ಶೀಘ್ರ ಮೋಟೋರೋಲಾದಿಂದ 3 ಫೀಚರ್ ಫೋನ್; 2000 ರೂ.ಗಿಂತ ಕಡಿಮೆ?

By Suvarna News  |  First Published Nov 6, 2021, 11:08 AM IST

ಸ್ಮಾರ್ಟ್‌ಫೋನ್ ಉತ್ಪಾದನಾ ಕಂಪನಿಗಳ ಪೈಕಿ ಪ್ರಮುಖ ಕಂಪನಿ ಎನಿಸಿಕೊಂಡಿರುವ ಮೋಟೋರೋಲಾ ಭಾರತೀಯ ಮಾರುಕಟ್ಟೆಗೆ ಮೂರು ಫೀಚರ್‌ ಫೋನುಗಳನ್ನು ಬಿಡುಗಡೆ ಮಾಡಲಿದೆ. ಈ ಫೋನುಗಳ ಬೆಲೆ 2000 ರೂ. ಒಳಗೇ ಇರಲಿದೆ ಎಂದು ಹೇಳಲಾಗುತ್ತಿದೆ. ಕೆಲವು ಬೇಸಿಕ್ ಫೀಚರ್‌ಗಳು ಸೇರಿದಂತೆ ಇನ್ನಿತ ವಿಶೇಷತೆಗಳು ಇರಲಿವೆ.


ಗೂಗಲ್ ಜತೆಗೂಡಿ ರಿಲಯನ್ಸ್ ಕಂಪನಿ ಅಗ್ಗದ ಜಿಯೋಫೋನ್ ನೆಕ್ಸ್ಟ್  ಬಿಡುಗಡೆ ಮಾಡಿದ ಬೆನ್ನಲ್ಲೇ ಲೆನೋವೊ (Lenovo) ಒಡೆತನದ ಮೋಟೋರೋಲಾ (Motorola) ಕಂಪನಿಯು ಭಾರತದಲ್ಲಿ ಮೂರು ಫೀಚರ್ ಫೋನುಗಳನ್ನು ಲಾಂಚ್ ಮಾಡುವ ಸಾಧ್ಯತೆ ಇದೆ.

ಮೋಟೋ ಎ10 (Moto A10), ಮೋಟೋ ಎ50 (Moto A50) ಮತ್ತು ಮೋಟೋ ಎ70 (Moto A70) ಫೋನುಗಳೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಮೋಟೋರೋಲಾ ಕಂಪನಿಯ ಫೋನುಗಳು. ಈ ಫೋನುಗಳು ಅಗತ್ಯವಿರುವ ಸಾಕಷ್ಟು ಫೀಚರ್‌ಗಳನ್ನು ಒಳಗೊಂಡಿವೆ. ಈ ಮೂರು ಮಾದರಿಯ ಫೋನುಗಳು 1,750 ಎಂಎಎಚ್ ಸಾಮರ್ಥ್ಯದ ಬ್ಯಾಟರಿ, ಎರಡು ಸಿಮ್‌ಗಳಿಗೆ ಸಪೋರ್ಟ್ ಮಾಡುತ್ತವೆ ಮತ್ತು ಕಂಪನಿಯು ಎರಡು ವರ್ಷ ಮರು ಸ್ವೀಕರಿಸುವ ಗ್ಯಾರಂಟಿಯ ಯೋಜನೆಯನ್ನು ಪ್ರಕಟಿಸುತ್ತಿದೆ. ಈ ಮೂಲಕ ಭಾರತದಲ್ಲಿರುವ  ಬಹುದೊಡ್ಡ ಗ್ರಾಹಕ ವಲಯವನ್ನು ತನ್ನತ್ತ ಸೆಳೆಯುವ ಸಾಧ್ಯತೆ ಇದೆ ಮೊಟೊರೋಲಾ ಕಂಪನಿಯು.

Latest Videos

undefined

JioPhone Next ಖರೀದಿಗೆ ಮುನ್ನ ನೋಂದಣಿ ಕಡ್ಡಾಯ!

ಈ ಫೀಚರ್‌ಗಳ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಮೋಟೋ ಎ10 ಮತ್ತು ಮೋಟೋ ಎ50 ಎರಡೂ ಫೋನುಗಳು ಮೀಡಿಯಾಟೆಕ್‌ನ MT6261D ಚಿಪ್‌ಸೆಟ್‌ಗಳನ್ನು ಹೊಂದಿವೆ. ಈ ಫೀಚರ್‌ಗಳನ್ನು 1.8 ಇಂಚ್ ಕಲರ್ ಸ್ಕ್ರೀನ್ ಹೊಂದಿದ್ದು, ಇದರಲ್ಲಿ ಟಾರ್ಚ್ ಕೂಡ ಇರಲಿದೆ. ಮೆಮೊರಿಯನ್ನು ಹೆಚ್ಚಿಸಿಕೊಳ್ಳಲು ಕಂಪನಿ ಇದರಲ್ಲಿ ಎಸ್‌ಡಿ ಕಾರ್ಡ್ ಸ್ಲಾಟ್ ಕೂಡ ನೀಡಿದೆ. ಈ ಮೂಲಕ ಬಳಕೆದಾರರು 32 ಜಿಬಿ ವರೆಗೂ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಫೋನ್ ಮೇಲ್ಗಡೆ 3.5 ಎಂಎಂ ಆಡಿಯೋ ಜಾಕ್ ನೀಡಲಾಗಿದೆ. ಆದರೆ, ಈ ಎರಡೂ ಫೋನುಗಳ ಪೈಕಿ ಮೋಟೋ ಎ50 ಫೋನ್‌ನಲ್ಲಿ ಮಾತ್ರವೇ ಕ್ಯಾಮೆರಾ ಇರಲಿದೆ. ಮೋಟೋ ಎ10 ಫೋನಿನಲ್ಲಿ ಕ್ಯಾಮೆರಾ ಇಲ್ಲ. ಈ ಎರಡೂ ಫೋನುಗಳಿಗೆ ಹೋಲಿಸಿದರೆ ಮೋಟೋ ಎ70 ಹೆಚ್ಚು ಫೀಚರ್‌ಗಳನ್ನು ಹೊಂದಿದೆ. ಹಾಗಾಗಿ ಈ ಎರಡೂ ಫೋನುಗಳಿಗಿಂತಲೂ ಪ್ರೀಮಿಯಂ ಆಗಿದೆ ಎಂದು ಹೇಳಬಹುದು. ವರದಿಗಳ ಪ್ರಕಾರ, ಈ ಫೋನ್ 2.4 ಇಂಚಿನ ಪ್ರದರ್ಶಕವನ್ನು ಹೊಂದಿರಲಿದೆ. Unisoc ಪ್ರೊಸೆಸರ್ ಜೊತೆಗೆ ಇನ್ನುಳಿದ ಹಲವು ಫೀಚರ್‌ಗಳೂ ಈ ಫೋನಿನಲ್ಲಿ ಮುಂದುವರಿಯಲಿವೆ.

ವಾಟ್ಸಾಪ್ ಮೂಲಕ ಪಾವತಿಸಿದರೆ 51 ರೂ. ಕ್ಯಾಶ್‌ಬ್ಯಾಕ್?

ಈ ಫೋನುಗಳ ಬೆಲೆಯ ಬಗ್ಗೆ ಹೇಳುವುದಾದರೆ, ಕೈಗೆಟುಕುವ ದರದಲ್ಲಿವೆ. ಮೋಟೋ ಎ10 ಫೋನು ಗ್ರಾಹಕರಿಗೆ ಭಾರತೀಯ ಮಾರುಕಟ್ಟೆಯಲ್ಲಿ 1,500 ರೂ.ವರೆಗೆ ಸಿಗಲಿದೆ. ಅದೇ ರೀತಿ, ಮೋಟೋ ಎ50 ಮತ್ತು ಮೋಟೋ ಎ70 ಫೋನುಗಳು ಕೂಡ ಗ್ರಾಹಕರಿಗೆ ಎರಡು ಸಾವಿರ ರೂಪಾಯಿಯೊಳಗೇ ಸಿಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿಯುವ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಹಾಗಾಗಿ ಮಾರುಕಟ್ಟೆಗೆ ಫೋನುಗಳು ಬಿಡುಗಡೆಯಾದ ಬಳಕವಷ್ಟೇ ಬೆಲೆಯ ನಿಖರವಾಗಿ ತಿಳಿಯಲಿದೆ.

ಮೋಟೋರೋಲಾ ಕಂಪನಿಯು ಸಾಕಷ್ಟು ಸ್ಮಾರ್ಟ್‌ಫೋನುಗಳನ್ನು  ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಪೈಕಿ ಮೋಟೋರೋಲಾ ಎಡ್ಜ್ 20 (Edge 20), ಎಡ್ಜ್ 20 ಫ್ಯುಸನ್ (Edge 20 Fusion) ಮತ್ತು ಎಡ್ಜ್ 20 ಪ್ರೋ (Edge 20 Pro) ಸ್ಮಾರ್ಟ್‌ಫೋನ್‌ಗಳನ್ನು ಹೆಸರಿಸಬಹುದಾಗಿದೆ. ಬಜೆಟ್ ಫೋನು ಎನಿಸಿಕೊಂಡಿರುವ ಇ40 ಸ್ಮಾರ್ಟ್‌ಫೋನ್ ಅನ್ನು ಕೂಡ ಲಾಂಚ್ ಮಾಡಲಾಗಿದೆ.

Deepavali Gift: ಈ 7 ಗ್ಯಾಜೆಟ್ ಕೊಡಬಹುದು, ಜೇಬಿಗೂ ಹೊರೆಯಿಲ್ಲ!

ಸ್ಮಾರ್ಟ್‌ಫೋನು ಉತ್ಪಾದನೆಯ ಕಂಪನಿಗಳ ಪೈಕಿ ಪ್ರಮುಖ ಕಂಪನಿಯಾಗಿರುವ ಮೋಟೋರೋಲಾ ಅನೇಕ ಮಾದರಿಯ ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಭಾರತದ ಮಾರುಕಟ್ಟೆಯೂ ಸೇರಿದಂತೆ ಜಗತ್ತಿನಾದ್ಯಂತ ಮೋಟೋರೋಲಾ ಫೋನುಗಳಿಗೆ ತನ್ನದೇ ಆದ ಗ್ರಾಹಕವಲಯವಿದೆ. ಬೆಲೆ ಹಾಗೂ ಫೀಚರ್‌ಗಳ ಕಾರಣಕ್ಕಾಗಿ ಈ ಕಂಪನಿಯು ಫೋನುಗಳ ಹೆಚ್ಚು ಜನಪ್ರಿಯವಾಗಿವೆ.

click me!