Realme C35 ಕೈಗೆಟುಕುವ ದರದಲ್ಲಿ ರಿಯಲ್‌ಮಿ C35 ಫೋನ್ ಲಾಂಚ್, ರೆಡ್‌ಮಿ ಸ್ಯಾಮ್ಸಂಗ್‌ಗೆ ಪೈಪೋಟಿ!

By Suvarna News  |  First Published Mar 8, 2022, 4:58 PM IST

* ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.
* ಅಗ್ಗದ ಬೆಲೆಯ ಈ ಸ್ಮಾರ್ಟ್‌ಫೋನ್ ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಒಳಗೊಂಡಿದೆ.
* ಈ ರಿಯಲ್‌ಮಿ ಸಿ35 ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ.


ತನ್ನ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ರಿಯಲ್‌ಮಿ (Realme) ಭಾರತೀಯ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರನ್ನು ಪಡೆದುಕೊಂಡಿದೆ. ಇದೀಗ ಕಂಪನಿಯು ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಬಜೆಟ್ ಸ್ಮಾರ್ಟ್‌ಫೋನ್ ಎನಿಸಿಕೊಂಡಿರುವ ಈ ಫೋನ್ ಸಾಕಷ್ಟು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ. ಕಂಪನಿಯು ರಿಯಲ್‌ಮಿ ಸಿ35 (Realme C35) ಭಾರತದಲ್ಲಿ ಲಾಂಚ್ ಮಾಡಿದೆ. ಇದು ಬಜೆಟ್‌ ಫೋನ್ ಆಗಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್, ಮಾರುಕಟ್ಟೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ರೆಡ್‌ಮಿ 10 ಪ್ರೈಮ್ (Redmi 10 Prime), ಮೋಟೋ ಇ40 (Moto E40), ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 (Samsung Galaxy M12) ಸ್ಮಾರ್ಟ್‌ಫೋನುಗಳಿಗೆ ಭಾರೀ ಸ್ಪರ್ಧೆಯನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ರಿಯಲ್ ಮಿ ಸಿ35 (Realme C35) ಸ್ಮಾರ್ಟ್‌ಫೋನ್‌ನಲ್ಲಿ ಫುಲ್ ಎಚ್‌ಡಿ ಡಿಸ್‌ಪ್ಲೇ, ಅಕ್ಟಾ ಕೋರ್ಟ ಯುನಿಸೋಸ್ ಪ್ರೊಸೆಸರ್ ನೀಡಲಾಗಿದೆ. ಈ ಫೋನ್ ಎರಡು ವೆರಿಯೆಂಟ್‌ನಲ್ಲಿ ಬರುತ್ತದೆ. ಜತೆಗೆ 128 ಜಿಬಿ ವರೆಗೂ ಮೆಮೋರಿ ಸಿಗಲಿದೆ. ಬ್ಯಾಟರಿ ದೃಷ್ಟಿಯಿಂದಲೂ ಇದು ತನ್ನ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಫೋನ್ ಆಗಿದೆ. ಯಾಕೆಂದರೆ, ಕಂಪನಿಯ 500 mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಕಂಪನಿಯು ರಿಯಲ್ ಮಿ ಸಿ25 (Realme C25) ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಅದರ ಮುಂದಿನ ಆವೃತ್ತಿ ಫೋನ್ ಈಗ  ಬಿಡುಗಡೆಯಾಗಿರುವ ರಿಯಲ್ ಮಿ ಸಿ35 ಸ್ಮಾರ್ಟ್‌ಫೋನ್ ಆಗಿದೆ.

iPhone SE to iPad Air: ಮಾ.8ರ ಆ್ಯಪಲ್‌ ಈವೆಂಟ್‌ ಮೇಲೆ ಎಲ್ಲರ ಕಣ್ಣು, ಏನೆಲ್ಲ ಲಾಂಚ್?
 
Realme C35 ಸ್ಮಾರ್ಟ್‌ಫೋನ್ ವಿಶೇಷತೆಗಳು 
ಈ ರಿಯಲ್‌ಮಿ ಸಿ35 ಸ್ಮಾರ್ಟ್‌ಫೋನ್ ಕೂಡ ಡುಯಲ್ ಸಿಮ್ ಸೌಲಭ್ಯವನ್ನು ಹೊಂದಿದೆ. ಹಾಗೆಯೇ, ರಿಯಲ್‌ಮಿ ಯುಐ ಆರ್ ಎಡಿಷನ್‌ನೊಂದಿಗೆ ಆಂಡ್ರಾಯ್ಡ್ 11 ಆಧರಿತವಾಗಿದೆ. ಇನ್ನು ಕಂಪನಿಯು ಈ ಫೋನ್‌ಗೆ 90.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 6.6-ಇಂಚಿನ ಪೂರ್ಣ-HD+ (1,080x2,408 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಒದಗಿಸಿದೆ. ಹಾಗೆಯೇ ಈ ಪೋನ್  4GB LPDDR4X RAM ಜೊತೆಗೆ ಆಕ್ಟಾ-ಕೋರ್ Unisoc T616 SoC ಅನ್ನು ಹೊಂದಿದೆ.

Tap to resize

Latest Videos

undefined

ಕ್ಯಾಮೆರಾ ಹೇಗಿದೆ?
ರಿಯಲ್ ಮಿ ಸಿ35 (Realme C35) ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಕಂಪನಿಯು ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ಕ್ಯಾಮೆರಾಗಳ ಸೆಟ್‌ಅಪ್ ನೀಡಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾವನ್ನು ನೀವು ರಿಯಲ್‌ಮಿ ಜಿಟಿ 2 ಫೋನಿನಲ್ಲಿ ಕಾಣಬಹುದು. ಇನ್ನು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಜೊತೆಗೆ f/2.4 ಅಪರ್ಚರ್ ಮತ್ತು ಎಫ್/2.8 ಲೆನ್ಸ್‌ನೊಂದಿಗೆ ಏಕವರ್ಣದ (ಕಪ್ಪು ಮತ್ತು ಬಿಳಿ) ಕ್ಯಾಮೆರಾವನ್ನೂ ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ Realme C35 ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ Sony IMX355 ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 

Creator Economy : 2020ರ ಭಾರತೀಯ ಜಿಡಿಪಿಗೆ 6,800 ಕೋಟಿ ರೂ. ಕೊಡುಗೆ ನೀಡಿದ ಯೂಟ್ಯೂಬ್ ಕ್ರಿಯೇಟರ್ಸ್

ಈ ಫೋನು ಬೆಲೆ ಎಷ್ಟು?
ಈಗಾಗಲೇ ತಿಳಿಸಿರುವಂತೆ ಇದು ಬಜೆಟ್ ಫೋನ್.  ಹಾಗಾಗಿ, ಬೆಲೆ ಜೇಬಿಗೆ ಭಾರ ಎನಿಸುವುದಿಲ್ಲ. 4 GB RAM + 64 GB ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ 11,999 ರೂ. ಹಾಗೆಯೇ 4 GB RAM + 128 GB ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ 12,999 ರೂ. ಈ ಫೋನ್ ಬಳಕೆದಾರರಿಗೆ ಗ್ಲೋವಿಂಗ್ ಗ್ರೀನ್, ಗ್ಲೋವಿಂಗಗ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಮಾರ್ಚ್ 12ರಿಂದ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಡಾಟಾ ಕಾಮ್‌ ಹಾಗೂ ರಿಟೇಲ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ.

click me!