OnePlus 9RT: 50MP ಟ್ರಿಪಲ್ ಕ್ಯಾಮೆರಾಗಳೊಂದಿಗೆ ಒನ್‌ಪ್ಲಸ್‌ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಲಾಂಚ್‌!

By Suvarna News  |  First Published Jan 14, 2022, 6:31 PM IST

OnePlus 9RTಅನ್ನು ಭಾರತದಲ್ಲಿ ಶುಕ್ರವಾರ, ಜನವರಿ 14 ರಂದು ಕಂಪನಿಯ ವಿಂಟರ್ ಆವೃತ್ತಿ ಲಾಂಚ್ ( Winter Edition Launch) ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ
 


Tech Desk: ಒನ್‌ ಪ್ಲಸ್‌ನ ಬಹುನಿರೀಕ್ಷಿತ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 9RT ಅನ್ನು ಭಾರತದಲ್ಲಿ ಶುಕ್ರವಾರ, ಜನವರಿ 14 ರಂದು ಕಂಪನಿಯ ವಿಂಟರ್ ಆವೃತ್ತಿ ಬಿಡುಗಡೆ ( Winter Edition Launch) ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿಯ ನೆಕ್ಸ್ಟ್‌ ಜನರೇಶನ್ OnePlus 10 ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದ ಒಂದೆರಡು ದಿನಗಳ ನಂತರ ಕಂಪನಿಯ OnePlus 9 ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ. OnePlus 9RT  Qualcomm Snapdragon 888 SoC ಅನ್ನು ಹೊಂದಿದ್ದು  50-ಮೆಗಾಪಿಕ್ಸೆಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜತೆಗೆ OnePlus Buds Z2 ಟ್ರು ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಷನ್ (ANC) ಬೆಂಬಲದೊಂದಿಗೆ ಬರುವ ಇಯರ್‌ ಬಡ್ಸ್ 2020 ರ OnePlus Buds Z ಇಯರ್‌ಫೋನ್‌ಗಳ ಅಪ್‌ಡೇಟೆಡ್‌ ವರ್ಷನ್‌ ಆಗಿವೆ.

OnePlus 9RT, OnePlus Buds Z2 ಭಾರತದಲ್ಲಿನ ಬೆಲೆ, ಲಭ್ಯತೆ

Tap to resize

Latest Videos

undefined

ಭಾರತದಲ್ಲಿ OnePlus 9RT ಬೆಲೆಯನ್ನು ಬೇಸ್ 8GB + 128GB ಸ್ಟೋರೇಜ್ ಮಾದರಿಗೆ ರೂ. 42,999 ಮತ್ತು. 12GB +256GB ಸ್ಟೋರೇಜ್ ರೂಪಾಂತರಕ್ಕಾಗಿ  ರೂ. 46,999ಗೆ ನಿಗದಿಪಡಿಸಲಾಗಿದೆ. ಅಕ್ಟೋಬರ್ 2021 ರಲ್ಲಿ ಬಿಡುಗಡೆಯಾದ OnePlus 9RTನ 8GB + 256GB ಚೀನಾ ಆವೃತ್ತಿ ಆಯ್ಕೆಯನ್ನು ಕಂಪನಿ ಭಾರತದಲ್ಲಿ ನೀಡಿಲ್ಲ.

OnePlus 9RT ಹ್ಯಾಕರ್ ಬ್ಲ್ಯಾಕ್ (Hacker Black) ಮತ್ತು ನ್ಯಾನೋ ಸಿಲ್ವರ್ ( Nano Silver) ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಟೇಲ್ ಅಂಗಡಿಗಳಲ್ಲಿ‌ ಹಾಗೂ  ಅಮೆಝಾನ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಕಂಪನಿಯ ಗ್ರೇಟ್ ಇಂಡಿಯನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ (Republic Day Sale) ಜನವರಿ 17 ರಂದು 12pm (IST) ಕ್ಕೆ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ.

ಇನ್ನು OnePlus ಬಡ್ಸ್ Z2 ಬೆಲೆಯನ್ನು ರೂ. 4,999ಗೆ ನಿಗದಿಪಡಿಸಲಾಗಿದ್ದು ಇಯರ್‌ಬಡ್‌ಗಳು ಜನವರಿ 18 ರಿಂದ ಅಮೆಜಾನ್, ಫ್ಲಿಪ್‌ಕಾರ್ಟ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಪಾಲುದಾರ ಅಂಗಡಿಗಳ ಮೂಲಕ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

OnePlus 9RT specifications

ಡ್ಯುಯಲ್-ಸಿಮ್ (ನ್ಯಾನೋ) OnePlus 9RT ಕಂಪನಿಯ OxygenOS 11 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. OnePlus 9RT ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ನಿಂದ ಚಾಲಿತವಾಗಿದ್ದು, 12GB ಯ LPDDR5 RAM ಮತ್ತು 256GB ಯ ಇಂಟರ್‌ನಲ್ UFS 3.1 ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಅದೇ SoC ಅನ್ನು ಒಳಗೊಂಡಿರುವ ವೆನಿಲ್ಲಾ OnePlus 9 ಗಿಂತ ಭಿನ್ನವಾಗಿ, OnePlus ಪ್ರಕಾರ, ಹೊಸ OnePlus 9RT ಕಂಪನಿಯ “ಸ್ಪೇಸ್ ಕೂಲಿಂಗ್” ತಂತ್ರಜ್ಞಾನ ಮತ್ತು  Larger heat sink ಮತ್ತು ಸುಧಾರಿತ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ.

ಇದನ್ನೂ ಓದಿ: OnePlus 10 Pro Features: ಒನ್‌ಪ್ಲಸ್‌ನ ಬಹುನೀರಿಕ್ಷಿತ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್ ಬಿಡುಗಡೆ!

OnePlus 9RT 6.62-ಇಂಚಿನ Full-HD+ (1,080x2,400 ಪಿಕ್ಸೆಲ್‌ಗಳು) Samsung E4 AMOLED ಡಿಸ್‌ಪ್ಲೇ, 1,300 nits ಗರಿಷ್ಠ ಹೊಳಪು ಮತ್ತು 120Hz ನ ರಿಫ್ರೆಶ್ ದರವನ್ನು ಹೊಂದಿದೆ. OnePlus ಪ್ರಕಾರ ಡಿಸ್‌ಪ್ಲೇ  1,300Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ ಮತ್ತು 100 ಪ್ರತಿಶತ DCI:P3 olour gamut coverage‌ ನೊಂದಿಗೆ ಬರುತ್ತದೆ. 

OnePlus 9RT ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನಲ್ಲಿ 50-ಮೆಗಾಪಿಕ್ಸೆಲ್ ಸೋನಿ IMX766 ಪ್ರಾಥಮಿಕ ಕ್ಯಾಮೆರಾವನ್ನು f/1.8 ಲೆನ್ಸ್‌ನೊಂದಿಗೆ ಹೊಂದಿದೆ. ಪ್ರಾಥಮಿಕ ಕ್ಯಾಮರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನೊಂದಿಗೆ ಬರುತ್ತದೆ ಮತ್ತು 60fps ನಲ್ಲಿ 4K ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಬಹುದು. OnePlus 9RT f/2.2 ಲೆನ್ಸ್ ಮತ್ತು 123-ಡಿಗ್ರಿ ಫೀಲ್ಡ್-ಆಫ್-ವ್ಯೂ ಜೊತೆಗೆ ಅಲ್ಟ್ರಾವೈಡ್ ಕ್ಯಾಮೆರಾವನ್ನು ಸಹ ಹೊಂದಿದೆ, ಜೊತೆಗೆ ಮ್ಯಾಕ್ರೋ ಫೋಟೋಗ್ರಫಿಗಾಗಿ 2-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. OnePlus 9RT 16-ಮೆಗಾಪಿಕ್ಸೆಲ್ ಸೋನಿ IMX471 ಸೆಲ್ಫಿ ಕ್ಯಾಮೆರಾವನ್ನು f/2.4 ಲೆನ್ಸ್‌ನೊಂದಿಗೆ ಹೊಂದಿದೆ.

ಇದನ್ನೂ ಓದಿ: OnePlus Smart TV: ಭಾರತದಲ್ಲಿ ಒನ್‌ಪ್ಲಸ್‌ನಿಂದ 32, 43 ಇಂಚ್ ಸ್ಮಾರ್ಟ್‌ಟಿವಿ ಲಾಂಚ್ ಸಾಧ್ಯತೆ!

 OnePlus 9RT 4,500mAh ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದು USB ಟೈಪ್-ಸಿ ಮೂಲಕ ಕಂಪನಿಯ ವಾರ್ಪ್ ಚಾರ್ಜ್  65T (Warp Charge) ತಂತ್ರಜ್ಞಾನದ ಮೂಲಕ 65W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ 5G, 4G LTE, Wi-Fi 6, ಮತ್ತು ಬ್ಲೂಟೂತ್ v5.2 ಸಂಪರ್ಕವನ್ನು ನೀಡುತ್ತದೆ, ಜೊತೆಗೆ GPS/ A-GPS ಮತ್ತು NFC ಬೆಂಬಲವನ್ನು ನೀಡುತ್ತದೆ. OnePlus 9RT 162.2x74.6x8.29mm ಅಳತೆ ಮತ್ತು 198.5 ಗ್ರಾಂ ತೂಗುತ್ತದೆ.

OnePlus Buds Z2 specifications

OnePlus Buds Z 10mm ಡ್ರೈವರ್‌ಗಳನ್ನು ಹೊಂದಿದ್ದರೆ, ಹೊಸ OnePlus ಬಡ್ಸ್ Z2 TWS ಇಯರ್‌ಬಡ್‌ಗಳು ದೊಡ್ಡ 11mm ಡೈನಾಮಿಕ್ ಡ್ರೈವರ್‌ಗಳೊಂದಿಗೆ ಸಜ್ಜುಗೊಂಡಿವೆ. ಇಯರ್‌ಬಡ್‌ಗಳು 40dB ವರೆಗಿನ ಧ್ವನಿಗಳಿಗಾಗಿ ANCಗೆ ಬೆಂಬಲದೊಂದಿಗೆ ಬರುತ್ತವೆ. OnePlus ಬಡ್ಸ್ Z2 ಬ್ಲೂಟೂತ್ v5.2 ಸಂಪರ್ಕವನ್ನು ಹೊಂದಿದೆ ಮತ್ತು 94ms ನಷ್ಟು reduced latencyಯನ್ನು ನೀಡುತ್ತವೆ (ಹಳೆಯ OnePlus ಬಡ್ಸ್ Z 103ms reduced latency ನೀಡಿತ್ತು). ಇಯರ್‌ಬಡ್‌ಗಳು ಕರೆ ಮಾಡಲು ಮತ್ತು ANC ಕಾರ್ಯಕ್ಕಾಗಿ ಮೂರು ಇನ್‌ ಬಿಲ್ಟ್ ಮೈಕ್ರೊಫೋನ್‌ಗಳೊಂದಿಗೆ ಬರುತ್ತವೆ.

OnePlus ಪ್ರಕಾರ, ಹೊಸ ಇಯರ್‌ಬಡ್‌ಗಳು ಹೊಸ Transparency Mode ಅನ್ನು ಒಳಗೊಂಡಿರುತ್ತವೆ ಅದು ಬಳಕೆದಾರರು ತಮ್ಮ ಸುತ್ತಲಿನ ಶಬ್ದಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಹೊಸ OnePlus ಬಡ್ಸ್ Z2 ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP55 ರೇಟಿಂಗ್‌ನೊಂದಿಗೆ ಬರುತ್ತದೆ, ಆದರೆ ಚಾರ್ಜಿಂಗ್ ಕೇಸ್ ನೀರಿನ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಅನ್ನು ಹೊಂದಿದೆ. ಇಯರ್‌ಬಡ್‌ಗಳು ಪ್ಲೇಬ್ಯಾಕ್ ಮತ್ತು ಕರೆ ನಿರ್ವಹಣೆಗಾಗಿ ಬೇಸಿಕ್‌ ಟಚ್‌ ಕಂಟ್ರೋಲ್ಸ್ ಒಳಗೊಂಡಿವೆ.

OnePlus Buds Z2 ಇಯರ್‌ಬಡ್‌ಗಳು 40mAh ಬ್ಯಾಟರಿಗಳೊಂದಿಗೆ ಬರುತ್ತವೆ, ಇದು ಕಂಪನಿಯ ಪ್ರಕಾರ ಏಳು ಗಂಟೆಗಳವರೆಗೆ ಆಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಚಾರ್ಜಿಂಗ್ ಕೇಸ್ 520mAh ಬ್ಯಾಟರಿಯನ್ನು ಹೊಂದಿದೆ.   ಒಟ್ಟು OnePlus Buds Z2  ಬ್ಯಾಟರಿ ಅವಧಿ 38 ಗಂಟೆಗಳವರೆಗೆ . OnePlus Buds Z2 ಇಯರ್‌ಬಡ್‌ಗಳು 33x22.44x21.81mm ಅಳತೆ ಮತ್ತು 4.5 ಗ್ರಾಂ (ಪ್ರತಿ ಇಯರ್‌ಬಡ್‌ಗೆ) ತೂಗುತ್ತದೆ, ಆದರೆ ಕೇಸ್ 73.15x36.80x29.07mm ಅಳತೆ ಮತ್ತು 40.5 ಗ್ರಾಂ ತೂಗುತ್ತದೆ.

click me!