ಮೈಕ್ರೋಮ್ಯಾಕ್ಸ್ ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ Micromax In 2C ಬಿಡುಗಡೆ ಮಾಡಬಹುದು. ಫೋನ್ ಮೈಕ್ರೋಮ್ಯಾಕ್ಸ್ IN 2B ಗೆ ಉತ್ತರಾಧಿಕಾರಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
Micromax In 2C Launch: ಮೈಕ್ರೋಮ್ಯಾಕ್ಸ್ ಮತ್ತೊಂದು ಬಜೆಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ವರದಿ ತಿಳಿಸಿವೆ. ಭಾರತೀಯ ಮಾರುಕಟ್ಟೆಯಲ್ಲಿ ಪುನರಾಗಮನ ಮಾಡಿದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಈಗ ಮೈಕ್ರೋಮ್ಯಾಕ್ಸ್ ಇನ್ 2ಸಿ ಪ್ರಾರಂಭಿಸಲು ತುದಿಗಾಲಲ್ಲಿ ನಿಂತಿದೆ. ಸ್ಮಾರ್ಟ್‌ಫೋನ್ ಮೈಕ್ರೋಮ್ಯಾಕ್ಸ್ ಇನ್ 2ಬಿಗೆ ಉತ್ತರಾಧಿಕಾರಿಯಾಗಲಿದೆ. ಕಂಪನಿಯು ಈ ಹಿಂದೆ ಭಾರತೀಯ ಮಾರುಕಟ್ಟೆಗಳಲ್ಲಿ ಒಂದೆರಡು ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಮೈಕ್ರೋಮ್ಯಾಕ್ಸ್ ಇನ್ 1, ಇನ್ ನೋಟ್ 1 ಮತ್ತು ಇನ್ 1 ಬಿ ಸೇರಿದಂತೆ ಕೆಲವು ಫೋನ್ಸ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದವು.
ಏನೆಲ್ಲಾ ಫೀಚರ್ಸ್?: ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರ ಪ್ರಕಾರ, ಮೈಕ್ರೋಮ್ಯಾಕ್ಸ್ ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮೇ ಆರಂಭದಲ್ಲಿ ಮೈಕ್ರೋಮ್ಯಾಕ್ಸ್ ಇನ್ 2C ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ ಯುನಿಸೊಕ್ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ಟಿಪ್‌ಸ್ಟರ್ ಬಹಿರಂಗಪಡಿಸಿದ್ದಾರೆ.
undefined
ಇದು In 2b ನಲ್ಲಿರುವ ಪ್ರೊಸೆಸರ್ Unisoc T610ಯನ್ನೇ ಬಳಸುವ ನಿರೀಕ್ಷೆಯಿದೆ. ಚಿಪ್ ಮೀಡಿಯಾ ಟೆಕ್ ಹೆಲಿಯೊ ಜಿ80 ಗೆ ಸಮನಾಗಿದೆ ಎಂದು ನಂಬಲಾಗಿದೆ. ಕುತೂಹಲಕಾರಿಯಾಗಿ, ಮೈಕ್ರೋಮ್ಯಾಕ್ಸ್ ಮೈಕ್ರೋಮ್ಯಾಕ್ಸ್ 1B ನಲ್ಲಿ Helio G35 ಬಳಸಿದೆ.
ಇದನ್ನೂ ಓದಿ: Samsung Galaxy F12, Poco C31: ಇಲ್ಲಿವೆ ₹10,000 ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
:Micromax In 2c ಕೂಡ 2B ಯಂತೆಯೇ ಡ್ಯುಯಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸ್ಮಾರ್ಟ್ಫೋನ್ 13-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಒಳಗೊಂಡಿದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇರಬಹುದು. ಫೋನ್ 5000mAh ಬ್ಯಾಟರಿಯನ್ನು ಹೊಂದಿರಬಹುದು.
Micromax IN 2B: ಮೈಕ್ರೋಮ್ಯಾಕ್ಸ್ IN 2B ಎರಡು ಮೆಮೊರಿ ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. ಸ್ಮಾರ್ಟ್‌ಫೋನ್‌ನ 4GB ರೂಪಾಂತರವನ್ನು ರೂ 7999 ಕ್ಕೆ ಬಿಡುಗಡೆ ಮಾಡಲಾಗಿದೆ ಆದರೆ 6GB ರೂಪಾಂತರದ ಬೆಲೆ ರೂ 8999 ಆಗಿದೆ. ಮೈಕ್ರೋಮ್ಯಾಕ್ಸ್ IN 2B ನೀಲಿ, ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ಬರುತ್ತದೆ.
ಇದನ್ನೂ ಓದಿ: ಏ. 27ಕ್ಕೆ iQoo Z6 Pro 5G ಭಾರತದಲ್ಲಿ ಬಿಡುಗಡೆ, ಏನೆಲ್ಲ ವಿಶೇಷತೆ? ಬೆಲೆ ಎಷ್ಟು?
ಮೈಕ್ರೊಮ್ಯಾಕ್ಸ್ IN 2B 6.52-ಇಂಚಿನ HD+ ಡಿಸ್ಪ್ಲೇ ಜೊತೆಗೆ ಮೇಲ್ಭಾಗದಲ್ಲಿ ನಾಚ್ ಹೊಂದಿದೆ. ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಯುನಿಸೊಕ್ T610 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 6GB ಯ RAM ಜೊತೆಗೆ ಮೈಕ್ರೊ SD ಬಳಸಿಕೊಂಡು 64GB ಸಂಗ್ರಹಣೆಯನ್ನು ಹೊಂದಿದೆ.
ಸ್ಮಾರ್ಟ್ಫೋನ್ ಡ್ಯುಯಲ್-ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದು 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ. ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಈ ಕ್ಯಾಮರಾಗೆ ಸಹಾಯ ಮಾಡಲು LED ಫ್ಲ್ಯಾಷ್ ಇದೆ. Micromax IN 2B 5000mAh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ಇದನ್ನು USB-C ಪೋರ್ಟ್ ಮೂಲಕ ಚಾರ್ಜ್ ಮಾಡಬಹುದು.