Oppo K10 5G ಮಾರ್ಚ್ 16 ರಂದು ಭಾರತದಲ್ಲಿ ಬಿಡುಗಡೆ ಸಾಧ್ಯತೆ: ನಿರೀಕ್ಷಿತ ಬೆಲೆ ಎಷ್ಟು?

By Suvarna NewsFirst Published Mar 15, 2022, 12:43 PM IST
Highlights

Oppo ತನ್ನ K ಸರಣಿಯ ಫೋನನ್ನು ಭಾರತದಲ್ಲಿ ಮೊದಲ ಬಾರಿಗೆ ಮಾರ್ಚ್ 16 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಫೋನನ್ನು Oppo K10 ಎಂದು ಕರೆಯುವ ನಿರೀಕ್ಷೆಯಿದೆ

Tech Desk: Oppo K10 ಭಾರತದಲ್ಲಿ ಮಾರ್ಚ್ 16 ರಂದು ಬಿಡುಗಡೆಯಾಗಲಿದೆ. ಇದು ಓಪ್ಪೋ ಇಂಡಿಯಾದ ಮೊದಲ K-ಸರಣಿಯ ಫೋನ್ ಆಗಿದ್ದು, ಪ್ರಸ್ತುತ ಇಲ್ಲಿ Find series, Reno ಸರಣಿ, F-ಸರಣಿ ಮತ್ತು A- ಸರಣಿ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. K-ಸರಣಿಯು ಚೀನಾದಲ್ಲಿ ಜನಪ್ರಿಯವಾಗಿದೆ ಮತ್ತು ಅದರ ಅಡಿಯಲ್ಲಿ ಹಲವಾರು ಫೋನ್‌ಗಳನ್ನುಈಗಾಗಲೇ ಬಿಡುಗಡೆ ಮಾಡಲಾಗಿದೆ. K10  ಭಾರತ ಮತ್ತು ಚೀನಾಕ್ಕೆ ಬರುವ ಹೊಸ ಫೋನ್ ಆಗಿರುತ್ತದೆ. ಇದು ಚೀನಾದಲ್ಲಿ ಲಭ್ಯವಿರುವ K9 ಮತ್ತು K9 5G ಫೋನ್‌ಗಳ ಉತ್ತರಾಧಿಕಾರಿಯಾಗಲಿದೆ.

ಓಪ್ಪೋ ಇಂಡಿಯಾ ಮುಂಬರುವ ಈವೆಂಟನ್ನು ಟ್ವಿಟ್ಟರ್‌ನಲ್ಲಿ “Kuriosity. Kreation. Konfusion?” ಎಂಬ ಅಡಿಬರಹದೊಂದಿಗೆ ಪ್ರಕಟಿಸಿದೆ.  ಇಲ್ಲಿ K10 ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೂ, ಸುಳಿವು ಸ್ಪಷ್ಟವಾಗಿದೆ. ಅಲ್ಲದೆ, Flipkart ಮುಂಬರುವ Oppo K10 ಗೆ ಮೀಸಲಾಗಿರುವ ಹೊಸ ಪುಟವನ್ನು ಸಹ ಬಿಡುಗಡೆ ಮಾಡಿದೆ. ಇದರರ್ಥ K10 ಇತರ ಶಾಪಿಂಗ್ ವೆಬ್‌ಸೈಟ್‌ ಜತೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ.

Latest Videos

ಇದನ್ನೂ ಓದಿ: Oppo Reno 7 Z 5G: ಡ್ಯುಯಲ್ ಆರ್ಬಿಟ್ ಲೈಟ್ಸ್ , 4,500mAh ಬ್ಯಾಟರಿಯೊಂದಿಗೆ ಬಿಡುಗಡೆ

Oppo K10 ನ ವಿಶೇಷಣಗಳು ಸದ್ಯಕ್ಕೆ ಸ್ಪಷ್ಟವಾಗಿಲ್ಲ, ಆದರೆ 91Mobiles ನ ವರದಿಯು ಈ ಫೋನ್‌ನ ಬೆಲೆ ರೂ 20,000 ಕ್ಕಿಂತ ಕಡಿಮೆ ಇರುತ್ತದೆ ಎಂದು ಹೇಳಿದೆ. ಅಂದರೆ ಇದು 5G ಪ್ರೊಸೆಸರ್ ಮತ್ತು ವೇಗದ ಚಾರ್ಜಿಂಗ್ ಬ್ಯಾಟರಿಯೊಂದಿಗೆ ಮಧ್ಯಮ ಶ್ರೇಣಿಯ ಫೋನ್ ಆಗಿರಬಹುದು. Oppo K9 5G ಅನ್ನು ಚೀನಾದಲ್ಲಿ CNY 1,899 ಬೆಲೆಗೆ ಬಿಡುಗಡೆ ಮಾಡಲಾಗಿದೆ, ಅಂದರೆ ಸರಿಸುಮಾರು 22,800 ರೂ.

Oppo K10 ಫೀಚರ್ಸ್:‌ K10 K9 ಗೆ ಉತ್ತರಾಧಿಕಾರಿಯಾಗಿರಬಹುದು ಎಂದು ವರದಿಗಳು ತಿಳಿಸಿವೆ, ಆದ್ದರಿಂದ ಮುಂಬರುವ ಫೋನ್‌ನ ವಿಶೇಷಣಗಳಲ್ಲಿ ನವೀಕರಣಗಳು ಇರುತ್ತವೆ ಎಂದು ಊಹಿಸಬಹುದು. K9 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 768 5G ಚಿಪ್ಸೆಟ್ನೊಂದಿಗೆ ಬರುತ್ತದೆ, ಆದರೆ K10 ಚೀನಾದಲ್ಲಿ ಓಪಪೋ ಹಂಚಿಕೊಂಡ ಟೀಸರ್‌ಗಳ ಪ್ರಕಾರ ಮೀಡಿಯಾ ಟೆಕ್ ಡೈಮೆನ್ಸಿಟಿ 8000 ಅಥವಾ ಡೈಮೆನ್ಸಿಟಿ 8100 ಚಿಪ್ಸೆಟನ್ನು ಆಯ್ಕೆ ಮಾಡಬಹುದು. ಈ ಚಿಪ್‌ಸೆಟ್ HDR10+ ಬೆಂಬಲದೊಂದಿಗೆ 4K ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು  200-ಮೆಗಾಪಿಕ್ಸೆಲ್‌ಗಳವರೆಗೆ ಕ್ಯಾಮರಾ ರೆಸಲ್ಯೂಶನ್‌ ನೀಡಬಹುದು.

ಇದನ್ನೂ ಓದಿ: 4,000mAh ಬ್ಯಾಟರಿಯೊಂದಿಗೆ Itel A49 ಬಜೆಟ್‌ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?

K9 90Hz ರಿಫ್ರೆಶ್ ದರದೊಂದಿಗೆ 6.43-ಇಂಚಿನ Full-HD+ ಡಿಸ್ಪ್ಲೇಯೊಂದಿಗೆ ಬಂದಿದ್ದರೆ, K10 120Hz ಅಥವಾ ಬಹುಶಃ 144Hz, ಡಿಸ್ಪ್ಲೇಯನ್ನು ಒಳಗೊಂಡಿರಬಹುದು. K9 5G ಯಲ್ಲಿನ ಕ್ಯಾಮೆರಾಗಳು ಇತರ ಎರಡು ಕ್ಯಾಮೆರಾಗಳೊಂದಿಗೆ 64-ಮೆಗಾಪಿಕ್ಸೆಲ್ ಮುಖ್ಯ ಸಂವೇದಕವನ್ನು ಒಳಗೊಂಡಿವೆ.

K10 ಅದೇ ಸಂಖ್ಯೆಯ ಸಂವೇದಕಗಳೊಂದಿಗೆ ಬರಬಹುದು, ಆದರೆ 64-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಸ 50-ಮೆಗಾಪಿಕ್ಸೆಲ್ ಸಂವೇದಕದೊಂದಿಗೆ ಬದಲಾಯಿಸಬಹುದು. ಸೆಲ್ಫಿಗಳಿಗಾಗಿ, ನೀವು Oppo K10 ನಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನಿರೀಕ್ಷಿಸಬಹುದು. K9 65W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4300mAh ಬ್ಯಾಟರಿಯನ್ನು ಒಳಗೊಂಡಿದೆ, ಮತ್ತು K10 ನಲ್ಲಿ ಬ್ಯಾಟರಿಯ ಸಾಮರ್ಥ್ಯವು ಸ್ವಲ್ಪ ಹೆಚ್ಚಿರಬಹುದು, ವೇಗದ ಚಾರ್ಜಿಂಗ್ ತಂತ್ರಜ್ಞಾನವು  65W ಆಗಿರಬಹುದು.

click me!