗಿಯೂ ಒಂದು ಕಾರಣವಾಗಿದೆ. 8100-MAX ಸಹಾಯದಿಂದ ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಸಾಕಷ್ಟು ಕೈಗೆಟುಕುವ ಬೆಲೆಯಲ್ಲಿ ನೀಡಬಹುದು. ನಾವು ಅದೇ ಬೆಲೆ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ಯಾವುದೇ ಇತರ ಚಿಪ್‌ಸೆಟ್‌ನೊಂದಿಗೆ ನೀಡಲು ಸಾಧ್ಯವಿಲ್ಲ" ನಕ್ರಾ ಉಲ್ಲೇಖಸಿ ಇಂಡಿಯಾ ಟುಡೇ ವರದಿ ಮಾಡಿದೆ.
OnePlus 10R ಹೊರತಾಗಿ, ಕಂಪನಿಯು ಏಪ್ರಿಲ್ 28 ರ ಈವೆಂಟ್‌ನಲ್ಲಿ Nord CE 2 Lite ಮತ್ತು ಹೊಸ Nord Buds ಸಹ ಬಿಡುಗಡೆ ಮಾಡುತ್ತಿದೆ. Nord CE 2 Lite ಇತ್ತೀಚಿನ ವರ್ಷಗಳಲ್ಲಿ ರೂ 20,000 ಕ್ಕಿಂತ ಕಡಿಮೆ ಮಾರಾಟವಾಗುವ ಮೊದಲ ಒನ್‌ಪ್ಲಸ್ ಫೋನ್ ಆಗಿರಬಹುದು.
ಕಡಿಮೆ ಬೆಲೆಯೂ ಗ್ರಾಹಕರನ್ನು ಆಕರ್ಷಿಸಬಹುದಾದರೂ , MediaTek ಚಿಪ್‌ಸೆಟ್‌ನೊಂದಿಗೆ ಫ್ಲ್ಯಾಗ್‌ಶಿಪ್ ಒನ್‌ಪ್ಲಸ್ ಫೋನನ್ನು ಬಳಕೆದಾರರು ಹೇಗೆ ಗ್ರಹಿಸಬಹುದು ಎಂಬುದರ ಕುರಿತು ಕೆಲವು ಕಾಳಜಿಗಳು ಇರಬಹುದು. ಆದಾಗ್ಯೂ, ಒನ್‌ಪ್ಲಸ್ ಈ ಬಗ್ಗೆ ಚಿಂತಿಸುವುದಿಲ್ಲ ಎಂದು ನಕ್ರಾ ಹೇಳುತ್ತಾರೆ.
ನಾರ್ಡ್ ಸರಣಿ ಪ್ರತಿಕ್ರಿಯೆ ಅದ್ಭುತವಾಗಿದೆ: "ಒನ್ ಪ್ಲಸ್ ಬಹಳ ಸಮುದಾಯ ಕೇಂದ್ರಿತ ಬ್ರಾಂಡ್ ಆಗಿದೆ. ನಾವು ನಮ್ಮ ಬಳಕೆದಾರರೊಂದಿಗೆ ಮಾತನಾಡುತ್ತೇವೆ, ನಾವು ಅವರ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತೇವೆ ಮತ್ತು ನಂತರ ನಮ್ಮ ಫೋನ್‌ಗಳನ್ನು ಉತ್ತಮಗೊಳಿಸಲು ನಾವು ಅದನ್ನು ಬಳಸುತ್ತೇವೆ. ನಮ್ಮ ನಾರ್ಡ್ ಸರಣಿಯ (ಕೆಲವು MediaTek ಚಿಪ್‌ಸೆಟ್ ಬಳಸುತ್ತವೆ) ಫೋನ್‌ಗಳಿಗೆ ಪ್ರತಿಕ್ರಿಯೆಯು ಅದ್ಭುತವಾಗಿದೆ. OnePlus 10R ನಾವು ನಾರ್ಡ್ ಫೋನ್‌ಗಳಲ್ಲಿ ಮಾಡಿದ ಕೆಲವು ಕೆಲಸಗಳನ್ನು ಮಾಡಲು ನಾವು ಆಶಿಸುತ್ತೇವೆ" ಎಂದು ನಕ್ರಾ ಹೇಳಿದ್ದಾರೆ
ಇದನ್ನೂ ಓದಿ: Oppo Find N ರೀತಿಯಲ್ಲೇ ಇದೆಯಾ OnePlus ಫೋಲ್ಡಬಲ್ ಫೋನ್?
"MediaTek 8100-MAX ವಿಶೇಷವಾಗಿ ಪ್ರಬಲವಾಗಿದೆ ಎಂದು ನಾವು ಭಾವಿಸುವ ಮೂರು ಅಂಶಗಳಿವೆ: ಗೇಮಿಂಗ್ ಕಾರ್ಯಕ್ಷಮತೆ, ಬ್ಯಾಟರಿ ಬಾಳಿಕೆ ಮತ್ತು ಥರ್ಮಲ್ ಕಾರ್ಯಕ್ಷಮತೆ" ಎಂದು ನಕ್ರಾ ಹೇಳಿದ್ದಾರೆ
ಮೀಡಿಯಾ ಟೆಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಂಕು ಜೈನ್ ಅವರು ಬಳಕೆದಾರರು ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ. OnePlus 10R ನಲ್ಲಿನ ಡೈಮೆನ್ಸಿಟಿ 8100-MAX ಅನ್ನು ಉನ್ನತ ಕಾರ್ಯಕ್ಷಮತೆಯ ಮಟ್ಟವನ್ನು ಪೂರೈಸಲು ರಚಿಸಲಾಗಿದೆ ಮತ್ತು ಡೋರಾ ಎಂಬ ಪ್ಲಾಟ್‌ಫಾರ್ಮನ್ನು ಬಳಸುವ ಒನ್‌ಪ್ಲಸ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟವಾಗಿ ಕಸ್ಟಮೈಸ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
"ನಮ್ಮ ಗ್ರಾಹಕರ ನಿರ್ದಿಷ್ಟ ಅಗತ್ಯಗಳಿಗಾಗಿ ಪ್ರತಿ ಚಿಪ್ಪನ್ನು ಕಸ್ಟಮೈಸ್ ಮಾಡಲು ಡೋರಾ ಚಿಪ್‌ಸೆಟ್‌ನ ನಮಗೆ ಸಹಾಯ ಮಾಡುತ್ತದೆ. OnePlus 10R ನಲ್ಲಿನ 8100-MAX ಗಾಗಿ, MediaTek ಮತ್ತು OnePlus ನಲ್ಲಿನ R&D ತಂಡಗಳು ಬಹಳ ನಿಕಟವಾಗಿ ಕೆಲಸ ಮಾಡಿದೆ." ಎಂದು ಅವರು ಹೇಳಿದ್ದಾರೆ
ಅವರು ಹೊಸ ಚಿಪ್‌ಸೆಟ್‌ನಲ್ಲಿ 5G ಬೆಂಬಲದ ಬಗ್ಗೆ ಮಾತನಾಡಿದ ಅವರು, ಈ ಹಿಂದೆ, ಕೆಲವು ನಾರ್ಡ್ ಫೋನ್‌ಗಳೊಂದಿಗೆ, ಸೀಮಿತ 5G ಬ್ಯಾಂಡ್‌ಗಳಿಗೆ ಬೆಂಬಲವು ಕಳವಳಕಾರಿಯಾಗಿದೆ. "ಈ ಚಿಪ್‌ಸೆಟ್ 5G ಮಾನದಂಡಗಳು ಮತ್ತು ವಿವಿಧ ಬ್ಯಾಂಡ್‌ಗಳಿಗೆ ವ್ಯಾಪಕ ಬೆಂಬಲವನ್ನು ಹೊಂದಿದೆ. ಅಲ್ಲದೆ, ನಮ್ಮ ಪರೀಕ್ಷೆಯು ಜಾಗತಿಕವಾಗಿದೆ (ಆದ್ದರಿಂದ ಗ್ರಾಹಕರು ರೋಮಿಂಗ್ ಬಗ್ಗೆ ಚಿಂತಿಸಬಾರದು)," ಎಂದು ಹೇಳಿದ್ದಾರೆ
OnePlus ಹೇಳುವಂತೆ ಹೊಸ 10R 5G 4500mAh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ಕನಿಷ್ಠ ಒಂದು ರೂಪಾಂತರದಲ್ಲಿ 150W SUPERVOOC ಚಾರ್ಜಿಂಗನ್ನು ಬೆಂಬಲಿಸುತ್ತದೆ. ವೇಗವಾಗಿ ಚಾರ್ಜಿಂಗ್ ಮಾಡುವುದರಿಂದ OnePlus 10R ಬ್ಯಾಟರಿಯನ್ನು 17 ನಿಮಿಷಗಳಲ್ಲಿ 0-100 ಪ್ರತಿಶತದವರೆಗೆ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ.