Lavaದ ಮೊದಲ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ : ಇಲ್ಲಿದೆ ಸಂಪೂರ್ಣ ಮಾಹಿತಿ!

By Suvarna News  |  First Published Nov 9, 2021, 7:28 PM IST

*ಲಾವಾದ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆ!
*ಮುಂಗಡವಾಗಿ ಬುಕ್ ಮಾಡಿದರೆ ವಿಶೇಷ ಆಫರ್ 
*Flipkart, Amazon ಹಾಗೂ Lava Websiteನಲ್ಲಿ ಲಭ್ಯ 


ನವದೆಹಲಿ (ನ. 9): ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಮತ್ತು ಭಾರತೀಯ ಮೂಲದ ಲಾವಾ (Lava) ಭಾರತದಲ್ಲಿ ತನ್ನ ಮೊದಲ  5G ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ (Mid-range Smartphone) ಅನ್ನು ಬಿಡುಗಡೆ ಮಾಡಿದೆ ಹಾಗೂ ಈ ಹೊಸ ಪೋನ್‌ನ್ನು ಅಗ್ನಿ (Agni 5G) ಎಂದು ಹೆಸರಿಸಿದೆ. ಇದು ಮೀಡಿಯಾ ಟೆಕ್‌ನ ಹೊಸ 5G ಚಿಪ್‌ಸೆಟ್, 90Hz ಡಿಸ್ಪ್ಲೇ ಮತ್ತು 64MP ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಲಾವಾ ಅಗ್ನಿ  5ಜಿ,  Realme 8s 5G, Redmi Note 10T 5G ಮತ್ತು ಇತರ ಮೊಬೈಲ್‌ ಗಳಿಗೆ ಜತೆ ಸ್ಪರ್ಧಿಸಲಿದೆ.

Lava Agni 5G ಬೆಲೆ ಹಾಗೂ ಮಾರಾಟದ ದಿನಾಂಕ

Latest Videos

undefined

ಭಾರತದಲ್ಲಿ Lava Agni 5G ಬೆಲೆ 19,999 ರೂ. ಇರಲಿದೆ.  ಕಂಪನಿಯು ಮೊಬೈಲ್‌ಅನ್ನು  8GB RAM + 128GB ಆಂತರಿಕ ಮೆಮರಿ ಹೊಂದಿರುವ ಕೇವಲ ಒಂದು  ಆವೃತಿಯಲ್ಲಿ ನೀಡುತ್ತಿದೆ. ನವೆಂಬರ್ 17 ರಂದು ಫೋನ್  ಮುಂಗಡವಾಗಿ ಬುಕ್ ಮಾಡುವವರು ಲಾವಾ ಅಗ್ನಿಯನ್ನು 17,999 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಸಲು ಅವಕಾಶವಿದೆ. ಲಾವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಮಾರ್ಟ್‌ಫೋನ್ ಅನ್ನು 500 ರೂಗಳನ್ನು ಪಾವತಿಸುವ ಮೂಲಕ ಮುಂಗಡವಾಗಿ ಖರೀದಿಸಬಹುದು.

Smartphone Release: ಮೋಟೋರೋಲಾ ಎಡ್ಜ್ ಎಕ್ಸ್ ಬಿಡುಗಡೆಗೆ ಸಿದ್ಥತೆ

ಲಾವಾ ಅಗ್ನಿ 5G ಒಂದೇ ನೀಲಿ ಬಣ್ಣದ ಆವೃತ್ತಿಯಲ್ಲಿ ಮಾರಾಟವಾಗಲಿದೆ. ಇದು ನವೆಂಬರ್ 18 ರಂದು ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ  ಮಾರಾಟ ಆರಂಭವಾಗಲಿದ್ದು ಕಂಪನಿಯ ವೆಬ್‌ಸೈಟ್, ಅಮೆಜ್ಹಾನ್ (Amazon) ಮತ್ತು‌ ಪ್ಲಿಪ್‌ಕಾರ್ಟ್ (Flipkart) ಮೂಲಕ ಖರೀದಿಗೆ ಲಭ್ಯವಿರಲಿದೆ.

ಲಾವಾ ಅಗ್ನಿ 5G ವಿಶಿಷ್ಟತೆಗಳು!

Lava  5G ಫೋನ್ 90Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ ಡಿಸ್ಪ್ಲೇಯನ್ನು (Display) ಹೊಂದಿದೆ, 91.73 ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ (Gorilla Glass) ರಕ್ಷಣೆಯನ್ನು ಹೊಂದಿದೆ. ಹ್ಯಾಂಡ್ಸೆಟ್ ಪಂಚ್ ಹೋಲ್ ಡಿಸ್ಪ್ಲೇ (punch hole display) ವಿನ್ಯಾಸವನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಮಿರರ್ ಮ್ಯಾಟ್ ಫಿನಿಶ್ (mirror matte finish)  ಅನ್ನು ನೀಡಲಾಗಿದೆ. ಇದರಲ್ಲಿ MediaTek ಡೈಮೆನ್ಸಿಟಿ (Dimensity)  810 ಪ್ರೊಸೆಸರ್‌ ಇರಲಿದೆ. ಇತ್ತೀಚೆಗೆ ಬಿಡುಗಡೆಯಾದ Realme 8s 5G ಫೋನ್‌ನಲ್ಲೂ ಡೈಮೆನ್ಸಿಟಿ 810 ಪ್ರೊಸೆಸರ್‌ ನೀಡಲಾಗಿದೆ. 

JioPhone Next ಖರೀದಿಗೆ ಮುನ್ನ ನೋಂದಣಿ ಕಡ್ಡಾಯ!

ಛಾಯಾಗ್ರಹಣ ಮತ್ತು ವೀಡಿಯೊ ಕರೆಗಾಗಿ, ಫೋನ್‌ನ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ (quad-camera) ಇದೆ. ಇದು 6p ಲೆನ್ಸ್ ಮತ್ತು f/1.79 ಅಪೆರ್ಚರ್‌, 64-ಮೆಗಾಪಿಕ್ಸೆಲ್ ಸೆನ್ಸರ್ ಒಳಗೊಂಡಿದೆ. ಇದು 5-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ (Depth Camera) ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ (Macro Sensor) ಹೊಂದಿದೆ. ಕಡಿಮೆ ಬೆಳಕಿನಲ್ಲಿ ಉತ್ತಮ ಚಿತ್ರಗಳಿಗಾಗಿ  ಡ್ಯುಯಲ್ ಎಲ್ಇಡಿ (dual LED) ಸಿಸ್ಟಮ್‌ ಕೂಡ ಒಳಗೊಂಡಿದೆ.

0.24 ಸೆಕೆಂಡುಗಳಲ್ಲಿ ಫೋನ್ ಅನ್ಲಾಕ್!

ಇದು AI ಮೋಡ್, HDR, ಪೋರ್ಟ್ರೇಟ್ ಮೋಡ್ (Portrait Mode), ಬ್ಯೂಟಿ ಮೋಡ್ ಮತ್ತು ಪ್ರೊ ಮೋಡ್‌ನಂತಹ ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಮುಂಭಾಗದಲ್ಲಿ, ಒಂದು 16MP ಸೆಲ್ಫಿ ಕ್ಯಾಮೆರಾವನ್ನು (Selfie Camera) ಕಾಣಬಹುದು, ಇದನ್ನು ವೃತ್ತಾಕಾರದ ನಾಚ್‌ನಲ್ಲಿ ನೀಡಲಾಗಿದೆ. ಹೊಸ ಲಾವಾ ಅಗ್ನಿ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ. ಇದು 30W ವೇಗದ ಚಾರ್ಜಿಂಗ್‌ ಮಾಡುವ ಅವಕಾಶ ನೀಡಲಾಗಿದ್ದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಜೊತೆಗೆ ಫೇಸ್ ಅನ್‌ಲಾಕ್ (Face Unlock) ಹೊಂದಿದೆ. ಕೇವಲ 0.24 ಸೆಕೆಂಡುಗಳಲ್ಲಿ ಫೋನ್ ಅನ್ನು ಅನ್ಲಾಕ್ ಮಾಡಬಹುದು ಎಂದು ಲಾವಾ ಕಂಪನಿ ತಿಳಿಸಿದೆ.

click me!