iPhone SE 2022 Launched: ಐಫೋನ್ ಎಸ್ಇ 2022 ಲಾಂಚ್, ಏನೆಲ್ಲ ವಿಶೇಷತೆ, ಬೆಲೆ ಎಷ್ಟಿದೆ?

By Suvarna News  |  First Published Mar 9, 2022, 8:47 AM IST

*ಮಾರ್ಚ್ 8ರ ಆಪಲ್ ಇವೆಂಟ್‌ನಲ್ಲಿ ಭಾರೀ ನಿರೀಕ್ಷೆಯ ಐಫೋನ್ ಎಸ್ಇ 2022 ಲಾಂಚ್
*ಎ15 ಬಯೋನಿಕ್ ಚಿಪ್ ಒಳಗೊಂಡಿರುವ ಫೋನ್ ಸಾಕಷ್ಟು ಅಪ್‌ಗ್ರೇಡ್ ಕಂಡಿದೆ
*5ಜಿ ಕನೆಕ್ಟಿವಿಟಿ ಹೊಂದಿರುವ ಇದು ಬಜೆಟ್ ಫೋನ್ ಆಗಿದ್ದು, ಕಡಿಮೆ ಬೆಲೆಗೆ ಸಿಗಲಿದೆ


ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಆಪಲ್ ಐಫೋನ್ ಎಸ್ಇ 2022 (iPhone SE 2022) ನಿಗದಿಯಂತೆ ಮಾರ್ಚ್ 8ರ ಆಪಲ್ ಇವೆಂಟ್‌ (Apple Event) ನಲ್ಲಿ ಬಿಡುಗಡೆಯಾಗಿದೆ. ಆಪಲ್ ಐಫೋನ್‌ಗಳಲ್ಲಿ ಬಜೆಟ್ ಫೋನ್ ಎನಿಸಿಕೊಂಡಿರುವ ಐಫೋನ್ ಎಸ್ಇ 2022 ಸ್ಮಾರ್ಟ್‌ಫೋನ್ ಬಗ್ಗೆ ಜನರು ಭಾರೀ ಕುತೂಹಲಿಗಳಾಗಿದ್ದರು. ಇದೀಗ ಅದಕ್ಕೆಲ್ಲ ತೆರೆ ಬಿದ್ದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಐಫೋನ್ ಎಸ್ಇ 2022 ಸ್ಮಾರ್ಟ್‌ಫೋನ್ 43,900 ರೂ.ನಿಂದ ಆರಂಭವಾಗಲಿದೆ. ಈಗ ಬಿಡುಗಡೆಯಾಗಿರುವ ಈ ಫೋನ್, 2020ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ ಐಫೋನ್ ಎಸ್ಇ (iPhone SE 2020)ನ ಮುಂದುವರಿದ ಆವೃತ್ತಿಯೇ ಆಗಿದ್ದು, ತಾಂತ್ರಿಕತೆಯಲ್ಲಿ ಸಾಕಷ್ಟು ಅಪ್‌ಗ್ರೇಡ್ ಕಾಣಬಹುದಾಗಿದೆ. ಈ ಹೊಸ ಫೋನಿನಲ್ಲಿ ನೀವು 5ಜಿ ಕೆನಿಕ್ಟಿವಿಟಿ (5G Connectivity), ಎ15 ಬಯೋನಿಕ್ (A15 Bionic) ಚಿಪ್ ಬಳಸಲಾಗಿದೆ. ಇನ್ನು ಕ್ಯಾಮೆರಾ ಸೇರಿದಂತೆ ಸಾಕಷ್ಟು ಸುಧಾರಣೆಗಳನ್ನು ಕಾಣಬಹುದಾಗಿದೆ. 2020ರಲ್ಲಿ ಬಿಡುಗಡೆಯಾಗಿದ್ದ ಐಫೋನ್ ಎಸ್ಇ ಸ್ಮಾರ್ಟ್‌ಫೋನ್‌ಗೆ ಹೋಲಿಸಿದರೆ ಈಗ ಬಿಡುಗಡೆಯಾಗಿರುವ ಫೋನು, ಬೆಲೆಯ ವಿಷಯದಲ್ಲಿ ಮಾತ್ರವಲ್ಲದೇ ಇನ್ನಿತರ ವಿಷಯಗಳಲ್ಲೂ ಅಪ್‌ಗ್ರೆಡ್ ಕಂಡಿದೆ. 

Realme C35: ಕೈಗೆಟುಕುವ ದರದಲ್ಲಿ ರಿಯಲ್‌ಮಿ C35 ಫೋನ್ ಲಾಂಚ್, ರೆಡ್‌ಮಿ ಸ್ಯಾಮ್ಸಂಗ್‌ಗೆ ಪೈಪೋಟಿ!

Tap to resize

Latest Videos

undefined

ಹೇಗಿದೆ ಈ ಫೋನ್?
ಈ ಮೊದಲೇ ಹೇಳಿದಂತೆ ಆಪಲ್‌ ಕಂಪನಿಯಗಳ ಫೋನುಗಳ ಪೈಕಿ ಇದು ಬಜೆಟ್ ಫೋನ್. ಆದರೆ, ಫೀಚರ್ ಮತ್ತು ಇತರ ಸೌಲಭ್ಯಗಳ ವಿಷಯದಲ್ಲಿ ಪ್ರೀಮಿಯಂ ಫೋನ್ ಎಂದೇ ಹೇಳಬಹುದು. ಐಫೋನ್ ಎಸ್ಇ 2022 (iPhone SE 2022) ಸ್ಮಾರ್ಟ್‌ಫೋನ್ 4.7 ಇಂಚಿನ ರೆಟಿನಾ HD ಪ್ರದರ್ಶಕವನ್ನು ಒಳಗೊಂಡಿದೆ.  ಡಿಸ್‌ಪ್ಲೇ ವಿಷಯದಲ್ಲಿ ಐಫೋನ್ ಎಸ್ಇ 2022 ( iPhone SE 2022) ಫೋನ್, ಈ ಹಿಂದಿನ iPhone SE ಮಾದರಿಯಲ್ಲಿ ಕಾಣಿಸಿಕೊಂಡಿರುವಂತೆ ತೋರುತ್ತಿದೆ. ಆದಾಗ್ಯೂ, ಹೊಸ iPhone SE ಮುಂಭಾಗ ಮತ್ತು ಹಿಂಭಾಗದಲ್ಲಿ  ಕಠಿಣವಾದ ಗ್ಲಾಸ್ ಅನ್ನು ಹೊಂದಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಗಾಜಿನ ರಕ್ಷಣೆಯು iPhone 13 ಮತ್ತು iPhone 13 Pro ನಲ್ಲಿರುವಂತೆಯೇ ಇರುತ್ತದೆ. ಹೊಸ ಮಾದರಿಯು IP67-ಪ್ರಮಾಣೀಕೃತ ನಿರ್ಮಾಣದೊಂದಿಗೆ ಇದು ಬರುತ್ತದೆ ಎಂದು ಹೇಳಬಹುದು.

A15 Bionic ಚಿಪ್ ಬಳಕೆ
ಈಗಾಗಲೇ ಗೊತ್ತಿರುವಂತೆ ಐಫೋನ್ ಎಸ್ಇ 2022 ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಎ15 ಬಯೋನಿಕ್ ಚಿಪ್ ಬಳಸಿದೆ. ಇದೇ ಚಿಪ್ ಅನ್ನು ನೀವು ಐಫೋನ್ 13 ಸೀರೀಸ್ ಸ್ಮಾರ್ಟ್‌ಫೋನುಗಳಲ್ಲಿ ಕಾಣಬಹುದು. ಐಫೋನ್ 8ನಲ್ಲಿ ಬಳಕೆಯಾಗಿದ್ದ ಪ್ರೊಸೆಸರ್‌ಗಿಂತಲೂ ಎ15 ಬಯೋನಿಕ್ ಚಿಪ್ ಬಳಕೆಯಾಗಿರುವ ಐಫೋನ್ ಎಸ್ಇ 2022 ಫೋನಿನ ಸಿಪಿಯು 1.8 ಪಟ್ಟು ಹೆಚ್ಚು ವೇಗವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ನೀವು ಲೈವ್ ಟೆಕ್ಸ್ಟ್ ಫೀಚರ್ ಕೂಡ ಕಾಣಬಹುದು.

ಕ್ಯಾಮೆರಾ ಯಾವುದಂತೆ?
ಐಫೋನ್‌ಗಳಲ್ಲಿ ಉತ್ಕೃಷ್ಟವಾದ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಅದೇ ಮಾದರಿಯನ್ನು ಈ ಫೋನಿಗೂ ಮುಂದುವರಿಲಾಗಿದೆ. ಅಸಲಿಗೆ, ಈ ಹಿಂದೆ ಬಿಡುಗಡೆಯಾಗಿದ್ದ ಐಫೋನ್‌ ಎಸ್ಇ ಕ್ಯಾಮೆರಾಗಿಂತಲೂ ಈಗ ಬಿಡುಗಡೆಯಾಗಿರುವ ಕ್ಯಾಮೆರಾ ಇನ್ನೂ ಹೆಚ್ಚಿನ ಸುಧಾರಿತ ಕ್ಯಾಮೆರಾ ಆಗಿದೆ ಎನ್ನಲಾಗುತ್ತಿದೆ. ಹೊಸ ಐಫೋನ್ f/1.8 ಲೆನ್ಸ್‌ನೊಂದಿಗೆ ಹಿಂಭಾಗದಲ್ಲಿ ಒಂದೇ 12-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುತ್ತದೆ. ವಿಸುವಲ್ ಪ್ರೊಸೆಸಿಂಗ್ ಸೇರಿದಂತೆ ಸಾಕಷ್ಟು ಸುಧಾರಣೆಗಳನ್ನು ನೀವು ರಿಯರ್ ಕ್ಯಾಮೆರಾ ಸೆನ್ಸರ್‌ನಲ್ಲಿ ಕಾಣಬಹುದಾಗಿದೆ. iPhone SE (2022) ನಲ್ಲಿನ ಹಿಂದಿನ ಕ್ಯಾಮೆರಾ ಡೀಪ್ ಫ್ಯೂಷನ್ ಸೇರಿದಂತೆ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಮತ್ತು ಸ್ಟಿಲ್ ಶಾಟ್‌ಗಳಿಗಾಗಿ ಸ್ಮಾರ್ಟ್ HDR 4 ಅನ್ನು ಸಹ ಬೆಂಬಲಿಸುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, iPhone SE (2022) ಮುಂಭಾಗದಲ್ಲಿ FaceTime HD ಕ್ಯಾಮೆರಾವನ್ನು ನೀಡುತ್ತದೆ.

PayPal Service ರಷ್ಯಾಗೆ ಮತ್ತೊಂದು ಹೊಡೆತ, ವೀಸಾ, ಮಾಸ್ಟರ್‌ಕಾರ್ಡ್ ಬಳಿಕ ಪೇಪಾಲ್ ಸೇವೆ ಸ್ಥಗಿತ!

ಭಾರತದಲ್ಲಿ ಬೆಲೆ ಎಷ್ಟು?
ಐಫೋನ್ ಎಸ್ಇ 2022 ಫೋನ್ 64 ಜಿಬಿ, 128 ಜಿಬಿ ಮತ್ತು 256 ಜಿಬಿ ವೆರಿಯೆಂಟ್‌ಗಳಲ್ಲಿ ಭಾರತದಲ್ಲೂ ಮಾರಾಟಕ್ಕೆ ಸಿಗಲಿದೆ. ಭಾರತದಲ್ಲಿ 3 ಜಿಬಿ RAM ಹಾಗೂ 64 ಜಿಬಿ ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ 43, 900 ರೂ.ನಿಂದ ಆರಂಭವಾಗುತ್ತದೆ. ಅಮೆರಿಕದಲ್ಲಿ 429 ಡಾಲರ್‌ನಿಂದ ಆರಂಭವಾಗುತ್ತದೆ. ಅಂದರೆ, ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 33,000 ರೂ. ಆಗುತ್ತದೆ. 

click me!