ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನ್‌ಗಳ ಮೂಲಕ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಒನ್‌ಪ್ಲಸ್ ಇದೀಗ, 9 ಲೈಟ್ ಎಂಬ ಕೆಗುಟುಕವ ಬೆಲೆ ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಜನಪ್ರಿಯ ಬ್ರ್ಯಾಂಡ್ ಒನ್‌ಪ್ಲಸ್ ಅಗ್ಗದ ಸ್ಮಾರ್ಟ್‍ಫೋನ್ ಅನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿದೆಯಾ? ಒನ್‌ಪ್ಲಸ್‌ನಿಂದ ಯಾವುದೇ ಮಾಹಿತಿ ಇಲ್ಲವಾದರೂ ಕೆಲವು ಟಿಪ್ಸಟರ್‌ಗಳು, ಒನ್‌ಪ್ಲಸ್‌ನ ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ.
ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಈ ವರ್ಷ ಒನ್‌ಪ್ಲಸ್ ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳನ್ನು ಮಾಡಲಿದೆ. ಈ ಫೋನ್ ಅನ್ನು ಒನ್‌ಪ್ಲಸ್ 9 ಲೈಟ್ ಎಂದು ಕರೆಯಲಾಗುತ್ತಿದೆ. ಕೆಲವು ದಿನಗಳಿಂದ ಹಲವು ಟಿಪ್ಸಟರ್‌ಗಳು ಈ ಫೋನ್ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ. TechDroider ಈ ಬಗ್ಗೆ ಟ್ವೀಟ್‌ವೊಂದನ್ನು ಮಾಡಿ, ಚೀನಾ ಮತ್ತು ಭಾರತದಲ್ಲಿ ಈ ಫೋನ್ ಬಿಡುಗಡೆಯಾಗಲಿದೆ. ಯುರೋಪ್ ಮಾರುಕಟ್ಟೆಗೂ ಈ ಫೋನ್ ಬರಲಿದೆ ಆದರೆ, ಆ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈ ಸ್ಮಾರ್ಟ್‌ಫೋನ್‌ನಲ್ಲಿ Snapdragon 865 5G CPU ಇರಲಿದೆ ಎಂದು ತಿಳಿಸಲಾಗಿದೆ.
ಸ್ಮಾರ್ಟ್ ಮಾಸ್ಕ್ ಗೊತ್ತಾ ನಿಮಗೆ? ಗೊತ್ತಿಲ್ಲ ಎಂದರೆ ಓದಿ..
ಈ ಲೈಟ್, ಎರಡು ಮಾಡೆಲ್‌ಗಳಲ್ಲಿ ದೊರೆಯಲಿದೆ. ಎಲ್ಇ2100 ಮತ್ತು ಎಲ್ಇ2101 ಎಂಬ ಹೆಸರಿನ ಮಾಡೆಲ್‌ಗಳು ಸೋರಿಕೆಯಾಗಿವೆ. ಸ್ಯಾಮ್ಸಂಗ್ ರೀತಿಯಲ್ಲಿ ಒನ್‌ಪ್ಲಸ್ ಕೂಡ ತನ್ನ ಮುಂದಿನ ಫ್ಲ್ಯಾಗ್‌ಶಿಪ್ ಅನ್ನು ಕನಿಷ್ಠ ಒಂದು ತಿಂಗಳಾದರೂ ಮುಂಚೆಯೇ ತರಲು ಯೋಜಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಾಗಿ, ಮಾರ್ಚ್ ತಿಂಗಳಲ್ಲಿ ಈ ಒನ್‌ಪ್ಲಸ್ 9 ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆ ಕಾಣಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಭಾರತದಲ್ಲಿ ಒನ್‌ಪ್ಲಸ್ 9 ಲೈಟ್ ಬೆಲೆ ಹೆಚ್ಚು ಕಡಿಮೆ 43,800 ರೂಪಾಯಿ ಇರಲಿದೆ. ಇದು ಈಗಿರುವ 45,999 ರೂ.ಗಿಂತ ಕಡಿಮೆಯಾಗಿರಲಿದೆ ಎನ್ನಲಾಗುತ್ತಿದೆ.
ಈ ಮೊದಲೇ ಈ ಫೋನಿನ ವಿಶೇಷತೆಗಳ ಬಗ್ಗೆ ಮಾಹಿತಿ ಸೋರಿಕೆಯಾಗಿತ್ತು. ಭಾರತ ಮತ್ತು ಚೀನಾದಲ್ಲಿ ಬಿಡುಗಡೆಯಾಗಲಿರುವ ಫೋನಿನಲ್ಲಿ ಕ್ವಾಲಂಕಾಮ್ ಸ್ನ್ಯಾಪ್‌ಡ್ರಾಗನ್ 865 ಚಿಪ್‌ಸೆಟ್ ಇರಲಿದೆ. ಈ ಬಗ್ಗೆ ಆಂಡ್ರಾಯ್ಡ್ ಸೆಂಟ್ರಲ್ ಕೂಡ ಮಾಹಿತಿ ಹಂಚಿಕೊಂಡಿದ್ದು, ಒನ್‌ಪ್ಲಸ್ 8ಟಿ ಹೊಂದಿರುವ ಬಹುತೇಕ ಫೀಚರ್‌ಗಳನ್ನು ಒನ್‌ಪ್ಲಸ್ 9 ಲೈಟ್ ಕೂಡ ಹೊಂದಿರಲಿದೆ. ಸ್ನ್ಯಾಪ್‌ಡ್ರಾಗನ್ 865 ಚಿಪ್ ಮತ್ತು 120Hz AMOLED ಪ್ಯಾನೆಲ್ ಕೂಡ ಇರಲಿದೆ. ಇಷ್ಟು ಮಾತ್ರವಲ್ಲದೇ ಈ ಫೋನ್ 65ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡಲಿದೆ ಎನ್ನಲಾಗುತ್ತಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ರಿಲೀಸ್; ಚಾರ್ಜರ್, ಇಯರ್‌ಫೋನ್ ಫ್ರೀ ಸಿಗಲ್ಲ!
ಒಂದೊಮ್ಮೆಈಗ ಹೊರ ಬರುತ್ತಿರುವ ಸುದ್ದಿಗಳೇ ನಿಜವಾದರೆ, ಒನ್‌ಪ್ಲಸ್ ಈ ಚಿಪ್‌ಸೆಟ್‌ನೊಂದಿಗೆ ಹೋಗುವುದನ್ನು ಕೊನೆಗೊಳಿಸುತ್ತದೆಯೇ ಎಂಬುದು ಆಸಕ್ತಿದಾಯಕವಾಗಿರಲಿದೆ. ಯಾಕೆಂದರೆ ಒನ್‌ಪ್ಲಸ್ ಹಳೆಯ ಫೋನ್‌ನಲ್ಲಿ ಹೊಸ ಫೋನ್‌ನಲ್ಲಿ ಬಳಸುವುದು ಇದೇ ಮೊದಲನೆಯದು ಎನಿಸಿಕೊಳ್ಳಲಿದೆ. ಸ್ನ್ಯಾಪ್‌ಡ್ರಾಗನ್ 865 ಚಿಪ್ ಈಗಲೂ ಪವರ್‌ಫುಲ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದಾಗ್ಯೂ, ಖರೀದಿದಾರರಿಗೆ ಫೋನ್‌ನಲ್ಲಿ ಸಾಕಷ್ಟು ಮೌಲ್ಯವಿದೆ ಎಂದು ಖಚಿತಪಡಿಸಿಕೊಳ್ಳಲು ಒನ್‌ಪ್ಲಸ್ ಡಿವೈಸ್ ಅನ್ನು ಸರಿಯಾದ ಬೆಲೆಗೆ ನೀಡಿದರೆ ಈ ಎಲ್ಲ ಕಳವಳಗಳನ್ನು ನಿವಾರಿಸಬಹುದು. ಆದರೆ ಇದು ಮತ್ತೆ ಮುಂಬರುವ ವಾರಗಳು ನಾವು ತಿಳಿದುಕೊಳ್ಳುವ ಸಂಗತಿಯಾಗಿದೆ. ಯಾಕೆಂದರೆ ಈ ಸಮಯದಲ್ಲಿ ಡಿವೈಸ್ ಬೆಲೆ ಅಥವಾ ಲಭ್ಯತೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಒನ್‌ಪ್ಲಸ್ 8ಟಿ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಯಾಗಿರುವ ಕ್ಯಾಮರಾವನ್ನು ನೀವು ಈ ಸ್ಮಾರ್ಟ್‌ಫೋನ್‌ನಲ್ಲೂ ಕಾಣಬಹುದು. ವಾಸ್ತವದಲ್ಲಿ ಒನ್‌ಪ್ಲಸ್ 8ಟಿ ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು ಕ್ಯಾಮರಾಗಳ ಸೆಟ್‌ಅಪ್ ಅನ್ನು ಹೊಂದಿದ್ದು, ಈ ಪೈಕಿ ಪ್ರೈಮರಿ ಕ್ಯಾಮರಾ Sony IMX586 sensor 48 ಮೆಗಾಪಿಕ್ಸೆಲ್ ಕ್ಯಾಮರಾ ಇರಲಿದೆ. ಆಗಾಗಿ, ನೀವು ಈ ಸ್ಮಾರ್ಟ್‌ಫೋನಿಂದಲೂ ಅತ್ಯುತ್ತಮ ಫೋಟೋಗಳನ್ನು ಸೆರೆ ಹಿಡಿಯುವುದನ್ನು ನಿರೀಕ್ಷಿಸಬಹುದಾಗಿದೆ.
ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಬಿಡುಗಡೆ, ಏನೇನಿದೆ ವಿಶೇಷ?
ಈ ಒನ್‌ಪ್ಲಸ್ 9 ಲೈಟ್ ಸಂಬಂಧ ಕಂಪನಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈಗ ಸಾರ್ವಜನಿಕವಾಗಿರುವ ಮಾಹಿತಿಯೆಲ್ಲವೂ ಟಿಪ್ಸ್‌ಟರ್‌ಗಳು ಹೊರಹಾಕಿರುವುದಾಗಿದೆ. ಹಾಗಾಗಿ, ಒನ್‌ಪ್ಲಸ್ ಕೂಡಲೇ ಈ ಬಗ್ಗೆ ಅಧಿಕೃತಿ ಮಾಹಿತಿಯೊಂದಿಗೆ ಬರಬಹುದು.